twitter
    For Quick Alerts
    ALLOW NOTIFICATIONS  
    For Daily Alerts

    ದರ್ಶನ್, ಸುದೀಪ್ ಬಳಿಕ ಈಗ ರಿಯಲ್ ಸ್ಟಾರ್ ಕಾರುಬಾರು ಶುರು!

    By Naveen
    |

    ಕನ್ನಡ ಸಿನಿಮಾದ ಹಾಡುಗಳು, ಟ್ರೇಲರ್, ಟೀಸರ್ ಈಗ ಯೂಟ್ಯೂಬ್ ನಲ್ಲಿ ದೊಡ್ಡ ಸದ್ದು ಮಾಡುತ್ತಿವೆ. ಸಾಮಾಜಿಕ ಜಾಲತಾಣಗಳಲ್ಲಿ ದರ್ಶನ್, ಸುದೀಪ್ ನಂತರ ಈಗ ನಟ ಉಪೇಂದ್ರ ದರ್ಬಾರ್ ಶುರುವಾಗಿದೆ.

    ಉಪ್ಪಿ ಹುಟ್ಟುಹಬ್ಬಕ್ಕೆ ರಿಲೀಸ್ ಆಯ್ತು 'ಉಪೇಂದ್ರ ಮತ್ತೆ ಬಾ' ಟ್ರೇಲರ್ಉಪ್ಪಿ ಹುಟ್ಟುಹಬ್ಬಕ್ಕೆ ರಿಲೀಸ್ ಆಯ್ತು 'ಉಪೇಂದ್ರ ಮತ್ತೆ ಬಾ' ಟ್ರೇಲರ್

    ಉಪೇಂದ್ರ ನಟನೆಯ 'ಉಪೇಂದ್ರ ಮತ್ತೆ ಬಾ' ಸಿನಿಮಾದ ಟ್ರೇಲರ್ ಈಗ ಯೂಟ್ಯೂಬ್ ನಲ್ಲಿ ಸಂಚಲನ ಉಂಟು ಮಾಡಿದೆ. ಚಿತ್ರದ ಟ್ರೇಲರ್ ಈಗ ಯೂಟ್ಯೂಬ್ ನಲ್ಲಿ ನಂಬರ್ 2 ಟ್ರೆಂಡಿಂಗ್ ನಲ್ಲಿದೆ. ಜೊತೆಗೆ ಟ್ರೇಲರ್ ಈಗ 2 ಲಕ್ಷ ಹಿಟ್ಸ್ ಪಡೆಯುವ ಹತ್ತಿರದಲ್ಲಿದೆ.

    'Upendra matte hutti baa' trailer is no 2 trending video in youtube

    ಇಲ್ಲಿ ಉಪ್ಪಿ ಎರಡು ಗೆಟಪ್ ಗಳಲ್ಲಿ ಮಿಂಚಿದ್ದಾರೆ. ಇದೊಂದು ಫ್ಯಾಮಿಲಿ ಓರಿಯೆಂಟೆಡ್ ಸಿನಿಮಾವಾಗಿದ್ದು, ಟ್ರೇಲರ್ ಸಖತ್ ಕಲರ್ ಫುಲ್ ಆಗಿ ಮೂಡಿ ಬಂದಿದೆ. ಅಂದಹಾಗೆ, 'ಉಪೇಂದ್ರ ಮತ್ತೆ ಬಾ.. ಇಂತಿ ನಿನ್ನ ಪ್ರೇಮಾ' ಚಿತ್ರ ತೆಲುಗಿನ 'ಸೊಗ್ಗಾಡೆ ಚಿನ್ನ ನಾಯನ' ಚಿತ್ರದ ರಿಮೇಕ್ ಆಗಿದೆ.

    ಪ್ರೇಮಾ, ಶ್ರುತಿ ಹರಿಹರನ್, 'ಕೋಮಾ' ಚಿತ್ರದ ಖ್ಯಾತಿಯ ಶೃತಿ, ಹರ್ಷಿಕಾ ಪೂಣಚ್ಚ, ದೀಪ್ತಿ ಕಾಪ್ಸೆ ಚಿತ್ರದಲ್ಲಿ ನಟಿಸಿದ್ದಾರೆ. ಉಪ್ಪಿ ಶಿಷ್ಯ ಅರುಣ್ ಲೋಕನಾಥ್ 'ಹೆಚ್ ಟು ಒ' ಚಿತ್ರದ ನಂತರ ಮತ್ತೆ ಉಪೇಂದ್ರ ಅವರಿಗೆ ನಿರ್ದೇಶನ ಮಾಡಿದ್ದಾರೆ.

    English summary
    Watch video: Real Star Upendra starrer 'Upendra matte hutti baa' trailer is No.2 trending in youtube. ಉಪೇಂದ್ರ ನಟನೆಯ 'ಉಪೇಂದ್ರ ಮತ್ತೆ ಬಾ' ಸಿನಿಮಾದ ಟ್ರೇಲರ್ ಈಗ ಯೂಟ್ಯೂಬ್ ನಲ್ಲಿ ಸಂಚಲನ ಉಂಟು ಮಾಡಿದೆ.
    Wednesday, September 20, 2017, 17:51
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X