'ಅರ್ಜುನ್ ರೆಡ್ಡಿ' ಅಪ್ಪನಂತಹ ಚಿತ್ರವನ್ನ ಉಪೇಂದ್ರ ಆಗಲೇ ಮಾಡಿದ್ರು: ತೆಲುಗು ನಿರ್ದೇಶಕ

Recommended Video

ಅರ್ಜುನ್ ರೆಡ್ಡಿ' ಅಪ್ಪನಂತಹ ಚಿತ್ರವನ್ನ ಉಪೇಂದ್ರ ಆಗಲೇ ಮಾಡಿದ್ರು: ತೆಲುಗು ನಿರ್ದೇಶಕ | FILMIBEAT KANNADA

2017ರಲ್ಲಿ ತೆರೆಕಂಡಿದ್ದ ಅರ್ಜುನ್ ರೆಡ್ಡಿ ಸಿನಿಮಾ ಸೌತ್ ಸಿನಿ ದುನಿಯಾದಲ್ಲಿ ಅತಿ ದೊಡ್ಡ ಸದ್ದು ಮಾಡಿತ್ತು. ಡಿಫ್ರೆಂಟ್ ಲವ್ ಸ್ಟೋರಿ ಕಥೆ ಹೊಂದಿದ್ದ ಈ ಚಿತ್ರ ಸಖತ್ 'ರಾ' ಆಗಿ ಮೂಡಿ ಬಂದಿತ್ತು. ತೆಲುಗು ಚಿತ್ರರಂಗದಲ್ಲಿದ್ದ ಸಂಸ್ಕೃತಿಯನ್ನ ಬ್ರೇಕ್ ಮಾಡಿ ಹೊಸ ಟ್ರೆಂಡ್ ಹುಟ್ಟುಹಾಕಿತ್ತು.

ಅದಾದ ಬಳಿಕ ಬಂದ ಆರ್ ಎಕ್ಸ್ 100 ಚಿತ್ರವೂ ಬಹುತೇಕ ಅರ್ಜುನ್ ರೆಡ್ಡಿ ಸ್ಟೈಲ್ ನಲ್ಲೇ ಮೂಡಿ ಬಂದಿತ್ತು. ಅಲ್ಲಿಗೆ ಅರ್ಜುನ್ ರೆಡ್ಡಿ ಆರ್ ಎಕ್ಸ್ 100 ಚಿತ್ರಗಳು ಈ ಹಿಂದಿನ ಟ್ರೆಂಡ್ ಬ್ರೇಕ್ ಮಾಡಿ ಇಂಡಸ್ಟ್ರಿಗೆ ಹೊಸ ಜೋಶ್ ನೀಡಿತ್ತು.

ಬಟ್, ಇದಕ್ಕಿಂತ ಅಪ್ಪನಂತಹ ಚಿತ್ರಗಳನ್ನ ಕನ್ನಡದ ರಿಯಲ್ ಸ್ಟಾರ್ ಉಪೇಂದ್ರ ಅವರು ಆಗಲೇ ಮಾಡಿದ್ದರು ಎಂದು ತೆಲುಗು ನಿರ್ದೇಶಕ ವೈವಿಎಸ್ ಚೌಧರಿ ಇತ್ತೀಚಿಗಷ್ಟೆ ಹೇಳಿಕೆ ನೀಡಿ ನೆರೆದಿದ್ದವರಿಗೆ ಅಚ್ಚರಿ ಉಂಟು ಮಾಡಿದ್ರು.

Upendra movies are greater than arjun reddy

ಉಪೇಂದ್ರ ಅಭಿನಯದ ಐ ಲವ್ ಯೂ ಸಿನಿಮಾ ತೆಲುಗಿನಲ್ಲೂ ತೆರೆಕಾಣುತ್ತಿದ್ದು, ನಿನ್ನೆಯಷ್ಟೇ ತೆಲುಗು ಟ್ರೈಲರ್ ರಿಲೀಸ್ ಆಗಿತ್ತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ತೆಲುಗು ನಿರ್ದೇಶಕ ವೈವಿಎಸ್ ಚೌಧರಿ ''ನಾವು ಆರಂಭದಿಂದಲೂ ಉಪೇಂದ್ರ ಅವರ ಸಿನಿಮಾ ನೋಡುತ್ತಾ ಬಂದಿದ್ದೀವಿ, ಅವರ ಚಿತ್ರಗಳೆಲ್ಲವೂ ಒಂದು ಟ್ರೆಂಡ್. ಅರ್ಜುನ್ ರೆಡ್ಡಿ, ಆರ್ ಎಕ್ಸ್ 100 ಈಗ ಬಂದಿದೆ. ಆದ್ರೆ, ಅವರಪ್ಪನಂತಹ ಚಿತ್ರಗಳನ್ನ ಆಗಲೇ ಮಾಡಿದ್ದರು'' ಎಂದು ಹೇಳಿದ್ದಾರೆ.

ಹಾಗ್ನೋಡಿದ್ರೆ, ವೈವಿಎಸ್ ಚೌಧರಿ ಹೇಳಿದ್ದರು ಸತ್ಯವಿದೆ. ಯಾಕಂದ್ರೆ, ಎ, ಉಪೇಂದ್ರ, ಓಂ, ಸ್ವಸ್ತಿಕ್ ಅಂತಹ ಚಿತ್ರಗಳಲ್ಲಿದ್ದ ಚಿತ್ರಕಥೆಯನ್ನೇ ಈಗಲೂ ಎಷ್ಟೋ ಯುವಕರು ಫಾಲೋ ಮಾಡ್ತಾರೆ. ಉಪ್ಪಿ ಚಿತ್ರಗಳು ಎಲ್ಲರಿಗೂ ಸ್ಫೂರ್ತಿಯಾಗಿದೆ ಎಂಬುದಕ್ಕೆ ಈ ಮಾತುಗಳು ಸಾಕ್ಷಿ.

More from Filmibeat

English summary
Upendra movies are greater than arjun reddy and rx 100 movie said telugu director yvs chowdary.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X