For Quick Alerts
  ALLOW NOTIFICATIONS  
  For Daily Alerts

  'ಬುದ್ಧಿವಂತ'ನ ರಾಜಕೀಯ ಕಥೆ ಹೇಳುವ 5 ಸಿನಿಮಾಗಳು

  By Bharath Kumar
  |

  ಸೂಪರ್ ಸ್ಟಾರ್ ಉಪೇಂದ್ರ ರಾಜಕೀಯಕ್ಕೆ ಬರಬೇಕು ಎನ್ನುವುದು ನಿನ್ನೆಯ ಅಥವಾ ಇಂದಿನ ಆಶಯವಲ್ಲ. ಅದು ಅವರ ಬಹುವರ್ಷಗಳ ಕನಸು ಮತ್ತು ಉದ್ದೇಶ. ಅದನ್ನ ಅವರು ನೇರವಾಗಿ ಹೇಳದೆ ಇದ್ದರೂ, ತಮ್ಮ ಸಿನಿಮಾಗಳಲ್ಲಿ ಹೇಳುತ್ತಲೇ ಬಂದಿದ್ದಾರೆ.

  ಉಪೇಂದ್ರ ಕೇವಲ ಮನರಂಜನೆಗಾಗಿ ಮಾತ್ರ ಸಿನಿಮಾ ಮಾಡುತ್ತಿರಲಿಲ್ಲ. ಅದರಲ್ಲಿ ಏನಾದರೂ ಒಂದು ಗಂಭೀರ ವಿಷ್ಯವನ್ನಿಟ್ಟು ಅದರಿಂದ ಸಮಾಜಕ್ಕೆ ಸಂದೇಶ ಕೊಡುತ್ತಿದ್ದರು.

  ಕಾವೇರಿ ಗಲಾಟೆ, ಕಪ್ಪು ಹಣ, ಚುನಾವಣೆಯ ಅನೀತಿಗಳು, ಅಣ್ಣಾ ಹಜಾರೆ ಹೋರಾಟ ಹೀಗೆ ದೇಶದಲ್ಲಿ ಆಗುತ್ತಿದ್ದ ಎಲ್ಲ ಬೆಳವಣಿಗೆಗಳ ಬಗ್ಗೆ ಸಿನಿಮಾ ಮಾಡಿ ತಮ್ಮ ಬುದ್ಧಿವಂತಿಕೆ ಮೆರೆಯುತ್ತಿದ್ದರು. ಹಾಗಿದ್ರೆ, ಉಪ್ಪಿಯ ಸಿನಿಮಾಗಳಲ್ಲಿ ಯಾವೆಲ್ಲ ಅಂಶಗಳನ್ನ ಚರ್ಚೆ ಮಾಡಿದ್ದರು ಎಂಬುದರ ಒಂದು ಸಣ್ಣ ಪರಿಚಯ ಮುಂದಿದೆ ನೋಡಿ....

  ಎಚ್2ಓ - ಕಾವೇರಿ ಗಲಾಟೆ

  ಎಚ್2ಓ - ಕಾವೇರಿ ಗಲಾಟೆ

  ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳ ಮಧ್ಯೆ ಕಾವೇರಿ ನೀರಿಗಾಗಿ ಹೋರಾಟ, ಗಲಾಟೆ ವರ್ಷಗಳಿಂದಲೂ ನಡೆಯುತ್ತಲೆ ಇದೆ. ಅದಕ್ಕೆ ಇನ್ನು ಶಾಶ್ವತ ಪರಿಹಾರ ಸಿಕ್ಕಿಲ್ಲ. ಇದನ್ನ ಸೂಕ್ಷ್ಮವಾಗಿ ಗಮನಿಸಿದ ಉಪ್ಪಿ 'ಎಚ್2ಓ' ಎಂದು ಸಿನಿಮಾ ಮಾಡಿದರು. ಈ ಚಿತ್ರದಲ್ಲಿ ಕಾವೇರಿ ನೀರಿನ ವಿಷ್ಯವನ್ನ ನೇರವಾಗಿ ಪ್ರಸ್ತಾಪ ಮಾಡದಿದ್ದರು, ಕಾವೇರಿ (ಕಾವೇರಿ ನೀರು) ಎಂಬ ಹುಡುಗಿಗಾಗಿ ಕರ್ನಾಟಕ ಮತ್ತು ತಮಿಳುನಾಡು ಹುಡುಗರಿಬ್ಬರ ಹೇಗೆ ಕಾದಾಡುತ್ತಾರೆ ಎಂಬ ಲವ್ ಸ್ಟೋರಿ ಮೂಲಕ ಪರಿಹಾರ ನೀಡುವ ಪ್ರಯತ್ನ ಮಾಡಿದ್ದರು. ಗಮನಿಸಿಬೇಕಾದ ವಿಚಾರವಂದ್ರೆ, 'ಎಚ್2ಓ' ಸಿನಿಮಾ ತಮಿಳುನಾಡು ಮತ್ತು ಕರ್ನಾಟಕದಲ್ಲಿ ಬಿಡುಗಡೆಯಾಗಿತ್ತು. ಸಿನಿಮಾ ನೋಡಿದ ಜನರು ಇದು ಕಾವೇರಿ ಗಲಾಟೆ ಕುರಿತ ಸಿನಿಮಾ ಎಂದು ಗುರುತಿಸಿದರೇ ಹೊರತು, ಪರಿಹಾರದ ಬಗ್ಗೆ ತಲೆಕೆಡಿಸಿಕೊಂಡಿಲ್ಲ.

  'ಎಚ್2ಓ' ಚಿತ್ರದಲ್ಲಿ ಉಪೇಂದ್ರ ಈ ದೃಶ್ಯ ನೋಡಿ

   ಓಂ ಕಾರ - ಚುನಾವಣೆ ಅನೀತಿ

  ಓಂ ಕಾರ - ಚುನಾವಣೆ ಅನೀತಿ

  2004ರಲ್ಲಿ ಬಿಡುಗಡೆಯಾದ 'ಓಂಕಾರ' ಚಿತ್ರದಲ್ಲಿ ರಾಜಕಾರಣಿಗಳ ಮುಖವಾಡ ಹಾಗೂ ಚುನಾವಣೆ ಅನೀತಿಯನ್ನ ಒಂದೇ ಹಾಡಿನಲ್ಲಿ ಬಯಲು ಮಾಡಿದ್ದರು. ಸಾರಾಯಿ, ದುಡ್ಡು, ಹೆಣ್ಣನ್ನ ಚುನಾವಣೆಯಲ್ಲಿ ಹೇಗೆ ಬಳಸಿಕೊಳ್ಳುತ್ತಾರೆ ಎಂಬುದನ್ನ ತೆರೆ ಮೇಲೆ ಬೆತ್ತಲು ಮಾಡಿದ್ದರು. ವೋಟ್ ಕೇಳುವುದಕ್ಕೆ ಜನರ ಕಾಲಿಗೆ ಬೀಳುವ ನಾಯಕರು, ಗೆದ್ದ ನಂತರ ಕಾಣುವುದೇ ಇಲ್ಲ ಎಂದು ಮುಖಕ್ಕೆ ಹೊಡೆದಾಗ ಹೇಳಿದ್ದರು.

  'ಓಂ ಕಾರ' ಚಿತ್ರದಲ್ಲಿ ಉಪೇಂದ್ರ ಹೇಳಿದ್ದನ್ನ ನೋಡಲು ಈ ಲಿಂಕ್ ಕ್ಲಿಕ್ ಮಾಡಿ

  ಆರಕ್ಷಕ - ಭ್ರಷ್ಟಚಾರದ ವಿರುದ್ಧ

  ಆರಕ್ಷಕ - ಭ್ರಷ್ಟಚಾರದ ವಿರುದ್ಧ

  ''ಅಣ್ಣಾ ಹಜಾರೆ ನೇತೃತ್ವದಲ್ಲಿ ಭ್ರಷ್ಟಚಾರದ ವಿರುದ್ಧ ರಾಷ್ಟ್ರ ಮಟ್ಟದಲ್ಲಿ ಹೋರಾಟ, ಪ್ರತಿಭಟನೆ ನಡೆಯುತ್ತಿದ್ದ ವೇಳೆ 'ಆರಕ್ಷಕ' ಎಂಬ ಸಿನಿಮಾದಲ್ಲಿ ಉಪೇಂದ್ರ ಅಭಿನಯಿಸಿದ್ದರು. ಇದೊಂದು ಸಸ್ಪೆನ್ಸ್, ಥ್ರಿಲ್ಲಿಂಗ್ ಸಿನಿಮಾವಾಗಿದ್ದರೂ, ಹಾಡೊಂದರಲ್ಲಿ ರಿಯಲ್ ಸ್ಟಾರ್ ಭ್ರಷ್ಟಚಾರದ ವಿರುದ್ಧ ಗುಡುಗಿದ್ದರು. ಅಣ್ಣಾ ಹಜಾರೆ ಅವರ ಹೋರಾಟವನ್ನ ಪ್ರತ್ಯಕ್ಷವಾಗಿ ಬೆಂಬಲಿಸಿದ್ದರು.

  'ಆರಕ್ಷಕ' ಚಿತ್ರದಲ್ಲಿ ಉಪ್ಪಿ ರಾಜಕಾರಣಿಗಳನ್ನ ಬಯಲು ಮಾಡಿದ್ದು ಹೀಗೆ ನೋಡಿ

  ಸೂಪರ್ - ಭವ್ಯ ಭಾರತದ ಕನಸು

  ಸೂಪರ್ - ಭವ್ಯ ಭಾರತದ ಕನಸು

  2010ರಲ್ಲಿ ತೆರೆಕಂಡ 'ಸೂಪರ್' ಸಿನಿಮಾ ಉಪೇಂದ್ರ ಅವರ ವೃತ್ತಿ ಜೀವನದ ಅತಿ ದೊಡ್ಡ ಮೈಲಿಗಲ್ಲು. 2030ರಲ್ಲಿ ಭಾರತ ದೇಶ ಹೇಗೆ ನಿರ್ಮಾಣವಾಗಲಿದೆ ಎಂಬುದರ ಬಗ್ಗೆ ಸಿನಿಮಾ ಮಾಡಿದ್ದರು. ಪ್ರಪಂಚದಲ್ಲಿ ಭಾರತ ದೇಶ ಅಗ್ರಸ್ಥಾನದಲ್ಲಿ ಹೇಗೆ ಕಂಗೊಳಿಸಿದೆ ಎಂಬುದನ್ನ ಕಣ್ಣಿಗೆ ಕಟ್ಟಿಕೊಟ್ಟಿದ್ದರು. ಪ್ರಸ್ತುತ ರಾಜಕೀಯಕ್ಕೆ ಛೀಮಾರಿ ಹಾಕಿದ್ದರು. ವಿಶೇಷ ಅಂದ್ರೆ, ಈ ಚಿತ್ರದಲ್ಲಿ ಉಪೇಂದ್ರ ಅವರೇ ಮುಖ್ಯಮಂತ್ರಿ ಆಗಿ ಕೂಡ ಕಾಣಿಸಿಕೊಂಡಿದ್ದರು. ಈ ಸಿನಿಮಾ ಇಡೀ ಕನ್ನಡ ಪ್ರೇಕ್ಷಕರಿಗೆ ಮಾತ್ರವಲ್ಲದೇ ಪರಭಾಷಿಗರು ಕೂಡ ಮೆಚ್ಚಿಕೊಂಡರು. 'ಸೂಪರ್' ಸಿನಿಮಾ ನೋಡಿದ ಜನ ''ಒಂದು ವೇಳೆ ಉಪೇಂದ್ರ ರಾಜಕೀಯಕ್ಕೆ ಬಂದ್ರೆ ಈ ರೀತಿಯ ದೇಶ ನೋಡಲು ಸಾಧ್ಯವೆಂದಿದ್ದವರು ಇದ್ದರು''. ಬಹುಶಃ ಇದನ್ನ ನನಸು ಮಾಡುವತ್ತಾ ಉಪ್ಪಿ ಸಾಗಿದ್ದಾರೆ ಅನ್ನಿಸುತ್ತಿದೆ.

  2030ರಲ್ಲಿ ಭಾರತದ ಹೇಗಿರಲಿದೆ ಎಂದು 'ಸೂಪರ್' ಚಿತ್ರದಲ್ಲಿ ನೋಡಿ

  ಟೋಪಿವಾಲ - ಕಪ್ಪುಹಣದ ವಿರುದ್ಧ

  ಟೋಪಿವಾಲ - ಕಪ್ಪುಹಣದ ವಿರುದ್ಧ

  ವಿದೇಶದಲ್ಲಿರುವ ಕಪ್ಪು ಹಣವನ್ನ ದೇಶಕ್ಕೆ ವಾಪಸ್ ತರುವುದಾಗಿ ಪ್ರತಿ ಭಾರಿಯೂ ಸರ್ಕಾರ ಹೇಳುತ್ತಲೇ ಇದೆ. ಆದ್ರೆ, ಯಾರೋಬ್ಬರು ಈ ಪ್ರಯತ್ನ ಮಾಡಿಲ್ಲ. ಇದನ್ನ ರಿಯಲ್ ಸ್ಟಾರ್ ಉಪೇಂದ್ರ ಅವರು 'ಟೋಪಿವಾಲ' ಚಿತ್ರದ ಮೂಲಕ ಮಾಡಿ ತೋರಿಸಿದರು. ರಾಜಕಾರಣಿಗಳು, ಭ್ರಷ್ಟಚಾರಿಗಳು ವಿದೇಶದಲ್ಲಿಟ್ಟಿದ್ದ ಕಪ್ಪು ಹಣವನ್ನ ದೇಶಕ್ಕೆ ತಂದಿದ್ದರು. ಈ ಸಿನಿಮಾ ಕೂಡ ಉಪ್ಪಿಯ ರಾಜಕೀಯ ಹಾದಿಗೆ ವೇದಿಕೆಯಾಗಿತ್ತು ಎನ್ನುವುದು ಇಲ್ಲಿ ಸ್ಮರಿಸಿಬಹುದು.

  'ಟೋಪಿವಾಲ' ಚಿತ್ರದಲ್ಲಿ ಉಪ್ಪಿಯ ಮಾತು ಕೇಳಲು ಈ ಲಿಂಕ್ ಕ್ಲಿಕ್ ಮಾಡಿ

  English summary
  Kannada Actor Upendra movies list related to Politics

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X