For Quick Alerts
  ALLOW NOTIFICATIONS  
  For Daily Alerts

  ಉಪೇಂದ್ರ ಅಣ್ಣನ ಮಗನ ಆಶ್ಚರ್ಯಕರ ವರ್ಕೌಟ್ : ಹೊಸ ಲುಕ್ ಹೀಗಿದೆ

  |

  ರಿಯಲ್ ಸ್ಟಾರ್ ಉಪೇಂದ್ರ ಅವರ ಅಣ್ಣನ ಮಗ ನಿರಂಜನ್ ಈಗಾಗಲೆ ಎರಡು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಪ್ರಿಯಾಂಕ ಉಪೇಂದ್ರ ಅಭಿನಯದ ಸೆಕೆಂಡ್ ಹಾಫ್ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ನಿರಂಜನ್ ಈಗ ಪೂರ್ಣ ಪ್ರಮಾಣದ ನಾಯಕನಾಗಿ ಮಿಂಚಲು ಭರ್ಜರಿ ತಯಾರಿ ಮಾಡಿಕೊಳ್ಳುತ್ತಿದ್ದಾರೆ.

  ಎಷ್ಟರ ಮಟ್ಟಿಗೆ ತಯಾರಾಗುತ್ತಿದ್ದಾರೆ ಅಂದ್ರೆ ಸಿಕ್ಕಾಪಟ್ಟೆ ವರ್ಕೌಟ್ ಮಾಡಿ ಸಿಕ್ಸ್ ನಲ್ಲಿ ಮಿಂಚುತ್ತಿದ್ದಾರೆ. ಅಷ್ಟಕ್ಕು ನಿರಂಜನ್ ಕಬ್ಬಿಣದಂತಹ ದೇಹ ತಯಾರು ಮಾಡಲು ತೆಗೆದುಕೊಂಡ ಸಮಯ ಬರೋಬ್ಬರಿ ಎರಡು ವರ್ಷ.

  'ಅದ್ಧೂರಿ-2'ಗೆ ನಡೆಯುತ್ತಿದೆ ಭರ್ಜರಿ ಸಿದ್ಧತೆ: ಹೀರೋ ಇವರೆ

  ಸುಮಾರು ಎರಡು ವರ್ಷಗಳಿಂದ ಜಿಮ್ ನಲ್ಲಿ ಬೆವರಿಳಿಸಿ ವರ್ಕೌಟ್ ಮಾಡುತ್ತಿದ್ದ ನಿರಂಜನ್ ಈಗ ಹುರಿಗೊಳಿಸಿದ ದೇಹದೊಂದಿಗೆ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಡಲು ಸಜ್ಜಾಗಿದ್ದಾರೆ. ಸಿಕ್ಸ್ ಪ್ಯಾಕ್ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಮೂಲಕ ಸಂತಸ ವ್ಯಕ್ತಪಡಿಸಿದ್ದಾರೆ. ಈ ಬದಲಾವಣೆಗೆ ಎರಡು ವರ್ಷಗಳಿಂದ ವರ್ಕೌಟ್ ಜೊತೆಗೆ ಡಯಟ್ ಕೂಡ ಮಾಡಿದ್ದಾರೆ.

  ಅಂದ್ಹಾಗೆ ನಿರಂಜನ್ ಗೆ ಜಿಮ್ ಟ್ರೈನರ್ ಆಗಿರುವುದು ಶ್ರೀನಿವಾಸ್ ಗೌಡ. ಸೆಲೆಬ್ರಿಟಿ ಟ್ರೈನರ್ ಅಂತಾನೆ ಖ್ಯಾತಿಗಳಿಸಿರುವ ಶ್ರೀನಿವಾಸ್ ನಿರಂಜನ್ ಅವರನ್ನು ಟ್ರೈನ್ ಅಪ್ ಮಾಡುವ ಮೂಲಕ ಮತ್ತೋರ್ವ ಸಿಕ್ಸ್ ಪ್ಯಾಕ್ ನಾಯಕನನ್ನು ತಯಾರು ಮಾಡಿದ್ದಾರೆ.

  ಉತ್ತಮ ರಿಸಲ್ಟ್ ಸಿಕ್ಕಿರುವ ಬಗ್ಗೆ ಸಂತಸ ವ್ಯಕ್ತಪಡಿಸಿರುವ ನಿರಂಜನ್ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. "ಎರಡು ವರ್ಷಗಳ ಹಿಂದೆಯ ಈ ಪಯಣ ಶುರುವಾಗಿದೆ. ಈಗ 100 ಪರ್ಸೆಂಟ್ ಫಲಿತಾಂಶ ಸಿಕ್ಕಿದೆ. ಇದು ಪ್ರಾರಂಭ ಅಷ್ಟೆ. ಈ ಎಲ್ಲಾ ಕ್ರೆಡಿಟ್ ಟ್ರೈನರ್ ಶ್ರೀನಿವಾಸ್ ಅವರಿಗೆ ಸಲ್ಲಬೇಕು. ಕುಟುಂಬದವರ ಸಹಾಯ ಹಾಗೂ ಉಪೇಂದ್ರ ಮತ್ತು ಪ್ರಿಯಾಂಕ ಅವರ ಆಶೀರ್ವಾದ ಹಾಗೂ ಎಲ್ಲ ನನ್ನ ಸ್ನೇಹಿತರಿಗೂ ಧನ್ಯವಾದ" ಎಂದು ಹೇಳಿದ್ದಾರೆ.

  ಮೂಲಗಳ ಪ್ರಕಾರ ನಿರಂಜನ್ 'ಅದ್ಧೂರಿ-2' ಚಿತ್ರದಲ್ಲಿ ನಾಯಕನಾಗಿ ಮಿಂಚಲಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಈಗಾಗಲೆ ಚಿತ್ರದ ಪ್ರಿ-ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದೆಯಂತೆ. ಎಲ್ಲವು ಅಂದುಕೊಂಡಂತೆ ಆದ್ರೆ ಸಧ್ಯದಲ್ಲೇ ಅದ್ದೂರಿ-2 ಸಿನಿಮಾ ಸೆಟ್ಟೇರಲಿದೆ.

  English summary
  Kannada actor Upendra nephew Niranjan amazing six pack body performance. He is preparing from 2 years for six pack body.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X