For Quick Alerts
  ALLOW NOTIFICATIONS  
  For Daily Alerts

  'ಅದ್ಧೂರಿ-2'ಗೆ ನಡೆಯುತ್ತಿದೆ ಭರ್ಜರಿ ಸಿದ್ಧತೆ: ಹೀರೋ ಇವರೆ

  |

  'ಅದ್ಧೂರಿ' ಸ್ಯಾಂಡಲ್ ವುಡ್ ನ ಸೂಪರ್ ಹಿಟ್ ಸಿನಿಮಾಗಳಲ್ಲಿ ಒಂದು. 2012ರಲ್ಲಿ ಅದ್ಧೂರಿಯಾಗಿ ತೆರೆಗೆ ಬಂದ 'ಅದ್ಧೂರಿ' ಆಕ್ಷನ್ ಪ್ರಿನ್ಸ್ ಅವರನ್ನು ಸ್ಯಾಂಡಲ್ ವುಡ್ ಗೆ ಪರಿಚಯಿಸಿದ ಸಿನಿಮಾ. ಧ್ರುವ ಸರ್ಜಾ ಸಿನಿ ಜಾವನಕ್ಕೆ ದೊಡ್ಡ ಬ್ರೇಕ್ ಕೊಟ್ಟ ಸಿನಿಮಾ. ಈಗ ಅದೇ ಸಿನಿಮಾದ ಸೀಕ್ವೆಲ್ ತಯಾರಾಗುತ್ತಿದೆ. ಹೌದು, ಈಗಾಗಲೆ 'ಅದ್ಧೂರಿ-2' ಚಿತ್ರಕ್ಕಾಗಿ ಭರ್ಜರಿ ತಯಾರಿ ನಡೆಯುತ್ತಿದೆ ಎನ್ನುವ ಸುದ್ದಿ ಹಾರಿದಾಡುತ್ತಿದೆ.

  ಅಂದ್ಹಾಗೆ ಈ ಭಾರಿಯ 'ಅದ್ಧೂರಿ'ಯಲ್ಲಿ ನಟ ಧ್ರುವ ಸರ್ಜಾ ಇರುವುದಿಲ್ಲ. ಬದಲಿಗೆ ರಿಯಲ್ ಸ್ಟಾರ್ ಉಪೇಂದ್ರ ಅವರ ಅಣ್ಣನ ಮಗ ನಿರಂಜನ್ ನಾಯಕನಾಗಿ ಮಿಂಚಲಿದ್ದಾರಂತೆ.ಈಗಾಗಲೆ ತೆರೆ ಮೇಲೆ ಮಿಂಚಿರುವ ನಿರಂಜನ್ 'ಅದ್ಧೂರಿ-2' ಮೂಲಕ ಅಬ್ಬರಿಸಲು ಸಜ್ಜಾಗುತ್ತಿದ್ದಾರೆ.

  ಒಟ್ಟಿಗೆ ಚಿತ್ರಮಂದಿರಕ್ಕೆ ಎಂಟ್ರಿ ಕೊಡ್ತಿದ್ದಾರೆ ಶಿವರಾಜ್ ಕುಮಾರ್ ಮತ್ತು ಉಪೇಂದ್ರ

  ಮೂಲಗಳ ಪ್ರಕಾರ 'ಅದ್ಧೂರಿ ಪಾರ್ಟ್-2'ಗೆ ವೆಂಟಕೇಶ್ ಎನ್ನುವ ಯುವ ಪ್ರತಿಭೆ ನಿರ್ದೇಶನ ಮಾಡುತ್ತಿದ್ದಾರಂತೆ. ಮೊದಲ ಬಾರಿಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ ವೆಂಕಟೇಶ್. 'ಅದ್ಧೂರಿ' ನಿರ್ಮಾಣ ಮಾಡಿದ್ದ ಶಂಕರ್ ರೆಡ್ಡಿ ಪಾರ್ಟ್-2ಗೂ ಬಂಡವಾಳ ಹೂಡುತ್ತಿದ್ದಾರೆ. ನಿರಂಜನ್, ಪ್ರಿಯಾಂಕ ಉಪೇಂದ್ರ ಅಭಿನಯದ 'ಸೆಕೆಂಡ್ ಹಾಫ್' ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಆ ನಂತರ 'ನನ್ ಹುಡುಗರು ಕತೆ' ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

  ಸದ್ಯ ನಿರಂಜನ್ ಪಾತ್ರಕ್ಕಾಗಿ ಸಖತ್ ವರ್ಕೌಟ್ ಮಾಡಲು ಶುರುವಾಡಿದ್ದಾರಂತೆ. ಚಿತ್ರದ ಪ್ರಿಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದ್ದು ಮುಂದಿನ ತಿಂಗಳು ಚಿತ್ರ ಸೆಟ್ಟೇರುವ ಸಾಧ್ಯತೆ ಇದೆಯಂತೆ. 'ಅದ್ಧೂರಿ'ಯಲ್ಲಿ ಧ್ರುವ ಸರ್ಜಾ ಜೊತೆ ನಾಯಕಿಯಾಗಿ ರಾಧಿಕಾ ಪಂಡಿತ್ ನಾಯಕಿಯಾಗಿ ಮಿಂಚಿದ್ದರು. ಆದ್ರೆ ನಿರಂಜನ್ ಗೆ ಯಾರು ನಾಯಕಿಯಾಗ್ತಾರೆ ಎನ್ನುವುದು ಕುತೂಹಲ ಮೂಡಿಸಿದೆ.

  English summary
  After the success of Addhuri, the second part Addhuri-2 in making. Upendra nephew Niranjan on board as the hero of this film.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X