ಉಪ್ಪಿ 'UI' ಶೂಟಿಂಗ್ ಶುರು: ಶ್ರೀನಿಧಿ ಶೆಟ್ಟಿ ನಾಯಕಿಯಂತೆ!

By Bhagya.s

ನಟ ನಿರ್ದೇಶಕ ಉಪೇಂದ್ರ ಬ್ರೇಕ್ ಬಳಿಕ ಮತ್ತೆ ನಿರ್ದೇಶಕನ ಹ್ಯಾಟ್ ತೊಟ್ಟಿದ್ದಾರೆ.‌ ಉಪೇಂದ್ರ ಕಥೆ ಬರೆದು, ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ ಎಂದರೆ ಅಲ್ಲಿಂದಲೇ ನಿರೀಕ್ಷೆಗಳು ಹುಟ್ಟಿ ಕೊಳ್ಳುತ್ತವೆ.

ಮತ್ತೆ ನಿರ್ದೇಶಕನ ಮಾಡಲು ಮುಂದಾಗಿರುವ ಉಪೇಂದ್ರ ಟೈಟಲ್ ಮತ್ತು ಪೋಸ್ಟರ್ ಗಳಿಂದಲೇ ಸಾಕಷ್ಟು ಕುತೂಹಲದ ಜೊತೆಗೆ, ನಿರೀಕ್ಷೆಯನ್ನು ಹುಟ್ಟು ಹಾಕಿದ್ದಾರೆ. ಕೊನೆಗೆ ಸಿನಿಮಾ ಟೈಟಲ್ 'ಯುಐ' ಎನ್ನುವುದು ಅರ್ಥವಾಗಿದೆ.‌ 'ನೀನು ನಾನು' ಎನ್ನುವ ಶೀರ್ಷಿಕೆಯ ಅಡಿಯಲ್ಲಿ ಹೊಸ ಕಥೆ ಹೇಳಲು ಬರ್ತಿದ್ದಾರೆ.

Recommended Video

'ಯುಐ' ಸಿನಿಮಾದಲ್ಲಿ ಶ್ರೀನಿಧಿ ಶೆಟ್ಟಿ ನಾಯಕಿ? | Srinidhi Shetty | Upendra | uithemovie *Sandalwood

ಇನ್ನು ಹೆಚ್ಚು ತಡ ಮಾಡದೇ ನಟ ಉಪೇಂದ್ರ ಶೂಟಿಂಗ್ ಶುರು ಮಾಡಿದ್ದಾರೆ. ಶೂಟಿಂಗ್ ಮೇಕಿಂಗ್ ಫೋಟೊಗಳನ್ನು ಕೂಡ ಹಂಚಿಕೊಳ್ಳಲಾಗಿದೆ. ಇದರ ಜೊತೆಗೆ ಚಿತ್ರದ ನಾಯಕಿ ಬಗ್ಗೆ ಇಂಟ್ರಸ್ಟಿಂಗ್ ಸುದ್ದಿಯನ್ನು ಮುಂದೆ ಓದಿ...

7 ವರ್ಷದ ನಂತರ ಉಪ್ಪಿ ಜಾದು!

7 ವರ್ಷದ ನಂತರ ಉಪ್ಪಿ ಜಾದು!

ಏಳು ವರ್ಷಗಳ ನಂತರ ಮತ್ತೆ ಹೊಸ ಹುರುಪಿನಲ್ಲಿ ಹಳೇ ಡೈರೆಕ್ಟರ್ ಉಪ್ಪಿ ಡೈರೆಕ್ಷನ್ ಮೂಡ್ ಗೆ ಮರಳಿದ್ದಾರೆ‌.‌ ಇದು ನಟ ಉಪೇಂದ್ರ ಅವರ ಪ್ಯಾನ್​ ಇಂಡಿಯಾ ಸಿನಿಮಾ. ಹಾಗಾಗಿ ಎಲ್ಲವೂ ದೊಡ್ಡ ಮಟ್ಟದಲ್ಲೇ ಇರಲಿದೆ‌.‌ ಇನ್ನು ಇತ್ತೀಚೆಗೆ ಮುಹೂರ್ತ ಕಾರ್ಯಕ್ರಮವನ್ನು ನೆರವೇರಿಸಿದ ಉಪೇಂದ್ರ ಮತ್ತು ತಂಡ ಕನಿಷ್ಠ ಮಾಹಿತಿಯನ್ನು ಬಿಟ್ಟು ಕೊಡುವ ಮೂಲಕ ಮತ್ತಷ್ಟು ಕುತೂಹಲವನ್ನು ಹೆಚ್ಚು ಮಾಡಿದೆ.

'U I' ಶೂಟಿಂಗ್ ಸ್ಟಾರ್ಟ್!

'U I' ಶೂಟಿಂಗ್ ಸ್ಟಾರ್ಟ್!

ಸದ್ಯ ಈ ಚಿತ್ರದ ಶೂಟಿಂಗ್ ಕೂಡ ಶುರುವಾಗಿದೆ. ಉಪ್ಪಿ ದೊಡ್ಡ ಮಟ್ಟದಲ್ಲಿ ಸಿನಿಮಾ ಮುಹೂರ್ತ ಮಾಡಿದ್ದಾರೆ. ಈಗ ಬೆಂಗಳೂರಿನ ಮಿನರ್ವ ಮಿಲ್ ನಲ್ಲಿ ಭರ್ಜರಿಯಾಗಿ ಶೂಟಿಂಗ್ ನಡೆಯುತ್ತಿದೆ. ಮೊದಲ ಹಂತದ ಶೂಟಿಂಗ್ ಶುರುವಾಗಿದ್ದು ಆದಷ್ಟು ಬೇಗ ಚಿತ್ರೀಕರಣ ಮುಗಿಸುವ ಯೋಜನೆಯಲ್ಲಿದೆ ಚಿತ್ರತಂಡ. ಇದರ ನಡುವೆ ಉಪ್ಪಿ ಚಿತ್ರಕ್ಕೆ ನಾಯಕಿ ಯಾರಾಗಬಹುದು ಎನ್ನುವ ಕುತೂಹಲ ಹುಟ್ಟಿಕೊಂಡಿದೆ.

ಉಪ್ಪಿ ಚಿತ್ರದಲ್ಲಿ ಶ್ರೀನಿಧಿ ಶೆಟ್ಟಿ!

ಉಪ್ಪಿ ಚಿತ್ರದಲ್ಲಿ ಶ್ರೀನಿಧಿ ಶೆಟ್ಟಿ!

ಇನ್ನು ಈ ಚಿತ್ರಕ್ಕೆ ಯಾರು ನಾಯಕಿ ಎನ್ನುವ ಕುತೂಹಲವೂ ಮೂಡಿದೆ. ಅಲ್ಲದೇ ಈಗಾಗಲೇ ಪ್ಯಾನ್ ಇಂಡಿಯಾ ಚಿತ್ರದ ಮೂಲಕ ಸೌಂಡ್ ಮಾಡಿರುವ ಇಬ್ಬರು ನಾಯಕಿಯರ ಮೇಲೆ ಉಪ್ಪಿ ಕಣ್ಣಿಟ್ಟಿದ್ದಾರಂತೆ. ಉಪ್ಪಿ ತಮ್ಮ ಚಿತ್ರಕ್ಕೆ 'ಕೆಜಿಎಫ್' ನಟಿ ಶ್ರೀನಿಧಿ ಶೆಟ್ಟಿಯನ್ನು ಕರೆತರುತ್ತಾರೆ ಎನ್ನಲಾಗಿದೆ. 'ಕೆಜಿಎಫ್' ಚಿತ್ರದಲ್ಲಿ ರೀನಾ ಪಾತ್ರದಲ್ಲಿ ಕಾಣಿಸಿದ್ದ ಶ್ರೀನಿಧಿ ಶೆಟ್ಟಿ ಉಪ್ಪಿಯ 'ಯು ಐ' ಚಿತ್ರದಲ್ಲಿ ಮಿಂಚಲಿದ್ದಾರೆ ಎನ್ನಲಾಗುತ್ತಿದೆ.

ಉಪ್ಪಿ ಸಿನಿಮಾಗೆ ತಮನ್ನಾ ಹೆಸರು!

ಉಪ್ಪಿ ಸಿನಿಮಾಗೆ ತಮನ್ನಾ ಹೆಸರು!

ಶ್ರೀನಿಧಿ ಶೆಟ್ಟಿ ಜೊತೆಗೆ, 'ಕೆಜಿಎಫ್ ಚಾಪ್ಟರ್ 1' ನಲ್ಲಿ ಜೋಕೆ ನಾನು ಬಳ್ಳಿಯ ಮಿಂಚು ಎಂದು ಸೊಂಟ ಬಳುಕಿಸಿ ಮಿಂಚಿದ್ದ ತಮನ್ನಾ ಹೆಸರು ಕೂಡ ಕೇಳಿ ಬರ್ತಿದೆ. ಮಿಲ್ಕಿ ಬ್ಯೂಟಿ ಕಡೆಗೆ ಚಿತ್ರತಂಡದ ಒಲವಿದೆ ಎನ್ನುವುದು ತಿಳಿದು ಬಂದಿದೆ. ಇನ್ನೂ ಶ್ರೀನಿಧಿ ಶೆಟ್ಟಿ ಮತ್ತು ತಮನ್ನಾ ಇಬ್ಬರಲ್ಲಿ ಒಬ್ಬರು ಉಪೇಂದ್ರ ಅವರ ಈ ಚಿತ್ರಕ್ಕೆ ನಾಯಕಿ ಆಗಲಿದ್ದಾರೆ? '‌ಕೆಜಿಎಫ್' ಬಳಿಕ ಮೂರು ಚಿತ್ರಗಳಲ್ಲಿ ಶ್ರೀನಿಧಿ ಶೆಟ್ಟಿ ಬ್ಯುಸಿಯಾಗಿದ್ದಾರೆ. ಈಕೆಯ ಡೇಟ್ ಸಿಗದಿದ್ದರೆ. ತಮನ್ನಾ ಬರೋದು ಪಕ್ಕಾ ಎನ್ನಲಾಗಿದೆ.

More from Filmibeat

English summary
Upendra New Movie Shooting Start, Tamanna, Srinidhi Shetty may Be On Board, know more
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X