ಹೊಸ ಡೈರೆಕ್ಟರ್ ಚಿತ್ರಕ್ಕೆ 'ಓಕೆ' ಎಂದ ಉಪೇಂದ್ರ.!

ರಿಯಲ್ ಸ್ಟಾರ್ ಉಪೇಂದ್ರ ಈಗಾಗಲೇ ಹಲವು ಸಿನಿಮಾಗಳನ್ನ ಮಾಡ್ತಿದ್ದಾರೆ. ಮತ್ತೊಂದೆಡೆ ರಾಜಕೀಯಕ್ಕೂ ಪ್ರವೇಶ ಮಾಡಿದ್ದು, ಪ್ರಜಾಕೀಯದ ಕೆಲಸಗಳಲ್ಲಿಯೂ ತೊಡಗಿಕೊಂಡಿದ್ದಾರೆ. ಹೀಗಿದ್ದರೂ ಸಿನಿಮಾದ ಹಿಂದೆ ಮತ್ತೊಂದು ಸಿನಿಮಾಗಳು ಎಂಬಂತೆ ಒಪ್ಪಿಕೊಳ್ಳುತ್ತಲೇ ಇದ್ದಾರೆ.

ಈಗ ಹೊಸ ನಿರ್ದೇಶಕರ ಚಿತ್ರಕ್ಕೆ ಉಪೇಂದ್ರ ಕಾಲ್ ಶೀಟ್ ಕೊಟ್ಟಿದ್ದು, ಆ ಸಿನಿಮಾದ ಮೇಲೆ ದೊಡ್ಡ ನಿರೀಕ್ಷೆ, ಕುತೂಹಲ ಹುಟ್ಟಿಕೊಂಡಿದೆ. ಸದ್ಯ, ಆರ್ ಚಂದ್ರು ಅವರ ಐ ಲವ್ ಯೂ ಚಿತ್ರದಲ್ಲಿ ಅಭಿನಯಿಸಿರುವ ಉಪ್ಪಿ, ನಿರ್ದೇಶಕ ಶಶಾಂಕ್ ಅವರ ಚಿತ್ರದಲ್ಲೂ ಕಾಣಿಸಿಕೊಳ್ಳಲಿದ್ದಾರೆ.

ಈ ಮಧ್ಯೆ ಹೊಸ ಪ್ರತಿಭೆಯ ಚಿತ್ರದಲ್ಲಿ ಉಪ್ಪಿ ಅಭಿನಯಿಸುತ್ತಿದ್ದು, ಸ್ಟಾರ್ ನಿರ್ಮಾಪಕೊಬ್ಬರು ಬಂಡವಾಳ ಹಾಕಲಿದ್ದಾರೆ. ಅಷ್ಟಕ್ಕೂ, ಆ ಚಿತ್ರದ ನಿರ್ದೇಶಕ ಯಾರು.? ನಿರ್ಮಾಪಕರು ಯಾರು.? ಯಾವಾಗನಿಂದ ಆರಂಭವಾಗಲಿದೆ ಎಂದು ತಿಳಿಯಲು ಮುಂದೆ ಓದಿ....

ಉಪ್ಪಿಗೆ ಮೌರ್ಯ ಆಕ್ಷನ್ ಕಟ್.!

ಉಪ್ಪಿಗೆ ಮೌರ್ಯ ಆಕ್ಷನ್ ಕಟ್.!

ಉಪೇಂದ್ರ ಅವರ ಮುಂದಿನ ಚಿತ್ರವೊಂದಕ್ಕೆ ಯುವ ನಿರ್ದೇಶಕ ಮೌರ್ಯ ಆಕ್ಷನ್ ಕಟ್ ಹೇಳಲಿದ್ದಾರೆ. ಇನ್ನು ಹೆಸರಿಡದ ಈ ಚಿತ್ರದ ಕಥೆಯನ್ನ ಈಗಾಗಲೇ ಉಪ್ಪಿ ಕೇಳಿದ್ದು, ಖುಷಿಯಿಂದ ಒಪ್ಪಿಕೊಂಡಿದ್ದಾರೆ. ಕಳೆದ ಒಂದೂವರೆ ವರ್ಷದಿಂದ ಈ ಸ್ಕ್ರಿಪ್ಟ್ ಮಾಡಲಾಗಿದ್ದು, ಉಪೇಂದ್ರ ಅವರನ್ನೇ ಗಮನದಲ್ಲಿಟ್ಟುಕೊಂಡು ಕಥೆ ಬರೆದಿದ್ದಾರಂತೆ. ಈಗ ಉಪ್ಪಿಯನ್ನೇ ನಾಯಕನನ್ನಾಗಿಸಿರುವುದು ನಿರ್ದೇಶಕರಿಗೆ ಸಂತಸ ತಂದಿದೆ.

ಟಿ.ಆರ್ ಚಂದ್ರಶೇಖರ್ ತಂಡ ನಿರ್ಮಾಣ

ಟಿ.ಆರ್ ಚಂದ್ರಶೇಖರ್ ತಂಡ ನಿರ್ಮಾಣ

ಸದ್ಯ, ಅಯೋಗ್ಯದ ಚಿತ್ರದ ಯಶಸ್ಸಿನಲ್ಲಿರುವ ನಿರ್ಮಾಪಕ ಟಿ.ಆರ್ ಚಂದ್ರಶೇಖರ್ ಅವರು ಈ ಚಿತ್ರಕ್ಕೆ ಬಂಡವಾಳ ಹಾಕಲಿದ್ದಾರೆ. ಇವರ ಜೊತೆ ಕ್ರಿಸ್ಟಲ್ ಪಾರ್ಕ್ ಸಿನಿಮಾ ಕೈಜೋಡಿಸಿದ್ದು, ಅದ್ಧೂರಿಯಾಗಿ ನಿರ್ಮಾಣ ಮಾಡುವ ಪ್ಲಾನ್ ಮಾಡಿಕೊಂಡಿದ್ದಾರೆ.

ಮಾರ್ಚ್ ತಿಂಗಳಲ್ಲಿ ಆರಂಭ.!

ಮಾರ್ಚ್ ತಿಂಗಳಲ್ಲಿ ಆರಂಭ.!

'ಹೋಮ್ ಮಿನಿಸ್ಟರ್', 'ಐ ಲವ್ ಯೂ' ಅಂತಹ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಈ ಸಿನಿಮಾ ಮಧ್ಯೆ ಶಶಾಂಕ್ ಸಿನಿಮಾನೂ ಒಪ್ಪಿಕೊಂಡಿದ್ದಾರೆ. ಅದಾದ ನಂತರ ಈ ಸಿನಿಮಾ ಆರಂಭವಾಗಲಿದೆ. ಸದ್ಯದ ಮಾಹಿತಿ ಪ್ರಕಾರ ಮಾರ್ಚ್ ತಿಂಗಳಲ್ಲಿ ಪ್ರಾರಂಭವಾಗುವ ಸುಳಿವು ಸಿಕ್ಕಿದೆ.

ನಾಯಕಿ ಯಾರು.?

ನಾಯಕಿ ಯಾರು.?

ಉಪ್ಪಿಯ ಅಭಿಮಾನಿ, ಉಪ್ಪಿಯ ಸಿನಿಮಾಗಳನ್ನ ನೋಡಿ ಬೆಳೆದ ನಿರ್ದೇಶಕ ಮೌರ್ಯ ಅವರಿಗೆ ತಕ್ಕ ಹಾಗೆ ಚಿತ್ರಕತೆ ಮಾಡಿದ್ದಾರೆ. ಸದ್ಯಕ್ಕೆ ಕಥೆ ಮತ್ತು ನಾಯಕ ಮಾತ್ರ ಅಂತಿಮವಾಗಿದ್ದಾರೆ. ನಾಯಕಿ ಯಾರು, ಉಳಿದ ಕಲಾವಿದರ ಯಾರು ಎಂಬುದು ಇನ್ನು ಆಯ್ಕೆಯಾಗಿಲ್ಲ.

More from Filmibeat

English summary
Actor-director-politician upendra has agreed to work with a newbie director Maurya DN. The yet-to-be titled film will be made under Crystal Park Cinema and produced by TR Chandrashekar.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X