»   » ಚಿರಂಜೀವಿ 151ನೇ ಚಿತ್ರದಲ್ಲಿ ಉಪೇಂದ್ರ ನಟಿಸುತ್ತಿಲ್ಲ

ಚಿರಂಜೀವಿ 151ನೇ ಚಿತ್ರದಲ್ಲಿ ಉಪೇಂದ್ರ ನಟಿಸುತ್ತಿಲ್ಲ

Posted By:
Subscribe to Filmibeat Kannada

ಕಳೆದ ಕೆಲದಿನಗಳಿಂದ ಗಾಂಧಿನಗರದಲ್ಲಿ ಉಪ್ಪೇಂದ್ರ ಅವರ ಬಗ್ಗೆ ಒಂದು ಹೊಸ ಸುದ್ದಿ ಹರಿದಾಡುತ್ತಲೇ ಇದೆ. ಇದಕ್ಕೆಲ್ಲಾ ಈಗ ಉಪೇಂದ್ರ ಅವರ ಕಡೆಯಿಂದ ಸ್ಪಷ್ಟನೆ ಸಿಕ್ಕಿದೆ. ಹೀಗಾಗಿ, ರಿಯಲ್ ಸ್ಟಾರ್ ಬಗೆಗಿನ ಅಂತೆ-ಕಂತೆಗಳಿಗೆ ಪೂರ್ತಿ ವಿರಾಮ ಬಿದ್ದಿದೆ.

ಮೆಗಾಸ್ಟಾರ್ ಚಿರಂಜೀವಿ ಅವರ 151ನೇ ಚಿತ್ರದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಅಭಿನಯಿಸಲಿದ್ದಾರೆ. ಚಿರಂಜೀವಿಯ ಎದುರು ವಿಲನ್ ಆಗಿ ಅಬ್ಬರಿಸಲಿದ್ದಾರೆ ಎಂಬ ಸುದ್ದಿ ಗಿರಿಗಿಟ್ಲೆ ಹೊಡಿತಿತ್ತು. ಆದ್ರೆ, ಇದನ್ನ ಉಪ್ಪಿ ಮೂಲಗಳು ನಿರಾಕರಿಸಿವೆ.

ರಿಯಲ್ ಸ್ಟಾರ್ ಉಪೇಂದ್ರ ಬಗ್ಗೆ ಗಾಂಧಿನಗರದಲ್ಲಿ ನಮ್ಮ ಕಿವಿಗೆ ಬಿದ್ದ ಸುದ್ದಿ...

ಸದ್ಯ, ಉಪೇಂದ್ರ ಅವರು ಕನ್ನಡದ ಪ್ರಾಜೆಕ್ಟ್ ಗಳಲ್ಲಿ ಬ್ಯುಸಿಯಾಗಿದ್ದಾರೆ. ಡೈರೆಕ್ಷನ್ ಸಿದ್ದವಾಗುತ್ತಿದ್ದಾರೆ ಎಂದು ಮಾಹಿತಿ ಕೊಟ್ಟಿದ್ದಾರೆ....ಮುಂದೆ ಓದಿ....

ಚಿರು 151 ನೇ ಚಿತ್ರದಲ್ಲಿಲ್ಲ ಉಪ್ಪಿ

ಸುರೇಂದ್ರ ರೆಡ್ಡಿ ನಿರ್ದೇಶನ ಮಾಡುತ್ತಿರುವ ಚಿರಂಜೀವಿಯ ಅವರ 151ನೇ ಚಿತ್ರ 'ಉಯ್ಯಲವಾಡ ನರಸಿಂಹ ರೆಡ್ಡಿ'ಯಲ್ಲಿ ಉಪೇಂದ್ರ ಅಭಿನಯಿಸುತ್ತಿಲ್ಲ. ಇದೆಲ್ಲಾ ಸುಳ್ಳು ಸುದ್ದಿ ಎಂದು ಉಪೇಂದ್ರ ಅವರ ಆಪ್ತ ಶ್ರೀರಾಮ್ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ತಿಳಿಸಿದ್ದಾರೆ ಎಂದು ವರದಿ ಮಾಡಲಾಗಿದೆ.

ಕನ್ನಡದ 2 ಚಿತ್ರಗಳಲ್ಲಿ ಬ್ಯುಸಿ

''ಸದ್ಯ ಉಪೇಂದ್ರ ಅವರು ಕನ್ನಡದ ಎರಡು ಪ್ರಾಜೆಕ್ಟ್ ಗಳಲ್ಲಿ ಬ್ಯುಸಿಯಾಗಿದ್ದಾರೆ. 'ಉಪೇಂದ್ರ ಮತ್ತೆ ಹುಟ್ಟಿ ಬಾ' ಸಿನಿಮಾ ಶೂಟಿಂಗ್ ಮುಗಿದಿದೆ, ಮಾದೇಶ್ ನಿರ್ದೇಶನದ 'ಉಪ್ಪಿ-ರುಪ್ಪಿ' ಚಿತ್ರದಲ್ಲಿ ತೊಡಗಿಕೊಂಡಿದ್ದಾರೆ. ಹೀಗಾಗಿ, ಈ ಚಿತ್ರಗಳನ್ನ ಮುಗಿಸಿಕೊಡಬೇಕಿದೆ'' - ಶ್ರೀರಾಮ್, ಉಪೇಂದ್ರ ಆಪ್ತ

ಉಪ್ಪಿ ಡೈರೆಕ್ಟನ್ ಗೆ ಸಿದ್ದವಾಗುತ್ತಿದ್ದಾರೆ

''ಇವರೆಡು ಚಿತ್ರಗಳ ನಂತರ ಉಪೇಂದ್ರ ಅವರು ಡೈರೆಕ್ಷನ್ ಮಾಡಲಿದ್ದಾರೆ. ಆ ಚಿತ್ರದ ಸ್ಕ್ರಿಪ್ಟ್ ಕೆಲಸದಲ್ಲೂ ಬ್ಯುಸಿಯಾಗಿದ್ದಾರೆ. ಹೀಗಾಗಿ ಈ ಬೇರೆ ಪ್ರಾಜೆಕ್ಟ್ ಒಪ್ಪಿಕೊಳ್ಳುವ ಸ್ಥಿತಿಯಲ್ಲಿಲ್ಲ.'' - ಶ್ರೀರಾಮ್, ಉಪೇಂದ್ರ ಆಪ್ತ

ವಿಲನ್ ಆಗಲ್ಲ

''ಚಿರಂಜೀವಿ ನಾಯಕನಾಗಿರುವ ಈ ಚಿತ್ರದಲ್ಲಿ ಉಪೇಂದ್ರ ಅವರು ವಿಲನ್ ಆಗವುದು ಅನುಮಾನ. ಉಪೇಂದ್ರ ಅವರು ತಮ್ಮ ಚಿತ್ರಗಳ ಬಗ್ಗೆ ಅಭಿಮಾನಿಗಳಿಗೆ ಗೌಪ್ಯವಾಗಿಡುವ ಸನ್ನಿವೇಶವಿಲ್ಲ. ಈ ಚಿತ್ರದಲ್ಲಿ ಉಪ್ಪಿ ಅಭಿನಯಿಸುತ್ತಿಲ್ಲ'' - ಶ್ರೀರಾಮ್, ಉಪೇಂದ್ರ ಆಪ್ತ

ರಿಯಲ್ ಸ್ಟಾರ್ ಉಪೇಂದ್ರ ಬಗ್ಗೆ ಗಾಂಧಿನಗರದಲ್ಲಿ ನಮ್ಮ ಕಿವಿಗೆ ಬಿದ್ದ ಸುದ್ದಿ...

English summary
Upendra Not Part Of Chiranjeevi's 151st film Says Sriram, Who Manage Upendra's Work.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada