ನಟರು ಮಾಡಿದ್ದು ತಪ್ಪು, ಸರ್ಕಾರ ಮಾಡಿದ್ದು ಸರಿಯೇ ಉಪೇಂದ್ರ ಪ್ರಶ್ನೆ

ಸಿನಿಮಾ ನಟರು ತಂಬಾಕು ಉತ್ಪನ್ನ, ಮದ್ಯ ಉತ್ಪನ್ನಗಳನ್ನು ಪ್ರಚಾರ ಮಾಡುವುದು ಸರಿಯೊ-ತಪ್ಪೊ ಎಂಬ ಬಗ್ಗೆ ದೊಡ್ಡ ಮಟ್ಟದ ಚರ್ಚೆ ಆರಂಭವಾಗಿದೆ. ನಟ ಅಕ್ಷಯ್ ಕುಮಾರ್, ಗುಟ್ಕಾ ಉತ್ಪನ್ನ ತಯಾರಿಸುವ ವಿಮಲ್ ಸಂಸ್ಥೆಯ ಪಾನ್ ಮಸಾಲಾ ಜಾಹೀರಾತಿನಲ್ಲಿ ಕಾಣೀಸಿಕೊಂಡಾಗಿನಿಂದಲೂ ಈ ಚರ್ಚೆ ತೀವ್ರತೆ ಪಡೆದುಕೊಂಡಿದೆ.

ಕರ್ನಾಟಕದಲ್ಲಿಯೂ ಕೆಲವು ನಟರು ಮದ್ಯದ ಬ್ರ್ಯಾಂಡ್‌ಗಳ ಜಾಹೀರಾತು ಮಾಡಿದ್ದರ ಬಗ್ಗೆ, ಆನ್‌ಲೈನ್ ಪೋಕರ್, ಆನ್‌ಲೈನ್ ಜೂಜು ಜಾಹೀರಾತುಗಳಲ್ಲಿ ನಟಿಸಿದ್ದಕ್ಕೆ ಅಲ್ಲಲ್ಲಿ ಆಗಾಗ್ಗೆ ವಿರೋಧ ವ್ಯಕ್ತವಾಗಿತ್ತು. ಇದೀಗ ನಟ ಉಪೇಂದ್ರ ಚರ್ಚೆಗೆ ಇಳಿದಿದ್ದು, ನಟರು ಅಂಥಹಾ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುವುದನ್ನು ವಿರೋಧಿಸುವ ಗುಂಪಿನೆದುರು ವಾದವೊಂದನ್ನು ಇಟ್ಟಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ನಟ ಉಪೇಂದ್ರ, ''ಒಂದು ಸಿನಿಮಾದಲ್ಲಿ ಸಿಗರೇಟ್ ಸೇದೋದು ತಪ್ಪು ಕುಡಿಯೋದು ತಪ್ಪು, ಜೂಜಿಗೆ ಜಾಹಿರಾತು ನೀಡೋದು ತಪ್ಪು, ಆದರೆ ಇವುಗಳಿಂದ ಬರೋ ತೆರಿಗೆ ಹಣಕ್ಕಾಗಿ ಇದಕ್ಕೆಲ್ಲಾ ಅನುಮತಿ ಕೊಟ್ಟಿರೋ ಸರ್ಕಾರ ಸರಿ, ಶ್... ಯಾರೂ ಮಾತನಾಡಬಾರದು !

Upendra On Actors Facing Backlash For Advertising Tobacco Products And Alcohol Products

ನಾಯಕ ಸಂಸ್ಕ್ರತಿಯ ರಾಜಕೀಯ ಗುಂಗಿನ ಸಮಾಜದಲ್ಲಿ, ಯಾವತ್ತೂ ಅಪ್ಪ ಸರಿ, ಮಕ್ಕಳು ತಪ್ಪು'' ಎಂದು ವ್ಯಂಗ್ಯವಾಗಿ ಪೋಸ್ಟ್ ಹಾಕಿದ್ದಾರೆ.

ಸ್ವತಃ ರಾಜಕಾರಣಿಯೂ ಆಗಿರುವ ಉಪೇಂದ್ರ ಆಗಾಗ್ಗೆ ತಮ್ಮ ಭಿನ್ನ ವಿಚಾರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ, ಸಂದರ್ಶನಗಳಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ನಾಯಕ ಕೇಂದ್ರಿತ ರಾಜಕಾರಣ ತೊಲಗಬೇಕು ಎಂದು ಈ ಹಿಂದಿನಿಂದ ಹೇಳಿಕೊಂಡು ಬಂದಿದ್ದು, ಪ್ರಜಾಪ್ರಭುತ್ವದಲ್ಲಿ ಅಕ್ಷರಷಃ ಪ್ರಜೆಗಳೇ ಪ್ರಭುಗಳಾಗಿರಬೇಕು ಎಂಬುದು ಅವರ ಆಶಯ.

ಈ ಹಿಂದೆ ಉಪೇಂದ್ರ ಮದ್ಯದ ಬ್ರ್ಯಾಂಡಿನ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದರು ಆಗ ತುಸು ವಿರೋಧ ವ್ಯಕ್ತವಾಗಿತ್ತು. ದರ್ಶನ್ ಸಹ ಮದ್ಯದ ಬ್ರ್ಯಾಂಡಿನ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದರು. ಬಳಿಕ ನಟ ಸುದೀಪ್ ಆನ್‌ಲೈನ್ ರಮ್ಮಿ ಅಪ್ಲಿಕೇಶನ್‌ನ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದರು. ಆಗ ಹಲವರು ಸುದೀಪ್ ವಿರುದ್ಧ ಅಭಿಯಾನ ನಡೆಸಿದರು. ಆ ಬ್ರ್ಯಾಂಡ್‌ಗಳ ಪ್ರಚಾರ ಮಾಡಿದ್ದಕ್ಕೆ ವಿರೋಧ ವ್ಯಕ್ತಪಡಿಸಿದ ಜನ, ಆ ಉತ್ಪನ್ನಗಳನ್ನು ಮಾರುಕಟ್ಟೆಗೆ ತಂದ ಕಂಪೆನಿಯನ್ನಾಗಲಿ, ಅವುಗಳ ಮಾರಾಟಕ್ಕೆ ಅನುಮತಿ ಕೊಟ್ಟ ಸರ್ಕಾರವನ್ನಾಗಲಿ ವಿರೋಧಿಸಿರಲಿಲ್ಲ. ಅದೇ ವಿಷಯವನ್ನು ಉಪೇಂದ್ರ ಟ್ವೀಟ್‌ ಮೂಲಕ ಇಂದು ಹೇಳಿದ್ದಾರೆ.

ಬಾಲಿವುಡ್ ನಟ ಅಜಯ್ ದೇವಗನ್, ತಾವು ವಿಮಲ್ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಕ್ಕೆ ವ್ಯಕ್ತವಾದ ವಿರೋಧ ಬಗ್ಗೆ ಮಾತನಾಡುತ್ತಾ, ''ನಾವು ನಟಿಸುತ್ತಿರುವುದು ಗುಟ್ಕಾ ಜಾಹೀರಾತಿನಲ್ಲಿ ಅಲ್ಲ ಬದಲಿಗೆ ಇಲಾಯ್ಚಿ ಜಾಹೀರಾತಿನಲ್ಲಿ. ಒಂದು ವೇಳೆ ಯಾವುದಾದರೂ ಉತ್ಪನ್ನದಿಂದ ಜನರಿಗೆ ತೊಂದರೆ ಆಗುತ್ತದೆ ಎಂದರೆ ಆ ಉತ್ಪವನ್ನು ತಯಾರು ಮಾಡಲು ಅನುಮತಿ ನೀಡಬಾರದು. ಅದನ್ನು ಮಾರುಕಟ್ಟೆಗೆ ಬರಲು ಬಿಡಬಾರದು. ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಬಿಟ್ಟು ನಂತರ ಅದನ್ನು ಬಳಸಬೇಡಿ ಎನ್ನುವುದು ಸರಿಯಲ್ಲ'' ಎಂದಿದ್ದಾರೆ.

More from Filmibeat

English summary
Upendra on actors facing backlash from people for advertising tobacco products and alcohol products.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X