ಮಗಳ ವಯಸ್ಸಿನ ನಟಿಯ ಜೊತೆ ಉಪೇಂದ್ರ ರೊಮ್ಯಾನ್ಸ್; ಫುಲ್ ಟ್ರೋಲ್

ನಾಯಕ ನಟರಿಗೆ ಎಷ್ಟೇ ವಯಸ್ಸಾದರೂ ಹೀರೊ ಆಗಿಯೇ ನಟಿಸುತ್ತಾರೆ. ತಮ್ಮ ಮಗಳ ವಯಸ್ಸಿನ ನಟಿಯರ ಜೊತೆ ರೊಮ್ಯಾನ್ಸ್, ಮರ ಸುತ್ತುವುದು ಮಾಡುತ್ತಿರುತ್ತಾರೆ. ಈ ಬಗ್ಗೆ ಆಗಾಗ್ಗೆ ಚರ್ಚೆ ನಡೆಯುತ್ತಿರುತ್ತದೆ. ಕೆಲವೊಮ್ಮೆ ನಟಿಯರು ಈ ಕುರಿತು ಚಕಾರ ಎತ್ತಿರುವುದು ಇದೆ.

ರಜನಿಕಾಂತ್, ಚಿರಂಜೀವಿ ಸೇರಿದಂತೆ ಕೆಲ ಸೀನಿಯರ್ ನಟರು ಬಹಳ ಚಿಕ್ಕ ವಯಸ್ಸಿನ ನಟಿಯರ ಜೊತೆ ಜೋಡಿಯಾಗಿ ನಟಿಸಿರುವುದು ಉಂಟು. ಇದೀಗ ನಟ ಉಪೇಂದ್ರ ಕೂಡ ಇದೇ ಹಾದಿಯಲ್ಲಿದ್ದಾರೆ. ತನಗಿಂತ ಬರೋಬ್ಬರಿ 30 ವರ್ಷ ಚಿಕ್ಕ ಹುಡುಗಿಯ ಜೊತೆ ನಟಿಸೋಕೆ ಮುಂದಾಗಿದ್ದಾರೆ. ತಮ್ಮ ಮುಂದಿನ ಚಿತ್ರಕ್ಕೆ ಸ್ವತಃ ಉಪೇಂದ್ರ ಆ ನಟಿಯನ್ನು ಆಯ್ಕೆ ಮಾಡಿದ್ದಾರೆ.

Upendra Pairs with 30-Years-Younger Ankita Amar in New Film Bhargava Sparks Social Media Debate

'ಯುಐ' ಬಳಿಕ ಉಪ್ಪಿ ನಟನೆಯ ಯಾವುದೇ ಕನ್ನಡ ಸಿನಿಮಾ ಬಿಡುಗಡೆ ಸಜ್ಜಾಗಿಲ್ಲ. ಆಗಸ್ಟ್ 15ಕ್ಕೆ ಬರಬೇಕಿದ್ದ '45' ಸಿನಿಮಾ ರಿಲೀಸ್ ಮತ್ತೆ ತಡವಾಗುವ ಸಾಧ್ಯತೆಯಿದೆ. ಇನ್ನು 'ಬುದ್ಧಿವಂತ- 2' ಹಾಗೂ 'ತ್ರಿಶೂಲಂ' ಸಿನಿಮಾಗಳು ತೆರೆಗೆ ಬರೋದೆ ಅನುಮಾನ ಎನ್ನುವಂತಾಗಿದೆ. ಇನ್ನು ತೆಲುಗು ಹಾಗೂ ತಮಿಳು ಸಿನಿಮಾಗಳಲ್ಲಿ ರಿಯಲ್ ಸ್ಟಾರ್ ಬ್ಯುಸಿಯಾಗಿದ್ದಾರೆ. ರಜನಿಕಾಂತ್ ಜೊತೆ ಉಪ್ಪಿ ನಟಿಸಿರುವ 'ಕೂಲಿ' ಸಿನಿಮಾ ಬಿಡುಗಡೆ ಸಜ್ಜಾಗುತ್ತಿದೆ. ಆಗಸ್ಟ್ 15ಕ್ಕೆ ಈ ಸಿನಿಮಾ ತೆರೆಗೆ ಬರ್ತಿದೆ.

ಕನ್ನಡದಲ್ಲಿ ಸದ್ಯಕ್ಕೆ ಯಾವುದೇ ದೊಡ್ಡ ಸಿನಿಮಾ ಉಪ್ಪಿ ಒಪ್ಪಿಕೊಂಡಿದ್ದಾರೆ. ಕಿರಣ್ ತೋಟಂಬೈಲು ನಿರ್ದೇಶನದಲ್ಲಿ 'ಕೆಂಪೇಗೌಡ' ಬಯೋಪಿಕ್‌ನಲ್ಲಿ ರಿಯಲ್ ಸ್ಟಾರ್ ನಟಿಸುವ ಬಗ್ಗೆ ಚರ್ಚೆ ನಡೀತಿದೆ. ಇನ್ನು ತೆಲುಗಿನಲ್ಲಿ ರಾಮ್‌ ಪೋತಿನೇನಿ ನಟನೆಯ ಹೊಸ ಚಿತ್ರಕ್ಕೆ ಉಪ್ಪಿ ಆಯ್ಕೆ ಆಗಿದ್ದಾರೆ. ಇದೆಲ್ಲದರ ನಡುವೆ ನಾಗಣ್ಣ ನಿರ್ದೇಶನದಲ್ಲಿ 'ಭಾರ್ಗವ' ಎಂಬ ಸಿನಿಮಾ ಒಪ್ಪಿಕೊಂಡಿದ್ದಾರೆ.

Upendra Pairs with 30-Years-Younger Ankita Amar in New Film Bhargava Sparks Social Media Debate

'ಭಾರ್ಗವ' ಚಿತ್ರದಲ್ಲಿ ಉಪೇಂದ್ರಗೆ ನಾಯಕಿಯಾಗಿ ಅಂಕಿತಾ ಅಮರ್ ಆಯ್ಕೆ ಆಗಿದ್ದಾರೆ. 'ನಮ್ಮನೆ ಯುವರಾಣಿ' ಕಿರುತೆರೆ ಧಾರಾವಾಹಿಯಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದ ಅಂಕಿತಾ ಬಳಿಕ ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದರು. 'ಇಬ್ಬನಿ ತಬ್ಬಿದ ಇಳೆಯಲಿ' ಚಿತ್ರದಲ್ಲಿ ನಾಯಕಿಯಾಗಿ ನಟಿಸಿ ಮೋಡಿ ಮಾಡಿದ್ದರು. ಆ ಚಿತ್ರದಲ್ಲಿ ಅಂಕಿತಾ ನಟನೆ ನೋಡಿ ಉಪೇಂದ್ರ 'ಭಾರ್ಗವ' ಚಿತ್ರಕ್ಕೆ ಆಯ್ಕೆ ಮಾಡಿಕೊಳ್ಳುವಂತೆ ಸಲಹೆ ನೀಡಿದ್ದಾರೆ.

ಸೂರಪ್ಪ ಬಾಬು 'ಭಾರ್ಗವ' ಚಿತ್ರಕ್ಕೆ ಹಣ ಹೂಡುತ್ತಿದ್ದಾರೆ. ಉಪ್ಪಿ- ನಾಗಣ್ಣ ಕಾಂಬಿನೇಷನ್ ಸಿನಿಮಾಗಳು ಹಿಟ್ ಲಿಸ್ಟ್ ಸೇರಿವೆ. ಹಾಗಾಗಿ ಇದೀಗ ಹೊಸ ಸಿನಿಮಾ ಕುತೂಹಲ ಮೂಡಿಸಿದೆ. 'ಭಾರ್ಗವ' ಚಿತ್ರಕ್ಕೆ 'A Violent Family Man' ಎಂಬ ಟ್ಯಾಗ್‌ಲೈನ್ ಕೂಡ ಇದೆ. ಉಪ್ಪಿ ಜೋಡಿಯಾಗಿ ನಟಿಸೋ ಅವಕಾಶ ಸಿಕ್ಕಿರುವುದಕ್ಕೆ ಅಂಕಿತಾ ಸಂತಸ ವ್ಯಕ್ತಪಡಿಸಿದ್ದಾರೆ.

ಸದ್ಯ ಉಪೇಂದ್ರ ಹಾಗೂ ಅಂಕಿತಾ ಅಮರ್ ವಯಸ್ಸಿನ ಅಂತರದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೀತಿದೆ. ಹೆಚ್ಚು ಕಡಿಮೆ ಇಬ್ಬರ ನಡುವೆ 30 ವರ್ಷ ವಯಸ್ಸಿನ ಅಂತರವಿದೆ. ತಮ್ಮ ಮಗಳ ವಯಸ್ಸಿನ ನಟಿ ಜೊತೆ ಉಪ್ಪಿ ರೊಮ್ಯಾನ್ಸ್ ಮಾಡ್ತಾರಾ? ಎಂದು ಕೆಲವರು ಟ್ರೋಲ್ ಮಾಡುತ್ತಿದ್ದಾರೆ. ಚಿತ್ರದಲ್ಲಿ ನಾಯಕ-ನಾಯಕಿ ಅಲ್ಲ, ಬದಲಿಗೆ ತಂದೆ- ಮಗಳ ಪಾತ್ರಗಳಲ್ಲಿ ನಟಿಸುತ್ತಿರಬಹುದು ಎಂದು ನೆಟ್ಟಿಗರು ವ್ಯಂಗ್ಯವಾಡುತ್ತಿದ್ದಾರೆ.

ಮೈಸೂರು ಮೂಲದ ಅಂಕಿತಾ ಓದಿ ಬೆಳೆದಿದ್ದು ಬೆಂಗಳೂರಿನಲ್ಲಿ. ಹೈಸ್ಕೂಲ್, ಕಾಲೇಜು ಮುಗಿಸಿ ಬಳಿಕ ಉನ್ನತ ಶಿಕ್ಷಣಕ್ಕಾಗಿ ಮತ್ತೆ ಮೈಸೂರಿಗೆ ವಾಪಸ್ ಆಗಿದ್ದರು. ಮೈಸೂರಿನ ಜೆಎಸ್‌ಎಸ್ ವೈದ್ಯಕೀಯ ಕಾಲೇಜಿನಲ್ಲಿ ವೈದ್ಯಕೀಯ ಬಯೋಕೆಮಿಸ್ಟ್ರಿ ಸ್ನಾತಕೋತ್ತರ ಪದವೀಧರರಾಗಿರುವ ಅಂಕಿತಾ 2 ಚಿನ್ನದ ಪದಕ ಪಡೆದಿದ್ದರು. 'ಕಲಾಗಂಗೋತ್ರಿ' ರಂಗಭೂಮಿ ತಂಡದಲ್ಲಿ ಗುರ್ತಿಸಿಕೊಂಡಿದ್ದರು. ಬಾಲನಟಿಯಾಗಿಯೇ ಬಣ್ಣ ಹಚ್ಚಲು ಆರಂಭಿಸಿದ್ದರು. 15 ವಯಸ್ಸಿನಲ್ಲೇ 'ಪುಟ್ಟಗೌರಿ ಮದುವೆ' ಧಾರಾವಾಹಿಯಲ್ಲಿ ನಟಿಸಿದ್ದರು.

More from Filmibeat

English summary
Kannada star Upendra chooses actress Ankita Amar, 30 years his junior, as the lead in his new film 'Bhargava'. The casting choice has sparked conversations and criticism online over the wide age gap;
Read more about: upendra sandalwood kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X