ಉಪೇಂದ್ರ ಹೊಸ ಪಕ್ಷದ ಹೆಸರು 'ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿ' (KPJP)!
Recommended Video

ರಿಯಲ್ ಸ್ಟಾರ್ ಉಪೇಂದ್ರ ತಮ್ಮ ಹೊಸ ಪಕ್ಷದ ಹೆಸರನ್ನು ಘೋಷಣೆ ಮಾಡಿದ್ದಾರೆ. ಇಂದು ಬೆಳ್ಳಗೆ 11.30ಕ್ಕೆ ನಗರದ ಗಾಂಧಿಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಉಪ್ಪಿ ತಮ್ಮ ಪಕ್ಷದ ಹೆಸರನ್ನು ಬಹಿರಂಗ ಪಡಿಸಿದ್ದು, ಪಕ್ಷಕ್ಕೆ 'ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿ' (KPJP) ಎಂಬ ಹೆಸರನ್ನು ಇಟ್ಟಿದ್ದಾರೆ.
ಉಪ್ಪಿ ಅವರ ಪಕ್ಷವನ್ನು ಮೊದಲು 'ಪ್ರಜಾಕೀಯ' ಬಳಿಕ 'ಉತ್ತಮ ಪ್ರಜಾ ಪಾರ್ಟಿ' ಎಂಬ ಹೆಸರಿನಿಂದ ಕರೆಯಲಾಗುತ್ತಿತ್ತು. ಆದರೆ ಇಂದು ಪಕ್ಷಕ್ಕೆ ಅಧಿಕೃತವಾಗಿ 'ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿ'(KPJP) ಎಂಬ ಹೆಸರನ್ನು ಇಡಲಾಗಿದೆ.

ಇನ್ನು, ಇಂದು ನಡೆದ ಕಾರ್ಯಕ್ರಮದ ಮೊದಲು ಕನ್ನಡ ತಾಯಿಯನ್ನು ಉಪ್ಪಿ ನೆನೆದರು. ಬಳಿಕ ಗಣೇಶನ ಹಾಡನ್ನು ಹಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ''ಇದು ರಾಜಕೀಯ ಪಕ್ಷದ ಘೋಷಣೆ ಅಲ್ಲ, ಪ್ರಜಾಕೀಯ..'' ಎಂದು ಉಪ್ಪಿ ಹೇಳಿದರು.
ಕಾರ್ಯಕ್ರಮದಲ್ಲಿ ಉಪೇಂದ್ರ ತಂದೆ, ತಾಯಿ, ಅಣ್ಣ ಸುಧೀಂದ್ರ, ಉಪೇಂದ್ರರ ಪತ್ನಿ ಪ್ರಿಯಾಂಕ ಉಪೇಂದ್ರ ಸೇರಿದಂತೆ ಕುಟುಂಬಸ್ಥರು ಭಾಗಿಯಾಗಿದ್ದರು. ಜೊತೆಗೆ ಉಪೇಂದ್ರ ಅವರ ಚಿತ್ರರಂಗದ ಒಡನಾಡಿಗಳು ಕೂಡ ಉಪ್ಪಿಗೆ ಸಾಥ್ ನೀಡಿದರು. ಎಲ್ಲಿರೂ ಖಾಕಿ ಬಟ್ಟೆ ತೊಟ್ಟು ಗಮನ ಸೆಳೆದರು.


Click it and Unblock the Notifications











