twitter
    For Quick Alerts
    ALLOW NOTIFICATIONS  
    For Daily Alerts

    ಉಪೇಂದ್ರ ಹೊಸ ಪಕ್ಷದ ಹೆಸರು 'ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿ' (KPJP)!

    By Naveen
    |

    Recommended Video

    ಉಪೇಂದ್ರ ರವರ ಹೊಸ ಪಕ್ಷದ ಹೆಸರು ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿ | Filmibeat Kannada

    ರಿಯಲ್ ಸ್ಟಾರ್ ಉಪೇಂದ್ರ ತಮ್ಮ ಹೊಸ ಪಕ್ಷದ ಹೆಸರನ್ನು ಘೋಷಣೆ ಮಾಡಿದ್ದಾರೆ. ಇಂದು ಬೆಳ್ಳಗೆ 11.30ಕ್ಕೆ ನಗರದ ಗಾಂಧಿಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಉಪ್ಪಿ ತಮ್ಮ ಪಕ್ಷದ ಹೆಸರನ್ನು ಬಹಿರಂಗ ಪಡಿಸಿದ್ದು, ಪಕ್ಷಕ್ಕೆ 'ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿ' (KPJP) ಎಂಬ ಹೆಸರನ್ನು ಇಟ್ಟಿದ್ದಾರೆ.

    ಉಪ್ಪಿ ಅವರ ಪಕ್ಷವನ್ನು ಮೊದಲು 'ಪ್ರಜಾಕೀಯ' ಬಳಿಕ 'ಉತ್ತಮ ಪ್ರಜಾ ಪಾರ್ಟಿ' ಎಂಬ ಹೆಸರಿನಿಂದ ಕರೆಯಲಾಗುತ್ತಿತ್ತು. ಆದರೆ ಇಂದು ಪಕ್ಷಕ್ಕೆ ಅಧಿಕೃತವಾಗಿ 'ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿ'(KPJP) ಎಂಬ ಹೆಸರನ್ನು ಇಡಲಾಗಿದೆ.

    Upendra party named as 'Karnataka Pragnavantha Janatha Party.'

    ಇನ್ನು, ಇಂದು ನಡೆದ ಕಾರ್ಯಕ್ರಮದ ಮೊದಲು ಕನ್ನಡ ತಾಯಿಯನ್ನು ಉಪ್ಪಿ ನೆನೆದರು. ಬಳಿಕ ಗಣೇಶನ ಹಾಡನ್ನು ಹಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ''ಇದು ರಾಜಕೀಯ ಪಕ್ಷದ ಘೋಷಣೆ ಅಲ್ಲ, ಪ್ರಜಾಕೀಯ..'' ಎಂದು ಉಪ್ಪಿ ಹೇಳಿದರು.

    ಕಾರ್ಯಕ್ರಮದಲ್ಲಿ ಉಪೇಂದ್ರ ತಂದೆ, ತಾಯಿ, ಅಣ್ಣ ಸುಧೀಂದ್ರ, ಉಪೇಂದ್ರರ ಪತ್ನಿ ಪ್ರಿಯಾಂಕ ಉಪೇಂದ್ರ ಸೇರಿದಂತೆ ಕುಟುಂಬಸ್ಥರು ಭಾಗಿಯಾಗಿದ್ದರು. ಜೊತೆಗೆ ಉಪೇಂದ್ರ ಅವರ ಚಿತ್ರರಂಗದ ಒಡನಾಡಿಗಳು ಕೂಡ ಉಪ್ಪಿಗೆ ಸಾಥ್ ನೀಡಿದರು. ಎಲ್ಲಿರೂ ಖಾಕಿ ಬಟ್ಟೆ ತೊಟ್ಟು ಗಮನ ಸೆಳೆದರು.

    English summary
    Real Star Upendra's party is named as 'Karnataka Pragnavantha Janatha Party.' ಉಪೇಂದ್ರ ತಮ್ಮ ಪಕ್ಷಕ್ಕೆ 'ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿ' (KPJP) ಎಂಬ ಹೆಸರನ್ನು ಇಟ್ಟಿದ್ದಾರೆ.
    Tuesday, October 31, 2017, 13:11
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X