ಉಪೇಂದ್ರಗೆ 'ಗಾಢ್ ಮದರ್' ಯಾರು? ಅವರಿಲ್ಲದೇ ಇದ್ದಿದ್ರೆ ಹೀರೊನೆ ಆಗ್ತಿರಲಿಲ್ವಾ?
ರಿಯಲ್ ಸ್ಟಾರ್ ಉಪೇಂದ್ರ ಕನ್ನಡ ಚಿತ್ರರಂಗದ ಅದ್ಭುತ ಪ್ರತಿಮೆ. ಬರಹಗಾರನಾಗಿ ಚಿತ್ರರಂಗಕ್ಕೆ ಬಂದ ಉಪ್ಪಿ ಬಳಿಕ ನಿರ್ದೇಶಕರಾಗಿ ಸಕ್ಸಸ್ ಕಂಡರು. ಕೊನೆಗೆ ಹೀರೊ ಆಗಿಯೂ ಗೆದ್ದು ಬೀಗಿದರು. 'ಎ' ಸಿನಿಮಾ ನಂತರ ಸಾಲು ಸಾಲು ಸಿನಿಮಾಗಳಲ್ಲಿ ಹೀರೊ ಆಗಿ ನಟಿಸೋಕೆ ಆರಂಭಿಸಿದರು.
ಹೀರೊ ಆಗಿ ಬ್ಯುಸಿಯಾದ ಬಳಿಕ ನಿರ್ದೇಶಕ ಕಮ್ಮಿ ಮಾಡಿದ್ದರು. ಆಗೊಮ್ಮೆ ಈಗೊಮ್ಮೆ ಆಕ್ಷನ್ ಕಟ್ ಹೇಳುವ ಸಾಹಸ ಮಾಡುತ್ತಾರೆ. ಸೆನ್ಸೇಷನಲ್ ಸಿನಿಮಾಗಳ ಮೂಲಕ ರಿಯಲ್ ಸ್ಟಾರ್ ಸದ್ದು ಮಾಡಿದವರು. ಸಿದ್ಧ ಸೂತ್ರಗಳನ್ನು ಬಿಟ್ಟು ವಿಭಿನ್ನ ಆಲೋಚನೆಗಳನ್ನು ತೆರೆಮೇಲೆ ತಂದವರು. ಉಪ್ಪಿ ಸಿನಿಮಾಗಳನ್ನು ಸೆನ್ಸಾರ್ ಮಂಡಳಿ ಬಿಡುಗಡೆ ಮಾಡೋಕೆ ಸಾಧ್ಯವೇ ಇಲ್ಲ ಎಂದಿರುವುದು ಇದೆ.

ಡಾ. ರಾಜ್‌ಕುಮಾರ್ ಮನಸ್ಸು ಮಾಡದೇ ಇದ್ದಿದ್ದರೆ 'ಓಂ' ಸಿನಿಮಾ ಕೂಡ ಬಿಡುಗಡೆ ಆಗುತ್ತಿರಲಿಲ್ಲ. ಉಪ್ಪಿ ನಿರ್ದೇಶಿಸಿ ನಟಿಸಿದ 'ಎ' ಚಿತ್ರ ಬಿಡುಗಡೆಗೂ ಸೆನ್ಸಾರ್ ಸಮಸ್ಯೆ ಆಗಿತ್ತು. ಆಗ ರಿಯಲ್ ಸ್ಟಾರ್ ಬೆಂಬಲಕ್ಕೆ ನಿಂತಿದ್ದು ಇತ್ತೀಚೆಗೆ ನಿಧನರಾದ ನಟಿ ಸರೋಜಾ ದೇವಿ. ಈ ವಿಚಾರವನ್ನು ಸ್ವತಃ ಉಪೇಂದ್ರ ಮೆಲುಕು ಹಾಕಿದ್ದಾರೆ. ನಟಿ ಬಿ. ಸರೋಜಾ ದೇವಿ ಅವರ 13ನೇ ದಿನದ ಪುಣ್ಯತಿಥಿ ನಡೀತು. ಈ ವೇಳೆ ಚಿತ್ರರಂಗದ ಕೆಲ ಗಣ್ಯರು ಭಾಗಿ ಆಗಿದ್ದರು.
ನಟ, ನಿರ್ದೇಶಕ ಉಪೇಂದ್ರ ಸಹ ಆಗಮಿಸಿದ್ದರು. ಈ ವೇಳೆ ಬಿ. ಸರೋಜಾ ದೇವಿ ಕುಟುಂಬದ ಜೊತೆಗಿನ ಒಡನಾಟವನ್ನು ಅವರು ನೆನಪು ಮಾಡಿಕೊಂಡಿದ್ದಾರೆ. ನಾನು ಹೀರೊ ಆಗುವುದಕ್ಕೆ ಅವರೇ ಮುಖ್ಯ ಕಾರಣ, ಅವರ ಹೆಸರಿನಲ್ಲಿ ಒಂದು ಪ್ರಶಸ್ತಿಯನ್ನು ನೀಡಬೇಕು ಎಂದು ಉಪೇಂದ್ರ ಮನವಿ ಮಾಡಿದ್ದಾರೆ. ಮಾಧ್ಯಮಗಳ ಜೊತೆ ಮಾತನಾಡಿದ ಅವರು "ನಮ್ಮ ಫ್ಯಾಮಿಲಿಗೆ ಅವ್ರ ಫ್ಯಾಮಿಲಿ 20 ವರ್ಷಗಳಿಂದ ಫ್ರೆಂಡ್ಸ್. 'ಎ' ಸಿನ್ಮಾ ಸೆನ್ಸಾರ್ ಮಾಡಲು ಸಾಧ್ಯವಿಲ್ಲ, ಇದು ಅನ್‌ಫಿಟ್ ಫಾರ್ ರಿಲೀಸ್ ಎಂದಾಗ ರಿವೈಸಿಂಗ್ ಕಮಿಟಿಗೆ ಹೋಗಬೇಕಾಯಿತು. ಸರೋಜಾ ದೇವಿ ಅವರು ನನ್ನನ್ನು ಒಳಗೆ ಕರೆದು ಮಾತನಾಡಿಸಿದ್ರು" ಎಂದು ಮೆಲುಕು ಹಾಕಿದ್ದಾರೆ.

"ಅವತ್ತು ಸರೋಜಾ ದೇವಿ ಅವ್ರು ನನ್ನನ್ನು ಒಳಗೆ ಕರೆದ ರೀತಿ ಆಶ್ಚರ್ಯ. ಎದ್ದು ನಿಂತು ಚಪ್ಪಾಳೆ ತಟ್ಟಿ ಕರೆದು, ಏನ್ ಪಿಕ್ಚರ್ ಮಾಡಿದ್ದೀರಾ ಅಂದ್ರು. ಫಸ್ಟ್ 'ಎ' ಸಿನ್ಮಾ ಹೊಗಳಿದ ಮಹಾತಾಯಿ ಅವ್ರು. ನಮ್ಮ ಸಿನಿಮಾ ಮೆಚ್ಚಿಕೊಂಡು ಸೆನ್ಸಾರ್ ಮಾಡಿಕೊಟ್ರು. ಅವ್ರು ಸಿಕ್ಕಿದಾಗ್ಲೆಲ್ಲಾ ನಾನು ಹೇಳ್ತಿದ್ದೆ. ನೀವು ಇಲ್ಲದೇ ಇದ್ದಿದ್ದರೆ ನಾನು ಹೀರೊನೆ ಆಗ್ತಿರಲಿಲ್ಲ ಅಂತ. ಅಷ್ಟರಮಟ್ಟಿಗೆ ನನ್ನ ವೃತ್ತಿಜೀವನದದಲ್ಲಿ ಬೆಂಬಲವಾಗಿ ನಿಂತ ಗಾಡ್ ಮದರ್ ಅವ್ರು" ಎಂದು ಉಪೇಂದ್ರ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಹುಟ್ಟಿ ಬೆಳೆದ ಸರೋಜಾ ದೇವಿ 1955ರಲ್ಲಿ ಬಂದ 'ಮಹಾಕವಿ ಕಾಳಿದಾಸ' ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದರು. ಬಳಿಕ ತಮಿಳು ಹಾಗೂ ತೆಲುಗು ಸಿನಿಮಾಗಳಲ್ಲಿ ನಟಿಸಿ ಮೋಡಿ ಮಾಡಿದ್ದರು. ಕನ್ನಡದ ಮೊದಲ ಲೇಡಿ ಸೂಪರ್ ಸ್ಟಾರ್ ಎನಿಸಿಕೊಂಡಿದ್ದರು. ಹೊರ ರಾಜ್ಯಗಳಲ್ಲಿ ಬೆಂಗಳೂರು ಸರೋಜಾ ದೇವಿ ಎಂದೇ ಖ್ಯಾತರಾಗಿದ್ದರು. ಎಂಜಿಆರ್, ಎನ್‌ಟಿಆರ್, ಡಾ. ರಾಜ್‌ಕುಮಾರ್ ರೀತಿಯ ಆ ಕಾಲದ ಸೂಪರ್ ಸ್ಟಾರ್‌ಗಳ ಜೊತೆ ತೆರೆ ಹಂಚಿಕೊಂಡು ಗೆದ್ದಿದ್ದರು.


Click it and Unblock the Notifications











