ಬರ್ತಡೇ ವಿಶ್ ಮೂಲಕ ಬಹಿರಂಗವಾಯ್ತು ಉಪೇಂದ್ರ ತೆಲುಗು ಸಿನಿಮಾ: ಯಾವ ಚಿತ್ರದಲ್ಲಿ ನಟಿಸುತ್ತಿದ್ದಾರೆ ಉಪ್ಪಿ?

ಸ್ಯಾಂಡಲ್ ವುಡ್ ನ ರಿಯಲ್ ಸ್ಟಾರ್ ಉಪೇಂದ್ರ ಅವರಿಗೆ ಹುಟ್ಟುಹಬ್ಬದ ಸಂಭ್ರಮ. ಉಪ್ಪಿ ಈ ಬಾರಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲವಾದರು ಅಭಿಮಾನಿಗಳು ಮತ್ತು ಗಣ್ಯರಿಂದ ಶುಭಾಶಯಗಳ ಮಹಾಪೂರವೆ ಹರಿದು ಬರುತ್ತಿವೆ. ಅಭಿಮಾನಿಗಳು ಸಾಮಾಜಿಕ ಜಾಲತಾಣದ ಮೂಲಕ ರಿಯಲ್ ಸ್ಟಾರ್ ಗೆ ವಿಶ್ ಮಾಡಿ ಸಂಭ್ರಮಿಸುತ್ತಿದ್ದಾರೆ.

ಹುಟ್ಟುಹಬ್ಬದ ಪ್ರಯುಕ್ತ ಉಪ್ಪಿ ಅಭಿನಯದ ಸಿನಿಮಾಗಳ ಪೋಸ್ಟರ್ ಮತ್ತು ಹೊಸ ಸಿನಿಮಾಗಳು ಅನೌನ್ಸ್ ಆಗಿವೆ. ನಿರ್ದೇಶಕ ಶಶಾಂಕ್, ಮಂಜು ಮಾಂಡವ್ಯ ಜೊತೆ ಉಪ್ಪಿ ಬಹುಭಾಷಾ ಸಿನಿಮಾ ಮಾಡುತ್ತಿದ್ದಾರೆ. ಜೊತೆಗೆ ಬಹುನಿರೀಕ್ಷೆಯ ಕಬ್ಜ ಸಿನಿಮಾದ ಪೋಸ್ಟರ್ ಅಭಿಮಾನಿಗಳ ಕುತೂಹಲ ಹೆಚ್ಚಿಸಿದೆ. ವಿಶೇಷ ಅಂದರೆ ಉಪೇಂದ್ರ ಕನ್ನಡ ಸಿನಿಮಾಗಳ ಜೊತೆಗೆ ತೆಲುಗು ಸಿನಿಮಾದಲ್ಲಿಯೂ ಬ್ಯುಸಿಯಾಗಿದ್ದಾರೆ. ಉಪೇಂದ್ರ ಸದ್ದಿಲ್ಲದೆ ತೆಲುಗು ಸಿನಿಮಾಗೆ ಸಹಿ ಮಾಡಿದ್ದಾರೆ. ಯಾವುದು ಆ ಸಿನಿಮಾ? ಉಪ್ಪಿ ಯಾರ ಜೊತೆ ನಟಿಸುತ್ತಿದ್ದಾರೆ? ಮುಂದೆ ಓದಿ...

ವರುಣ್ ತೇಜ್ ಸಿನಿಮಾದಲ್ಲಿ ರಿಯಲ್ ಸ್ಟಾರ್

ವರುಣ್ ತೇಜ್ ಸಿನಿಮಾದಲ್ಲಿ ರಿಯಲ್ ಸ್ಟಾರ್

ಹುಟ್ಟುಹಬ್ಬದ ದಿನ ಉಪ್ಪಿಯ ತೆಲುಗು ಸಿನಿಮಾ ಬಹಿರಂಗವಾಗಿದೆ. ಹೌದು, ತೆಲುಗು ನಟ ವರುಣ್ ತೇಜ್ ಅಭಿನಯದ ಸಿನಿಮಾದಲ್ಲಿ ಉಪೇಂದ್ರ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಕಳೆದ ಕೆಲವು ತಿಂಗಳಿಂದ ಉಪೇಂದ್ರ ತೆಲುಗು ಸಿನಿಮಾದ ಬಗ್ಗೆ ಸುದ್ದಿಯಾಗುತ್ತಿತ್ತು, ಆದರೆ ಅಧಿಕೃತವಾಗಿರಲಿಲ್ಲ. ಆದರೀಗ ಉಪ್ಪಿ ತೆಲುಗು ಸಿನಿಮಾ ಬಹಿರಂಗವಾಗಿದೆ.

ಉಪೇಂದ್ರಗೆ ವಿಶ್ ಮಾಡಿದ ವರುಣ್

ಉಪೇಂದ್ರಗೆ ವಿಶ್ ಮಾಡಿದ ವರುಣ್

ನಟ ವರುಣ್ ತೇಜ್. ರಿಯಲ್ ಸ್ಟಾರ್ ಉಪೇಂದ್ರ ಹುಟ್ಟುಹಬ್ಬಕ್ಕೆ ವಿಶ್ ಮಾಡಿ ಸಿನಿಮಾದ ಬಗ್ಗೆ ರಿವೀಲ್ ಮಾಡಿದ್ದಾರೆ. "ಹುಟ್ಟುಹಬ್ಬದ ಶುಭಾಶಯಗಳು ಉಪೇಂದ್ರ ಸರ್. ಶೀಘ್ರದಲ್ಲೇ ನಿಮ್ಮ ಜೊತೆ ಅಭಿನಯಿಸಲು ಎದುರು ನೋಡುತ್ತಿದ್ದೀನಿ" ಎಂದು ಟ್ವೀಟ್ ಮಾಡಿ ಉಪೇಂದ್ರ ಅಭಿನಯದ ಬಗ್ಗೆ ಅಧಿಕೃತವಾಗಿ ಹೇಳಿದ್ದಾರೆ.

'ಸರ್ಕಾರು ವಾರಿ ಪಾಟ' ಸಿನಿಮಾದಲ್ಲಿ ರಿಯಲ್ ಸ್ಟಾರ್?

'ಸರ್ಕಾರು ವಾರಿ ಪಾಟ' ಸಿನಿಮಾದಲ್ಲಿ ರಿಯಲ್ ಸ್ಟಾರ್?

ರಿಯಲ್ ಸ್ಟಾರ್ ಉಪೇಂದ್ರ, ತೆಲುಗು ನಟ ಮಹೇಶ್ ಬಾಬು ಜೊತೆ ನಟಿಸಲಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ. ಮಹೇಶ್ ಬಾಬು ಅಭಿನಯದ 'ಸರ್ಕಾರು ವಾರಿ ಪಾಟ' ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿತ್ತು. ಆದರೆ ಈ ಬಗ್ಗೆ ಇನ್ನೂ ಅಧಿಕೃತವಾದ ಮಾಹಿತಿ ಹೊರಬಿದ್ದಿಲ್ಲ. ಆದರೆ ಉಪೇಂದ್ರ, ವರುಣ್ ತೇಜ್ ಸಿನಿಮಾದಲ್ಲಿ ನಟಿಸುವುದು ಕನ್ಫರ್ಮ್ ಆಗಿದೆ.

Recommended Video

ನನ್ನ ನಂಬಿ ಸರ್ಕಾರ ದೊಡ್ಡ ಜವಾಬ್ದಾರಿ ಕೊಟ್ಟಿದೆ | Shruthi Krishna | Filmibeat Kannada
ಬಾಕ್ಸರ್ ಪಾತ್ರದಲ್ಲಿ ವರುಣ್ ತೇಜ್

ಬಾಕ್ಸರ್ ಪಾತ್ರದಲ್ಲಿ ವರುಣ್ ತೇಜ್

ನಟ ವರುಣ್ ತೇಜ್ 'ಫಿದಾ' ಸಿನಿಮಾ ಮೂಲಕ ಟಾಲಿವುಡ್ ನಲ್ಲಿ ಖ್ಯಾತಿಗಳಿಸಿದ್ದಾರೆ. ಬಳಿಕ ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನು ನೀಡಿರುವ ವರಣ್ ಹೊಸ ಸಿನಿಮಾದ ಮೇಲೆ ನಿರೀಕ್ಷೆ ಹೆಚ್ಚಾಗಿದೆ. ಅಂದ್ಹಾಗೆ ಈ ಸಿನಿಮಾದಲ್ಲಿ ವರುಣ್ ಬಾಕ್ಸರ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಪಾತ್ರಕ್ಕಾಗಿ ಈಗಾಗಲೇ ಸಾಕಷ್ಟು ತಯಾರಿಗಳನ್ನು ಮಾಡಿಕೊಂಡಿದ್ದಾರೆ. ಈ ಸಿನಿಮಾಗೆ 'ಬಾಕ್ಸರ್' ಎಂದು ಟೈಟಲ್ ಇಡಲಾಗಿದೆ ಎನ್ನುವ ಮಾತು ಕೇಳಿ ಬರುತ್ತಿದೆ. ಅಂದ್ಹಾಗೆ ಉಪೇಂದ್ರ ಯಾವ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ, ಗೆಟಪ್ ಹೇಗಿರಲಿದೆ ಎನ್ನುವ ಹೆಚ್ಚಿನ ಮಾಹಿತಿಯನ್ನು ಸದ್ಯದಲ್ಲೇ ಬಹಿರಂಗಪಡಿಸಲಿದೆ ಸಿನಿಮಾತಂಡ.

More from Filmibeat

English summary
Real start Upendra playing key role in Telugu Actor Varun Tej's next confirmed.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X