ಒಂದು ಸಣ್ಣ ಘಟನೆ, ನಾನು ಆರಾಮಾಗಿ ಇದ್ದೀನಿ; ನಟ ಉಪೇಂದ್ರ ಪ್ರತಿಕ್ರಿಯೆ
'ಒಂದು ಸಣ್ಣ ಘಟನೆ, ನಾನು ಆರಾಮಾಗಿ ಇದ್ದೀನಿ' ಎಂದು ರಿಯಲ್ ಸ್ಟಾರ್ ಉಪೇಂದ್ರ ಪ್ರತಿಕ್ರಿಯೆ ನೀಡಿದ್ದಾರೆ. ಚಿತ್ರೀಕರಣ ವೇಳೆ ತಲೆಗೆ ಪೆಟ್ಟು ಮಾಡಿಕೊಂಡಿದ್ದ ಬಗ್ಗೆ ಉಪೇಂದ್ರ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿದ್ದಾರೆ.
Recommended Video
ಬಹುನಿರೀಕ್ಷೆಯ ಕಬ್ಜ ಸಿನಿಮಾದ ಆಕ್ಷನ್ ದೃಶ್ಯ ಚಿತ್ರೀಕರಣ ವೇಳೆ ಅಚಾನಕ್ ಆಗಿ ಕಬ್ಬಿಣದ ರಾಡ್ ಉಪೇಂದ್ರ ತೆಲೆಗೆ ತಾಗಿ, ಪೆಟ್ಟಾಗಿತ್ತು. ಫೈಟರ್ ಹೊಡೆದ ಏಟಿನಿಂದ ಉಪೇಂದ್ರ ಅಲ್ಲೇ ಕುಸಿದಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಉಪೇಂದ್ರ ಅವರಿಗೆ ಏಟಾಗಿದೆ ಎನ್ನುವ ಸುದ್ದಿ ವೈರಲ್ ಆಗುತ್ತಿದ್ದಂತೆ ಅಭಿಮಾನಿಗಳು ಆತಂಕಗೊಂಡಿದ್ದರು.
ಬಳಿಕ ಉಪೇಂದ್ರ ಅವರೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿದ್ದಾರೆ. ಫೋಟೋ ಹಂಚಿಕೊಳ್ಳುವ ಮೂಲಕ ಆರಾಮಾಗಿ ಇದ್ದೀನಿ ಎಂದು ಹೇಳಿದ್ದಾರೆ. 'ಕಬ್ಜ ಚಿತ್ರೀಕರಣದಲ್ಲಿ ನಡೆದ ಒಂದು ಸಣ್ಣ ಘಟನೆ, ತೊಂದರೆ ಇಲ್ಲ ನಾನು ಆರಾಮಾಗಿದ್ದೇನೆ ನಿಮ್ಮೆಲ್ಲರ ಕಾಳಜಿಗೆ ಧನ್ಯವಾದಗಳು' ಎಂದು ಟ್ವೀಟ್ ಮಾಡಿದ್ದಾರೆ.

ಇನ್ನು ಈ ಬೆಳಗ್ಗೆ ಪ್ರತಿಕ್ರಿಯೆ ನೀಡಿದ್ದ ನಿರ್ದೇಶಕ ಆರ್ ಚಂದ್ರು, 'ಉಪೇಂದ್ರ ಅವರಿಗೆ ಪೆಟ್ಟಾಗಿದ್ದು ನಿಜ ಆದರೆ ಕೆಲವೇ ಹೊತ್ತಿನಲ್ಲಿ ಅವರು ಚೇತರಿಸಿಕೊಂಡಿದ್ದಾರೆ. ಜೊತೆಗೆ ಮುಂದಿನ ಶಾಟ್ ಗೆ ತಯಾರಾಗಿದ್ದಾರೆ' ಎಂದು ಎಂದಿದ್ದರು.
'ಮಿನರ್ವನಲ್ಲಿ ಕಳೆದ ಮೂವತ್ತು ದಿನದಿಂದ ಚಿತ್ರೀಕರಣದಲ್ಲಿದ್ದೇವೆ, ಇನ್ನೂ 30 ದಿನ ಇಲ್ಲಿಯೇ ಚಿತ್ರೀಕರಣ ಮಾಡಲಿದ್ದೇವೆ. ಒಟ್ಟು 40 ಸೆಟ್‌ಗಳಲ್ಲಿ ಇಲ್ಲಿ ಹಾಕಿದ್ದೇವೆ. ಈಗಾಗಲೇ 15 ಕ್ಕೂ ಹೆಚ್ಚು ಸೆಟ್‌ಗಳಲ್ಲಿ ಚಿತ್ರೀಕರಣ ಮುಗಿಸಿದ್ದೇವೆ' ಎಂದು ಚಂದ್ರು ಹೇಳಿದ್ದಾರೆ.
'ಕಬ್ಜ' ಸಿನಿಮಾವು ದಶಕಗಳ ಹಿಂದಿನ ಕತೆಯಾಗಿದೆ. ಸಿನಿಮಾವು ಎರಡು ಭಾಗಗಳಲ್ಲಿ ಬಿಡುಗಡೆ ಆಗಲಿದೆ. ಸಿನಿಮಾದ ಕತೆಯನ್ನು ಖ್ಯಾತ ಕತೆಗಾರ, ರಾಜಮೌಳಿ ಅವರ ತಂದೆ ವಿಜಯೇಂದ್ರ ಅವರು ತಿದ್ದಿ-ತೀಡಿ ಕೊಟ್ಟಿರುವುದು ವಿಶೇಷ.


Click it and Unblock the Notifications











