ವೈರಲ್ ಪೋಸ್ಟರ್ ಬಗ್ಗೆ ಕೊನೆಗೂ ಮೌನಮುರಿದ ಉಪೇಂದ್ರ

ಉಪೇಂದ್ರ ಡೈರೆಕ್ಷನ್ ಸಿನಿಮಾದ ಹೆಸರು ಮತ್ತು ಫಸ್ಟ್ ಲುಕ್ ಎನ್ನಲಾದ ಪೋಸ್ಟರ್‌ವೊಂದು ಸೋರಿಕೆಯಾಗಿದ್ದು, ಎರಡು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಸೃಷ್ಟಿಸುತ್ತಿದೆ. ಡೈರೆಕ್ಷನ್ ಚಿತ್ರದ ಬಗ್ಗೆ ಉಪೇಂದ್ರ ಅವರಿಂದ ಅಧಿಕೃತ ಪ್ರಕಟಣೆ ಆಗಿಲ್ಲ. ಆದರೂ ಈ ಪೋಸ್ಟರ್ ಹಾಗೂ ಶೀರ್ಷಿಕೆ ನಿಜ ಇರಬಹುದು ಎಂದು ಉಪ್ಪಿ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ.

ಪಂಗನಾಮದ ಚಿಹ್ನೆ ಉಪೇಂದ್ರ ನಿರ್ದೇಶನದ ಚಿತ್ರಕ್ಕೆ ಟೈಟಲ್ ಎನ್ನುವ ವಿಚಾರ ಟ್ರೆಂಡ್ ಸೃಷ್ಟಿಸಿದೆ. ಈ ಹಿಂದೆ ಉಪ್ಪಿ ಮಾಡಿದ್ದ ಚಿತ್ರಗಳ ಸಾಲಿಗೆ ಈ ಚಿತ್ರ ಸೇರಲಿದೆ ಎಂದು ಖುಷಿ ವ್ಯಕ್ತಪಡಿಸಿದ್ದಾರೆ.

ಟೈಟಲ್ ಬಗ್ಗೆ ನಾನಾ ಅರ್ಥಗಳನ್ನು ಕಲ್ಪಿಸಿಕೊಂಡ ಅಭಿಮಾನಿಗಳು ಅನೇಕ ರೀತಿಯಲ್ಲಿ ಅರ್ಥೈಸುತ್ತಿದ್ದಾರೆ. ನಮಗೆ ಹಳೆಯ ಉಪೇಂದ್ರ ಬೇಕು ಎಂದು ಆಗ್ರಹಿಸುತ್ತಿದ್ದಾರೆ. ಈ ಪೋಸ್ಟರ್ ನಿಜಾನ ಅಥವಾ ಈ ಟೈಟಲ್ ನಿಜಾನ ಎನ್ನುವ ಬಗ್ಗೆ ಪ್ರತಿಕ್ರಿಯಿಸದ ಉಪೇಂದ್ರ, ವೈರಲ್ ಆಗಿರುವ ಪೋಸ್ಟರ್‌ಗಳನ್ನು ಹಂಚಿಕೊಂಡು ಟ್ವೀಟ್ ಮಾಡಿದ್ದಾರೆ. ''ಜನ-ಅಸಮಾನ್ಯ'' ಎಂದು ಉಪ್ಪಿ ಟ್ವೀಟ್ ಮಾಡಿ ಪಾಸಿಟಿವ್ ಆಗಿ ಸ್ಪಂದಿಸಿದ್ದಾರೆ.

 Upendra Reaction to Fans response on his next directional movie title

ಉಪೇಂದ್ರ ಅವರ ಈ ಪೋಸ್ಟ್‌ಗೆ ಅಭಿಮಾನಿಗಳು ಪ್ರತಿಕ್ರಿಯಿಸಿದ್ದು, ಕೆಲವು ಆಯ್ದಾ ಕಾಮೆಂಟ್‌ಗಳು ಇಲ್ಲಿದೆ...

''I - ನಾನು - ಕೆಂಪು ಬಣ್ಣ

U - ನೀನು - ಬಿಳಿ ಬಣ್ಣ

ನಿನ್ನೊಳಗೆ ಇರುವ ನಾನು ನಾನು ಎಂಬ ಅಹಂಭಾವ.

ನಾನು ಎಂಬ ಅಕ್ಷರ ಕೆಂಪು ಬಣ್ಣ ಇರುವ ಕಾರಣ, ಅದು ನಿನ್ನೊಳಗೆ ಕುದಿಯುತ್ತಿದೆ.

ಕೊನೆಗೆ ನಾನು ನಾನು ಎನ್ನುವುದು ಬಿಡು. ಅದು ನಾವು ಆಗಬೇಕು.

ಒಗಟ್ಟಿನಲ್ಲಿ ಬಲವಿದೆ'' ಎಂದು ಒಬ್ಬ ವ್ಯಕ್ತಿ ಕಾಮೆಂಟ್ ಮಾಡಿದ್ದಾರೆ.

''ನಾನು ಎಂಬುದೂ ಸುಳ್ಳು.

ನೀನು ಎಂಬುದೂ ಸುಳ್ಳು.

U&I ಭಾವಗಳು ಆತ್ಮದಲ್ಲಿ ಕರಗಬೇಕು.

ಅದೇ ಜಗತ್ತಿನ ಪರಮಸತ್ಯ.'' ಎಂದು ಮತ್ತೊಬ್ಬ ವ್ಯಕ್ತಿ ಟ್ವೀಟ್ ಮಾಡಿದ್ದಾರೆ.

''ನೀವು ಕೇವಲ ಬುದ್ಧಿವಂತರು ಅಂತ ನಿಮ್ಮ ಅಭಿಮಾನಿ ಆಗಿಲ್ಲ ಸರ್ ನಾನು.

ನೀವು ಉತ್ತಮ ಇಚ್ಛಾಶಕ್ತಿಯುಳ್ಳ ವ್ಯಕ್ತಿ ಅಂತ ನಾನು ನಿಮ್ಮನ್ನು ಇಷ್ಟಪಡ್ತೇನೆ.

ನಿಮ್ಮಲ್ಲಿರುವ ಪ್ರಜಾಕೀಯ ಇಚ್ಛಾಶಕ್ತಿಯೇ ಇದಕ್ಕೆ ಸಾಕ್ಷಿ.

ಇಚ್ಛಾಶಕ್ತಿಯಿಂದ ಅದ್ಭುತ ಕಾರ್ಯಗಳನ್ನು ಸಾಧಿಸಬಹುದು

ನೀವು ಸಾಧಿಸುತ್ತೀರಿ.

ಆ ನಂಬಿಕೆ ನಿಮ್ಮ ಅಭಿಮಾನಿಗಳಲ್ಲಿ ಬಲವಾಗಿದೆ'' ಎಂದು ಅಭಿಮಾನಿಯೊಬ್ಬ ಟ್ವೀಟ್ ಮಾಡಿದ್ದಾರೆ.

 Upendra Reaction to Fans response on his next directional movie title

''ಸಿನಿಮಾ ಮಾಡ್ತೀರಾ ಇಲ್ವ ಹೇಳಿ ಸರ್

ಇಲ್ಲಿ ಕನ್‌ಫ್ಯೂಸ್ ಮಾಡಿ ತಲೆಗ ಹುಳ ಬಿಡ್ಬೇಡಿ'' ಎಂದು ಅಭಿಮಾನಿಯೊಬ್ಬ ಪ್ರಶ್ನಿಸಿದ್ದಾರೆ.

''I ಅನ್ನುವನ ಮನದಲ್ಲಿ U ಎನ್ನವನಿದ್ದಾಗ I ನ ಹ್ರದಯದಲ್ಲಿ U ನ ಮೇಲೆ ಹುಟ್ಟಿದ ಪ್ರೀತಿಯೆ I ಗೆ ಬೇಕಾದ ಪ್ರೀತಿ ಅನ್ನುವ ಸಂಶಯ U ಮತ್ತು I ಇಬ್ಬರಿಗೂ ಇಲ್ಲ ಅಲ್ವೇ'' ಎಂದು ಅಭಿಮಾನಿಯೊಬ್ಬ ವಿಶ್ಲೇಷಿಸಿದ್ದಾರೆ.

ಉಪೇಂದ್ರ ಹುಟ್ಟುಹಬ್ಬಕ್ಕೆ 'ಕಬ್ಜ' ಸರ್ಪ್ರೈಸ್

ಉಪೇಂದ್ರ ಹುಟ್ಟುಹಬ್ಬದ ಪ್ರಯುಕ್ತ ಕಬ್ಜ ಚಿತ್ರತಂಡ ವಿಶೇಷವಾದ ಟೀಸರ್ ರಿಲೀಸ್ ಮಾಡಲಿದೆ. ಕಬ್ಜ ಅಂಡರ್‌ವರ್ಲ್ಡ್ ಆಧರಿಸಿ ತಯಾರಾಗುತ್ತಿರುವ ಚಿತ್ರ. ರೆಟ್ರೋ ಶೈಲಿಯಲ್ಲಿ ಮೇಕಿಂಗ್ ಆಗುತ್ತಿರುವ ಚಿತ್ರ. ಉಪೇಂದ್ರ ನಾಯಕನಟನಾಗಿರುವ ಕಬ್ಜ ಚಿತ್ರದಲ್ಲಿ ಕಿಚ್ಚ ಸುದೀಪ್ 'ಭಾರ್ಗವ್ ಬಕ್ಷಿ' ಎಂಬ ಡಾನ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ನಾಯಕಿ ಯಾರು ಎನ್ನುವುದು ಇದುವರೆಗೂ ಬಹಿರಂಗವಾಗಿಲ್ಲ. ಆದರೆ ದಕ್ಷಿಣ ಭಾರತದ ಖ್ಯಾತ ನಟಿಯೊಬ್ಬರು ಹೀರೋಯಿನ್ ಆಗಿ ನಟಿಸುವುದು ಮಾತ್ರ ಪಕ್ಕಾ. ಕೊರೊನಾದಿಂದ ವಿರಾಮ ತೆಗೆದುಕೊಂಡಿದ್ದ ಕಬ್ಜ ಸೆಪ್ಟೆಂಬರ್ 20ರಿಂದ ಶೂಟಿಂಗ್ ಶುರು ಮಾಡಲಿದೆ. 21ನೇ ತಾರೀಕಿನಿಂದ ಉಪೇಂದ್ರ ಪಾಲ್ಗೊಳ್ಳಲಿದ್ದಾರೆ.

More from Filmibeat

English summary
Kannada Actor Upendra Reaction to Fans response on his next directional movie title.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X