'ಕಾಫಿತೋಟ' ಚಿತ್ರದ ಟೀಸರ್ ಬಿಡುಗಡೆ ಮಾಡಿದ ಉಪೇಂದ್ರ
ಹಲವು ವಿಷಯಗಳಿಗೆ ಕುತೂಹಲ ಮೂಡಿಸಿರುವ 'ಕಾಫಿತೋಟ' ಚಿತ್ರ ಬಿಡುಗಡೆಗೆ ಸಿದ್ದವಾಗಿದ್ದು, ಆಗಸ್ಟ್ ತಿಂಗಳಿನಲ್ಲಿ ತೆರೆಗೆ ಬರಲಿದೆ. 'ಮೀರಾ ಮಾಧವ ರಾಘವ' ಚಿತ್ರದ ನಂತರ ಟಿ.ಎನ್.ಸೀತಾರಾಮ್ ಅವರು 'ಕಾಫಿತೋಟ'ಕ್ಕೆ ಆಕ್ಷನ್ ಕಟ್ ಹೇಳಿದ್ದು, ಆಗಸ್ಟ್ 18 ರಂದು ಚಿತ್ರಮಂದಿರ ಬರುವ ಯೋಚನೆಯಲ್ಲಿದೆ.
ರಿಯಲ್ ಸ್ಟಾರ್ ಉಪೇಂದ್ರ ಇಂದು (ಜುಲೈ 31) 'ಕಾಫಿತೋಟ' ಟೀಸರ್ ರಿಲೀಸ್ ಮಾಡಿದ್ದಾರೆ. ಈ ವೇಳೆ 'ಕಾಫಿತೋಟ' ಚಿತ್ರತಂಡ ಭಾಗಿಯಾಗಿತ್ತು. ಅಂದಹಾಗೆ, ಚಿತ್ರದಲ್ಲಿ ಒಟ್ಟು ಎರಡು ಹಾಡುಗಳಿದ್ದು ಒಂದು ಹಾಡಿಗೆ ಅನೂಪ್ ಸೀಳಿನ್ ಸಂಗೀತ ನೀಡಿದ್ದು, ಇನ್ನೊಂದು ಹಾಡಿಗೆ ಮಿದುನ್ ಮುಕುಂದನ್ ಸ್ವರ ಸಂಯೋಜಿಸಿದ್ದಾರೆ. ಜಯಂತ್ ಕಾಯ್ಕಿಣಿ ಮತ್ತು ಜೋಗಿ ತಲಾ ಒಂದು ಹಾಡಿಗೆ ಸಾಹಿತ್ಯ ಬರೆದಿದ್ದಾರೆ.

ಮನ್ವಂತರ ಚಿತ್ರ' ಸಂಸ್ಥೆ ನಿರ್ಮಾಣ ಮಾಡಿರುವ ಈ ಚಿತ್ರದಲ್ಲಿ ರಘು ಮುಖರ್ಜಿ, ರಾಧಿಕಾ ಚೇತನ್, ಸಂಯುಕ್ತ ಹೊರನಾಡು, ಅಪೇಕ್ಷ ಪುರೋಹಿತ್, ಅಚ್ಯುತ್ ಕುಮಾರ್, ರಾಹುಲ್ ಮಾಧವ ಸೇರಿದಂತೆ ಇನ್ನು ಹಲವು ಕಲಾವಿದರು ಅಭಿನಯಿಸಿದ್ದಾರೆ.
English summary
Real Star Upendra released TN Seetharam's 'Kaafi Thota' Movie teaser.


Click it and Unblock the Notifications