»   » 'ರಾಮ್ ಲೀಲಾ' ಸುರ್ರ್..ಸೂಪರ್ರು, ಹಾಡು ಬಿಡುಗಡೆ ಮಾಡಿದ ಉಪೇಂದ್ರ

'ರಾಮ್ ಲೀಲಾ' ಸುರ್ರ್..ಸೂಪರ್ರು, ಹಾಡು ಬಿಡುಗಡೆ ಮಾಡಿದ ಉಪೇಂದ್ರ

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ನ ನಟಿ ಸಂಜನಾ ಗರ್ಲಾನಿ ತಮ್ಮ ಹುಟ್ಟುಹಬ್ಬವನ್ನು ರಿಯಲ್ ಸ್ಟಾರ್ ಉಪೇಂದ್ರ ಅವರ ಮನೆಯಲ್ಲಿ 'ರಾಮ್ ಲೀಲಾ' ಚಿತ್ರದ ಇನ್ನೊಂದು ಹಾಡನ್ನು ಬಿಡುಗಡೆ ಮಾಡುವ ಮೂಲಕ ಸಂಭ್ರಮದಿಂದ ಆಚರಿಸಿಕೊಂಡರು.

ಈ ಮೊದಲು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹಾಡಿರುವ 'ಓ ವಯ್ಯಾರಿ' ಹಾಡನ್ನು ಚಿರಂಜೀವಿ ಸರ್ಜಾ ಧ್ರುವ ಸರ್ಜಾ ಅವರ ಹುಟ್ಟುಹಬ್ಬದಂದು ಬಿಡುಗಡೆ ಮಾಡಲಾಗಿತ್ತು.['ರಾಮ್ ಲೀಲಾ' ಟ್ರೈಲರ್ ಬಿಡುಗಡೆ ಮಾಡಿದ ದರ್ಶನ್]

Upendra releases Kannada movie 'Ramleela second song

ಇದೀಗ ಚಿರಂಜೀವಿ ಸರ್ಜಾ ಹಾಗೂ ಅಮೂಲ್ಯಾ ಲೀಡ್ ರೋಲ್ ನಲ್ಲಿ ಮಿಂಚಿರುವ 'ರಾಮ್ ಲೀಲಾ' ಚಿತ್ರದ ಸುರ್ರ್.... ಸೂಪರ್ರು, ಹಾಡನ್ನು ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಪ್ರೀಯಾಂಕ ಉಪೇಂದ್ರ ಅವರು ತಮ್ಮ ನಿವಾಸದಲ್ಲಿ ಬಿಡುಗಡೆ ಮಾಡಿದರು.[ಕನ್ನಡದ 'ರಾಮ್ ಲೀಲಾ'ದಲ್ಲಿ ಚಿರಂಜೀವಿ ಸರ್ಜಾ-ಅಮೂಲ್ಯ]

ಚಿತ್ರದ ಸುರ್ರ್.. ಸೂಪರ್ರು, ಹಾಡಿನಲ್ಲಿ ಸಂಜನಾ ಗರ್ಲಾನಿ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದು, ಪ್ರೇಕ್ಷಕರಿಗೆ ಸಕತ್ ಎಂರ್ಟಟೈನ್ ಜೊತೆಗೆ ಕಿಕ್ ಕೊಡುವಂತಿದೆ. ಈ ಹಾಡನ್ನು ಉಪ್ಪಿ ಹಾಗು ಪ್ರಿಯಾಂಕ ಉಪೇಂದ್ರ ಬಿಡುಗಡೆ ಮಾಡಿದ್ದಾರೆ.

ಇದೇ ಸಂದರ್ಭದಲ್ಲಿ ನಟಿ ಸಂಜನಾ ಗರ್ಲಾನಿ ತಮ್ಮ ಹುಟ್ಟುಹಬ್ಬವನ್ನು ಉಪ್ಪಿ ಅವರ ಫ್ಯಾಮಿಲಿ, ನಾಯಕ ಚಿರಂಜೀವಿ ಸರ್ಜಾ ಹಾಗೂ ರಾಮ್ ಲೀಲಾ ಚಿತ್ರದ ನಿರ್ದೇಶಕರೊಂದಿಗೆ ಸಂಭ್ರಮದಿಂದ ಆಚರಿಸಿಕೊಂಡರು.[ಟ್ರೈಲರ್ : ಕನ್ನಡದ 'ರಾಮ್ ಲೀಲಾ' ಪಕ್ಕಾ ಎಂಟರ್ ಟೇನರ್]

ಈಗಾಗಲೇ ಚಿತ್ರದ ಶೂಟಿಂಗ್ ಕಂಪ್ಲೀಟ್ ಆಗಿದ್ದು, ಇನ್ನೇನು ಸದ್ಯದಲ್ಲೇ ಭರ್ಜರಿಯಾಗಿ ತೆರೆ ಕಾಣಲಿದೆ. ತೆಲುಗು ಚಿತ್ರ 'ಲೌಕ್ಯಂ' ನ ರಿಮೇಕ್ ಚಿತ್ರವಾದ 'ರಾಮ್ ಲೀಲಾ ಚಿತ್ರಕ್ಕೆ ನಿರ್ದೇಶಕ ವಿಜಯ್ ಕಿರಣ್ ಆಕ್ಷನ್-ಕಟ್ ಹೇಳಿದ್ದಾರೆ.

ಭರ್ಜರಿ ಆಕ್ಷನ್ ಕಮ್ ಕಾಮಿಡಿ ಎಂರ್ಟಟೈನರ್ 'ರಾಮ್ ಲೀಲಾ' ಚಿತ್ರದ ಸುರ್ರ್... ಸೂಪರ್ ಹಾಡು ನೋಡಲು ಈ ವಿಡಿಯೋ ನೋಡಿ..

Upendra releases Kannada movie 'Ramleela second song
English summary
The second song of the film Ramleela, was released by Upendra and his wife Priyanka Upendra to mark Sanjjanaa's birthday. 'Ramleela' movie features Kannada Actor Chiranjeevi Sarja, Kannada Actress Amoolya in the lead role. The movie is directed by Vijay Kiran.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada