ಪ್ರಭಾಸ್ 'ಕಲ್ಕಿ'ಗೂ ಉಪ್ಪಿಯ 'ಕಲ್ಕಿ'ಗೂ ಏನು ವ್ಯತ್ಯಾಸ? ರಿಯಲ್‌ ಸ್ಟಾರ್ 'ಯುಐ' ಪ್ರಪಂಚ ಹೇಗಿರುತ್ತೆ?

By ಫಿಲ್ಮಿಬೀಟ್ ಡೆಸ್ಕ್

ರಿಯಲ್‌ ಸ್ಟಾರ್ ಉಪೇಂದ್ರ ಸಿನಿಮಾ ಮೇಲೆ ಇಡೀ ದಕ್ಷಿಣ ಭಾರತವೇ ಕಣ್ಣಿಟ್ಟಿದೆ. ಉಪ್ಪಿ ನಿರ್ದೇಶಿಸಿದ ಸಿನಿಮಾದಲ್ಲಿ ಹೊಸದೇನನ್ನು ಹೇಳುವುದಕ್ಕೆ ಹೊರಟಿದ್ದಾರೆ ಅನ್ನೋದನ್ನು ಕಾತುರದಿಂದ ಎದುರು ನೋಡುತ್ತಿದ್ದಾರೆ. ಈ ಸಿನಿಮಾ ಡಿಸೆಂಬರ್ 20ರಂದು ಬಿಡುಗಡೆಯಾಗುತ್ತಿರುವುದರಿಂದ ಉಪ್ಪಿನೂ ಭರ್ಜರಿ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ.

ಈ ಮಧ್ಯೆ ಸಿನಿಮಾ ರಿಲೀಸ್‌ಗೂ ಮುನ್ನ ಉಪೇಂದ್ರ ಪ್ರೇಕ್ಷಕರ ತಲೆಗೆ ಹುಳ ಬಿಟ್ಟಿದ್ದಾರೆ. 'ಯುಐ' ಸಿನಿಮಾ ಕಲ್ಕಿ ಕಾನ್ಸೆಪ್ಟ್ ಅನ್ನೇ ಇಟ್ಟುಕೊಂಡು ಮಾಡಿರುವ ಸುಳಿವು ಬಿಟ್ಟುಕೊಂಡಿದ್ದಾರೆ. ಸಾಮಾನ್ಯವಾಗಿ ಉಪೇಂದ್ರ ಸಿನಿಮಾ ರಿಲೀಸ್‌ವರೆಗೂ ಏನೂ ಕಂಟೆಂಟ್‌ ಅನ್ನು ಬಿಟ್ಟುಕೊಡುವುದಿಲ್ಲ. ಈ ಸಿನಿಮಾಗೂ ಚಿಕ್ಕ ತುಣುಕುಗಳನ್ನು ಬಿಟ್ಟು ತಲೆಗೆ ಹುಳ ಬಿಟ್ಟಿದ್ದರು.

Upendra revealed the difference between the UI movie and Prabhas s Kalki 2898AD in Hyderabad

ಈಗ ಹೈದರಾಬಾದ್, ಬೆಂಗಳೂರು ಅಂತ ಪ್ರಚಾರದಲ್ಲಿ ಬ್ಯುಸಿಯಾಗಿರುವ ಉಪ್ಪಿ ತಮ್ಮ ಅಭಿಮಾನಿಗಳ ಜೊತೆ ಇಂಟ್ರೆಸ್ಟಿಂಗ್ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಪ್ರಭಾಸ್ ಕಲ್ಕಿಗೂ ಉಪ್ಪಿ ಕಲ್ಕಿಗೂ ಸಂಬಂಧವಿದೆಯಾ? ಎರಡು ಸಿನಿಮಾಗಳು ಒಂದೇ ಕಾನ್ಸೆಪ್ಟ್‌ನಲ್ಲಿ ಮಾಡಿರುವ ಸಿನಿಮಾ? ಉಪ್ಪಿ ಈ ಸಿನಿಮಾ ಮೂಲಕ ಹೇಳುವುದಕ್ಕೆ ಹೊರಟಿರುವುದು ಏನು? ಇವೆಲ್ಲವನ್ನು ತಿಳಿಯಲು ಮುಂದೆ ಓದಿ.

ರಿಯಲ್ ಸ್ಟಾರ್ ಉಪ್ಪಿಗೆ 'ಯುಐ' ಸಿನಿಮಾ ಅನೌನ್ಸ್ ಮಾಡಿದಾಗಲೇ ಒಂದು ಸುದ್ದಿ ಹಬ್ಬಿತ್ತು. 'ಕಲ್ಕಿ' ಕಾನ್ಸೆಪ್ಟ್‌ ಅನ್ನು ಇಟ್ಟುಕೊಂಡು ಸಿನಿಮಾ ಮಾಡುತ್ತಿದ್ದಾರೆ ಅಂತ ಸುದ್ದಿ ಹಬ್ಬಿತ್ತು. ಆದರೆ, ಉಪೇಂದ್ರ ತಾವು ನಿರ್ದೇಶಿಸುವ ಸಿನಿಮಾಗಳ ಬಗ್ಗೆ ಒಂದೇ ಒಂದು ಸುಳಿವನ್ನು ಬಿಟ್ಟುಕೊಡುವುದಿಲ್ಲ. ಹಾಗೇ ಈ ಸಿನಿಮಾ ಬಗ್ಗೆನೂ ಎಲ್ಲೂ ಚಿಕ್ಕದೊಂದು ಮಾಹಿತಿಯನ್ನು ಬಿಟ್ಟುಕೊಟ್ಟಿರಲಿಲ್ಲ. ಈಗ ಹೈದರಾಬಾದ್‌ನಲ್ಲಿ ಸಿನಿಮಾ ಇವೆಂಟ್‌ನಲ್ಲಿ ಪ್ರಭಾಸ್ ಕಲ್ಕಿಗೂ 'ಯುಐ'ನಲ್ಲಿ ಬರುವ ಕಲ್ಕಿಗೂ ಏನು ಸಂಬಂಧ ಅನ್ನೋದನ್ನು ರಿವೀಲ್ ಮಾಡಿದ್ದಾರೆ.

"ಈ ಸಿನಿಮಾ ಮೆಟಾಫರಿಕಲ್ ರೀತಿ ಇರುತ್ತೆ. ಈ ಸಿನಿಮಾವನ್ನು ಸಾಂಕೇತಿಕವಾಗಿ ಮಾಡಲಾಗಿದೆ. ನೀವೆಲ್ಲರೂ ಇದನ್ನು ಡಿಕೋಡ್ ಮಾಡುತ್ತೀರ ಅಂತ ನನಗೆ ಸಿಕ್ಕಾಪಟ್ಟೆ ಕಾನ್ಫಿಡೆನ್ಸ್ ಇದೆ. ಅದನ್ನು ಇಟ್ಟುಕೊಂಡೇ ಈ ಸಿನಿಮಾವನ್ನು ಮಾಡಿದ್ದೇನೆ. ಎಲ್ಲರೂ ಕಲ್ಟ್ ಅಂತ ಹೇಳುತ್ತಾರೆ. ಆ ಕಲ್ಟ್‌ ಅನ್ನೋದು ನಿಮ್ಮಲ್ಲೇ ಇದೆ. ನನ್ನ ಧೈರ್ಯ ನೀವೇ" ಎಂದು ಉಪೇಂದ್ರ ತೆಲುಗು ಮಂದಿಯ ತಲೆಗೆ ಹುಳವನ್ನು ಬಿಟ್ಟು ಬಂದಿದ್ದಾರೆ.

Upendra revealed the difference between the UI movie and Prabhas s Kalki 2898AD in Hyderabad

ಇನ್ನೊಂದು ಕಡೆ 'ಯುಐ' ಸಿನಿಮಾದ ಓಪನಿಂಗ್‌ ಸೀನ್‌ನಿಂದಲೇ ಶಾಕ್ ಆಗುತ್ತೀರ ಎಂದು ಹೇಳಿದ್ದಾರೆ. "ಈ ಸಿನಿಮಾದ ಓಪನಿಂಗ್‌ನಲ್ಲೇ ಶಾಕ್ ಆಗುತ್ತೀರ. ನಂತರ ಬೇರೆ ಬೇರೆ ವಿಷಯಗಳು ಬರುತ್ತವೆ. ನೀವೆಲ್ಲರೂ ಅದನ್ನು ಡಿಕೋಡ್ ಮಾಡುತ್ತೀರ ಅನ್ನೋ ನಂಬಿಕೆಯಿದೆ." ಎಂದು ಹೇಳಿದ್ದಾರೆ. ಈ ಮೂಲಕ 'ಯುಐ' ಸಿನಿಮಾವನ್ನು ಮಿಸ್ ಮಾಡಿಕೊಳ್ಳುವಂತಿಲ್ಲ ಅನ್ನೋ ಸೂಚನೆಯನ್ನೂ ನೀಡಿದ್ದಾರೆ.

ಇನ್ನೊಂದು ಕಡೆ 'ಯುಐ' ಸಿನಿಮಾಗೂ 'ಕಲ್ಕಿ'ಗೂ ಏನು ಸಂಬಂಧ ಅನ್ನೋದನ್ನೂ ಹೇಳಿದ್ದಾರೆ. 'ಯುಐ' ಸಿನಿಮಾದಲ್ಲಿ ಸೈಕಾಲಜಿಕ್ ಕಲ್ಕಿ ನೋಡುತ್ತೀರ ಎಂದಿದ್ದಾರೆ. "ನೀವು ಈಗಾಗಲೇ ಪೌರಾಣಿಕ ಕಲ್ಕಿಯನ್ನು ನೋಡಿದ್ದೀರ. ನೋಡಿದ್ದೀರಾ ತಾನೇ. ನೀವು ಈ ಸಿನಿಮಾದಲ್ಲಿ ಸೈಕಾಲಜಿಕಲ್ ಕಲ್ಕಿಯನ್ನು ನೋಡಿತ್ತೀರ. ಅದಷ್ಟನ್ನು ಮಾತ್ರ ಹೇಳುತ್ತೇನೆ." ಎಂದು ಹೇಳಿ ತೆಲುಗು ಮಂದಿಯಲ್ಲಿ ಕುತೂಹಲ ಹುಟ್ಟಿಸಿದ್ದಾರೆ. ಇತ್ತ ಬೆಂಗಳೂರಿನಲ್ಲಿ ಇವೆಂಟ್ ಇದ್ದು ಅಲ್ಲಿ ಇನ್ನೇನು ಸೀಕ್ರೆಟ್ ರಿವೀಲ್ ಮಾಡುತ್ತಾರೋ ನೋಡಬೇಕಿದೆ.

More from Filmibeat

English summary
Upendra revealed the difference between the UI movie and Prabhas's Kalki 2898AD in the Hyderabad pre-release event;
Read more about: upendra ui sandalwood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X