ಭಾರತದ ಬಹುನಿರೀಕ್ಷಿತ ಚಿತ್ರಗಳ ಪಟ್ಟಿಯಲ್ಲಿ ನಂಬರ್ 1 ಸ್ಥಾನಕ್ಕೇರಿದ ಕಬ್ಜ!
ಐಎಂಡಿಬಿ ಎಂದರೆ ಇಂಟರ್ನೆಟ್ ಮೂವಿ ಡೇಟಾಬೇಸ್ ಎಂದರ್ಥ. ಇದೊಂದು ವೆಬ್ ತಾಣವಾಗಿದ್ದು, ಇಲ್ಲಿ ಚಲನಚಿತ್ರ, ಟಿವಿ ಧಾರಾವಾಹಿಗಳು, ವಿಡಿಯೊ ಗೇಮ್ಸ್, ವೆಬ್ ಸಿರೀಅ್ ಹಾಗೂ ಇನ್ನತರೆ ಮನರಂಜನಾ ಕಾರ್ಯಕ್ರಮದ ಕುರಿತು ಮಾಹಿತಿಗಳು ಲಭಿಸಲಿವೆ.
ಇಲ್ಲಿ ಚಲನಚಿತ್ರ ಪ್ರೇಮಿಗಳು ಖಾತೆಯನ್ನು ತೆರೆದು ತಮ್ಮ ನೆಚ್ಚಿನ ಚಿತ್ರಗಳಿಗೆ ರೇಟಿಂಗ್ ನೋಡಿ ವಿಮರ್ಶೆ ಮಾಡುವ ಅವಕಾಶವೂ ಇದೆ. ಹೀಗೆ ಬಳಕೆದಾರರಿಗೆ ಹಲವು ಆಯ್ಕೆಗಳನ್ನು ಒದಗಿಸುವ ಈ ಐಎಂಡಿಬಿ ( ಇಂಟರ್ನೆಟ್ ಮೂವಿ ಡೇಟಾಬೇಸ್ ) ಎಂದರೆ ಸಿನಿ ರಸಿಕರಿಗೂ ಅಚ್ಚುಮೆಚ್ಚು.

ಹೀಗಾಗಿ ಐಎಂಡಿಬಿಗೆ ( ಇಂಟರ್ನೆಟ್ ಮೂವಿ ಡೇಟಾಬೇಸ್ ) ಹೆಚ್ಚೆಚ್ಚು ಬಳಕೆದಾರರು ಇದ್ದು, ಇವರು ಮುಂಬರುವ ಚಿತ್ರಗಳಲ್ಲಿ ಯಾವ ಚಿತ್ರಕ್ಕಾಗಿ ಕಾಯುತ್ತಿದ್ದಾರೆ ಎಂಬುದನ್ನು ಆರಿಸುತ್ತಾರೆ. ಇದೊಂದು ಪ್ರತ್ಯೇಕ ಕೆಟಗರಿ ಇದ್ದು, ಹೆಚ್ಚು ವೋಟ್ ಪಡೆದುಕೊಳ್ಳುವ ಚಿತ್ರಗಳು ಟಾಪ್ 10 ಪಟ್ಟಿಯಲ್ಲಿ ಕಾಣಿಸಿಕೊಳ್ಳಲಿವೆ. ಈ ಪಟ್ಟಿಗೆ ಭಾರತದ ಬಹು ನಿರೀಕ್ಷಿತ ಚಿತ್ರಗಳ ಟಾಪ್ 10 ಟ್ರೆಂಡಿಂಗ್ ಪಟ್ಟಿ ಎನ್ನುತ್ತಾರೆ.
ಅದೇ ರೀತಿ ಈಗಿನ ( ಮಾರ್ಚ್ 9 ) ಟಾಪ್ 10 ಭಾರತದ ಬಹು ನಿರೀಕ್ಷಿತ ಸಿನಿಮಾಗಳ ಪಟ್ಟಿ ಬಿಡುಗಡೆಯಾಗಿದ್ದು, ಈ ಪಟ್ಟಿಯಲ್ಲಿ ಕನ್ನಡದ ಆರ್ ಚಂದ್ರು ನಿರ್ದೇಶನದ, ಉಪೇಂದ್ರ, ಕಿಚ್ಚ ಸುದೀಪ್ ಹಾಗೂ ಶಿವ ರಾಜ್ ಕುಮಾರ್ ನಟನೆಯ ಕಬ್ಜ ಅಗ್ರಸ್ಥಾನವನ್ನು ಅಲಂಕರಿಸಿದೆ. ಕಬ್ಜ ಚಿತ್ರದ ಈ ಸಾಧನೆ ಬಗ್ಗೆ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸುದ್ದಿಯಾಗ್ತಿದೆ.
ಈ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿರುವ ಚಿತ್ರಗಳ ಸಂಪೂರ್ಣ ಪಟ್ಟಿ ಕೆಳಕಂಡಂತಿದೆ.
1. ಕಬ್ಜ
2. ಕಿಸಿ ಕಾ ಭಾಯ್ ಕಿಸಿ ಕಾ ಜಾನ್
3. ಭೋಲಾ
4. ಜ್ಬಿಗಾಟೊ
5. ರಾಣಾ ನಾಯ್ಡು
6. ದಾಸ್ ಕಾ ಧಮ್ಕಿ
7. ವಿರೂಪಾಕ್ಷ
8. ಅಖಿಲನ್
9. ಮಿಸ್ಸಸ್ ಚಟರ್ಜಿ vs ನಾರ್ವೆ
10. ಚೋರ್ ನಿಕಲ್ ಕೆ ಭಾಗಾ
ಸದ್ಯ ಕಬ್ಜ ಚಿತ್ರ ಮುಂಬೈನಲ್ಲಿ ಪ್ರಚಾರ ಕಾರ್ಯವನ್ನು ಆರಂಭಿಸಿದೆ. ಚಿತ್ರದ ನಟರಾದ ಉಪೇಂದ್ರ ಹಾಗೂ ಸುದೀಪ್ ಜತೆ ನಟಿ ಶ್ರೇಯಾ ಶರಣ್ ಮತ್ತು ನಿರ್ದೇಶಕ ಆರ್ ಚಂದ್ರು ಈ ಪ್ರಚಾರ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ.
ಚಿತ್ರ ಇದೇ ಮಾರ್ಚ್ 17 ರಂದು ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಹುಟ್ಟುಹಬ್ಬದ ಪ್ರಯುಕ್ತ ಕಬ್ಜ ಚಿತ್ರ ಬೆಳ್ಳಿತೆರೆಗೆ ಅಪ್ಪಳಿಸಲಿದೆ. ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಟ್ರೈಲರ್ ಸಿನಿ ರಸಿಕರನ್ನು ರೊಚ್ಚಿಗೆಬ್ಬಿಸಿದ್ದು, ಹಾಡುಗಳೂ ಸಹ ಸದ್ದು ಮಾಡ್ತಿವೆ.
ರಿಚ್ ಮೇಕಿಂಗ್, ಮೈ ನವಿರೇಳಿಸುವ ದೃಶ್ಯಗಳ ರಾಶಿಯಿಂದ ಕೂಡಿರುವ ಟ್ರೈಲರ್, ಬಿಗ್ಗೆಸ್ಟ್ ತಾರಾಗಣ, ಕ್ರೇಜಿ ಬ್ಯಾಕ್ ಗ್ರೌಂಡ್ ಮ್ಯೂಸಿಕ್ ಸಿನಿ ರಸಿಕರ ಗಮನ ಸೆಳೆದಿದ್ದು, ಫಸ್ಟ್ ಡೇ ಫಸ್ಟ್ ಶೋ ನೋಡಿಯೇ ಬಿಡಬೇಕು ಎನ್ನುವ ಮಟ್ಟಿಗೆ ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ ಕಬ್ಜ ಸಿನಿಮಾ.


Click it and Unblock the Notifications