ಉಪೇಂದ್ರ ಮನೆ ಸೊಸೆಯಾಗ್ತಾರಾ ಶ್ರೇಯಾಂಕ ಪಾಟೀಲ್ ? ಟಗರು ಪುಟ್ಟಿ ಜೊತೆ ಮದುವೆ - ಮೌನ ಮುರಿದ ನಿರಂಜನ್

ಸೊಸೈಟಿಯಲ್ಲಿ ಆಗಬಹುದಾದ ಸಡನ್ ಸುದ್ದಿಗಳಿಗೆ ಜನಸಾಮಾನ್ಯರು ಟಿವಿ, ನ್ಯೂಸ್ ಪೇಪರ್ ಗಳನ್ನು ನಂಬುವ ಕಾಲ ಮರೆಯಾಯ್ತು. ಅಂಗೈಲ್ಲಿರುವ ಮೊಬೈಲ್ ನಲ್ಲಿಯೇ ಎಲ್ಲ ಸುದ್ದಿಗಳು ಘಟಿಸಿದ ಕೆಲವೇ ಸೆಕೆಂಡುಗಳಲ್ಲಿ ತಲುಪಿಬಿಡುತ್ತದೆ. ಅಷ್ಟರಮಟ್ಟಿಗೆ ತಂತ್ರಜ್ಞಾನ ಬೆಳೆದು, ನೋಡುಗರೇ ನಿಬ್ಬೆರಗಾಗುವಂತೆ ಮಾಡುತ್ತಿದೆ.

ಇನ್ನು ಸೋಶಿಯಲ್ ಮೀಡಿಯಾವಂತೂ ಎಲ್ಲ ಮಾಧ್ಯಮಗಳನ್ನು ಸೈಡ್ ಗೆ ತಳ್ಳಿ ತನ್ನ ಕಬಂಧ ಬಾಹುವಿನಿಂದ ಆಕ್ರಮಿಸಿಕೊಂಡುಬಿಟ್ಟಿದೆ. ಆದರೆ ಸೋಶಿಯಲ್ ಮೀಡಿಯಾದಲ್ಲಿ ಪ್ರಕಟವಾಗುವ ಸುದ್ದಿಗಳು, ವಿಚಾರಗಳು ಸತ್ಯವೋ, ಸುಳ್ಳೋ ಎಂಬುದನ್ನು ಅರಿಯುವಷ್ಟರಲ್ಲಿ ಎಲ್ಲರಿಗೂ ಸುದ್ದಿಗಳು ಹರಡಿ ಮತ್ತಾವುದೋ ಪ್ರಮಾದವನ್ನು ಸೃಷ್ಟಿಸಿ ಬಿಟ್ಟಿರುತ್ತದೆ. ಉದಾಹರಣೆಗೆ ನಿರಂಜನ್ ಸುಧೀಂದ್ರ ಮತ್ತು ಶ್ರೇಯಾಂಕ ಪಾಟೀಲ್ ಅವರ ವಿಚಾರವನ್ನೇ ತೆಗೆದುಕೊಳ್ಳಿ.

upendra-s-nephew-niranjan-sudhindra-slams-marriage-rumours-with-rcb-star-shreyanka-patil

ಹೌದು, ನಿರಂಜನ್ ಸುಧೀಂದ್ರ.. ಉಪೇಂದ್ರ ಅವರ ಅಣ್ಣನ ಮಗ. ಚಿತ್ರರಂಗದಲ್ಲಿ ಒಂದೊಂದೆ ಹೆಜ್ಜೆ ಇಡುತ್ತಿರುವ ಸುರಸುಂದರ. ''ಸೆಕೆಂಡ್ ಹಾಫ್''.. ''ನಮ್ಮ ಹುಡುಗರು''.. 'ಸೀತಾ ಪಯಣಂ''..
ಚಿತ್ರಗಳ ಮೂಲಕ ಈಗಾಗಲೇ ಭರವಸೆ ಮೂಡಿಸಿರುವ ನಿರಂಜನ್ ಕೈಯಲ್ಲಿ ಇನ್ನೊಂದು ಅರ್ಧ ಡಜನ್ ಚಿತ್ರಗಳಿವೆ.

ಇನ್ನೂ ಶ್ರೇಯಾಂಕ ಪಾಟೀಲ್ ಅವರ ಪರಿಚಯದ ಅವಶ್ಯಕತೆ ಇಲ್ಲ. ಕ್ರಿಕೆಟ್​ ಪ್ರೇಮಿಗಳ ನ್ಯಾಷನಲ್​ ಕ್ರಷ್. ಟಗರು ಪುಟ್ಟಿ. ಭಾರತವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸಿದ ಸ್ಟಾರ್ ಕ್ರಿಕೆಟ್​ ಪ್ಲೇಯರ್.

ಇಂಥಾ ನಿರಂಜನ್ ಸುಧೀಂದ್ರ ಮತ್ತು ಶ್ರೇಯಾಂಕ ಪಾಟೀಲ್ ಮದುವೆ ಮಾಡಿಸಲು ಟ್ರೋಲ್ ಪೇಜ್‌ವೊಂದು ಮುಂದಾಗಿದೆ. ಇದಕ್ಕೆ ಪುರಾವೆ ಎನ್ನುವಂತೆ ಶ್ರೇಯಾಂಕ ಪಾಟೀಲ್‌ ಕೈ ಹಿಡಿಯಲ್ಲಿದ್ದಾರೆ ಉಪೇಂದ್ರ ಅವರ ಅಣ್ಣನ ಮಗ ನಟ ನಿರಂಜನ್ ಎಂಬ ಶೀರ್ಷಿಕೆಯನ್ನು ನೀಡಿ ಉಪೇಂದ್ರ ಅವರ ಕುಟುಂಬದ ಸೊಸೆಯಾಗಲಿದ್ದಾರೆ ಶ್ರೇಯಾಂಕ ಪಾಟೀಲ್, IPL ನಲ್ಲಿ ಮಿಂಚಿದ ಕರ್ನಾಟಕದ ಪುಟ್ಟಿ ಇದೀಗ ಉಪ್ಪಿ ಅಣ್ಣನ ಮಗ ನಿರಂಜನ್ ಅವರ ಜೊತೆ ನಿಶ್ಚಿತಾರ್ಥ ಮಾಡಿಕೊಳ್ಳಲು ಮುಂದಾಗಿದ್ದಾರೆ ಎಂಬ ವರದಿಯಾಗಿದೆ, ಖುದ್ದು ಉಪೇಂದ್ರ ಅವರ ಮೂಲಕ ನಿರಂಜನ್‌ ಹಾಗೂ ಶ್ರೇಯಾಂಕ ಪಾಟೀಲ್‌ ಲವ್ ಸ್ಟೋರಿ ರಿವಿಲ್ ಆಗಿದ್ದು, ಇದೀಗ ಈ ಜೋಡಿ ಇದೇ ವರ್ಷ ಸಿಹಿಸುದ್ದಿ ಕೊಡುವ ಸಾಧ್ಯತೆ ಇದೆ ಎಂದು ಟ್ರೋಲ್ ಪೇಜ್ ಪೋಸ್ಟ್ ಮಾಡಿದೆ.

ಲೈಕ್ಸ್.. ಶೇರ್.. ವ್ಯೂವ್ಸ್.. ಸಿಕ್ಕರೆ ಸಾಕೆಂದು ಟ್ರೋಲ್ ಪೇಜ್‌ನಲ್ಲಿ ಹೀಗೆ ಪೋಸ್ಟ್ ಮಾಡಲಾಗಿತ್ತಾ, ಸುಳ್ಳು ಸುದ್ದಿ ಹಬ್ಬಿಸುವುದೇ ಅಜೆಂಡಾ ಆಗಿತ್ತಾ, ಎನ್ನುವುದು ಈ ಟ್ರೋಲ್ ಪೇಜ್ ಅಡ್ಮಿನ್‌ಗೆ ಗೊತ್ತಾದರೂ ಈ ಸುದ್ದಿ ನಿರಂಜನ್ ಸುಧೀಂದ್ರ ಅವರ ಕಣ್ಣಿಗೆ ಕೂಡ ಬಿದ್ದಿದೆ. ಸಹಜವಾಗಿ ನಿರಂಜನ್ ಅವರಿಗೆ ಆಶ್ಚರ್ಯದ ಜೊತೆ ಆಘಾತವೂ ಆಗಿದೆ.

upendra-s-nephew-niranjan-sudhindra-slams-marriage-rumours-with-rcb-star-shreyanka-patil

ಹೀಗಾಗಿಯೇ ಪ್ರತಿಕ್ರಿಯೆಯನ್ನು ಕೂಡ ನೀಡಿರುವ ನಿರಂಜನ್ ಅಡ್ಮಿನ್ ಇನ್ವಿಟೇಶನ್ ಬಂದ್ರೆ ನಮಗೂ ಕಳುಹಿಸಿ ಕೊಡು ಗುರು. ಮೊದಲಿಗೆ ಫಾಕ್ಟ್ ಚೆಕ್ ಮಾಡಿ, ನಂತರ ಪೋಸ್ಟ್ ಮಾಡಿ. ಈ ರೀತಿಯಾಗಿ ಸುಳ್ಳು ಸುದ್ದಿ ಹರಡುವುದನ್ನು ನಿಲ್ಲಿಸಿ. Thank you for your attention to this matter! ಎಂದು ನಿರಂಜನ್ ಕಾಮೆಂಟ್ ಮಾಡಿದ್ದಾರೆ.

ಇನ್ನೂ ಎಲ್ಲರಿಗೆ ಗೊತ್ತಿರುವಂತೆ ಇದು ಕಾಪಿ ಮತ್ತು ಪೇಸ್ಟ್ ಕಾಲ. ಈ ಕಾಲದಲ್ಲಿ ಸತ್ಯಾಸತ್ಯತೆಯನ್ನು ತಿಳಿಯದೇ ಈ ವೈರಲ್ ಪೋಸ್ಟ್‌ನ್ನೇ ಹಲವರು ಕಾಪಿ ಮಾಡಿದ್ದಾರೆ. ತಮ್ಮ ತಮ್ಮ ಪೇಜ್‌ನಲ್ಲಿ ಹಂಚಿಕೊಂಡಿದ್ದಾರೆ. ಹೀಗಾಗಿ ಈ ಮದುವೆಯ ಪೋಸ್ಟ್ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಬಹುಶಃ ಹೀಗಾಗಿಯೇ ಇಂತಹದ್ದೊಂದು ದಿನ ಬರುತ್ತೆ ಎಂದು ಅರಿತೇ ಇಲ್ಲಿ ಕಂಡಿದ್ದೆಲ್ಲಾ ನಿಜಾ ಅಲ್ಲ, ಕೇಳಿದ್ದೆಲ್ಲಾ ಸತ್ಯ ಅಲ್ಲ. ಇಲ್ಲಿ ಪ್ರತಿಯೊಬ್ಬರೂ ತಮಗೆ ಬೇಕಾದ ಹಾಗೆ ಸತ್ಯನ ಸೃಷ್ಟಿ ಮಾಡ್ಕೊಳ್ತಾರೆ ಎಂದು ಉಪೇಂದ್ರ ಆ ಕಾಲದಲ್ಲಿಯೇ ಹೇಳಿದ್ದರೇನೋ..

upendra-s-nephew-niranjan-sudhindra-slams-marriage-rumours-with-rcb-star-shreyanka-patil

More from Filmibeat

English summary
"Total Non"Total Nonsense!" Niranjan Sudhindra slams viral marriage rumors with RCB star Shreyanka Patil. See Upendra’s nephew’s bold reaction to the fake news taking over social media.sense!" Niranjan Sudhindra slams viral marriage rumors with RCB star Shreyanka Patil. See Upendra’s nephew’s bold reaction to the fake news taking over social media.
Read more about: fake news niranjan
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X