»   » 'ಹೋಮ್ ಮಿನಿಸ್ಟರ್' ಟೈಟಲ್ ನಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಹೊಸ ಸಿನಿಮಾ!

'ಹೋಮ್ ಮಿನಿಸ್ಟರ್' ಟೈಟಲ್ ನಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಹೊಸ ಸಿನಿಮಾ!

Posted By:
Subscribe to Filmibeat Kannada

ರಿಯಲ್ ಸ್ಟಾರ್ ಉಪೇಂದ್ರ 'ಹೋಮ್ ಮಿನಿಸ್ಟರ್' ಟೈಟಲ್ ನಲ್ಲಿ ಹೊಸ ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮಾದ ಎಕ್ಸ್ ಕ್ಲೂಸಿವ್ ವಿವರ ನಿಮ್ಮ 'ಫಿಲ್ಮಿಬೀಟ್ ಕನ್ನಡ'ಕ್ಕೆ ಸಿಕ್ಕಿದೆ.

ರಿಯಲ್ ಸ್ಟಾರ್ ಉಪೇಂದ್ರ 'ರಿಯಲ್ ಅಭಿಮಾನಿ'ಯ ಪವರ್ ಇದು

ಸದ್ಯ ಉಪೇಂದ್ರ 'ಹೋಮ್ ಮಿನಿಸ್ಟರ್' ಹೆಸರಿನಲ್ಲಿ ಒಂದು ಸಿನಿಮಾ ಮಾಡುತ್ತಿದ್ದು, ಇಂದು ಈ ಚಿತ್ರದ ಮುಹೂರ್ತ ಕಾರ್ಯಕ್ರಮ ಸರಳವಾಗಿ ನಡೆದಿದೆ. ಆರ್ ಆರ್ ನಗರದ ಸುಬ್ರಮಣ್ಯ ಸ್ವಾಮಿ ದೇವಾಲಯದಲ್ಲಿ ಸಿನಿಮಾದ ಪೂಜೆ ನಡೆದಿದೆ. ಅಂದಹಾಗೆ, ಉಪೇಂದ್ರ ಅವರ ಈ ಹೊಸ ಸಿನಿಮಾದ ಬಗ್ಗೆ ನಮಗೆ ಸಿಕ್ಕಿರುವ ಮಾಹಿತಿಗಳು ಇಲ್ಲಿದೆ ಓದಿ...

ಸರಳವಾಗಿ ಮುಹೂರ್ತ

ಉಪೇಂದ್ರ ಅವರ ಹೊಸ ಸಿನಿಮಾ 'ಹೋಮ್ ಮಿನಿಸ್ಟರ್' ಚಿತ್ರದ ಪೂಜೆ ಇಂದು ಬೆಂಗಳೂರಿನ ಆರ್ ಆರ್ ನಗರದ ಸುಬ್ರಮಣ್ಯ ಸ್ವಾಮಿ ದೇವಾಲಯದಲ್ಲಿ ಸರಳವಾಗಿ ನಡೆಯಿತು. ಕಾರ್ಯಕ್ರಮದಲ್ಲಿ ಉಪೇಂದ್ರ, ಪ್ರಿಯಾಂಕ ಉಪೇಂದ್ರ ಮತ್ತು ಚಿತ್ರತಂಡ ಭಾಗಿಯಾಗಿತ್ತು.

ತೆಲುಗು ನಿರ್ದೇಶಕ

ಉಪೇಂದ್ರ ಅವರ ಜೊತೆ 'ನಾಗಾರ್ಜುನ' ಎಂಬ ಸಿನಿಮಾ ಮಾಡುತ್ತಿರುವ ನಿರ್ಮಾಪಕರೇ ಈ ಚಿತ್ರಕ್ಕೂ ಬಂಡವಾಳ ಹಾಕಿದ್ದಾರೆ. ಈ ಚಿತ್ರದ ನಿರ್ದೇಶಕರ ಹೆಸರು ಇನ್ನೂ ಬಹಿರಂಗವಾಗಿಲ್ಲ. ಆದರೆ ನಿರ್ಮಾಪಕ ಮತ್ತು ನಿರ್ದೇಶಕರಿಬ್ಬರು ತೆಲುಗು ಮೂಲದವರಂತೆ.

ಉಪೇಂದ್ರ ಅವರಿಗೋಸ್ಕರ ಈ ಹುಚ್ಚು ಅಭಿಮಾನಿ ಏನೆಲ್ಲಾ ಮಾಡಿದ್ದಾನೆ ನೋಡಿ....

ರಾಜಕೀಯದ ಕಥೆ ಇಲ್ಲ

'ಹೋಮ್ ಮಿನಿಸ್ಟರ್' ಸಿನಿಮಾದಲ್ಲಿ ರಾಜಕೀಯಕ್ಕೆ ಸಂಬಂಧಿಸಿದ ಕಥೆ ಇರುವುದಿಲ್ಲವಂತೆ. ಗಂಡನಿಗೆ ಹೆಂಡತಿಯೇ ಹೋಮ್ ಮಿನಿಸ್ಟರ್ ಆಗಿರುತ್ತಾರೆ ಎಂಬ ಕಾನ್ಸೆಪ್ಟ್ ಮೇಲೆ ಚಿತ್ರದ ಕಥೆ ಇದೆಯಂತೆ.

ಹೀರೋಯಿನ್ ಆಯ್ಕೆ ಆಗಿಲ್ಲ

ಉಪೇಂದ್ರ ಅವರ ಈ ಸಿನಿಮಾಕ್ಕೆ ಹಿರೋಯಿನ್ ಯಾರು ಎಂಬುದು ಇನ್ನೂ ಅಂತಿಮ ಆಗಿಲ್ಲ.

ಉಪೇಂದ್ರ ದಂಪತಿ ಬಗ್ಗೆ ಕಾಮೆಂಟ್ ಮಾಡಿದ ರಾಗಿಣಿ

ಎರಡು ಭಾಷೆಯಲ್ಲಿ ಸಿನಿಮಾ

'ಹೋಮ್ ಮಿನಿಸ್ಟರ್' ಸಿನಿಮಾವನ್ನು ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಮಾಡುವ ಆಲೋಚನೆ ಇದೆ ಅಂತ ಹೇಳಲಾಗುತ್ತಿದೆ.

English summary
Upendra's new movie 'Home Minister' launched today at RR nagar.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada