»   » ಉಪೇಂದ್ರ ಹೊಸ ಪಕ್ಷದ ಹೆಸರು 'ಪ್ರಜಾಕೀಯ' ಅಲ್ಲ.. ಮತ್ತೇನು..?

ಉಪೇಂದ್ರ ಹೊಸ ಪಕ್ಷದ ಹೆಸರು 'ಪ್ರಜಾಕೀಯ' ಅಲ್ಲ.. ಮತ್ತೇನು..?

Posted By:
Subscribe to Filmibeat Kannada

ನಟ ಉಪೇಂದ್ರ ಪ್ರಜಾಕಾರಣ, ಪ್ರಜಾಕೀಯ, ಪ್ರಜಾನೀತಿ ಅಂಶಗಳೊಂದಿಗೆ ಹೊಸ ಪಕ್ಷ ಸ್ಥಾಪಿಸಿದ್ದರು. ಪ್ರಸ್ತುತ ಸಮಾಜದ ವ್ಯವಸ್ಥೆ ಬದಲಾಗುತ್ತದೆ ಎಂಬ ಆಶಾವಾದದೊಂದಿಗೆ ಹೊರಟಿರುವ ಉಪ್ಪಿಗೆ ದೊಡ್ಡ ಮಟ್ಟದ ಬೆಂಬಲ ಸಿಕ್ಕಿದೆ.

ಉಪ್ಪಿಯ 'ಪ್ರಜಾಕೀಯ'ದ ಬಗ್ಗೆ ಶಿವಣ್ಣ ಏನ್ ಹೇಳಿದ್ದಾರೆ ನೋಡಿ..!

ಉಪೇಂದ್ರ ಅವರ ಹೊಸ ಪಕ್ಷದ ಹೆಸರು 'ಪ್ರಜಾಕೀಯ' ಎಂದು ಎಲ್ಲೆಡೆ ಸುದ್ದಿ ಆಗಿದೆ. ಆದ್ರೆ, ಉಪ್ಪಿ ಇದುವರೆಗೆ ತಮ್ಮ ಪಕ್ಷದ ಹೆಸರು 'ಪ್ರಜಾಕೀಯ' ಎಂದು ಅಧಿಕೃತವಾಗಿ ಹೇಳಿಲ್ಲ. ಇದರ ನಡುವೆ ಸದ್ಯದ ಮಾಹಿತಿಯ ಪ್ರಕಾರ ಉಪ್ಪಿ ತಮ್ಮ ಹೊಸ ಪಕ್ಷಕ್ಕೆ 'ಉತ್ತಮ ಪ್ರಜಾಪಾರ್ಟಿ' ಎಂಬ ಹೆಸರು ಇಟ್ಟಿದ್ದಾರಂತೆ.

ಪ್ರಜಾಕೀಯ, ಪ್ರಜಾಕಾರಣ, ಪ್ರಜಾನೀತಿ ಅಂಶದಲ್ಲಿ ಉಪೇಂದ್ರ ಹೊಸ ಪಕ್ಷ

Upendra's political party named as 'Uthama Praja Party'?

ಉಪೇಂದ್ರ ತಮ್ಮ ಪಕ್ಷದ ಹೆಸರಿನ ಬಗ್ಗೆ ಆಪ್ತರೊಂದಿಗೆ ಮಾತುಕತೆ ನಡೆಸಿದ್ದು, ಪಕ್ಷಕ್ಕೆ 'ಉತ್ತಮ ಪ್ರಜಾಪಾರ್ಟಿ' ಎಂಬ ಹೆಸರು ಸೂಕ್ತವಾಗಿರುತ್ತದೆ ಎಂಬ ನಿರ್ಧಾರವನ್ನು ಕೈಗೊಂಡಿದ್ದಾರಂತೆ. ಸದ್ಯ, ಉಪೇಂದ್ರ ಹೊಸ ಪಕ್ಷದ ಹೆಸರು 'ಉತ್ತಮ ಪ್ರಜಾಪಾರ್ಟಿ' ಎಂಬ ಸುದ್ದಿ ಇದ್ದರೂ ಉಪ್ಪಿ ಬಾಯಿಂದ ಆ ಹೆಸರು ಬಂದ ಮೇಲೆ ಎಲ್ಲರಿಗೂ ಸಮಾಧಾನ.

English summary
According to the source, Real Star Upendra's political party named as 'Uthama Praja Party'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada