ಕಾವೇರಿ ವಿವಾದ ಅಂತ್ಯಕ್ಕೆ ಉಪೇಂದ್ರ ನೀಡಿದ್ದ ರಿಯಲಿಸ್ಟಿಕ್ 'H20' ಫಾರ್ಮುಲಾ.!

By Harshitha

ಕನ್ನಡ ನಾಡಿನ ಜೀವ ನದಿ ಕಾವೇರಿ. ಕನ್ನಡಿಗರ ಪಾಲಿನ ಅಮೃತವಾಗಿರುವ ಈ ಕಾವೇರಿ ನೀರನ್ನ ತಮಿಳು ನಾಡಿಗೆ ಹರಿಸುತ್ತಿರುವುದನ್ನು ವಿರೋಧಿಸಿ ರೈತರು, ಕನ್ನಡ ಪರ ಸಂಘಟನೆಗಳು, ಜನಸಾಮಾನ್ಯರು ನಡೆಸುತ್ತಿರುವ ಪ್ರತಿಭಟನೆಗಳು ಒಂದಾ, ಎರಡಾ...ಕಾವೇರಿ ವಿವಾದದಿಂದಾಗಿ ಬೆಂಗಳೂರಿನಲ್ಲಿ ಹಿಂಸಾಚಾರ ಕೂಡ ಭುಗಿಲೆದ್ದಿತ್ತು.

ಹಾಗ್ನೋಡಿದ್ರೆ, ಕಾವೇರಿ ನದಿ ನೀರು ಹಂಚಿಕೆ ವಿವಾದ ಈಗಿನದ್ದಲ್ಲಾ. ದಶಕಗಳಿಂದ್ಲೂ ಕಾವೇರಿಗಾಗಿ ಉಭಯ ರಾಜ್ಯಗಳಲ್ಲಿ ರಕ್ತದೋಕುಳಿಯೇ ಹರಿದಿದೆ. ಇದೆಲ್ಲವನ್ನ ಗಮನದಲ್ಲಿ ಇಟ್ಟುಕೊಂಡು ವರ್ಷಗಳ ಹಿಂದೆಯೇ ಕಾವೇರಿ ವಿವಾದಕ್ಕೆ ಶುಭಂ ಹಾಡಲು ರಿಯಲ್ ಸ್ಟಾರ್ ಉಪೇಂದ್ರ ಒಂದು ಫಾರ್ಮುಲಾ ಹುಡುಕಿದ್ರು. ಅದೇ 'H20'.

ಜೀವನದಿ ಕಾವೇರಿಯನ್ನ ಹೆಣ್ಣಿಗೆ ಹೋಲಿಸಿ, ತವರು ನೆಲದ ಬೆಸುಗೆಗೆ ಪ್ರೀತಿಯ ಲೇಪನ ಮಾಡಿ, ಪಕ್ಕಾ ಕಮರ್ಶಿಯಲ್ ಆದ 'H20' ಚಿತ್ರವನ್ನ ಕ್ರಿಯೇಟ್ ಮಾಡಿದ್ದ ಉಪೇಂದ್ರ ಪರಿಕಲ್ಪನೆಯೇ ಅದ್ಭುತ. ಇಷ್ಟಾದರೂ 'H20' ಸಿನಿಮಾ ತೆರೆಕಂಡಾಗ ಗಲಾಟೆ ಆಗಿತ್ತು. ವಿವಾದ ಏನೇ ಇರಲಿ, ಸಿನಿಮಾದ ಮೂಲಕ ಉಪೇಂದ್ರ ನೀಡಿರುವ ಫಾರ್ಮುಲಾ ಮಾತ್ರ ರಿಯಲಿಸ್ಟಿಕ್.!

ಮಂಡ್ಯದ ಗೌಡ ಸಖತ್ತಾಗಿಲ್ವಾ?

ಮಂಡ್ಯದ ಗೌಡ ಸಖತ್ತಾಗಿಲ್ವಾ?

''ನಾನು, ನಂದು ಅಂತ ಸ್ವಾರ್ಥ ಬಿಟ್ಟು, ನನಗೆ ಕೆಟ್ಟದ್ದಾದರೂ ಪರ್ವಾಗಿಲ್ಲ. ಬೇರೆಯವರಿಗೆಲ್ಲಾ ಒಳ್ಳೆಯದಾಗಲಿ ಅಂತ ಒಳ್ಳೆ ಮನಸ್ಸಿನಿಂದ ನೋಡಿದರೆ, ಎಲ್ಲರೂ ಸುಂದರವಾಗಿ ಕಾಣ್ತಾರೆ. ಯಾರೂ ವಿಕಾರವಾಗಿ ಕಾಣಲ್ಲ. ಮಂಡ್ಯದ ಗೌಡ ನೋಡೋಕೆ ಸಖತ್ತಾಗಿಲ್ವಾ?'' ಅಂತ ಸಕ್ಕರೆ ನಾಡಿನ ಜನತೆಯ ಹೃದಯವೈಶಾಲ್ಯತೆ ಬಗ್ಗೆ 'H20' ಚಿತ್ರದಲ್ಲಿ ಡೈಲಾಗ್ ಹೇಳಿರುವುದು ಇದೇ ಉಪೇಂದ್ರ. [ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ: ಉಪೇಂದ್ರ ಕೊಟ್ಟ ಸೂಪರ್ ಸುಪ್ರೀಂ ಐಡಿಯಾ!]

ರಾಜಕಾರಣಿಗಳು ಪಾಪಿ

ರಾಜಕಾರಣಿಗಳು ಪಾಪಿ

ಶಾಂತಿ-ಸೌಹಾರ್ದತೆ ಇಂದ ಇರುವ ಎರಡು ಹಳ್ಳಿಗಳ (ರಾಜ್ಯ) ಮಧ್ಯೆ ವಿಷದ ಬೀಜ ಬಿತ್ತುವವರಿಗೆ (ರಾಜಕಾರಣಿ) ಪಾಪಿ, ಪುಢಾರಿ, ಕಿರಿಕ್ ಅಂತಲೇ ಉಪ್ಪಿ ತಮ್ಮ ಸಿನಿಮಾದಲ್ಲಿ ಮೂದಲಿಸಿದ್ದಾರೆ.

ಕೊಳಕು ರಾಜಕೀಯ

ಕೊಳಕು ರಾಜಕೀಯ

ಪ್ರೀತಿ ಎನ್ನುವ ಮಧುರ ಪ್ರೇಮದ ಅನುಭವನ್ನು ಸವಿಯುವಾಗಲೇ ಮಧ್ಯದಲ್ಲಿ ಪಾಪಿ ರಾಜಕೀಯದ ಬೆಂಕಿ ಹೊತ್ತಿಕೊಳ್ಳುತ್ತದೆ. 'ಕಿರಿಕ್' ರಾಜಕೀಯಕ್ಕೆ ಸಿಲುಕಿ ಕಾವೇರಿ ಎರಡು ಹಳ್ಳಿಯ ನಾಯಕರ ನಡುವೆ ಹೇಗೆ ನರಳುತ್ತಾಳೆ ಎಂಬುದೇ 'H20' ಚಿತ್ರದ ಕಥಾಹಂದರ.

ವಾಸ್ತವಕ್ಕೆ ಹತ್ತಿರವಾದ ಡೈಲಾಗ್ಸ್

ವಾಸ್ತವಕ್ಕೆ ಹತ್ತಿರವಾದ ಡೈಲಾಗ್ಸ್

ಕಾವೇರಿ ಹೆಸರು ಕೇಳಿದ ಕೂಡಲೆ ಊರಿನ ಜನ ಸೆಂಟಿಮೆಂಟಲ್ ಫೂಲ್ಸ್ ಆಗ್ತಾರೆ. ಹೀಗಾಗಿ ಕಾವೇರಿಯನ್ನ ನಿನ್ನ ಬುಟ್ಟಿಗೆ ಹಾಕೊಂಬಿಟ್ರೆ, ಇಡೀ ಊರಿನ ಜನ ನಿನ್ನ ಮಾತು ಕೇಳ್ತಾರೆ'' - ವೈರಮುತ್ತುಗೆ ಪಾಪಿ ಹೇಳಿಕೊಡುವ ಈ ಮಾತು ವಾಸ್ತವಕ್ಕೆ ಹತ್ತಿರ ಅಂತ ನಿಮಗೆ ಅನಿಸಲ್ವಾ?

ಬಿಡಬೇಡ ಬಿಡಬೇಡ ಬಿಡಬಿಡಬಿಡ ಬಿಡಬೇಡ...

ಬಿಡಬೇಡ ಬಿಡಬೇಡ ಬಿಡಬಿಡಬಿಡ ಬಿಡಬೇಡ...

ಇಂದು ತಮಿಳುನಾಡಿಗೆ ಕಾವೇರಿ ನೀಡು 'ಬಿಡಬೇಡಿ' ಎಂಬ ಕೂಗು ಕೇಳಿಬರುತ್ತಿದೆ. ಅದರಂತೆಯೇ 'H20' ಸಿನಿಮಾದಲ್ಲಿ ಕಾವೇರಿಯನ್ನ ಬಿಟ್ಟುಕೊಡಲು ಸಿದ್ಧವಿಲ್ಲದ ಉಭಯ ನಾಯಕರು (ಉದಯ್ ಶಂಕರ್ ಮತ್ತು ವೈರಮುತ್ತು) ಹಾಡುವ ''ಬಿಡಬೇಡ ಬಿಡಬೇಡ ಬಿಡಬಿಡಬಿಡ ಬಿಡಬೇಡ...'' ಹಾಡನ್ನೊಮ್ಮೆ ನೋಡ್ಕೊಂಡ್ ಬನ್ನಿ.....

'ಪಾಪಿ' ಚಿರಾಯು.!

'ಪಾಪಿ' ಚಿರಾಯು.!

'ಪಾಪಿ' ರಾಜಕಾರಣ ಎಲ್ಲಿಯವರೆಗೆ ಇರುತ್ತೋ, ಅಲ್ಲಿಯವರೆಗೂ 'ಕಿರಿಕ್' ಇದ್ದದ್ದೇ ಎಂಬ ಸತ್ಯ ಕೂಡ ಸಿನಿಮಾದಲ್ಲಿ ತೋರಿಸಲಾಗಿದೆ.

ಕ್ಲೈಮ್ಯಾಕ್ಸ್ ನಲ್ಲಿ ಏನಾಗುತ್ತೆ?

ಕ್ಲೈಮ್ಯಾಕ್ಸ್ ನಲ್ಲಿ ಏನಾಗುತ್ತೆ?

ಸಯಾಮಿ ಅವಳಿಗಳ ಪೈಕಿ ಒಬ್ಬಳಿಗೆ ಬದುಕಲು ಇಷ್ಟವಿದ್ದರೆ, ಇನ್ನೊಬ್ಬಳಿಗೆ ಸಾಯಲು ಇಷ್ಟ. (ಸೂಕ್ಷ್ಮವಾಗಿ ಹೇಳ್ಬೇಕು ಅಂದ್ರೆ, ಕರ್ನಾಟಕ ಹಾಗೂ ತಮಿಳುನಾಡಿನ ಸಾಂಕೇತಿಕ ರೂಪವೇ ಸಯಾಮಿ ಅವಳಿಗಳು) ಇಬ್ಬರಲ್ಲಿ ಒಬ್ಬಳು ಸತ್ತರೆ, ಮತ್ತೊಬ್ಬಳು ಸಾಯಲೇಬೇಕು. ಕಾವೇರಿ ಪರಿಸ್ಥಿತಿ ಕೂಡ ಇದೇ ಅಲ್ವೇ.!?

ಶಾಂತಿ ಸಂದೇಶ

ಶಾಂತಿ ಸಂದೇಶ

''ಊರಿಗೆ ಊರೇ ಕಾವೇರಿ ಬೇಕು ಅಂತ ಒಬ್ಬರಿಗೆ ಒಬ್ಬರು ಹೊಡೆದಾಡಿಕೊಂಡು ಸಾಯ್ತೀರಲ್ಲಾ? ಅದರಿಂದ ಏನು ಪ್ರಯೋಜನ ಹೇಳಿ...ಹೆಣಗಳು ಉರುಳ್ತಾವೆ ಅಷ್ಟೇ'' ಎಂಬ ಶಾಂತಿ ಸಂದೇಶ ಕೂಡ ಸಿನಿಮಾದಲ್ಲಿ ಇದೆ.

ಉಪೇಂದ್ರ ನೀಡಿದ ಫಾರ್ಮುಲಾ ಏನು?

ಉಪೇಂದ್ರ ನೀಡಿದ ಫಾರ್ಮುಲಾ ಏನು?

''ಎಲ್ಲಾ ಸಮಸ್ಯೆಗೆ ಪ್ರಕೃತಿನೇ ಕಾರಣ. ಅದಕ್ಕೆ ಪರಿಹಾರ ಕೂಡ ಪ್ರಕೃತಿನೇ. ನೀವೆಲ್ಲಾ ಸೇರಿ ಪ್ರಕೃತಿನ ಉಳಿಸಿ. ಕಾವೇರಿ ತುಂಬಿ ಹರಿದು ನಿಮ್ಮನ್ನು ಉಳಿಸುತ್ತಾಳೆ'' - ನೀರಿನ ಸಮಸ್ಯೆಗೆ ರಿಯಲ್ ಸ್ಟಾರ್ ಉಪೇಂದ್ರ ನೀಡಿರುವ ರಿಯಲಿಸ್ಟಿಕ್ ಫಾರ್ಮುಲಾ ಇದೇ.

'H20' ಚಿತ್ರಕ್ಕೆ ಉಪೇಂದ್ರ ನಿರ್ದೇಶಕ ಅಲ್ಲ.!

'H20' ಚಿತ್ರಕ್ಕೆ ಉಪೇಂದ್ರ ನಿರ್ದೇಶಕ ಅಲ್ಲ.!

'H20' ಪರಿಕಲ್ಪನೆ ಉಪೇಂದ್ರ ರವರದ್ದು ನಿಜ. ಆದ್ರೆ, ಚಿತ್ರಕ್ಕೆ ಉಪ್ಪಿ ಆಕ್ಷನ್ ಕಟ್ ಹೇಳಿರ್ಲಿಲ್ಲ. ಕಥೆ-ಚಿತ್ರಕಥೆ-ಸಂಭಾಷಣೆ-ಸಾಹಿತ್ಯ ಬರೆದು ಅಭಿನಯಿಸಿದ್ದರು. 'H20' ಚಿತ್ರದ ನಿರ್ದೇಶನ ಮಾಡಿದವರು ಎನ್.ಲೋಕನಾಥ್ ಮತ್ತು ರಾಜಾರಾಮ್.

More from Filmibeat

English summary
Kannada Actor, Director Real Star Upendra had given a realistic solution to Cauvery Water Dispute, a decade back in his movie 'H2O'. Here is a small article on the movie 'H20' and its moral.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X