ಹೀರೊ ಆಗಿ ಚಿತ್ರರಂಗಕ್ಕೆ ಉಪೇಂದ್ರ ಮಗ ಎಂಟ್ರಿ; ಕಾಶ್ಮೀರದಲ್ಲಿ ಸಿನಿಮಾ ಚಿತ್ರೀಕರಣ

ಸ್ಟಾರ್ ನಟರ ಮಕ್ಕಳು, ಮೊಮ್ಮಕ್ಕಳು ಚಿತ್ರರಂಗ ಪ್ರವೇಶಿಸುವುದು ಹೊಸದೇನು ಅಲ್ಲ. ಇದೀಗ ನಟ, ನಿರ್ದೇಶಕ ರಿಯಲ್ ಸ್ಟಾರ್ ಉಪೇಂದ್ರ ಪುತ್ರ ಆಯುಷ್ ಹೀರೊ ಆಗಿ ಚಿತ್ರರಂಗಕ್ಕೆ ಬರ್ತಿದ್ದಾನೆ. ಉಪೇಂದ್ರ- ಪ್ರಿಯಾಂಕಾ ಉಪೇಂದ್ರ ಅವರ ಪುತ್ರಿ ಐಶ್ವರ್ಯಾ ಬಾಲನಟಿಯಾಗಿ 'ದೇವಕಿ' ಎಂಬ ಚಿತ್ರದಲ್ಲಿ ನಟಿಸಿದ್ದಳು. ಈಗ ಪುತ್ರನ ಸರದಿ.

ಕಳೆದ ವರ್ಷ ಆಯುಷ್ ಹುಟ್ಟುಹಬ್ಬದ ಸಂಭ್ರಮದಲ್ಲಿ ಮಂತ್ರಾಲಯದಲ್ಲಿ ಚಿತ್ರದ ಸ್ಕ್ರಿಪ್ಟ್ ಪೂಜೆ ನಡೆದಿತ್ತು. ಇದೀಗ ಕಾಶ್ಮೀರದಲ್ಲಿ ಚಿತ್ರದ ಚಿತ್ರೀಕರಣ ನಡೀತಿದೆ. 'ಮೊದಲಾಸಲ' ಸಿನಿಮಾ ಖ್ಯಾತಿಯ ಪುರುಷೋತ್ತಮ ಸೂರಿ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಹೀರ ಆಗಲು ಬೇಕಾದ ಎಲ್ಲಾ ತಯಾರಿ ಮಾಡಿಕೊಂಡೇ ಆಯುಷ್ ಬಣ್ಣ ಹಚ್ಚಿದ್ದಾನೆ. ಕಾಶ್ಮೀರದಲ್ಲೇ ಚಿತ್ರದ ಮುಹೂರ್ತ ನೆರವೇರಿದ್ದು, ಅಲ್ಲಿಯೇ 25 ದಿನಗಳ ಮೊದಲ ಹಂತದ ಚಿತ್ರೀಕರಣ ಕೂಡ ನಡೆದಿದೆ.

Upendra s Son Aayush Set for Hero Debut Romantic Love Story Shot in Kashmir Creates Buzz

ಶ್ರೀಕಲ್ಪವೃಕ್ಷ ಮೂವೀ ಮೇಕರ್ಸ್ ಬ್ಯಾನರ್ ಅಡಿಯಲ್ಲಿ ಅಭಿಷೇಕ್ ಎನ್ ಸಿರಿವಂತ್ ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಇನ್ನು ಹೆಸರಿಡದ ಚಿತ್ರವನ್ನು ಛಾಯಾಗ್ರಾಹಕ ಎಚ್ ಸಿ ವೇಣು ಸೆರೆ ಹಿಡಿಯುತ್ತಿದ್ದಾರೆ. ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯಾ ಹಾಡುಗಳಿಗೆ ಟ್ಯೂನ್ ಹಾಕುತ್ತಿದ್ದಾರೆ. ಮೇಕಿಂಗ್ ಹಂತದಲ್ಲೇ ಇದೊಂದು ರೊಮ್ಯಾಂಟಿಕ್ ಲವ್ ಸ್ಟೋರಿ ಎನ್ನುವುದು ಗೊತ್ತಾಗುತ್ತಿದೆ. ಶೀಘ್ರದಲ್ಲೇ ಚಿತ್ರದ ಟೈಟಲ್ ಹಾಗೂ ಇನ್ನುಳಿತ ತಾರಾಗಣದ ಮಾಹಿತಿ ಸಿಗಲಿದೆ.

ಕಾಶ್ಮೀರದಲ್ಲಿ ಸಿನಿಮಾ ಚಿತ್ರೀಕರಣ ಸೆಟ್‌ಗೆ ಉಪೇಂದ್ರ ಹಾಗೂ ಪತ್ನಿ ಪ್ರಿಯಾಂಕ ಭೇಟಿ ನೀಡಿದ್ದಾರೆ. ಮಗನಿಗೆ ಒಂದಷ್ಟು ಸಲಹೆಗಳನ್ನು ನೀಡಿದ್ದಾರೆ. ಕಾಶ್ಮೀರದ ಕೊರೆಯುವ ಚಳಿಯಲ್ಲಿ, ಹಿಮಚ್ಚಾದಿತ ಲೊಕೇಶನ್‌ಗಳನ್ನು ದೃಶ್ಯಗಳನ್ನು ಸೆರೆಹಿಡಿಯಲಾಗ್ತಿದೆ. ಹಾಡುಗಳನ್ನು ಕೂಡ ಅಲ್ಲೇ ಚಿತ್ರೀಕರಣ ಮಾಡಿದ್ದಾರೆ. ಚಿತ್ರದ ನಾಯಕಿ ಯಾರು? ಬೇರೆ ಯಾರೆಲ್ಲಾ ಚಿತ್ರದಲ್ಲಿ ನಟಿಸಿದ್ದಾರೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿದೆ.

Upendra s Son Aayush Set for Hero Debut Romantic Love Story Shot in Kashmir Creates Buzz

ಆಯುಷ್ ಹಾಗೂ ಸಹೋದರಿ ಐಶ್ವರ್ಯ ಇಬ್ಬರೂ ಸಿನಿಮಾ ಮೇಕಿಂಗ್ ಬಗ್ಗೆ ಕಲಿಯುತ್ತಿದ್ದಾರೆ. ತಮ್ಮ ಮೊದಲ ಚಿತ್ರದ ಸ್ಕ್ರಿಪ್ಟ್ ವಿಚಾರದಲ್ಲಿ ಕೂಡ ಆಯುಷ್ ಹೆಚ್ಚಿನ ಕೇರ್ ತಗೊಂಡಿದ್ದಾರೆ. ಉಪೇಂದ್ರ ಹಾಗೂ ಪ್ರಿಯಾಂಕ ಚಿತ್ರದ ವಿಚಾರದಲ್ಲಿ ಯಾವುದೇ ಹಸ್ತಕ್ಷೇಪ ಮಾಡದೇ ಬೆಂಬಲವಾಗಿ ನಿಂತಿದ್ದಾರೆ.

ಉಪೇಂದ್ರ ಹಾಗೂ ಪ್ರಿಯಾಂಕ ದಶಕಗಳಿಂದ ಚಿತ್ರರಂಗದಲ್ಲಿ ಆಕ್ವೀವ್ ಆಗಿದ್ದಾರೆ. ಮದುವೆ ನಂತರ ಕೂಡ ಪ್ರಿಯಾಂಕ ಒಂದಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಮಹಿಳಾ ಪ್ರಧಾನ ಸಿನಿಮಾಗಳಲ್ಲಿ ಮಿಂಚಿದ್ದಾರೆ. ಮುಂದೆ ನಿರ್ದೇಶಕಿ ಆಗುವ ಕನಸು ಕಂಡಿದ್ದಾರೆ. ಸದ್ಯಕ್ಕೆ ಆಯುಷ್ ಸಿನಿ ಆರಂಗೇಟ್ರಂಗಾಗಿ ಇಡೀ ಕುಟುಂಬ ಕಾಯ್ತಿದೆ. ಅಪ್ಪನ ಹೆಸರು ಹೇಳಿಕೊಳ್ಳದೇ ಚಿತ್ರರಂಗದಲ್ಲಿ ಗುರ್ತಿಸಿಕೊಳ್ಳಲು ಇಷ್ಟಪಡುವುದಾಗಿ ಆಯುಷ್ ಕೆಲ ದಿನಗಳ ಹಿಂದೆ ಹೇಳಿದ್ದು ವೈರಲ್ ಆಗಿತ್ತು. ತಂದೆ ನಿರ್ದೇಶನದಲ್ಲೇ ಆಯುಷ್ ಚಿತ್ರರಂಗಕ್ಕೆ ಎಂಟ್ರಿ ಆಗ್ತಾನೆ ಎನ್ನುವ ಊಹಾಪೋಹ ಕೇಳಿಬಂದಿತ್ತು. ಆದರೆ ಅದು ಸುಳ್ಳಾಗಿದೆ.

ಅಪ್ಪನ ಜೊತೆ ಸಿನಿಮಾಗಳಲ್ಲಿ ನಟಿಸೋಕೆ ಕೆಲವರು ಸಲಹೆ ನೀಡುತ್ತಾರೆ. ಆದರೆ ಪ್ರತಿಭೆ ಇದ್ದವರು ಇಲ್ಲಿ ಉಳಿದುಕೊಳ್ಳುತ್ತಾರೆ. ನಾನು ಕಷ್ಟಪಟ್ಟು ಯಾರ ಬೆಂಬಲ ಇಲ್ಲದೇ ಚಿತ್ರರಂಗಕ್ಕೆ ಬರ್ತೀನಿ. ಸೊನ್ನೆಯಿಂದ ಶುರು ಮಾಡ್ತೀನಿ. ಕಾಲೇಜಿನಲ್ಲೇ ಕೆಲ ಶಾರ್ಟ್‌ ಫಿಲ್ಮ್ ಮಾಡ್ತಿದ್ದೀನಿ. ಅವಕಾಶ ಸಿಕ್ಕರೆ ಕಂಡಿತ ನನ್ನ ಶ್ರಮ ಹಾಕುತ್ತೇನೆ. ನಿರ್ದೇಶಕ ಆಗ್ತೀನೋ ಇಲ್ಲವೋ ಗೊತ್ತಿಲ್ಲ. ಬರವಣಿಗೆಯಲ್ಲಿ ಬಹಳ ಆಸಕ್ತಿ ಇದೆ ಎಂದು ಹೇಳಿದ್ದು ಸುದ್ದಿ ಆಗಿತ್ತು. ಇತ್ತೀಚೆಗೆ ಉಪೇಂದ್ರ ನಟನೆಯ '45' ಸಿನಿಮಾ ತೆರೆಗೆ ಬಂದಿತ್ತು. 'ಭಾರ್ಗವ' ಹಾಗೂ 'ನೆಕ್ಸ್ಟ್ ಲೆವೆಲ್' ಚಿತ್ರಗಳಲ್ಲಿ ನಟಿಸ್ತಿದ್ದಾರೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X