ಇದು ನೂರಕ್ಕೆ ನೂರರಷ್ಟು ರಿಯಲ್ ಸ್ಟಾರ್ ಉಪೇಂದ್ರ ಅಲ್ಲಾ.!

ಕೆಲವು ವರ್ಷಗಳ ಹಿಂದೆ ಈ ಫೋಟೋ ಸಿಕ್ಕಾಪಟ್ಟೆ ವೈರಲ್ ಆಗಿತ್ತು. 2015ರಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಅವರು 'ಉಪ್ಪಿ-2' ಎಂಬ ಸಿನಿಮಾವನ್ನ ನಿರ್ದೇಶನ ಮಾಡಿ, ನಟಿಸಿದ್ದರು. ಅದಕ್ಕೂ ಮುಂಚೆಯೇ ಈ ಫೋಟೋ 'ಉಪ್ಪಿ-2' ಸಿನಿಮಾದ ಪೋಸ್ಟರ್ ಎಂದು ಬಿಂಬಿತವಾಗಿತ್ತು.

ಆಮೇಲೆ ಅದು ಸುಳ್ಳಾಯಿತು. ಏಕಂದ್ರೆ, ಸ್ವತಃ ಉಪೇಂದ್ರ ಅವರೇ 'ಉಪ್ಪಿ-2' ಚಿತ್ರದ ಪೋಸ್ಟರ್ ರಿಲೀಸ್ ಮಾಡಿದ್ದರು. ಇದೀಗ, ಮೂರ್ನಾಲ್ಕು ವರ್ಷದ ನಂತರ ಈ ಫೋಟೋ ಮತ್ತೆ ಸುದ್ದಿಯಾಗಿದೆ.

ನಟ ಉಪೇಂದ್ರ ಅವರೇ ಈ ಫೋಟೋದ ಬಗ್ಗೆ ಮಾತನಾಡಿದ್ದಾರೆ. ಟ್ವಿಟ್ಟರ್ ನಲ್ಲಿ ಈ ಫೋಟೋ ಶೇರ್ ಮಾಡಿರುವ ಉಪೇಂದ್ರ 'ನಾನವನಲ್ಲ..... ಈ ಚಿತ್ರವನ್ನು ನೋಡಿ ಎಲ್ಲರೂ ಇದು ಉಪ್ಪಿಯ ಚಿತ್ರ ಎಂದು ಕೊಂಡಿದ್ದರು, ನಾನೂ ಇದು ನನ್ನ ಮುಖ ಇಟ್ಟುಕೊಂಡು ಗ್ರಾಫಿಕ್ಸ ಮಾಡಿರಬಹುದು ಎಂದು ಧಿಗ್ಬ್ರಮೆಗೊಂಡಿದ್ದೆ...'' ಎಂದು ಹೇಳಿದ್ದಾರೆ.

Upendra shares cockroach sudhi photo

'ಈಗ ಇದರ ನಿಜವಾದ ಸೃಷ್ಟಿಕರ್ತನನ್ನು ಭೇಟಿಯಾದೆ. ಆತ ನಮ್ಮ ಕಾಕ್ರೋಚ್ ಸುಧಿ..' ಎಂದು ಟ್ವೀಟ್ ಮಾಡಿದ್ದಾರೆ.ಹೌದು, ಸ್ವತಃ ಉಪೇಂದ್ರ ಅವರೇ ಹೇಳುವ ಪ್ರಕಾರ, ಈ ಫೋಟೋ ಕಾಕ್ರೋಚ್ ಸುಧಿ ಅವರದ್ದು.

'ಟಗರು' ಸಿನಿಮಾದಲ್ಲಿ ಕಾಕ್ರೋಚ್ ಎಂಬ ಪಾತ್ರದಲ್ಲಿ ಸುಧಿ ಕಾಣಿಸಿಕೊಂಡಿದ್ದರು. ತಮ್ಮ ವಿಭಿನ್ನ ಪಾತ್ರಕ್ಕಾಗಿ ಜನಮನ್ನಣೆ ಕೂಡ ಗಳಿಸಿಕೊಂಡಿದ್ದರು. ಅದಕ್ಕು ಮುಂಚೆ ಕೂಡ ಹಲವು ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಆದ್ರೆ, ಹೆಚ್ಚು ಫೇಮಸ್ ಆಗಿದ್ದು ಕಾಕ್ರೋಚ್ ಮೂಲಕ.

More from Filmibeat

English summary
Kannada actor-politician upendra has taken his twitter account to share cockroach sudhi old photo.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X