For Quick Alerts
  ALLOW NOTIFICATIONS  
  For Daily Alerts

  ಅಮೆರಿಕನ್ನಡಿಗರಿಗೆ ಉಪ್ಪಿ2 ಟೇಸ್ಟು ತೋರಿಸಲಿದ್ದಾರೆ ಉಪ್ಪಿ

  By ಜೀವನರಸಿಕ
  |

  ಉಪ್ಪಿ ಮುಂದಿನ ಸಿನಿಮಾ ಯಾವ್ದು? ಉಪೇಂದ್ರ ಏನ್ಮಾಡ್ತಿದ್ದಾರೆ ಅಂತ ಜನ್ರು ತಲೆ ಕೆಡಿಸಿಕೊಳ್ತಿರೋವಾಗ್ಲೇ ಉಪ್ಪಿ ಶ್ರೀಮಂತರ ನಾಡಿಗೆ ಕಾಲಿಡ್ತಿದ್ದಾರೆ. ಶ್ರೀಮಂತರಿಗೆ ತನ್ನ ಬುದ್ಧಿವಂತಿಕೆಯ ಪರಿಚಯ ಮಾಡಿಕೊಡೋಕೆ ಹೊರಡ್ತಿದ್ದಾರೆ.

  ರಿಯಲ್ ಸ್ಟಾರ್ ಉಪೇಂದ್ರ ಫ್ಲೈಯಿಂಗ್ ಟು ಅಮೆರಿಕ. ಯಸ್, ಕನ್ನಡದ ಮಾಸ್ಟರ್ಮೈಂಡ್ ನಿರ್ದೇಶಕ ಉಪ್ಪಿ ಅಮೇರಿಕಾಗೆ ಹೊರಟಿದ್ದಾರೆ. ಒಂದಿಡೀ ತಿಂಗಳು ಅಮೆರಿಕಾದಲ್ಲೇ ಉಳಿಯಲಿದ್ದಾರೆ. ಅಮೆರಿಕನ್ನರಿಗೆ ಉಪ್ಪಿ-2 ಟೇಸ್ಟನ್ನ ತೋರಿಸಲಿದ್ದಾರೆ.[ಉಪೇಂದ್ರ ಮುಂದಿನ ಪ್ರಾಜೆಕ್ಟ್ ಗುಟ್ಟು ಇನ್ನೂ ರಟ್ಟಾಗಿಲ್ಲ!]

  ಹೌದು. ರಿಯಲ್ಸ್ಟಾರ್ ಉಪ್ಪಿ ಸ್ಯಾಂಡಲ್ವುಡ್ನಲ್ಲಿ ಕೋಟಿ ಕೊಳ್ಳೆ ಹೊಡೆದ ಚಿತ್ರವನ್ನ ಈಗ ಅಮೆರಿಕಾದಲ್ಲಿ ರಿಲೀಸ್ ಮಾಡಿದ್ದಾರೆ. ಮಾಡೋ ಜೊತೆಗೆ ಅಲ್ಲಿನ ಮುಖ್ಯ ನಗರಗಳಲ್ಲಿ ಸ್ವತಃ ತಾವೇ ಪ್ರೇಕ್ಷಕರ ಜೊತೆ ಕುಳಿತು ಸಿನಿಮಾ ನೋಡಲಿದ್ದಾರೆ.[ಅಂಕಲ್ ಸ್ಯಾಮ್ ಅಂಗಳದಲ್ಲಿ ರಂಗಿತರಂಗ 50 ದಿನದ ಸಂಭ್ರಮ!]

  ಸೋ ಇನ್ನೊಂದು ತಿಂಗಳು ಉಪ್ಪಿಯನ್ನ ಕೇಳ್ಬೇಡಿ. ಅಮೆರಿಕಾದಲ್ಲಿ ಅಭಿಮಾನಿಗಳ ಜೊತೆ ಖುಷಿ ಖುಷಿಯಾಗಿ ಕಾಲ ಕಳೆಯಲಿದ್ದಾರೆ. ಅಮೆರಿಕಾದಲ್ಲಿರೋ ಉಪ್ಪಿ ಅಭಿಮಾನಿಗಳಿಗೆ ಇದು ಸಂಭ್ರಮದ ಸುದ್ದಿ.. ಉಪ್ಪಿ ಜೊತೆ ಪ್ರಿಯಾಂಕಾ ಕೂಡ ಪ್ರಯಾಣಿಸಲಿದ್ದಾರಾ? ಅಥವಾ ನಾಯಕಿಯರಾದ ಕ್ರಿಸ್ಟೀನಾ ಆಕ್ಟೀವಾ ಮತ್ತು ಪಾರುಲ್ ಯಾದವ್ ಕೂಡ ಹೋಗಲಿದ್ದಾರಾ? ತಿಳಿದುಬಂದಿಲ್ಲ.[ಉಪ್ಪಿದಾದಾ ಎಂಬಿಬಿಎಸ್ ಇನ್ಮುಂದೆ 'ರಿಯಲ್' ಡಾಕ್ಟರ್]

  ಅಮೆರಿಕದಲ್ಲಿ ರಂಗಿತರಂಗ ಚಿತ್ರ ತುಂಬಿದ ಚಿತ್ರಮಂದಿರಗಳಲ್ಲಿ ಪ್ರದರ್ಶಿತವಾಗಿ, ಪ್ರೇಕ್ಷಕರಿಂದ ಭಾರೀ ಸ್ಪಂದನೆ ವ್ಯಕ್ತವಾಗಿರುವ ಬೆನ್ನಲ್ಲೇ ಉಪ್ಪಿ2 ಕೂಡ ಬಿಡುಗಡೆಯಾಗುತ್ತಿರುವುದು ಅಲ್ಲಿನ ಪ್ರೇಕ್ಷಕರಲ್ಲಿ ನಿರೀಕ್ಷೆಯ ಮಟ್ಟವನ್ನು ಮತ್ತಷ್ಟು ಹೆಚ್ಚಿಸಿದೆ. ರಂಗಿತರಂಗಕ್ಕೂ ಸಿಕ್ಕ ಸ್ಪಂದನೆ ಉಪ್ಪಿ2 ಚಿತ್ರಕ್ಕೂ ಸಿಗುವುದಾ?

  English summary
  Real Star Upendra to showcase his latest Kannada movie Uppi 2 in America for one month. During this period he will be travelling to USA and will be enjoying the show sitting with Kannada audience. Recently RangiTaranga too was screened in USA and got excellent response.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X