'ಫ್ಯಾನ್ಸ್ ವಾರ್' ಬಗ್ಗೆ ರಿಯಲ್ ಸ್ಟಾರ್ ಉಪೇಂದ್ರ ರಿಯಲ್ ಮಾತು

ರಿಯಲ್ ಸ್ಟಾರ್ ಉಪೇಂದ್ರ ಮತ್ತು ಆರ್ ಚಂದ್ರು ಕಾಂಬಿನೇಷನ್ ನಲ್ಲಿ ಕಬ್ಜ ಎಂಬ ಸಿನಿಮಾ ಆರಂಭವಾಗಿದೆ. ಐ ಲವ್ ಯೂ ಸಿನಿಮಾ ಶತದಿನೋತ್ಸವ ಸಂಭ್ರಮ ಆಚರಿಸಿದರ ಉಪ್ಪಿ ಮತ್ತು ಚಂದ್ರು ಅವರು ಏಳು ಭಾಷೆಯಲ್ಲಿ ಮುಂದಿನ ಸಿನಿಮಾ ಬರಲಿದೆ ಎಂದು ಅಧಿಕೃತವಾಗಿ ಘೋಷಿಸಿದರು.

ಕಬ್ಜ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ನಲ್ಲಿ ಸ್ಯಾಂಡಲ್ ವುಡ್ ಸ್ಟಾರ್ ನಟರ ಅಭಿಮಾನಿಗಳಿಂದ ಲಾಂಚ್ ಮಾಡಿದ್ದು ವಿಶೇಷವಾಗಿತ್ತು. ದರ್ಶನ್, ಸುದೀಪ್, ಯಶ್, ಪುನೀತ್, ಶಿವಣ್ಣ ಹಾಗೂ ಇನ್ನಿತರ ನಟರ ಅಭಿಮಾನಿಗಳಿಂದ ಉಪೇಂದ್ರ ಅವರ ಹೊಸ ಚಿತ್ರದ ಪೋಸ್ಟರ್ ಅನಾವರಣ ಆಯಿತು.

ಬಳಿಕ ಈ ಬಗ್ಗೆ ಮಾತನಾಡಿದ ಉಪೇಂದ್ರ ಅವರು ಸೋಶಿಯಲ್ ಮೀಡಿಯಾದಲ್ಲಿ ನಡೆಯುವ ಫ್ಯಾನ್ಸ ವಾರ್ ಬಗ್ಗೆ ಪ್ರತಿಕ್ರಿಯಿಸಿದರು. ಹಾಗಿದ್ರೆ, ಫ್ಯಾನ್ಸ ವಾರ್ ಬಗ್ಗೆ ಉಪ್ಪಿ ಏನಂದ್ರು? ಮುಂದೆ ಓದಿ....

ಫ್ಯಾನ್ಸ್ ವಾರ್ ಇರಬೇಕು. ಆದರೆ....

ಫ್ಯಾನ್ಸ್ ವಾರ್ ಇರಬೇಕು. ಆದರೆ....

''ಫ್ಯಾನ್ಸ ವಾರ್ ಅನ್ನೋದು ಇರಬೇಕು ಆದರೆ ಅದು ದೊಡ್ಡ ಮಟ್ಟದಲ್ಲಿ ಹೋಗಬಾರದು. ಅಂತಿಮವಾಗಿ ಕನ್ನಡ ಚಿತ್ರರಂಗ ಉಳಿಯಬೇಕು. ನನ್ನ ಪ್ರಕಾರ ಒಳ್ಳೆ ಚಿತ್ರ ಬಂದಾಗ ಎಲ್ಲ ನಟರ ಅಭಿಮಾನಿಗಳು ಆ ಚಿತ್ರವನ್ನ ನೋಡ್ತಾರೆ'' ಎಂದು ಅಭಿಪ್ರಾಯಪಟ್ಟರು.

ಉಪೇಂದ್ರ ಅವರನ್ನ ಎಲ್ಲರೂ ಇಷ್ಟಪಡ್ತಾರೆ

ಉಪೇಂದ್ರ ಅವರನ್ನ ಎಲ್ಲರೂ ಇಷ್ಟಪಡ್ತಾರೆ

ಎಲ್ಲ ನಟರ ಅಭಿಮಾನಿಗಳಿಂದ ಫಸ್ಟ್ ಲುಕ್ ಲಾಂಚ್ ಮಾಡಿದರ ಬಗ್ಗೆ ಮಾತನಾಡಿದ ಆರ್ ಚಂದ್ರು ಅವರು ''ಉಪೇಂದ್ರ ಅಂದ್ರೆ ಎಲ್ಲ ನಟರ ಅಭಿಮಾನಿಗಳು ಕೂಡ ಇಷ್ಟಪಡ್ತಾರೆ. ಅದಕ್ಕಾಗಿಯೇ ಇಂತಹದೊಂದು ಪ್ಲಾನ್ ಮಾಡಿದ್ವಿ'' ಎಂದು ಸಮರ್ಥಿಸಿಕೊಂಡಿದ್ದಾರೆ.

ಫ್ಯಾನ್ಸ್ ವಾರ್ ಮತ್ತೆ ಹೆಚ್ಚಾಗಿದೆ

ಫ್ಯಾನ್ಸ್ ವಾರ್ ಮತ್ತೆ ಹೆಚ್ಚಾಗಿದೆ

ಕಳೆದ ಕೆಲವು ದಿನಗಳಿಂದ ಫ್ಯಾನ್ಸ್ ವಾರ್ ಅಷ್ಟಾಗಿ ಇರಲಿಲ್ಲ. ಆದರೆ ಇತ್ತೀಚಿನ ದಿನದಲ್ಲಿ ಮತ್ತೆ ಈ ಬೆಳವಣಿಗೆ ಹೆಚ್ಚಾಗಿದೆ. ಒಬ್ಬ ನಟನ ಸಿನಿಮಾ ಬಂದಾಗ ಇನ್ನೊಬ್ಬ ನಟನ ಅಭಿಮಾನಿಗಳು ಅಪಪ್ರಚಾರ ಮಾಡುವುದು, ಸಿನಿಮಾ ಚೆನ್ನಾಗಿಲ್ಲ, ಚಿತ್ರಮಂದಿರದಲ್ಲಿ ಜನ ಇಲ್ಲ ಎಂದು ವಿಡಿಯೋಗಳು ಪೋಸ್ಟ್ ಮಾಡುವುದು ಅತಿರೇಕವಾಗಿದೆ.

ಪ್ರತಿಷ್ಠೆಯಿಂದ ಒಳ್ಳೆ ಚಿತ್ರ ಸೋಲಬಾರದು

ಪ್ರತಿಷ್ಠೆಯಿಂದ ಒಳ್ಳೆ ಚಿತ್ರ ಸೋಲಬಾರದು

ಕೆಜಿಎಫ್, ಯಜಮಾನ, ಕುರುಕ್ಷೇತ್ರ, ಈಗ ಪೈಲ್ವಾನ್ ಸಿನಿಮಾಗಳು ಕನ್ನಡ ಚಿತ್ರರಂಗವನ್ನ ಇನ್ನೊಂದು ಹಂತಕ್ಕೆ ತೆಗೆದುಕೊಂಡು ಹೋಗುತ್ತಿದೆ. ಇಂತಹ ಸಿನಿಮಾಗಳು ಬಂದಾಗ ಎಲ್ಲ ಅಭಿಮಾನಿಗಳು ಸೇರಿ ಯಶಸ್ಸುಗೊಳಿಸಬೇಕಾಗುತ್ತೆ. ಆದರೆ, ಕೆಲವು ಅಭಿಮಾನಿಗಳು ಮಾಡುವ ಅತಿರೇಕದಿಂದ ಎಲ್ಲರಿಗೂ ಕೆಟ್ಟ ಹೆಸರು.

More from Filmibeat

English summary
Kannada actor upendra has spoke about fans war of kannada industry. then all star actors fans was released first look of kabza movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X