twitter
    For Quick Alerts
    ALLOW NOTIFICATIONS  
    For Daily Alerts

    ಉಪ್ಪಿಯ 'ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿ'ಯ ರೂಪುರೇಷೆಗಳು ಹೀಗಿವೆ!

    By Naveen
    |

    ''ಸಂಪೂರ್ಣ ಬದಲಾವಣೆ'' ಎಂಬ ವೇದ ವಾಕ್ಯದೊಂದಿಗೆ ಉಪೇಂದ್ರ ಅವರ 'ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿ' ಶುರುವಾಗಿದೆ.

    ''ಪ್ರಜಾಪ್ರಭುತ್ವ'ದಲ್ಲಿ ಪ್ರಜೆಗಳೇ ಪ್ರಭುಗಳು. ರಾಜಕೀಯ ಬದಲಾವಣೆ ನಮ್ಮ ಕಾನ್ಸೆಪ್ಟ್. ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷ ಲೋಕಾರ್ಪಣೆಗೊಳಿಸಿದ್ದೇನೆ. ಇಂದಿನಿಂದ ಕೆಪಿಜೆಪಿ ಪಕ್ಷದ ಉದಯವಾಗಿದೆ ಎಂದು ಇಂದು ಪತ್ರಿಕಾಗೋಷ್ಠಿಯಲ್ಲಿ ತಮ್ಮ ಹೊಸ ಪಕ್ಷದ ಬಗ್ಗೆ ಮಾತನಾಡಿದ ಉಪೇಂದ್ರ ತಮ್ಮ ಕನಸು ಮತ್ತು ಪಕ್ಷದ ರೂಪುರೇಷೆಗಳನ್ನು ಹಂಚಿಕೊಂಡರು.

    'ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿ' ಕಟ್ಟಿರುವ ಉಪೇಂದ್ರ, ತಮ್ಮ ಯೋಜನೆಗಳ ಬಗ್ಗೆ ಸಂಪೂರ್ಣವಾಗಿ ಮಾತನಾಡಿದ್ದಾರೆ. ಮುಂದೆ ಓದಿ...

    ಪಾರದರ್ಶಕ ವ್ಯವಸ್ಥೆ ಇರಬೇಕು

    ಪಾರದರ್ಶಕ ವ್ಯವಸ್ಥೆ ಇರಬೇಕು

    ''ಎಲ್ಲೋ ನಡೆಯುವ ಘಟನೆಯನ್ನ ಜನ ಟಿವಿಯಲ್ಲಿ ನೋಡುತ್ತಾರೆ. ಅದೇ ರೀತಿ ವಿಧಾನಸೌಧದಲ್ಲಿ ಏನಾಗಲಿದೆ ಎಂದು ಯಾಕೆ ನೋಡಲು ಸಾಧ್ಯವಿಲ್ಲ? ಆಡಳಿತದಲ್ಲಿ ಸಂಪೂರ್ಣ ಪಾರದರ್ಶಕತೆ ತರಬೇಕು ಎನ್ನುವ ಆಸೆ ನನ್ನದು. ಪಾರದರ್ಶಕ ವ್ಯವಸ್ಥೆ ಇದ್ದರೆ ಎಲ್ಲವೂ ಸರಿ ಹೋಗುತ್ತದೆ. ಒಬ್ಬ ಕಳ್ಳ ಬಂದರೂ ಇಲ್ಲಿ ಕದಿಯಲು ಆಗಬಾರದು ಆ ರೀತಿಯ ವ್ಯವಸ್ಥೆ ಸೃಷ್ಟಿಯಾಗಬೇಕು'' - ಉಪೇಂದ್ರ, ನಟ, ಕೆಪಿಜೆಪಿ ಪಕ್ಷ ಸ್ಥಾಪಕ.

    ಸ್ಮಾರ್ಟ್ ಹಳ್ಳಿ ಆಗಬೇಕು

    ಸ್ಮಾರ್ಟ್ ಹಳ್ಳಿ ಆಗಬೇಕು

    ''ಸ್ಮಾರ್ಟ್ ಸಿಟಿಗಳನ್ನು ಮಾಡುವ ರೀತಿ ಸ್ಮಾರ್ಟ್ ಹಳ್ಳಿ ಕೂಡ ಆಗಬೇಕು ಯುವಕರು ಕೆಲಸಕ್ಕಾಗಿ ನಗರಕ್ಕೆ ಬರಬಾರದು'' - ಉಪೇಂದ್ರ, ನಟ, ಕೆಪಿಜೆಪಿ ಪಕ್ಷ ಸ್ಥಾಪಕ.

    ಜನಗಳೇ ಹೈಕಮ್ಯಾಂಡ್

    ಜನಗಳೇ ಹೈಕಮ್ಯಾಂಡ್

    ''ನಮ್ಮ ನೂತನ ಪಕ್ಷ 'ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷ' ಮುಂದೆ ಯಾವುದೇ ಪಕ್ಷದೊಂದಿಗೂ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ. ವಿಲೀನವೂ ಆಗುವುದಿಲ್ಲ. ಸ್ವತಂತ್ರವಾಗಿಯೇ ಇರುತ್ತೇವೆ. ನಮಗೆ ಯಾರೂ ಹೈಕಮಾಂಡ್ ಇಲ್ಲ. ನಮಗೆ ಜನಗಳೇ ಹೈಕಮಾಂಡ್ '' - ಉಪೇಂದ್ರ, ನಟ, ಕೆಪಿಜೆಪಿ ಪಕ್ಷ ಸ್ಥಾಪಕ.

    ಪ್ರಶ್ನೆ ಮಾಡಬೇಕು

    ಪ್ರಶ್ನೆ ಮಾಡಬೇಕು

    ''ಜನ ಮೊದಲು ಎಲ್ಲವನ್ನೂ ಪ್ರಶ್ನೆ ಮಾಡಬೇಕು. ಹೇಳಿದನ್ನೆಲ್ಲ ಒಪ್ಪಿಕೊಳ್ಳಬಾರದು'' - ಉಪೇಂದ್ರ, ನಟ, ಕೆಪಿಜೆಪಿ ಪಕ್ಷ ಸ್ಥಾಪಕ.

    ಕೃಷಿ, ಶಿಕ್ಷಣದಲ್ಲಿ ಕಂಪ್ಲೀಟ್ ಚೇಂಜ್ ಆಗಬೇಕು

    ಕೃಷಿ, ಶಿಕ್ಷಣದಲ್ಲಿ ಕಂಪ್ಲೀಟ್ ಚೇಂಜ್ ಆಗಬೇಕು

    ''ಮೊದಲಿಗೆ ನಮ್ಮಿಂದ ಬದಲಾವಣೆ ಆಗಬೇಕು. ಜನರೇ ಬದಲಾವಣೆಯ ಸೃಷ್ಟಿಕರ್ತರು. ಹಲವರು ಹಲವು ಸಲಹೆಗಳನ್ನ ಕಳುಹಿಸಿದ್ದಾರೆ. ಉತ್ತಮ ಸಂದೇಶಗಳನ್ನೂ ರವಾನಿಸಿದ್ದಾರೆ. ಕೃಷಿ, ಶಿಕ್ಷಣದಲ್ಲಿ ಕಂಪ್ಲೀಟ್ ಚೇಂಜ್ ಆಗಬೇಕು. ಓದುವುದಕ್ಕೂ, ಇರುವುದಕ್ಕೂ ಸಂಬಂಧವೇ ಇಲ್ಲ. ಆರು ತಿಂಗಳ ಓದಿಗೆ ನಾಲ್ಕು ವರ್ಷ ಯಾಕೆ ವೇಸ್ಟ್ ಮಾಡಬೇಕು.? ಇಂತಹ ಬದಲಾವಣೆಗೆ ನಾವು ಮುಂದಾಗಬೇಕು'' - ಉಪೇಂದ್ರ, ನಟ, ಕೆಪಿಜೆಪಿ ಪಕ್ಷ ಸ್ಥಾಪಕ

    ಪ್ರಜ್ಞಾವಂತರಿಗೆ

    ಪ್ರಜ್ಞಾವಂತರಿಗೆ

    ''ನನ್ನ ಸಿನಿಮಾಗಳು ಬುದ್ಧಿವಂತರಿಗೆ.. ಅದೇ ರೀತಿ ನಮ್ಮ ಪಕ್ಷ ಪ್ರಜ್ಞಾವಂತರಿಗೆ'' - ಉಪೇಂದ್ರ, ನಟ, ಕೆಪಿಜೆಪಿ ಪಕ್ಷ ಸ್ಥಾಪಕ.

    ಪ್ರಜಾಕೀಯ ವೆಬ್ ಸೈಟ್‌

    ಪ್ರಜಾಕೀಯ ವೆಬ್ ಸೈಟ್‌

    ''ನವೆಂಬರ್ 10ಕ್ಕೆ ಪಕ್ಷದ ಆಪ್ ಮತ್ತು ವೆಬ್ ಸೈಟ್ ಬಿಡುಗಡೆ ಮಾಡುತ್ತೇವೆ. ಅದರಲ್ಲಿ ಪಕ್ಷದ ಎಲ್ಲ ಮಾಹಿತಿ ಸಿಗುತ್ತದೆ'' - ಉಪೇಂದ್ರ, ನಟ, ಕೆಪಿಜೆಪಿ ಪಕ್ಷ ಸ್ಥಾಪಕ.

    English summary
    Real Star Upendra spoke about his 'Karnataka Pragnavantha Janatha Party' plans.
    Tuesday, October 31, 2017, 14:02
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X