ಪ್ರಜಾಕೀಯ, ಪ್ರಜಾಕಾರಣ, ಪ್ರಜಾನೀತಿ ಅಂಶದಲ್ಲಿ ಉಪೇಂದ್ರ ಹೊಸ ಪಕ್ಷ
ರಿಯಲ್ ಸ್ಟಾರ್ ಉಪೇಂದ್ರ ತಮ್ಮ ಹೊಸ ಕಲ್ಪನೆಯ ಸಮಾಜವನ್ನು ಕಟ್ಟುವುದಕ್ಕೆ ಹೊರಟಿದ್ದಾರೆ. ಪ್ರಜಾಕೀಯ, ಪ್ರಜಾಕಾರಣ, ಪ್ರಜಾನೀತಿ ಎನ್ನುವ ಅಂಶಗಳ ಮೂಲಕ ಉಪೇಂದ್ರ ತಮ್ಮ ಹೊಸ ಪಕ್ಷ ಶುರು ಮಾಡುವುದಾಗಿ ಹೇಳಿದ್ದಾರೆ.
ತಮ್ಮ ರುಪ್ಪಿಸ್ ರೆಸಾರ್ಟ್ ನಲ್ಲಿ ಇಂದು ಮಧ್ಯಾಹ್ನ 12 ಗಂಟೆಯ ಸುಮಾರಿಗೆ ಪತ್ರಿಕಾಗೋಷ್ಠಿ ನಡೆಸಿ ಉಪೇಂದ್ರ ತಮ್ಮ ಕನಸಿನ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ಖಾಕಿ ಬಟ್ಟೆ ಹಾಕಿ ನಾನು ಒಬ್ಬ ಕಾರ್ಮಿಕ ಅಂತ ಹೇಳಿ ಉಪೇಂದ್ರ ತಮ್ಮ ಹೊಸ ಪಕ್ಷ ಮತ್ತು ಅವರ ಯೋಜನೆಗಳ ಬಗ್ಗೆ ಎಲ್ಲರ ಮುಂದೆ ಹಂಚಿಕೊಂಡಿದ್ದಾರೆ. ಮುಂದೆ ಓದಿ...

ಕಾರ್ಮಿಕರು ಬೇಕು
''ನಮಗೆ ಜನ ಸೇವಕರು ಬೇಡ, ಜನ ನಾಯಕರು ಬೇಡ, ನಮಗೆ ಕಾರ್ಮಿಕರು ಬೇಕು. ಅದಕ್ಕೆ ನಾನು ಖಾಕಿ ಬಟ್ಟೆ ಹಾಕಿಕೊಂಡು ಬಂದಿದ್ದೇನೆ. ಜನರ ತೆರಿಗೆ ದುಡ್ಡು ಪಾರದರ್ಶಕವಾಗಿ ಬಳಕೆ ಆಗಬೇಕು ಅಂತ ಈ ವೇದಿಕೆ ಮಾಡಿದ್ದೇವೆ.'' - ಉಪೇಂದ್ರ, ನಟ, ನಿರ್ದೇಶಕ.

1 ರೂಪಾಯಿ ಹಾಕೊಲ್ಲ.. 1 ರೂಪಾಯಿ ತಗೆಯೋಲ್ಲ
''ದುಡ್ಡು ಇಲ್ಲದೆ ಒಂದು ಪಕ್ಷ ಮಾಡುತ್ತಿದ್ದೇವೆ. ಇಲ್ಲಿ ಜಾತಿ, ಧರ್ಮ ಯಾವುದು ಇರುವುದಿಲ್ಲ. ನನಗೆ ಗೆಲುವು ಸೋಲು ಮುಖ್ಯ ಅಲ್ಲ.. ಎಲ್ಲರೂ ಬನ್ನಿ ಕೈ ಜೋಡಿಸಿ.'' - ಉಪೇಂದ್ರ, ನಟ, ನಿರ್ದೇಶಕ.

ಒಂದು ವೇದಿಕೆ ಶುರು ಮಾಡಿದ್ದೇವೆ
''ಸದ್ಯ ಒಂದು ವೇದಿಕೆ ಶುರು ಮಾಡಿದ್ದೇವೆ. ನಂತರ ಈ ಪಕ್ಷಕ್ಕೆ ಒಂದು ಹೆಸರು ಮತ್ತು ಚಿಹ್ನೆಯನ್ನು ಚುನಾವಣಾ ಆಯೋಗದಿಂದ ಪಡೆದುಕೊಳ್ಳುತ್ತೇವೆ. ಜೊತೆಗೆ ಮುಂದಿನ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತೇನೆ.'' - ಉಪೇಂದ್ರ, ನಟ, ನಿರ್ದೇಶಕ.

ನಿಮ್ಮ ಐಡಿಯಾ ಕಳಿಸಿ
''ನಾನು ಖಾಕಿ ಹಾಕಿದ್ದೇನೆ. ನನ್ನ ಜೊತೆ ಬರುವವರು ಖಾಕಿ ಹಾಕಿಕೊಂಡು ಬನ್ನಿ. ನಿಮ್ಮ ಐಡಿಯಾಗಳನ್ನು [email protected], [email protected] ಮತ್ತು [email protected] ಮೇಲ್ ಐಡಿಗೆ ಕಳುಹಿಸಿ.'' - ಉಪೇಂದ್ರ, ನಟ, ನಿರ್ದೇಶಕ.

ಆತ್ಮವಿಶ್ವಾಸ ಇದೆ
''ಒಳ್ಳೆಯದು ಆಗುತ್ತದೆ ಎನ್ನುವ ಆತ್ಮವಿಶ್ವಾಸದಿಂದ ಶುರು ಮಾಡಿದ್ದೇನೆ. ಎಲ್ಲರ ಜೊತೆ ಚರ್ಚೆ ಮಾಡಿ ಪಕ್ಷಕ್ಕೆ ಹೆಸರು ಚಿಹ್ನೆ ಇಡುತ್ತೇವೆ. ಎಲ್ಲರೂ ಬನ್ನಿ ಕೈ ಜೋಡಿಸಿ.'' - ಉಪೇಂದ್ರ, ನಟ, ನಿರ್ದೇಶಕ.


Click it and Unblock the Notifications











