»   » 'ಪ್ರಜಾಕರಣ' ಕನಸಿನ ಬಗ್ಗೆ ಮನಬಿಚ್ಚಿ ಮಾತನಾಡಿದ ಉಪೇಂದ್ರ

'ಪ್ರಜಾಕರಣ' ಕನಸಿನ ಬಗ್ಗೆ ಮನಬಿಚ್ಚಿ ಮಾತನಾಡಿದ ಉಪೇಂದ್ರ

Posted By:
Subscribe to Filmibeat Kannada

ನಟ ಉಪೇಂದ್ರ ರಾಜಕೀಯದ ಪ್ರವೇಶದ ಬಗ್ಗೆ ಕೊನೆಗೂ ಮಾತನಾಡಿದ್ದಾರೆ. ತಮ್ಮ ರುಪ್ಪಿಸ್ ರೆಸಾರ್ಟ್ ನಲ್ಲಿ ಇಂದು ಮಧ್ಯಾಹ್ನ 12 ಗಂಟೆಯ ಸುಮಾರಿಗೆ ಪತ್ರಿಕಾಗೋಷ್ಠಿ ನಡೆಸಿ ತಮ್ಮ ಕನಸಿನ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಉಪೇಂದ್ರ ಇಂದು ಖಾಕಿ ಬಟ್ಟೆ ಹಾಕಿ ತಮ್ಮದೆ ಶೈಲಿಯಲ್ಲಿ ಮಾತನಾಡಿದರು. ''ನಮಗೆ ಜನ ಸೇವಕರು ಬೇಡ, ಜನನಾಯಕರು ಬೇಡ, ಕಾರ್ಮಿಕರು ಬೇಕು ಜನರ ದುಡ್ಡು ಪಾರದರ್ಶಕವಾಗಿ ಬಳಕೆ ಆಗಬೇಕು ಅಂತ ಈ ವೇದಿಕೆ ಮಾಡಿದ್ದೇವೆ.'' ಅಂತ ಹೇಳಿದ್ದರು.

Upendra spoke about hois politics entry in press meet

''ದುಡ್ಡು ಇಲ್ಲದೆ ಒಂದು ಪಕ್ಷ ಮಾಡುತ್ತಿದ್ದೇವೆ. ಇಲ್ಲಿ ಜಾತಿ, ಧರ್ಮ ಯಾವುದು ಇರುವುದಿಲ್ಲ. ನನಗೆ ಗೆಲುವು ಸೋಲು ಮುಖ್ಯ ಅಲ್ಲ ಎಲ್ಲರೂ ಬನ್ನಿ ಕೈ ಜೋಡಿಸಿ. ಸದ್ಯ ಒಂದು ವೇದಿಕೆ ಶುರು ಮಾಡಿದ್ದೇವೆ. ನಂತರ ಈ ಪಕ್ಷಕ್ಕೆ ಒಂದು ಹೆಸರು ಮತ್ತು ಚಿಹ್ನೆ ಪಡೆದುಕೊಳ್ಳುತ್ತೇವೆ. ಮುಂದಿನ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತೇನೆ.'' ಅಂತ ಉಪೇಂದ್ರ ಹೇಳಿದರು.

English summary
Real Star Upendra spoke about his politics entry in press meet.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada