ಎರಡು ಸಲ ವಿವಾದ ಸೃಷ್ಟಿಸಿದ್ದ 'ಸೂಪರ್ ಸ್ಟಾರ್' ಟೈಟಲ್ ಬಗ್ಗೆ ಉಪೇಂದ್ರ ಹೇಳಿದ್ದೇನು?

ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಉಪೇಂದ್ರ ಅವರನ್ನು ರಿಯಲ್ ಸ್ಟಾರ್, ಸೂಪರ್ ಸ್ಟಾರ್ ಎಂದು ಕರೆಯುತ್ತಾರೆ. 'ಸೂಪರ್ ಸ್ಟಾರ್' ಹೆಸರಿನಲ್ಲಿ ಉಪ್ಪಿ ಸಿನಿಮಾ ಸಹ ಮಾಡಿದ್ದಾರೆ. ಹಾಗಾಗಿ, ಸೂಪರ್ ಸ್ಟಾರ್ ಎನ್ನುವ ಟೈಟಲ್ ಉಪೇಂದ್ರ ಅವರು ಬಿಟ್ಟರೆ ಬೇರೆ ಯಾರೂ ಬಳಸುವಂತಿಲ್ಲ ಎಂದು ಅವರ ಅಭಿಮಾನಿಗಳು ಪ್ರತಿಭಟಿಸಿದ್ದರು.

Recommended Video

Superstar : Upendra ಅವರಿಗೆ ಮೊದಲ ಬಾರಿಗೆ ಕಥೆ ಹೇಳಿದ ಅನುಭವ ಹೇಗಿತ್ತು | Filmibeat Kannada

ಇದೀಗ, ಉಪೇಂದ್ರ ಅವರ ಸಹೋದರನ ಮಗ ನಿರಂಜನ್ ಸುಧೀಂದ್ರ ತಮ್ಮ ಚೊಚ್ಚಲ ಚಿತ್ರಕ್ಕೆ ಸೂಪರ್ ಸ್ಟಾರ್ ಎಂದು ಟೈಟಲ್ ಇಟ್ಟುಕೊಂಡಿದ್ದಾರೆ. ಸ್ವತಃ ಉಪ್ಪಿ ಅವರೇ ಈ ಟೈಟಲ್ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ಈ ವೇಳೆ ಸೂಪರ್ ಸ್ಟಾರ್ ಟೈಟಲ್ ವಿಚಾರಕ್ಕೆ ಸಂಬಂಧಿಸಿದಂತೆ ಆಗಿದ್ದ ವಿವಾದಗಳ ಬಗ್ಗೆ ಸಹ ಉಪ್ಪಿ ಮಾತನಾಡಿದ್ದಾರೆ. ಅಷ್ಟಕ್ಕೂ, ಸೂಪರ್ ಸ್ಟಾರ್ ಟೈಟಲ್ ವಿವಾದ ಏನಾಗಿತ್ತು? ಮುಂದೆ ಓದಿ....

ದುನಿಯಾ ವಿಜಯ್ 'ಸೂಪರ್ ಸ್ಟಾರ್'

ದುನಿಯಾ ವಿಜಯ್ 'ಸೂಪರ್ ಸ್ಟಾರ್'

ಈ ಹಿಂದೆ ಮಾಸ್ತಿಗುಡಿ ಚಿತ್ರ ಮಾಡುತ್ತಿದ್ದ ವೇಳೆ ದುನಿಯಾ ವಿಜಯ್ ಅವರಿಗೆ ಸ್ಯಾಂಡಲ್ ವುಡ್ ಸೂಪರ್ ಸ್ಟಾರ್ ಎಂದು ಬಿರುದು ನೀಡಲಾಗಿತ್ತು. ಆದರೆ, ವಿಜಿ ಅವರಿಗೆ ಸೂಪರ್ ಸ್ಟಾರ್ ಎಂದು ಬಿರುದು ನೀಡಿದ್ದಕ್ಕೆ ಉಪೇಂದ್ರ ಅಭಿಮಾನಿಗಳು ವಿರೋಧ ವ್ಯಕ್ತಪಡಿಸಿದ್ದರು. ಕನ್ನಡ ಚಿತ್ರರಂಗದಲ್ಲಿ ಈಗಾಗಲೇ ಒಬ್ಬರು ಸೂಪರ್ ಸ್ಟಾರ್ ಇದ್ದಾರೆ. ಮತ್ತೊಬ್ಬ ನಟನಿಗೆ ಈ ಟೈಟಲ್ ನೀಡುವುದು ಸೂಕ್ತವಲ್ಲ ಎಂದು ಖಂಡಿಸಿದ್ದರು. ಬಳಿಕ, ವಿಜಯ್ ಹೆಸರಿನ ಹಿಂದೆ ನೀಡಲಾಗಿದ್ದ ಬಿರುದನ್ನು ಚಿತ್ರತಂಡ ತೆಗೆದು ಹಾಕಿದರು.

ಜೆಕೆ ಚಿತ್ರದಲ್ಲೂ ಸೂಪರ್ ಸ್ಟಾರ್

ಜೆಕೆ ಚಿತ್ರದಲ್ಲೂ ಸೂಪರ್ ಸ್ಟಾರ್

ಕಾರ್ತಿಕ್ ಜಯರಾಂ ಅಭಿನಯದ ಮೇ ಫಸ್ಟ್ ಚಿತ್ರದ ವೇಳೆ ಜೆಕೆ ಅವರಿಗೆ ಸೂಪರ್ ಸ್ಟಾರ್ ಎಂದು ಬಿರುದು ನೀಡಲಾಗಿತ್ತು. ಆ ಸಂದರ್ಭದಲ್ಲಿ ಉಪೇಂದ್ರ ಅವರ ಅಭಿಮಾನಿಗಳು ಖಂಡಿಸಿದರು. ಸೂಪರ್ ಸ್ಟಾರ್ ಟೈಟಲ್ ಯಾರಿಗೂ ನೀಡಬಾರದು. ಅದು ಉಪೇಂದ್ರ ಅವರಿಗೆ ಮಾತ್ರ ಸ್ವಂತ ಎಂದು ಪ್ರತಿಭಟಿಸಿದ್ದರು. ಈ ವಿಚಾರದಲ್ಲಿ ಜೆಕೆ ಸಹ ಸ್ಪಷ್ಟನೆ ನೀಡಿದ್ದರು.

ಅದೇ ಟೈಟಲ್‌ನಲ್ಲಿ ಸಿನಿಮಾ ಘೋಷಣೆ

ಅದೇ ಟೈಟಲ್‌ನಲ್ಲಿ ಸಿನಿಮಾ ಘೋಷಣೆ

ಹೀಗೆ, ಎರಡು ಬಾರಿ ವಿವಾದಕ್ಕೆ ಗುರಿಯಾಗಿದ್ದ ಸೂಪರ್ ಸ್ಟಾರ್ ಟೈಟಲ್, ಈಗ ಸಿನಿಮಾ ಆಗ್ತಿದೆ. ಉಪೇಂದ್ರ ಅವರ ಸಹೋದರನ ಮಗ ನಿರಂಜನ್ ಸುಧೀಂದ್ರ ಸ್ಯಾಂಡಲ್ ವುಡ್ ಪ್ರವೇಶ ಮಾಡ್ತಿದ್ದು, ತಮ್ಮ ಮೊದಲ ಚಿತ್ರಕ್ಕೆ ಸೂಪರ್ ಸ್ಟಾರ್ ಎಂದು ಶೀರ್ಷಿಕೆ ಇಟ್ಟಿದ್ದಾರೆ.

'ಸೂಪರ್ ಸ್ಟಾರ್' ಯಾರ ಟೈಟಲ್ಲೂ ಅಲ್ಲ

'ಸೂಪರ್ ಸ್ಟಾರ್' ಯಾರ ಟೈಟಲ್ಲೂ ಅಲ್ಲ

ಟೈಟಲ್ ಬಗ್ಗೆ ಮಾತನಾಡಿದ ಉಪೇಂದ್ರ ಅವರು ''ಸೂಪರ್ ಸ್ಟಾರ್ ಎನ್ನುವುದು ಯಾರದ್ದು ಅಲ್ಲ, ಸೂಪರ್ ಸ್ಟಾರ್ ಗಳು ಬರ್ತಾ ಇರ್ತಾರೆ, ಹೋಗ್ತಾ ಇರ್ತಾರೆ. ಅದು ಶಾಶ್ವತವಲ್ಲ. ಆದರೆ, ಅಭಿಮಾನಿಗಳು 'ಸರ್ ಈ ವಿಷಯಕ್ಕೆ ನೀವು ಬರಬೇಡಿ' ಅಂತಾರೆ. ಹೇಳಿದ್ರೆ ಅವರಿಗೆ ನೋವಾಗತ್ತೆ, ಹೇಳದೆ ಹೋದರೆ ಇನ್ನೊಬ್ಬರಿಗೆ ನೋವಾಗುತ್ತೆ. ಅದಕ್ಕೆ ಬಿಟ್ಟು ಬಿಟ್ಟಿದ್ದೀನಿ' ಎಂದು ಹೇಳಿ ಸಮರ್ಥಿಸಿಕೊಂಡರು.

More from Filmibeat

English summary
Kannada actor Upendra's brother son Niranjan sudhindra debut to sandalwood with SUPER STAR movie. so, upendra spoke about 'Super star' title.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X