'ಬುದ್ಧಿವಂತ'ನ ಚಿತ್ರದಿಂದ ಹೊರಬಂದ ಯುವ ನಿರ್ದೇಶಕ
Recommended Video
ಸ್ಯಾಂಡಲ್ ವುಡ್ ನ 'ಬುದ್ಧಿವಂತ ರಿಯಲ್ ಸ್ಟಾರ್ ಉಪೇಂದ್ರ ಸದ್ಯ 'ಬುದ್ಧಿವಂತ-2 ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಐ ಲವ್ ಯು ಚಿತ್ರದ ನಂತರ ರಿಯಲ್ ಸ್ಟಾರ್ ಅಭಿನಯಿಸುತ್ತಿರುವ ಸಿನಿಮಾ 'ಬುದ್ಧಿವಂತ-2. ಈಗಾಗಲೆ ಚಿತ್ರೀಕರಣ ಪ್ರಾರಂಭವಾಗಿ ದಿನಗಳಾಗಿತ್ತು. ಆದ್ರೀಗ ಚಿತ್ರದಿಂದ ದೊಡ್ಡ ಬ್ರೇಕಿಂಗ್ ಸುದ್ದಿಯೊಂದು ಹರಿದಾಡುತ್ತಿದೆ.
'ಬುದ್ಧಿವಂತ-2 ಚಿತ್ರದಿಂದ ನಿರ್ದೇಶಕರು ಹೊರಬಂದಿದ್ದಾರಂತೆ. ಹೌದು, 'ಬುದ್ಧಿವಂತ-2 ಸಿನಿಮಾ ನಿರ್ದೇಶನದ ಜವಾಬ್ದಾರಿ ಹೊತ್ತುಕೊಂಡಿದ್ದ ಯುವ ನಿರ್ದೇಶಕ ಡಿ.ಎನ್ ಮೌರ್ಯ ಈಗ ಚಿತ್ರದಿಂದ ಔಟ್ ಆಗಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.

ನಿರ್ದೇಶಕ ಬದಲಾಗಲು ಅಸಲಿ ಕಾರಣ
ಅಂದ್ಹಾಗೆ ದಿಢೀರ್ ನೆ ನಿರ್ದೇಶಕ ಮೌರ್ಯ ಸಿನಿಮಾದಿಂದ ಹೊರ ಬಂದ ಅಸಲಿ ಕಾರಣ ಉಪೇಂದ್ರ ಮತ್ತು ನಿರ್ದೇಶಕರ ನಡುವಿನ ಭಿನ್ನಾಭಿಪ್ರಾಯ ಎಂದು ಹೇಳಲಾಗುತ್ತಿದೆ. ನಿರ್ದೇಶಕ ಬದಲಾದರು ಕತೆಯಲ್ಲಿ ಯಾವುದೆ ಬದಲಾವಣೆ ಇಲ್ಲವಂತೆ. ಆದ್ರೆ ಸ್ಕ್ರೀನ್ ಪ್ಲೇ ವಿಭಿನ್ನವಾಗಿರಲಿದೆಯಂತೆ.

ಮೌರ್ಯ ಜಾಗಕ್ಕೆ ಹೊಸ ನಿರ್ದೇಶಕ
ನಿರ್ದೇಶಕ ಬದಲಾದ ಬಗ್ಗೆ ಚಿತ್ರತಂಡ ಮಾತ್ರ ಇನ್ನು ಅಧಿಕೃತಗೊಳಸಿಲ್ಲ. ಮೂಲಗಳ ಪ್ರಕಾರ ಮೌರ್ಯ ಜಾಗಕ್ಕೆ 'ಐ ಲವ್ ಯು' ಸಿನಿಮಾದಲ್ಲಿ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ್ದ ಜಯರಾಮ್ ಎಂಟ್ರಿ ಕೊಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.

ಮೌರ್ಯರನ್ನ ಹೊಗಳಿದ್ದ ಉಪೇಂದ್ರ
ಯುವ ನಿರ್ದೇಶಕರಿಗೆ ಅವಕಾಶ ನೀಡುತ್ತಿರುವ ಉಪೇಂದ್ರ ಈ ಹಿಂದೆ ಯುವ ನಿರ್ದೇಶಕ ಮೌರ್ಯ ಬಗ್ಗೆ ಹಾಡಿ ಹೊಗಳಿದ್ದರು. ಯುವ ನಿರ್ದೇಶಕರಲ್ಲಿ ಹೊಸ ಐಡಿಯಾಗಳು ಮತ್ತು ವಿನೂತನ ವಿಷಯಗಳನ್ನು ಹೊತ್ತು ಬರುತ್ತಾರೆ. ಮೌರ್ಯ ಕೂಡ ಹೊಸ ದೃಷ್ಟಿಕೋನ ಇಟ್ಟುಕೊಂಡಿರುವ ನಿರ್ದೇಶಕ ಎಂದು ಹೇಳಿದ್ದರು. ಆದ್ರೀಗ ಮೌರ್ಯ ಚಿತ್ರದಿಂದನೆ ಹೊರನಡೆದಿರುವುದು ಅಚ್ಚರಿ ಮೂಡಿಸಿದೆ.

ಉಪೇಂದ್ರ ದ್ವಿಪಾತ್ರ, ಆದಿತ್ಯ ವಿಲನ್
ಅಂದ್ಹಾಗೆ ಬುದ್ಧಿವಂತ-2 ಚಿತ್ರದಲ್ಲಿ ರಿಯಲ್ ಸ್ಟಾರ್ ದ್ವಿಪಾತ್ರದಲ್ಲಿ ಮಿಂಚಲಿದ್ದಾರೆ. ವಿಶೇಷ ಅಂದ್ರೆ ಚಿತ್ರದಲ್ಲಿ ನಟ ಆದಿತ್ಯ ವಿಲನ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ಚಿತ್ರದಲ್ಲಿ ಇಬ್ಬರು ನಟಿ ಮಣಿಯರಿದ್ದಾರೆ. ಮೇಘನಾ ರಾಜ್ ಮತ್ತು ಸೋನಾಲ್ ಮೊಂತೆರೋ ಕಾಣಿಸಿಕೊಳ್ಳುತ್ತಿದ್ದಾರೆ.


Click it and Unblock the Notifications