ಸದ್ಯದಲ್ಲೇ 'ಹೋಮ್ ಮಿನಿಸ್ಟರ್' ಆಗಲಿದ್ದಾರೆ ಉಪೇಂದ್ರ: ಅಚ್ಚರಿ ಎನಿಸಿದರು ನಿಜ
ರಿಯಲ್ ಸ್ಟಾರ್ ಉಪೇಂದ್ರ ಸಧ್ಯದಲ್ಲೇ ಹೋಮ್ ಮಿನಿಸ್ಟರ್ ಆಗಿ ಅಭಿಮಾನಿಗಳ ಮುಂದೆ ಬರಲಿದ್ದಾರೆ. ಉಪೇಂದ್ರ ಹೋಮ್ ಮಿಸ್ಟರ್ ಆಗಲಿದ್ದಾರಾ ಅಂತ ಅಚ್ಚರಿಯಾಗುತ್ತಿದೆಯಾ? ಆದರೂ ನಿಜ. ಹಾಗಂತ ಉಪ್ಪಿ ಹೋಮ್ ಮಿನಿಸ್ಟರ್ ಆಗುತ್ತಿರುವುದು ರಿಯಲ್ ಆಗಿ ಅಲ್ಲ ರೀಲ್ ಮೇಲೆ.
Recommended Video
ಹೌದು, ರಿಯಲ್ ಸ್ಟಾರ್ ಉಪೇಂದ್ರ ಹೋಮ್ ಮಿನಿಸ್ಟರ್ ಸಿನಿಮಾ ಮಾಡುತ್ತಿರುವುದು ಎಲ್ಲರಿಗೂ ಗೊತ್ತೆ ಇದೆ. ಈಗಾಗಲೆ ಚಿತ್ರೀಕರಣ ಮುಗಿಸಿ ಪೋಸ್ಟ್ ಪ್ರೋಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿರುವ ಚಿತ್ರತಂಡ ಸದ್ಯ ಸೆನ್ಸಾರ್ ಮುಗಿಸಿ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ.
ಸದ್ಯ ಚಿತ್ರದಿಂದ ಅಭಿಮಾನಿಗಳಿಗೆ ಸಿಹಿಸುದ್ದಿಯೊಂದು ಸಿಕ್ಕಿದೆ. ಹೋಮ್ ಮಿನಿಸ್ಟರ್ ಸಿನಿಮಾಗೆ ಯು/ಎ ಪ್ರಮಾಣ ಪತ್ರ ಸಿಕ್ಕಿದೆ. ಸದ್ಯ ರಿಲೀಸ್ ಗೆ ರೆಡಿಯಾಗಿರುವ ಈ ಸಿನಿಮಾ ಯಾವಾಗ ತೆರೆಗೆ ಬರಲಿದೆ ಎನ್ನುವುದು ಬಹಿರಂಗವಾಗಿಲ್ಲ. ಪರಿಸ್ಥಿತಿ ಸುಧಾರಿಸಿದ ನಂತರ ತೆರೆಗೆ ಬರುವ ಸಾಧ್ಯತೆ ಇದೆ.

ಅಂದ್ಹಾಗೆ ಹೋಮ್ ಮಿನಿಸ್ಟರ್ ಅಂದಾಕ್ಷಣ ಇದು ರಾಜಕೀಯ ಸುತ್ತ ಸುತ್ತುವ ಸಿನಿಮಾ ಅಂತ ಅಂದ್ಕೋಬೇಡಿ. ಇದು ಪಕ್ಕಾ ಫ್ಯಾಮಿಲಿ ಸಿನಿಮಾವಂತೆ. ಇಲ್ಲಿ ಪತ್ನಿಯೆ ಹೋಮ್ ಮಿನಿಸ್ಟರ್. ಚಿತ್ರದಲ್ಲಿ ಉಪೇಂದ್ರ ಅವರಿಗೆ ನಾಯಕಿಯಾಗಿ ವೇದಿಕಾ, ತಾನ್ಯ ಹೋಪ್ ಕಾಣಿಸಿಕೊಂಡಿದ್ದಾರೆ. ಸ್ಯಾಂಡಲ್ ವುಡ್ ನಲ್ಲಿ ನಿರೀಕ್ಷೆ ಮೂಡಿಸಿರುವ ಸಿನಿಮಾಗಳಲ್ಲಿ ಹೋಮ್ ಮಿನಿಸ್ಟರ್ ಸಿನಿಮಾ ಕೂಡ ಒಂದು.


Click it and Unblock the Notifications











