ಉಪೇಂದ್ರ ಕೈಗೆ ಕೋವಿ ಬಂತು: 'ಕಬ್ಜ' ಚಿತ್ರದ ಫಸ್ಟ್ ಲುಕ್ ಇದು.!

ರಿಯಲ್ ಸ್ಟಾರ್ ಉಪೇಂದ್ರ ಕೈಯಲ್ಲಿ 'ಐ ಲವ್ ಯೂ' ಹೇಳಿಸಿದ್ದ ನಿರ್ದೇಶಕ ಆರ್.ಚಂದ್ರು ಇದೀಗ 'ಕಬ್ಜ' ರೆಡಿ ಮಾಡಲು ಹೊರಟಿರುವುದು ನಿಮಗೆಲ್ಲ ಗೊತ್ತೇ ಇದೆ. 'ಕಬ್ಜ' ಸಿನಿಮಾ ಇನ್ನೂ ಸೆಟ್ಟೇರಿಲ್ಲ. ಅಷ್ಟು ಬೇಗ ಪ್ಯಾನ್ ಇಂಡಿಯಾ ಮಟ್ಟದಲ್ಲಿ 'ಕಬ್ಜ' ಚಿತ್ರ ಸಿಕ್ಕಾಪಟ್ಟೆ ಸೌಂಡ್ ಮಾಡುತ್ತಿದೆ.

ಡಾನ್ ಒಬ್ಬನ್ನ ಬದುಕಿನ ಕಥೆಯೇ 'ಕಬ್ಜ' ಚಿತ್ರದ ಸ್ಟೋರಿ ಲೈನ್. 80 ರ ದಶಕದ ಅಂಡರ್ ವರ್ಲ್ಡ್ ಡಾನ್ ಪಾತ್ರದಲ್ಲಿ ಉಪೇಂದ್ರ ಕಾಣಿಸಿಕೊಳ್ಳಲಿದ್ದಾರೆ. ಡಾನ್ ಅಂತ ಹೇಳಿದ ಕೂಡಲೆ ಈ ಚಿತ್ರದಲ್ಲಿ ಉಪೇಂದ್ರ ಕೈಯಲ್ಲಿ ಲಾಂಗು, ಮಚ್ಚು ಇದ್ದೇ ಇರುತ್ತೆ ಅಂತ ನೀವು ಭಾವಿಸಬಹುದು. ಆದರೆ ವಾಸ್ತವ ಅದಲ್ಲ.

'ಕಬ್ಜ' ಚಿತ್ರದಲ್ಲಿ ಕೈಯಲ್ಲಿ ಲಾಂಗು, ಮಚ್ಚು ಹಿಡಿದು ಉಪೇಂದ್ರ ವಿರೋಧಿಗಳ ರುಂಡ ಚೆಂಡಾಡುವ ಬದಲು ಕೋವಿ ಹಿಡಿದು ವೈರಿಗಳ ಹುಟ್ಟಡಗಿಸಲಿದ್ದಾರೆ. 'ಕಬ್ಜ' ಚಿತ್ರದ ಬಹು ಇಂಟ್ರೆಸ್ಟಿಂಗ್ ವಿಷಯ ಅಂದ್ರೆ ಇದೇ. ರೌಡಿಸಂನ ಮತ್ತೊಂದು ಆಯಾಮವನ್ನು ತೋರಿಸಲು ನಿರ್ದೇಶಕ ಆರ್.ಚಂದ್ರು 'ಡಾನ್' ಉಪೇಂದ್ರ ಕೈಯಲ್ಲಿ ಕೋವಿ ಕೊಟ್ಟಿದ್ದಾರೆ.

ಇಲ್ಲಿಯವರೆಗೂ 'ಬುದ್ಧಿವಂತ'ನಾಗಿ, ಖೈದಿಯಾಗಿ, ಶ್ರೀಮಂತನಾಗಿ ಉಪೇಂದ್ರ ಹಲವು ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಆದ್ರೆ, ಡಾನ್ ಆಗಿ ತೆರೆಮೇಲೆ ಬರುತ್ತಿರುವುದು ಇದೇ ಮೊದಲು. ಹೀಗಾಗಿ, 'ಕಬ್ಜ'ಗಾಗಿ ವರ್ಕೌಟ್ ಮಾಡಿ.

Upendra starrer Kabja first look out

ರೆಡಿಯಾಗಿರುವ ಉಪೇಂದ್ರ ಕೋವಿ ಹಿಡಿದು ಬಂದ್ರೆ ಹೇಗಿರಬಹುದು ಎಂಬ ಅಭಿಮಾನಿಗಳ ಕುತೂಹಲಕ್ಕೆ ತೆರೆ ಬಿದ್ದಿದೆ. 'ಕಬ್ಜ' ಚಿತ್ರದಲ್ಲಿನ ಉಪೇಂದ್ರ ಫಸ್ಟ್ ಲುಕ್ ರಿಲೀಸ್ ಆಗಿದೆ.

ಅಂದ್ಹಾಗೆ, ಏಳು ಭಾಷೆಗಳಲ್ಲಿ 'ಕಬ್ಜ' ಸಿನಿಮಾ ತೆರೆ ಕಾಣಲಿದೆ. ಇದೇ ತಿಂಗಳಿನಿಂದ ಶೂಟಿಂಗ್ ಶುರುವಾಗಲಿದ್ದು, ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ಗುರುತಿಸಿಕೊಂಡಿರುವ ನಟಿಯೇ ಈ ಚಿತ್ರಕ್ಕೆ ನಾಯಕಿ ಆಗಲಿದ್ದಾರೆ. ಅಲ್ಲದೇ, ವಿವಿಧ ಭಾಷೆಗಳ ಜನಪ್ರಿಯ ಖಳನಟರು 'ಕಬ್ಜ' ಚಿತ್ರದಲ್ಲಿ ಮಿಂಚಲಿದ್ದಾರೆ. ತೆಲುಗಿನ ಜಗಪತಿ ಬಾಬು ಈಗಾಗಲೇ 'ಕಬ್ಜ' ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಸದ್ಯದಲ್ಲೇ 'ಕಬ್ಜ' ಚಿತ್ರದ ಮುಹೂರ್ತ ನಡೆಯಲಿದೆ.

More from Filmibeat

English summary
Real Star Upendra starrer Kannada Movie Kabja first look is out. Kabja is Directed by R Chandru.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X