ಎಂಟಿಬಿ.ನಾಗರಾಜ್ ಅರ್ಪಿಸುವ, ಉಪೇಂದ್ರ ನಟನೆಯ ಸಿನಿಮಾದ ಪೋಸ್ಟರ್ ಬಿಡುಗಡೆ

ಉಪೇಂದ್ರ ಅವರ ನಿರೀಕ್ಷಿತ ಸಿನಿಮಾ 'ಕಬ್ಜ'ದ ಮೋಷನ್ ಪೋಸ್ಟರ್ ಬಿಡುಗಡೆ ಆಗಿದೆ. ನಿಜ ಜೀವನದ ಘಟನೆಗಳನ್ನು ಆಧರಿಸಿದ ಕಾಲ್ಪನಿಕ ಸಿನಿಮಾ ಇದಾಗಿದ್ದು, ಉಪೇಂದ್ರ ಅವರ ರೆಟ್ರೋ ಶೈಲಿಯ ಲುಕ್ ಗಮನ ಸೆಳೆಯುತ್ತಿದೆ.

ಆರ್.ಚಂದ್ರು ನಿರ್ದೇಶನದ ಈ ಸಿನಿಮಾದ ಮೋಷನ್ ಪೋಸ್ಟರ್ ಇಂದು ಬಿಡುಗಡೆ ಆಗಿದ್ದು, ಸಿನಿಮಾದ ಕತೆಯ ಕಾಲಮಾನದ ಬಗ್ಗೆ ಕಿರು ಮಾಹಿತಿ ನೀಡುತ್ತಿದೆ ಮೊಷನ್ ಪೋಸ್ಟರ್.

ರವಿ ಬಸ್ರೂರು ಸಂಗೀತ ಸಂಯೋಜನೆಯ ಕಬ್ಜ ಸಿನಿಮಾವು 1947 ರ ಘಟನೆಯನ್ನು ಆಧರಿಸಿ ನಿರ್ಮಿಸಲಾಗುತ್ತಿರುವ ಸಿನಿಮಾ. ಉಪೇಂದ್ರ ಅವರು ರೆಟ್ರೊ ಲುಕ್‌ನಲ್ಲಿ ಹಳೆ ಬುಲೆಟ್‌ ಮೇಲೆ ಬರುತ್ತಿರುವ ಚಿತ್ರವುಳ್ಳ ಸಿನಿಮಾದ ಪೋಸ್ಟರ್ ಸಖತ್ ವೈರಲ್ ಆಗಿದೆ.

ಎಂಟಿಬಿ ನಾಗರಾಜ್ ಅರ್ಪಿಸುತ್ತಿರುವ ಸಿನಿಮಾ

ಎಂಟಿಬಿ ನಾಗರಾಜ್ ಅರ್ಪಿಸುತ್ತಿರುವ ಸಿನಿಮಾ

ಇಂದು ಬಿಡುಗಡೆ ಆಗಿರುವ ಮೋಷನ್ ಪೋಸ್ಟರ್‌ನಲ್ಲಿ ಕಬ್ಜ ಸಿನಿಮಾವನ್ನು ಶಾಸಕ ಎಂಟಿಬಿ ನಾಗರಾಜು ಅರ್ಪಿಸುತ್ತಿದ್ದಾರೆ ಎಂದು ಟೈಟಲ್‌ ಕಾರ್ಡ್‌ನಲ್ಲಿ ಹೇಳಲಾಗಿದೆ. ಎಂಟಿಬಿ ಅವರು ಸಿನಿಮಾಕ್ಕೆ ಹಣ ಹೂಡಿಲ್ಲ ಬದಲಿಗೆ ಸಿನಿಮಾವನ್ನು 'ಅರ್ಪಿಸುತ್ತಿದ್ದಾರೆ' ಅಷ್ಟೆ.

ನಿಜ ಘಟನೆಗಳಿಂದ ಪ್ರೇರಿತ ಕತೆ

ನಿಜ ಘಟನೆಗಳಿಂದ ಪ್ರೇರಿತ ಕತೆ

ಸಿನಿಮಾವು 1947 ರಲ್ಲಿ ನಡೆವ ಕತೆ ಆಧರಿಸಿದೆ ಎನ್ನಲಾಗಿದೆ. ಗಾಂಧಿ ಅನುಯಾಯಿಯೊಬ್ಬರ ಕೊಲೆ ಆ ನಂತರ ಆತನ ಮಗ ರೌಡಿಸಂಗೆ ಇಳಿಯುವುದು ಹೀಗೆ ಕತೆ ಸುತ್ತುತ್ತದೆ. ಸಿನಿಮಾವು 1947 ಹಾಗೂ 1980 ರ ದಶಕದ ಘಟನೆಗಳಿಂದ ಪ್ರೇರೇಪಿತಗೊಂಡಿದೆ.

ಎರಡು ಶೇಡ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಉಪೇಂದ್ರ

ಎರಡು ಶೇಡ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಉಪೇಂದ್ರ

ಉಪೇಂದ್ರ ಅವರು ಕಬ್ಜ ಸಿನಿಮಾದಲ್ಲಿ ಎರಡು ಶೇಡ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಇದೇ ಸಿನಿಮಾದ ಎರಡನೇ ಭಾಗವೂ ಬರಲಿದ್ದು, ಕಬ್ಜ ಸಿನಿಮಾದ ಬಿಡುಗಡೆ ಬಳಿಕ ಎರಡನೇ ಭಾಗದ ಚಿತ್ರೀಕರಣ ಪ್ರಾರಂಭವಾಗಲಿದೆ.

Recommended Video

ರೆಬಲ್ ಸ್ಟಾರ್ ಮೇಲಿನ ಪ್ರೀತಿಯನ್ನು ಮತ್ತೆ ಸಾಬೀತು ಪಡಿಸಿದ ಮಂಡ್ಯ ಜನ | Filmibeat Kannada
ಐದು ಭಾಷೆಗಳಲ್ಲಿ ಬಿಡುಗಡೆ ಆಗಲಿದೆ 'ಕಬ್ಜ'

ಐದು ಭಾಷೆಗಳಲ್ಲಿ ಬಿಡುಗಡೆ ಆಗಲಿದೆ 'ಕಬ್ಜ'

ಕಬ್ಜ ಸಿನಿಮಾಕ್ಕೆ ರವಿ ಬಸ್ರೂರು ಸಂಗೀತ ನಿರ್ದೇಶನವಿದ್ದು, ಸಿನಿಮಾವು 2021 ಕ್ಕೆ ಬಿಡುಗಡೆ ಆಗಲಿದೆ ಎಂದು ಮೋಷನ್ ಪೋಸ್ಟರ್‌ನಲ್ಲಿ ಹೇಳಲಾಗಿದೆ. ಕಬ್ಜ ಸಿನಿಮಾವು ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಬಿಡುಗಡೆ ಆಗಲಿದೆ.

More from Filmibeat

English summary
Upendra starrer Kannada movie Kabza motion poster released. Upendra seen in retro style in the movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X