Exclusive: 'ಕಬ್ಜ' ಪ್ರೀ ರಿಲೀಸ್ ಬ್ಯುಸಿನೆಸ್ ದಾಖಲೆ: ಭಾರೀ ಮೊತ್ತಕ್ಕೆ OTT ರೈಟ್ಸ್ ಸೇಲ್.. ಚಂದ್ರು ಪ್ಲ್ಯಾನ್ ಸೂಪರ್
ಆರ್. ಚಂದ್ರು ನಿರ್ದೇಶನದ 'ಕಬ್ಜ' ಸಿನಿಮಾ ದೊಡ್ಡಮಟ್ಟದಲ್ಲಿ ಸದ್ದು ಮಾಡುವ ಸುಳಿವು ಸಿಕ್ತಿದೆ. ಉಪೇಂದ್ರ ಬರ್ತ್‌ಡೇ ಸಂಭ್ರಮದಲ್ಲಿ ರಿಲೀಸ್ ಆಗಿದ್ದ ಟೀಸರ್ ಧೂಳೆಬ್ಬಿಸಿ, ಸಿನಿಮಾ ಬಗ್ಗೆ ನಿರೀಕ್ಷೆ ಹೆಚ್ಚುವಂತೆ ಮಾಡಿದೆ. ವರ್ಷಾಂತ್ಯಕ್ಕೆ ಚಿತ್ರವನನ ತೆರೆಗೆ ತರುವ ಪ್ರಯತ್ನ ನಡೀತಿದ್ದು, ಪ್ರೀ ರಿಲೀಸ್ ಬ್ಯುಸಿನೆಸ್ ಜೋರಾಗಿ ನಡೀತಿದೆ.
ಬರೀ ಥ್ರಿಯೇಟ್ರಿಕಲ್ ಬ್ಯುಸಿನೆಸ್ ಮಾತ್ರವಲ್ಲ ಆಡಿಯೋ ರೈಟ್ಸ್, ಡಿಜಿಟಲ್ ರೈಟ್ಸ್, ಸ್ಯಾಟಲೈಟ್ ರೈಟ್ಸ್ ಅಂತೆಲ್ಲಾ ನಾನಾ ಮೂಲಗಳಿಂದ ಒಂದು ಸಿನಿಮಾ ಬ್ಯುಸಿನೆಸ್ ಮಾಡುತ್ತೆ. ಸಿನಿಮಾ ಕ್ರೇಜ್‌ಗೆ ತಕ್ಕಂತೆ ಡಿಮ್ಯಾಂಡ್ ಶುರುವಾಗಿ ಒಳ್ಳೆ ಬ್ಯುಸಿನೆಸ್ ನಡೆಯುತ್ತೆ. ಗ್ಯಾಂಗ್‌ಸ್ಟರ್ ಡ್ರಾಮಾ 'ಕಬ್ಜ' ಭಾರೀ ಸದ್ದು ಮಾಡ್ತಿದೆ. ಚಿತ್ರದಲ್ಲಿ ಕಿಚ್ಚ ಸುದೀಪ್ ಸ್ಪೆಷಲ್ ರೋಲ್ ಮಾಡಿರುವುದರಿಂದ ಕ್ರೇಜ್ ಡಬಲ್ ಆಗಿದೆ. ಬಹಳ ಅದ್ಧೂರಿಯಾಗಿ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ 7 ಭಾಷೆಗಳಲ್ಲಿ ಸಿನಿಮಾ ತೆರೆಗೆ ಬರ್ತಿದೆ.
ಕಳೆದ 6 ತಿಂಗಳಿನಿಂದ 'ಕಬ್ಜ' ಡಿಜಿಟಲ್ ರೈಟ್ಸ್ ಬಗ್ಗೆ ಚರ್ಚೆ ನಡೀತಿತ್ತು. ಆದರೆ ಟೀಸರ್ ರಿಲೀಸ್ ಆಗುವವರೆಗೂ ಕಾದು ನೋಡುವ ತಂತ್ರಕ್ಕೆ ಚಂದ್ರು ಮೊರೆ ಹೋಗಿದ್ದರು. ಅಂದುಕೊಂಡಂತೆ ಟೀಸರ್ ಹಿಟ್ ಆಗಿದ್ದು, ಡಿಮ್ಯಾಂಡ್ ಜಾಸ್ತಿ ಆಗುವಂತೆ ಮಾಡಿದೆ. ಇದೀಗ ಡಿಜಿಟಲ್ ರೈಟ್ಸ್ ಬಗ್ಗೆ ಚರ್ಚಿಸಲು ಚಂದ್ರು ಮುಂಬೈನಲ್ಲಿ ಬೀಡುಬಿಟ್ಟಿದ್ದಾರೆ.

ಭಾರೀ ಮೊತ್ತಕ್ಕೆ ಡಿಜಿಟಲ್ ರೈಟ್ಸ್ ಮಾರಾಟ
'ಕಬ್ಜ' ಡಿಜಿಟಲ್ ರೈಟ್ಸ್ ಮಾರಾಟ ಸಂಬಂಧ ಮೂರ್ನಾಲ್ಕು ಸಂಸ್ಥೆಗಳ ಜೊತೆ ನಿರ್ದೇಶಕ ಆರ್. ಚಂದ್ರು ಚರ್ಚೆ ನಡೆಸುತ್ತಿದ್ದಾರೆ. ಅಮೇಜಾನ್ ಪ್ರೈಂಗೆ ಚಿತ್ರದ ಸ್ಟ್ರೀಮಿಂಗ್ ರೈಟ್ಸ್ ಮಾರಾಟವಾಗುವ ಸಾಧ್ಯತೆ ದಟ್ಟವಾಗಿದೆ. ಇನ್ನೆರಡು ದಿನಗಳಲ್ಲಿ ಈ ಬಗ್ಗೆ ಖಚಿತ ಮಾಹಿತಿ ನೀಡುವುದಾಗಿ ನಿರ್ದೇಶಕರು ಫಿಲ್ಮಿಬೀಟ್‌ಗೆ ತಿಳಿಸಿದ್ದಾರೆ. ಈ ಹಿಂದೆ ಆನಂದ್ ಆಡಿಯೋ ಸಂಸ್ಥೆಗೆ ಚಿತ್ರದ ಆಡಿಯೋ ರೈಟ್ಸ್ ಭಾರೀ ಮೊತ್ತಕ್ಕೆ ಮಾರಾಟವಾಗಿತ್ತು.

ಒಬ್ಬರಿಗೆ ಸಿಗಲ್ಲ ಸ್ಯಾಟಲೈಟ್, ಡಿಜಿಟಲ್ ರೈಟ್ಸ್
ಚಿತ್ರವನ್ನು ಮೊದಲು 7 ಭಾಷೆಗಳಲ್ಲಿ ಬಿಡುಗಡೆ ಮಾಡುವುದಾಗಿ ಹೇಳಲಾಗಿತ್ತು. ಆದರೆ ಈಗ 9 ಭಾಷೆಗಳಲ್ಲಿ ಸಿನಿಮಾ ನಿರ್ಮಾಣವಾಗ್ತಿದೆ. ಅಷ್ಟು ವರ್ಷನ್‌ಗಳ ರೈಟ್ಸ್‌ನ ಒಂದೇ ಸಂಸ್ಥೆಗೆ ಕೊಡುವುದು ಬೇಡ ಎಂದು ಚಂದ್ರು ನಿರ್ಧರಿಸಿದ್ದಾರೆ. ಡಿಮ್ಯಾಂಡ್‌ಗೆ ತಕ್ಕಂತೆ ಒಳ್ಳೆ ಬೆಲೆಗೆ ಬೇರೆ ಬೇರೆ ಸಂಸ್ಥೆಗಳಿಗೆ ಮಾರಾಟ ಮಾಡಲು ಮುಂದಾಗಿದ್ದಾರೆ. ಅದರಲ್ಲೂ ಕನ್ನಡ ಹಾಗೂ ತೆಲುಗಿನಲ್ಲಿ ನೇರವಾಗಿ ಸಿನಿಮಾ ಮೂಡಿ ಬರ್ತಿದೆ. ಬೇರೆ ಬೇರೆ ಚಾನಲ್‌ಗಳಿಗೆ ಸ್ಯಾಟಲೈಟ್ ರೈಟ್ಸ್ ನೀಡುವ ಕುರಿತು ಚರ್ಚೆ ನಡೀತಿದೆ.

ಬಹಳ ಅದ್ಧೂರಿ ಸಿನಿಮಾ 'ಕಬ್ಜ'
ಬಹುಕೋಟಿ ವೆಚ್ಚದಲ್ಲಿ ಈ ಆಕ್ಷನ್ ಎಂಟರ್‌ಟೈನರ್ ಸಿನಿಮಾ ಕಟ್ಟಿಕೊಡಲಾಗ್ತಿದೆ. 1947ರಿಂದ ಸಿನಿಮಾ ಕಥೆ ಶುರುವಾಗಲಿದ್ದು, 2 ಭಾಗಗಳಾಗಿ ಬಹಳ ಅದ್ಧೂರಿಯಾಗಿ ಚಿತ್ರವನ್ನು ನಿರ್ಮಾಣ ಮಾಡಲಾಗುತ್ತಿದೆ. ಅದ್ಧೂರಿ ಸೆಟ್‌ಗಳಲ್ಲಿ ಸಿನಿಮಾ ಚಿತ್ರೀಕರಣ ನಡೆದಿದೆ. ಈಗಾಗಳೇ ಟೀಸರ್‌ನಲ್ಲಿ ಸಿನಿಮಾ ಮೇಕಿಂಗ್ ನೋಡಿದವರು ಹುಬ್ಬೇರಿಸಿದ್ದಾರೆ. KGF ರೇಂಜ್‌ನ ಮತ್ತೊಂದು ಸಿನಿಮಾ ಎಂದು ಕೊಂಡಾಡುತ್ತಿದ್ದಾರೆ.

ಸ್ಪೆಷಲ್ ಸಾಂಗ್‌ನಲ್ಲಿ ಬಾಲಿವುಡ್ ಬ್ಯೂಟಿ
ಚಿತ್ರದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಜೋಡಿಯಾಗಿ ಶ್ರಿಯಾ ಶರಣ್ ನಟಿಸಿದ್ದು, ಸುದೀಪ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇನ್ನುಳಿದಂತೆ ಕಬೀರ್ ದುಹಾನ್ ಸಿಂಗ್ ಮತ್ತು ಕೋಟಾ ಶ್ರೀನಿವಾಸ ರಾವ್ , ಜಯ ಪ್ರಕಾಶ್, ಕಾಟ್ ರಾಜು ಮತ್ತು ಸುಬ್ಬರಾಜು ಅಬ್ಬರಿಸಿದ್ದಾರೆ. ಚಿತ್ರದ ಐಟಂ ಸಾಂಗ್‌ಗೆ ಬಾಲಿವುಡ್ ಚೆಲುವೆಯನ್ನು ಕರೆತರುವ ಪ್ರಯತ್ನ ನಡೀತಿದೆ. ರವಿ ಬಸ್ರೂರು ಸಂಗೀತದ ಬಗ್ಗೆಯೂ ಭಾರೀ ನಿರೀಕ್ಷೆ ಇದೆ.


Click it and Unblock the Notifications











