For Quick Alerts
  ALLOW NOTIFICATIONS  
  For Daily Alerts

  ಭಾರ್ಗವ್ ಭಕ್ಷಿ ಬಂದು ಹೋಗ್ತಿದ್ದಂತೆ 'ಕಬ್ಜ' ಟೀಸರ್‌ಗೆ ಕೈ ಹಾಕಿದ ಚಂದ್ರು: ಮುಹೂರ್ತ ಫಿಕ್ಸ್!

  |

  ನಿರ್ದೇಶಕ ಆರ್‌. ಚಂದ್ರು ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟಿದ್ದಾರೆ. 'ಕಬ್ಜ' ಚಿತ್ರದ ಬಹುತೇಕ ಶೂಟಿಂಗ್ ಕಂಪ್ಲೀಟ್ ಆಗಿದ್ದು, ಟೀಸರ್‌ ರಿಲೀಸ್ ಮಾಡೋಕೆ ಮುಹೂರ್ತ ಫಿಕ್ಸ್ ಮಾಡಿದ್ದಾರೆ.

  'ಕಬ್ಜ' ಸಿನಿಮಾ ಒಂದರ್ಥದಲ್ಲಿ ಮಲ್ಟಿಸ್ಟಾರರ್ ಸಿನಿಮಾ. ರಿಯಲ್ ಸ್ಟಾರ್ ಉಪೇಂದ್ರ ಜೊತೆಗೆ ಕಿಚ್ಚ ಸುದೀಪ್ ಕೂಡ ಬಣ್ಣ ಹಚ್ಚಿದ್ದಾರೆ. 'ಮುಕುಂದ ಮುರಾರಿ' ನಂತರ ಇಬ್ಬರು ಒಟ್ಟಿಗೆ ನಟಿಸಿರುವುದು ಸಹಜವಾಗಿಯೇ ಕುತೂಹಲ ಮೂಡಿಸಿದೆ. ಬಹುಕೋಟಿ ವೆಚ್ಚದ ಈ ಸಿನಿಮಾದಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಭಾರ್ಗವ್ ಭಕ್ಷಿ ಅನ್ನುವ ಗ್ಯಾಂಗ್‌ಸ್ಟರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ. ಅಂತೂ ಇಂತೂ ನಿರ್ದೇಶಕ ಆರ್‌. ಚಂದ್ರು ಸಿನಿಮಾ ಚಿತ್ರೀಕರಣ ಮುಗಿಸಿದ್ದಾರೆ. ಪೋಸ್ಟ್ ಪ್ರೊಡಕ್ಷನ್ ವರ್ಕ್‌ ಶುರುವಾಗಿದ್ದು ಆದಷ್ಟು ಬೇಗ ಈ ಗ್ಯಾಂಗ್‌ಸ್ಟರ್ ಸಿನಿಮಾ ತೆರೆಗೆ ಬರಲಿದೆ.

  Kichcha Sudeep Kabza: 'ಕಬ್ಜ' ಸಿನಿಮಾ ಬಗ್ಗೆ ಏನಿದು ಸುದ್ದಿ?Kichcha Sudeep Kabza: 'ಕಬ್ಜ' ಸಿನಿಮಾ ಬಗ್ಗೆ ಏನಿದು ಸುದ್ದಿ?

  ಒಂದು ಹಾಡು ಹೊರತುಪಡಿಸಿ ಚಿತ್ರದ ಬಹುತೇಕ ಚಿತ್ರೀಕರಣ ಮುಕ್ತಾಯವಾಗಿದೆ. ಕೊನೆ ಶೆಡ್ಯೂಲ್‌ನಲ್ಲಿ ಏಳೆಂಟು ದಿನಗಳ ಕಾಲ ಕೆಲ ದೃಶ್ಯಗಳನ್ನು ಸೆರೆಹಿಡಿಯಲಾಗಿದೆ. ಸುದೀಪ್ ಹೊಸ ಲುಕ್‌ನಲ್ಲಿ ಚಿತ್ರೀಕರಣಕ್ಕೆ ಹಾಜರಾಗಿದ್ದಾರೆ. ಆ ಲುಕ್‌ ಕೂಡ ಈಗ ವೈರಲ್ ಆಗಿದೆ. ಮೇಕಿಂಗ್ ದೃಶ್ಯಗಳು ಬಿಟ್ಟರೆ ಚಿತ್ರದ ಯಾವುದೇ ಝಲಕ್ ಅನ್ನು ಆರ್‌. ಚಂದ್ರು ರಿವೀಲ್ ಮಾಡಿರಲಿಲ್ಲ. ಇದೀಗ ಟೀಸರ್ ರಿಲೀಸ್ ಮಾಡಲು ಚಿತ್ರತಂಡ ಮುಂದಾಗಿದೆ.

   ಹೊಸ ಲುಕ್‌ನಲ್ಲಿ ಅಭಿನಯ ಚಕ್ರವರ್ತಿ

  ಹೊಸ ಲುಕ್‌ನಲ್ಲಿ ಅಭಿನಯ ಚಕ್ರವರ್ತಿ

  ಚಿತ್ರರಂಗಕ್ಕೆ ಬಂದ ಆರಂಭದಲ್ಲಿ ಸುದೀಪ್ ಕ್ಲೀನ್‌ ಶೇವ್‌ನಲ್ಲಿ ಲವರ್ ಬಾಯ್ ಆಗಿ ಮಿಂಚಿದ್ದರು. ನಂತರ ಲೈಟಾಗಿ ಗಡ್ಡಬಿಟ್ಟು ರಗಡ್ ಲುಕ್‌ನಲ್ಲಿ ಕಾಣಿಸಿಕೊಳ್ಳಲು ಆರಂಭಿಸಿದ್ದರು. ಆಗೊಮ್ಮೆ ಈಗೊಮ್ಮೆ ಕೆಲ ಸಿನಿಮಾಗಳಲ್ಲಿ ಗಡ್ಡ ತೆಗೆದು ಮೀಸೆಯಲ್ಲಿ ಮಾತ್ರ ಕಾಣಿಸಿಕೊಂಡಿದ್ದರು. 'ಕಬ್ಜ' ಚಿತ್ರಕ್ಕಾಗಿ ಮತ್ತೆ ಗಡ್ಡ ತೆಗೆದು ಕಿಚ್ಚ ದರ್ಶನ ಕೊಟ್ಟಿದ್ದಾರೆ. ಅದರ ಫೋಟೊವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

   ಎರಡು ಭಾಗಗಳಾಗಿ 'ಕಬ್ಜ' ಸಿನಿಮಾ

  ಎರಡು ಭಾಗಗಳಾಗಿ 'ಕಬ್ಜ' ಸಿನಿಮಾ

  ಸದ್ಯ ಎಲ್ಲಾ ಇಂಡಸ್ಟ್ರಿಗಳಲ್ಲೂ ಸೀಕ್ವೆಲ್ ಸಿನಿಮಾಗಳು ದರ್ಬಾರ್ ನಡೆಸುತ್ತಿದೆ. ಆರಂಭದಲ್ಲಿ 'ಕಬ್ಜ' ಒಂದೇ ಸಿನಿಮಾ ಎನ್ನಲಾಗಿತ್ತು. ಆದರೆ ಕೊರೊನಾ ಲಾಕ್‌ಡೌನ್ ಸಮಯದಲ್ಲಿ ಸಿನಿಮಾ ಕಥೆಯನ್ನು ಹಿಗ್ಗಿಸಿ ಆರ್‌. ಚಂದ್ರು ಎರಡು ಭಾಗಗಳಾಗಿ ಚಿತ್ರವನ್ನು ಕಟ್ಟಿಕೊಡುವ ಸಾಹಸ ಮಾಡುತ್ತಿದ್ದಾರೆ. ಉಪೇಂದ್ರ ಜೊತೆಗೆ ಚಿತ್ರದಲ್ಲಿ ಕಬೀರ್ ದುಹಾನ್ ಸಿಂಗ್ ಮತ್ತು ಕೋಟಾ ಶ್ರೀನಿವಾಸ ರಾವ್ , ಜಯ ಪ್ರಕಾಶ್, ಕಾಟ್ ರಾಜು ಮತ್ತು ಸುಬ್ಬರಾಜು ಅಬ್ಬರಿಸಿದ್ದಾರೆ. 'ಕೆಜಿಎಫ್' ಖ್ಯಾತಿಯ ಶಿವಕುಮಾರ್ ಚಿತ್ರಕ್ಕಾಗಿ 18ಕ್ಕೂ ಅಧಿಕ ಸೆಟ್‌ಗಳನ್ನು ನಿರ್ಮಿಸಿದ್ದಾರೆ. ಬೆಂಗಳೂರು, ಸಂಡೂರು ಸೇರಿದಂತೆ ಸಾಕಷ್ಟು ಕಡೆಗಳಲ್ಲಿ 'ಕಬ್ಜ' ಚಿತ್ರೀಕರಣ ನಡೆದಿದೆ.

   'ಕಬ್ಜ' ಕೋಟೆಯಲ್ಲಿ ಏನೇನಿದೆ?

  'ಕಬ್ಜ' ಕೋಟೆಯಲ್ಲಿ ಏನೇನಿದೆ?

  1947ರಿಂದ ಶುರುವಾಗುವ ಗ್ಯಾಂಗ್‌ಸ್ಟರ್ 'ಕಬ್ಜ' ಕಥೆಯನ್ನು ಎರಡು ಭಾಗಗಳಾಗಿ ಆರ್. ಚಂದ್ರು ಹೇಳುತ್ತಿದ್ದಾರೆ. 'ಐ ಲವ್ ಯು' ಸಿನಿಮಾ ಸಕ್ಸಸ್ ಬೆನ್ನಲ್ಲೇ ಈ ಹೈವೋಲ್ಟೇಜ್ ಪ್ರಾಜೆಕ್ಟ್‌ ಅನ್ನು ನಿರ್ದೇಶಕರು ಕೈಗೆತ್ತಿಕೊಂಡಿದ್ದರು. ಕೊರೊನಾ ಹಾವಳಿಯಿಂದ ಶೂಟಿಂಗ್ ತಡವಾಗುತ್ತಲೇ ಬಂತು. ಚಿತ್ರದಲ್ಲಿ ರೆಟ್ರೋ ಸ್ಟೈಲ್ ಅಂಡರ್‌ವರ್ಲ್ಡ್ ಕಥೆ ಹೇಳಲಾಗ್ತಿದೆ. ಈಗಾಗಲೇ ಚಿತ್ರದ ಮೇಕಿಂಗ್ ವಿಡಿಯೋಗಳು ರಿಲೀಸ್ ಆಗಿ ಗಮನ ಸೆಳೆದಿದೆ. 60, 70, 80ರ ದಶಕದ ಕಾಲಘಟ್ಟವನ್ನು ಕಟ್ಟಿಕೊಡಲು ಚಂದ್ರು ಅಂಡ್ ಟೀಮ್ ಸಾಕಷ್ಟು ಕರಸತ್ತು ಮಾಡಿದೆ.

   ಸೆಪ್ಟೆಂಬರ್ 18ಕ್ಕೆ 'ಕಬ್ಜ' ಟೀಸರ್

  ಸೆಪ್ಟೆಂಬರ್ 18ಕ್ಕೆ 'ಕಬ್ಜ' ಟೀಸರ್

  ಆರ್‌. ಚಂದ್ರು ಕನಸಿನ ಪ್ರಾಜೆಕ್ಟ್ 'ಕಬ್ಜ'. ಬರೋಬ್ಬರಿ 7 ಭಾಷೆಗಳಲ್ಲಿ ಈ ಚಿತ್ರವನ್ನು ನಿರ್ಮಾಣ ಮಾಡಲಾಗುತ್ತಿದೆ. ಚಿತ್ರದಲ್ಲಿ ಉಪ್ಪಿ ಗ್ಯಾಂಗ್‌ಸ್ಟರ್ ಆಗಿ ನಟಿಸಿದ್ದು, 200 ದಿನಗಳ ಕಾಲ ಚಿತ್ರೀಕರಣ ನಡೆದಿದೆ. ಚಿತ್ರದಲ್ಲಿ ಶ್ರೇಯಾ ಶರಣ್ ನಾಯಕಿಯಾಗಿ ಮಿಂಚಿದ್ದು, ಪರಭಾಷೆಯ ಘಟಾನುಘಟಿ ಕಲಾವಿದರು ಚಿತ್ರದಲ್ಲಿ ನಟಿಸಿದ್ದಾರೆ. 'ಕೆಜಿಎಫ್' ಚಿತ್ರದಿಂದ ಪ್ರೇರಣೆಗೊಂಡು ಬಹಳ ಅದ್ಧೂರಿಯಾಗಿ ಈ ಚಿತ್ರವನ್ನು ಚಂದ್ರು ಕಟ್ಟಕೊಟ್ಟಿಕೊಟ್ಟಿದ್ದಾರೆ. ರಿಯಲ್ ಸ್ಟಾರ್ ಉಪೇಂದ್ರ ಹುಟ್ಟುಹಬ್ಬದ ಸಂಭ್ರಮದಲ್ಲಿ 'ಕಬ್ಜ' ಟೀಸರ್ ರಿಲೀಸ್ ಮಾಡುವುದಾಗಿ ಘೋಷಿಸಿದ್ದಾರೆ. ರವಿಬಸ್ರೂರು ಮ್ಯೂಸಿಕ್‌ ಹಿನ್ನೆಲೆಯಲ್ಲಿ ಜಬರ್ದಸ್ತ್‌ ಟೀಸರ್ ಕಟ್ ಮಾಡುವ ಕೆಲಸ ಶುರುವಾಗಿದ್ದು, ಸೆಪ್ಟೆಂಬರ್ 18ಕ್ಕೆ 'ಕಬ್ಜ' ಕೋಟೆಗೆ ಎಂಟ್ರಿ ಸಿಗಲಿದೆ.

  Recommended Video

  ಸಿನಿಮಾ ಗೆದಿದ್ದೆ ಆದ್ರೆ ನನಗೆ ಮೋಸ ಆಗಿದೆ | Gaalipata 2 | Pawan Kumar |Gaalipata 2 Collection
  English summary
  Upendra Starrer Kabza Shooting Completed Teaser On Real Star Birthday. Know More.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X