ಫಸ್ಟ್ ಡೇ ಕಬ್ಜಗೆ ಎಷ್ಟು ಶೋ, ಎಷ್ಟು ಟಿಕೆಟ್ ಮಾರಾಟ? ನಂಬರ್ 1 ಆಗಲು ಯಾವ ಚಿತ್ರವನ್ನು ಹಿಂದಿಕ್ಕಬೇಕು?

ಸ್ಯಾಂಡಲ್‌ವುಡ್‌ನ ಬಹುನಿರೀಕ್ಷಿತ ಚಿತ್ರ ಕಬ್ಜ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದೆ. ನಾಳೆ ಕರ್ನಾಟಕ ರತ್ನ ಪವರ್ ಸ್ಟಾರ್ ಹುಟ್ಟುಹಬ್ಬದ ಪ್ರಯುಕ್ತ ಕಬ್ಜ ಚಿತ್ರ ತೆರೆಗೆ ಬರುತ್ತಿದೆ. ಬಿಡುಗಡೆಗೂ ಮುನ್ನವೇ ಇಂದು ಸಂಜೆ ಬೆಂಗಳೂರಿನಲ್ಲಿ ಕಬ್ಜ ಚಿತ್ರದ ಪ್ರೀಮಿಯರ್ ಪ್ರದರ್ಶನಗಳು ಆರಂಭವಾಗಲಿವೆ. ಸೆಟ್ಟೇರಿದಾಗಿನಿಂದಲೂ ಸಿಕ್ಕಾಪಟ್ಟೆ ಸದ್ದು ಮಾಡುತ್ತಾ ಬೆಟ್ಟದಷ್ಟು ನಿರೀಕ್ಷೆಯನ್ನು ಹುಟ್ಟುಹಾಕಿರುವ ಕಬ್ಜ ಚಿತ್ರದ ಮೊದಲನೇ ಪ್ರದರ್ಶನವನ್ನೇ ವೀಕ್ಷಿಸಿಬಿಡಬೇಕು ಎಂದು ಸಿನಿ ರಸಿಕರು ಕಾಯುತ್ತಿದ್ದಾರೆ.

ಅದರಲ್ಲಿಯೂ ಆರ್ ಚಂದ್ರು ಚಿತ್ರವನ್ನು ರಿಚ್ ಆಗಿ ನಿರ್ದೇಶಿಸಿರುವ ರೀತಿ ಚಿತ್ರವನ್ನು ಸಿನಿ ರಸಿಕರು ಕೆಜಿಎಫ್ ಜತೆ ಹೋಲಿಕೆ ಮಾಡುವಂತೆ ಮಾಡಿದೆ. ಇಷ್ಟರ ಮಟ್ಟಿಗೆ ಸಿನಿ ರಸಿಕರನ್ನು ತನ್ನ ಮೇಕಿಂಗ್ ಮೂಲಕ ಕೆರಳಿಸಿರುವ ಕಬ್ಜ ಚಿತ್ರದ ತಾರಾಗಣ ಸಿನಿಮಾ ಮೇಲಿನ ಕ್ರೇಜ್ ಅನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದಿದೆ. ಹೌದು, ಚಿತ್ರದಲ್ಲಿ ಕನ್ನಡ ಚಿತ್ರರಂಗದ ಮೂವರು ಸ್ಟಾರ್ ನಟರಾದ ರಿಯಲ್ ಸ್ಟಾರ್ ಉಪೇಂದ್ರ, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹಾಗೂ ಸ್ಯಾಂಡಲ್‌ವುಡ್ ಕಿಂಗ್ ಶಿವ ರಾಜ್‌ಕುಮಾರ್ ನಟಿಸಿದ್ದು, ಈ ಮೂವರೂ ಒಂದೇ ಚಿತ್ರದಲ್ಲಿ ನಟಿಸಿರುವುದು ಮೂವರ ಅಭಿಮಾನಿಗಳು ಹಾಗೂ ಸಿನಿ ರಸಿಕರನ್ನು ಚಿತ್ರಮಂದಿರದತ್ತ ಮಾಡುತ್ತಿದೆ.

Upendra starrer Kabzaa advance booking collection crossed 68 lakhs on day 1

ಹೀಗೆ ಸಾಕಷ್ಟು ವಿಷಯಗಳಿಂದ ನಿರೀಕ್ಷೆ ಹುಟ್ಟುಹಾಕಿರುವ ಕಬ್ಜ ಚಿತ್ರದ ಮುಂಗಡ ಟಿಕೆಟ್ ಬುಕಿಂಗ್ ಅನ್ನು ಮೂರು ದಿನಗಳ ಹಿಂದೆಯೇ ತೆರೆಯಲಾಗಿದ್ದು, ಸಿನಿ ರಸಿಕರು ಟಿಕೆಟ್ ಖರೀದಿಸಲು ಮುಗಿಬಿದ್ದಿದ್ದಾರೆ. ಅದರಲ್ಲಿಯೂ ಬೆಂಗಳೂರು ನಗರದಲ್ಲಿ ಚಿತ್ರದ ಟಿಕೆಟ್‌ಗೆ ಭಾರೀ ಬೇಡಿಕೆ ಇದ್ದು, ಮೊದಲ ದಿನ ಚಿತ್ರ ದೊಡ್ಡ ಓಪನಿಂಗ್ ಪಡೆದುಕೊಳ್ಳುವ ಸಾಧ್ಯತೆ ಇದೆ. ಹಾಗಿದ್ದರೆ ಬೆಂಗಳೂರಿನಲ್ಲಿ ಕಬ್ಜ ಚಿತ್ರಕ್ಕೆ ಇಲ್ಲಿನವರೆಗೆ ( ಮಾರ್ಚ್ 16ರ ಮಧ್ಯಾಹ್ನ 1.30 ) ಬೆಂಗಳೂರಿನಲ್ಲಿ ಮೊದಲ ದಿನಕ್ಕಾಗಿ ಎಷ್ಟು ಪ್ರದರ್ಶನಗಳನ್ನು ಪಡೆದುಕೊಂಡಿದೆ ಹಾಗೂ ಎಷ್ಟು ಟಿಕೆಟ್‌ಗಳು ಮಾರಾಟಗೊಂಡಿವೆ ಎಂಬ ಮಾಹಿತಿ ಈ ಕೆಳಕಂಡಂತಿದೆ..

ಮಾರ್ಚ್ 16ರ ಮಧ್ಯಾಹ್ನ 1.30ರವರೆಗೆ ಕಬ್ಜ ಚಿತ್ರದ ಬಿಡುಗಡೆ ದಿನದ 68000 ಟಿಕೆಟ್‌ಗಳು ಬೆಂಗಳೂರಿನಲ್ಲಿ ಮಾರಾಟವಾಗಿದ್ದರೆ, ಇದೇ ಸಮಯಕ್ಕೆ ಮೊದಲ ದಿನ ಕಬ್ಜ ಚಿತ್ರಕ್ಕೆ ಬೆಂಗಳೂರಿನಲ್ಲಿ 535 ಪ್ರದರ್ಶಗಳು ಲಭಿಸಿವೆ. ಚಿತ್ರ ತೆರೆಗೆ ಅಪ್ಪಳಿಸಲು ಇನ್ನೂ ಸಮಯವಿದ್ದು, ಈ ಅಂಕಿಗಳು ಎಷ್ಟರ ಮಟ್ಟಕ್ಕೆ ಹೋಗಿ ಮುಟ್ಟುತ್ತವೆಯೋ ಕಾದು ನೋಡಬೇಕಿದೆ. ಸದ್ಯ 535 ಪ್ರದರ್ಶನಗಳನ್ನು ಹೊಂದಿರುವ ಕಬ್ಜ ಈ ವರ್ಷ ಬಿಡುಗಡೆಯ ದಿನ ಬೆಂಗಳೂರಿನಲ್ಲಿ ಅತಿಹೆಚ್ಚು ಪ್ರದರ್ಶನ ಪಡೆದುಕೊಂಡ ಚಿತ್ರಗಳ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದ್ದು, ನಂಬರ್ ಒನ್ ಎನಿಸಿಕೊಳ್ಳಲು ಪಠಾಣ್ ಸಿನಿಮಾದ 821 ಪ್ರದರ್ಶನಗಳ ದಾಖಲೆಯನ್ನು ಹಿಂದಿಕ್ಕಬೇಕಿದೆ.

Upendra starrer Kabzaa advance booking collection crossed 68 lakhs on day 1

2023ರಲ್ಲಿ ಬಿಡುಗಡೆ ದಿನ ಬೆಂಗಳೂರಿನಲ್ಲಿ ಅತಿಹೆಚ್ಚು ಪ್ರದರ್ಶನಗಳನ್ನು ಪಡೆದುಕೊಂಡ ಚಿತ್ರಗಳು

ಈ ವರ್ಷ ಮೊದಲ ದಿನ ಬೆಂಗಳೂರಿನಲ್ಲಿ ಅತಿಹೆಚ್ಚು ಪ್ರದರ್ಶನಗಳನ್ನು ಪಡೆದುಕೊಂಡ ಚಿತ್ರಗಳ ಟಾಪ್ 5 ಪಟ್ಟಿ ಕೆಳಕಂಡಂತಿದೆ..

1. ಪಠಾಣ್ - 821 ಪ್ರದರ್ಶನಗಳು

2. ವಾರಿಸು - 757 ಪ್ರದರ್ಶನಗಳು

3. ಕ್ರಾಂತಿ - 680 ಪ್ರದರ್ಶನಗಳು

4. ತುನಿವು - 568 ಪ್ರದರ್ಶನಗಳು

5. ಕಬ್ಜ - 535 ಪ್ರದರ್ಶನಗಳು ( ಮಾರ್ಚ್ 16ರ ಮಧ್ಯಾಹ್ನ 1.30ರವರೆಗೆ )

6. ತೂ ಜೂತಿ ಮೈ ಮಕ್ಕಾರ್ - 496 ಪ್ರದರ್ಶನಗಳು

7. ವೀರ ಸಿಂಹ ರೆಡ್ಡಿ - 406 ಪ್ರದರ್ಶನಗಳು

More from Filmibeat

English summary
Upendra starrer Kabzaa advance booking collection crossed 68 lakhs on day 1. Read on
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X