Kabzaa Bookings: 'ಕಬ್ಜ' ಅಡ್ವಾನ್ಸ್‌ ಬುಕ್ಕಿಂಗ್‌ ಮುಹೂರ್ತ ಫಿಕ್ಸ್: ಕರ್ನಾಟಕದಲ್ಲಿ ಹೊಸ ದಾಖಲೆ

ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಆರ್‌. ಚಂದ್ರು ಕಾಂಬಿನೇಷನ್‌ 'ಕಬ್ಜ' ಸಿನಿಮಾ ಇದೇ ಶುಕ್ರವಾರ ವಿಶ್ವದಾದ್ಯಂತ ತೆರೆಗಪ್ಪಳಿಸುತ್ತಿದೆ. ಈಗಾಗಲೇ ಸಿನಿಮಾ ಟ್ರೈಲರ್ ನೋಡಿ ಫಸ್ಟ್ ಡೇ ಫಸ್ಟ್ ಶೋ ಸಿನಿಮಾ ನೋಡಲು ಸಿನಿರಸಿಕರು ಕಾಯುತ್ತಿದ್ದಾರೆ. ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ಆಕ್ಷನ್ ಎಂಟರ್ಟೈನರ್ ಚಿತ್ರವನ್ನು ಅಷ್ಟೇ ದೊಡ್ಡದಾಗಿ ರಿಲೀಸ್ ಮಾಡಲಾಗುತ್ತಿದೆ.

ಆರ್‌. ಚಂದ್ರು ಕನಸಿನ ಸಿನಿಮಾ 'ಕಬ್ಜ'. ಬಹಳ ಅದ್ಧೂರಿಯಾಗಿ ಸಿನಿಮಾ ನಿರ್ಮಿಸಿ, ನಿರ್ದೇಶನ ಮಾಡಿದ್ದಾರೆ. ಪ್ರತಿ ಫ್ರೇಮ್‌ ಕೂಡ ಕಣ್ಣಿಗೆ ಹಬ್ಬ ಎನ್ನುವಂತಿದೆ. ವಿಷ್ಯುವಲ್ಸ್ ನೋಡುವುದಕ್ಕೆ ಅಂತ್ಲೇ ಪ್ರೇಕ್ಷಕರು ಥಿಯೇಟರ್‌ಗೆ ಎಂಟ್ರಿ ಕೊಡುವ ಸಾಧ್ಯತೆಯಿದೆ. ಇನ್ನು ಚಿತ್ರದಲ್ಲಿ ಕಿಚ್ಚ ಸುದೀಪ್ ಹಾಗೂ ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಗೆಸ್ಟ್ ಅಪಿಯರೆನ್ಸ್ ಮಾಡಿರೋದು ಕುತೂಹಲ ಹೆಚ್ಚಿಸಿದೆ. ಟ್ರೈಲರ್ ನೋಡಿದ್ಮೇಲೆ ಸಿನಿಮಾ ಮೇಲಿನ ನಿರೀಕ್ಷೆ ಎವರೆಸ್ಟ್ ಎತ್ತರಕ್ಕೆ ಏರಿದೆ.

upendra Starrer Kabzaa advance bookings opens at 6:01PM today

ಇಂದು ಸಂಜೆ (ಮಾರ್ಚ್ 12) ಸರಿಯಾಗಿ 6 ಗಂಟೆ ಒಂದು ನಿಮಿಷಕ್ಕೆ ಕರ್ನಾಟಕದಲ್ಲಿ ಕೆಲವೆಡೆ ಅಡ್ವಾನ್ಸ್ ಬುಕ್ಕಿಂಗ್ ಓಪನ್ ಆಗಲಿದೆ. ಬರೋಬ್ಬರಿ 405 ಸ್ಕ್ರೀನ್‌ಗಳಲ್ಲಿ ಕನ್ನಡದ 'ಕಬ್ಜ' ಸಿನಿಮಾ ರಿಲೀಸ್ ಆಗಲಿದೆ. ತಜ್ಞರ ಪ್ರಕಾರ ಕರ್ನಾಟಕದ ಇತಿಹಾಸದಲ್ಲೇ ಏಕಕಾಲಕ್ಕೆ ಅತಿಹೆಚ್ಚು ಸ್ಕ್ರೀನ್‌ಗಳಲ್ಲಿ ಬಿಡುಗಡೆಗೊಳ್ಳುತ್ತಿರುವ ಸಿನಿಮಾ ಎನ್ನುವ ದಾಖಲೆ 'ಕಬ್ಜ' ಚಿತ್ರದ್ದಾಗಲಿದೆ. ಬೆಂಗಳೂರಿನ ಒರಾಯಿನ್ ಮಾಲ್ ಮತ್ತು ಮೈಸೂರಿನ ಡಿಆರ್‌ಸಿ ಥಿಯೇಟರ್‌ಗಳಲ್ಲಿ ಪೂಜೆ ಸಲ್ಲಿಸಿ ಟಿಕೆಟ್ ಬುಕ್ಕಿಂಗ್ ಆರಂಭಿಸಲಾಗುತ್ತಿದೆ.

ಅಂದಾಜು 100 ಕೋಟಿ ಬಜೆಟ್‌ನಲ್ಲಿ 'ಕಬ್ಜ' ಸಿನಿಮಾ ನಿರ್ಮಾಣ ಆಗಿರುವುದಾಗಿ ಹೇಳಲಾಗ್ತಿದೆ. ಚಿತ್ರದಲ್ಲಿ ಶ್ರಿಯಾ ಶರಣ್ ನಾಯಕಿಯಾಗಿ ಮಿಂಚಿದ್ದಾರೆ. ಇನ್ನು ಮುರಳಿ ಶರ್ಮಾ, ನವಾಬ್ ಶಾ, ಕೋಟ ಶ್ರೀನಿವಾಸ್ ರಾವ್, ಪೋಸಾನಿ ಕೃಷ್ಣ ಮುರಳಿ, ಕಬೀರ್ ದುಹಾನ್ ಸಿಂಗ್, ಸುನಿಲ್ ಪುರಾನಿಕ್ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ. 40ರ ದಶಕದಿಂದ ಶುರುವಾಗುವ ಕಾಲ್ಪನಿಕ ಗ್ಯಾಂಗ್‌ಸ್ಟರ್ ಕಥೆಯನ್ನು ಚಿತ್ರದಲ್ಲಿ ಹೇಳಲಾಗುತ್ತಿದೆ. ಉಪ್ಪಿ ಗ್ಯಾಂಗ್‌ಸ್ಟರ್ ಅರ್ಕೇಶ್ವರ ಆಗಿ ಕಾಣಿಸಿಕೊಂಡಿದ್ದಾರೆ.

ಆರ್ಟ್ ಡೈರೆಕ್ಟರ್ ಶಿವಕುಮಾರ್ ಅದ್ಧೂರಿ ಸೆಟ್‌ಗಳನ್ನು ನಿರ್ಮಿಸಿದ್ದಾರೆ. ಇದಕ್ಕಾಗಿ 20 ಕೋಟಿವರಗೂ ವ್ಯಯಿಸಲಾಗಿದೆ. ಬಹುತೇಕ ಸೆಟ್‌ಗಳಲ್ಲೇ ಸಿನಿಮಾ ಚಿತ್ರೀಕರಣ ನಡೆದಿದೆ. ರವಿ ಬಸ್ರೂರು ಸಂಗೀತ ಚಿತ್ರದ ಮತ್ತೊಂದು ಹೈಲೆಟ್. ಈಗಾಗಲೇ ಟ್ರೈಲರ್ ಬಿಜಿಎಂ ಕೇಳಿ ಸಿನಿರಸಿಕರು ಫಿದಾ ಆಗಿದ್ದಾರೆ. ಏಕಕಾಲಕ್ಕೆ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಸಿನಿಮಾ ರಿಲೀಸ್ ಆಗುತ್ತಿದೆ. ಸ್ಯಾಂಡಲ್‌ವುಡ್‌ನ ಮತ್ತೊಂದು KGF ರೇಂಜ್‌ ಸಿನಿಮಾ 'ಕಬ್ಜ' ಎಂದು ಪರಭಾಷಾ ಸಿನಿರಸಿಕರು ಕಾಯುತ್ತಿದ್ದಾರೆ. ಬಿಗ್‌ ಬಿ ಅಮಿತಾಬ್ ಬಚ್ಚನ್ ಚಿತ್ರದ ಟ್ರೈಲರ್ ರಿಲೀಸ್ ಮಾಡಿದ್ದರು.

upendra Starrer Kabzaa advance bookings opens at 6:01PM today

ಮಾರ್ಚ್ 17ರಂದು ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬದ ಸಂಭ್ರಮದಲ್ಲೇ ಸಿನಿಮಾ ತೆರೆಗೆ ಬರ್ತಿದೆ. ನಿರ್ದೇಶಕ ಆರ್‌. ಚಂದ್ರು ಚಿತ್ರವನ್ನು ಅಪ್ಪುಗೆ ಅರ್ಪಿಸಿದ್ದಾರೆ. ಈಗಾಗಲೇ ಚಿತ್ರದ 3 ಸಾಂಗ್ಸ್ ರಿಲೀಸ್ ಆಗಿ ಹಿಟ್ ಆಗಿದೆ. ತಾನ್ಯಾ ಹೋಪ್ ಚಿತ್ರದ ಸ್ಪೆಷಲ್ ಸಾಂಗ್‌ಗೆ ಹೆಜ್ಜೆ ಹಾಕಿದ್ದಾರೆ. ರಾಣಿ ಮಧುಮತಿಯಾಗಿ ಶ್ರೀಯಾ ಶರಣ್ ನಟರಾಜನನ್ನು ಆರಾಧಿಸುವ 'ನಮಾಮಿ ನಮಾಮಿ' ಸಾಂಗ್‌ ಕೂಡ ಹಿಟ್ ಆಗಿದೆ.

ವಿಶ್ವದಾದ್ಯಂತ 3000ಕ್ಕೂ ಅಧಿಕ ಸ್ಕ್ರೀನ್‌ಗಳಲ್ಲಿ 'ಕಬ್ಜ' ಸಿನಿಮಾ ರಿಲೀಸ್ ಆಗ್ತಿದೆ. ಸುಧಾಕರ್ ರೆಡ್ಡಿ ಹಾಗೂ ಬಾಂಬೆ ರಮೇಶ್ 'ಕಬ್ಜ' ತೆಲಂಗಾಣ ಹಾಗೂ ಆಂಧ್ರ ಪ್ರದೇಶದ ವಿತರಣೆ ಹಕ್ಕು ಖರೀದಿಸಿದ್ದಾರೆ. ಕೇರಳದಲ್ಲಿ ಎಲ್‌ಜಿಎಫ್ ಸ್ಟುಡಿಯೋ ಸಂಸ್ಥೆ, ತಮಿಳಿನಲ್ಲಿ ಲೈಕಾ ಸಂಸ್ಥೆ ಥ್ರಿಯೇಟ್ರಿಕಲ್ ರೈಟ್ಸ್ ಖರೀದಿಸಿದೆ. ಆನಂದ್ ಪಂಡಿತ್ ಹಿಂದಿ ವರ್ಷನ್ ರೈಟ್ಸ್ ಸ್ವತಃ ಮಾಡಿಕೊಂಡಿದ್ದಾರೆ.

More from Filmibeat

English summary
upendra Starrer Kabzaa advance bookings opens at 6:01PM today. The movie release in 405 Screen its record in karnataka highest screen. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X