ಬೆಂಗಳೂರಿನ ಈ 3 ಚಿತ್ರಮಂದಿರಗಳಲ್ಲಿ 25 ದಿನಗಳನ್ನು ಪೂರೈಸಿದ ಕಬ್ಜ!
ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಆರ್ ಚಂದ್ರು ಕಾಂಬಿನೇಶನ್‌ನ ಮೂರನೇ ಚಿತ್ರ ಕಬ್ಜ ಚಿತ್ರ ಮಾರ್ಚ್ 17ರಂದು ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬದ ಪ್ರಯುಕ್ತ ಬಿಡುಗಡೆಯಾಗಿತ್ತು. ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ತೆರೆಕಂಡ ಈ ಚಿತ್ರ ಉಪೇಂದ್ರ ಸಿನಿ ಕೆರಿಯರ್‌ನ ಮೊದಲ ಪ್ಯಾನ್ ಇಂಡಿಯಾ ಚಿತ್ರವಾಗಿದ್ದು, ವಿಶ್ವದಾದ್ಯಂತ 4000 ಪರದೆಗಳಲ್ಲಿ ಚಿತ್ರ ತೆರೆಗೆ ಬಂದಿತು.
ಚಿತ್ರ ತನ್ನ ಮೇಕಿಂಗ್, ಛಾಯಾಗ್ರಹಣ ಹಾಗೂ ಸಂಗೀತದ ಕಾರಣದಿಂದಾಗಿ ಬಿಡುಗಡೆಗೂ ಮುನ್ನವೇ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಹೌದು, ಟೀಸರ್ ಹಾಗೂ ಟ್ರೈಲರ್‌ಗಳ ಮೂಲಕವೇ ಸಿನಿ ರಸಿಕರನ್ನು ತನ್ನತ್ತ ಸೆಳೆದಿದ್ದ ಕಬ್ಜ ಚಿತ್ರ ದೊಡ್ಡ ಮಟ್ಟದ ನಿರೀಕ್ಷೆಯನ್ನೇ ಮೂಡಿಸಿತ್ತು. ಇನ್ನು ಬಿಡುಗಡೆಯಾದ ಬಳಿಕ ಚಿತ್ರ ಕಲೆಕ್ಷನ್ ವಿಚಾರವಾಗಿ ಸದ್ದು ಮಾಡಿತು. ಬಿಡುಗಡೆಯಾದ ನಾಲ್ಕೇ ದಿನಗಳಲ್ಲಿ ಚಿತ್ರ ನೂರು ಕೋಟಿ ಗಳಿಕೆ ಮಾಡಿದೆ ಎಂದು ಚಿತ್ರತಂಡ ಅಧಿಕೃತ ಘೋಷಣೆ ಮಾಡಿತು.

ಅಲ್ಲದೇ ಕಾರ್ಯಕ್ರಮವನ್ನೂ ಸಹ ಏರ್ಪಡಿಸಿ ಕೇಕ್ ಕತ್ತರಿಸಿ ನೂರು ಕೋಟಿ ಕಲೆಕ್ಷನ್‌ನ ಸಂಭ್ರಮಾಚರಣೆಯನ್ನು ಮಾಡಲಾಯಿತು. ಹೀಗೆ ಬಿಡುಗಡೆಯಾದ ಆರಂಭದಲ್ಲಿಯೇ ಬಾಕ್ಸ್ ಆಫೀಸ್‌ನಲ್ಲಿ ಅಬ್ಬರಿಸಿದ್ದ ಕಬ್ಜ ಚಿತ್ರ ನಿನ್ನೆ ( ಏಪ್ರಿಲ್ 10 ) 25 ದಿನಗಳನ್ನು ಪೂರೈಸಿದೆ. ಹೌದು, ಕಬ್ಜ ಬಿಡುಗಡೆಯಾಗಿ ನಿನ್ನೆಗೆ 25 ದಿನಗಳು ಕಳೆದಿವೆ. ಚಿತ್ರ ಬೆಂಗಳೂರಿನ 3 ಚಿತ್ರಮಂದಿಗಳಲ್ಲಿ 25 ದಿನಗಳನ್ನು ಪೂರೈಸಿದೆ. ಮುಖ್ಯ ಚಿತ್ರಮಂದಿರ ನರ್ತಕಿ, ಮೈಸೂರು ರಸ್ತೆಯ ಆರ್ಕೆಡ್ ಮಾಲ್‌ನ ಗೋಪಾಲನ್ ಸಿನಿಮಾಸ್‌ನಲ್ಲಿ ಒಂದು ಶೋ ಹಾಗೂ ಡಾ ರಾಜ್‌ಕುಮಾರ್ ರಸ್ತೆಯ ಒರಾಯನ್ ಮಾಲ್‌ನ ಪಿವಿಆರ್‌ನ ಒಂದು ಸ್ಕ್ರೀನ್‌ನಲ್ಲಿ ಕಬ್ಜ ಚಿತ್ರ 25 ದಿನಗಳನ್ನು ಪೂರೈಸಿದೆ.
ಅಲ್ಲದೇ ಮೈಸೂರಿನ ಲಿಡೋ ಚಿತ್ರಮಂದಿರದಲ್ಲಿ, ದಾವಣಗೆರೆಯ ಅಶೋಕ ಚಿತ್ರಮಂದಿರದಲ್ಲಿ, ಹುಬ್ಬಳ್ಳಿಯ ಸಿನಿಪೊಲಿಸ್ ಮಲ್ಟಿಪ್ಲೆಕ್ಸ್‌ನಲ್ಲಿ, ದಾವಣಗೆರೆಯ ಅಶೋಕ ಚಿತ್ರಮಂದಿರದಲ್ಲಿ ಹಾಗೂ ತುಮಕೂರಿನ ಗಾಯತ್ರಿ ಚಿತ್ರಮಂದಿರದಲ್ಲಿ ಕಬ್ಜ ಚಿತ್ರ 25 ದಿನಗಳನ್ನು ಪೂರೈಸಿದೆ. ಈ ಮೂಲಕ ರಾಜ್ಯದ ಸುಮಾರು ಹತ್ತು ಕೇಂದ್ರಗಳಲ್ಲಿ ಕಬ್ಜ ಚಿತ್ರ 25 ದಿನಗಳನ್ನು ಪೂರೈಸಿದ್ದು, ಹೊರ ರಾಜ್ಯದ ಯಾವ ನಗರದಲ್ಲಿಯೂ ಚಿತ್ರ ಪ್ರದರ್ಶನಗೊಳ್ಳುತ್ತಿಲ್ಲ.
ಒಟ್ಟಿನಲ್ಲಿ ಕಬ್ಜ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ನೂರು ಕೋಟಿ ಹಾಗೂ ಚಿತ್ರ ಬಿಡುಗಡೆಗೂ ಮುನ್ನ ವಿವಿಧ ಹಕ್ಕುಗಳ ಮಾರಾಟದಿಂದ ನೂರು ಕೋಟಿಯನ್ನು ತನ್ನ ತೆಕ್ಕೆಗೆ ಹಾಕಿಕೊಂಡಿದೆ. ಇನ್ನು ಸದ್ಯ 25 ದಿನಗಳನ್ನು ಪೂರೈಸಿರುವ ಕಬ್ಜ ಚಿತ್ರ ಇದೇ ತಿಂಗಳ 14ರಂದು ಓಟಿಟಿ ವೇದಿಕೆಯಲ್ಲಿ ಬಿಡುಗಡೆಯಾಗಲಿದ್ದು ಅಮೆಜಾನ್ ಪ್ರೈಮ್ ವಿಡಿಯೊದಲ್ಲಿ ವೀಕ್ಷಿಸಲು ಲಭ್ಯವಿದೆ. ಸದ್ಯ ಕಬ್ಜ ಚಿತ್ರ 25 ದಿನಗಳನ್ನು ಪೂರೈಸಿರುವುದರ ಕುರಿತು ನಿರ್ದೇಶಕ ಆರ್ ಚಂದ್ರು ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್ ಮಾಡಿದ್ದು, 25 ದಿನಗಳ ಪೋಸ್ಟರ್ ಹಂಚಿಕೊಂಡಿದ್ದಾರೆ.
ಕಬ್ಜ ಚಿತ್ರದ ತಮಿಳು ವರ್ಷನ್ ಓಟಿಟಿಯಲ್ಲಿ ಬಿಡುಗಡೆಯಾಗುವ ಮುನ್ನವೇ ಲೀಕ್ ಆಗಿದೆ. ಹೌದು, ಕಬ್ಜ ಚಿತ್ರದ ಫುಲ್ ಎಚ್‌ಡಿ ಪ್ರಿಂಟ್ ಟಾರೆಂಟ್ಸ್ ವೆಬ್‌ಸೈಟ್‌ಗಳಲ್ಲಿ ಲಭ್ಯವಿದ್ದು, ಓಟಿಟಿಯಲ್ಲಿ ಬಿಡುಗಡೆಯಾಗುವ ಮುನ್ನವೇ ಮೊಬೈಲ್ ಪರದೆಗಳಲ್ಲಿ ಹರಿದಾಡಿದೆ. ಕೇವಲ ತಮಿಳು ವರ್ಷನ್ ಚಿತ್ರ ಮಾತ್ರ ಲೀಕ್ ಆಗಿದ್ದು, ಉಳಿದ ಭಾಷೆಗಳ ಪ್ರಿಂಟ್ ಲೀಕ್ ಆಗಿಲ್ಲ.


Click it and Unblock the Notifications











