ಓಟಿಟಿಯಲ್ಲಿ ಬಿಡುಗಡೆಯಾಗುವ ಮುನ್ನವೇ ಲೀಕ್ ಆಯಿತು ಕಬ್ಜ ಸಂಪೂರ್ಣ ಹೆಚ್‌ಡಿ ಸಿನಿಮಾ!
ಪೈರಸಿ.. ಅನೇಕ ವರ್ಷಗಳಿಂದ ಸಿನಿಮಾ ಇಂಡಸ್ಟ್ರಿಗಳನ್ನು ಕಾಡುತ್ತಿರುವ ಪೆಡಂಭೂತ. ಈ ಪೈರಸಿಯಿಂದಾಗಿ ಹಿನ್ನಡೆ ಅನುಭವಿಸಿದ ಸಿನಿಮಾಗಳ ಸಂಖ್ಯೆ ಅಪಾರ. ಈ ಹಿಂದೆ ಮೊಬೈಲ್ ಯುಗ ಆರಂಭವಾಗುವ ಮುನ್ನ ಪೈರಸಿ ಡಿವಿಡಿಗಳ ಮೂಲಕ ಜರುಗುತ್ತಿತ್ತು. ಥಿಯೇಟರ್‌ನಲ್ಲಿ ಕದ್ದು ಮಾಡಲಾದ ವಿಡಿಯೊ ರೆಕಾರ್ಡಿಂಗ್‌ಗಳನ್ನು ಡಿವಿಡಿಗಳಲ್ಲಿ ಶೇಖರಿಸಿ ಮಾರಾಟ ಮಾಡಲಾಗುತ್ತಿತ್ತು. ಮೂವತ್ತು ರೂಪಾಯಿಗಳಿಗೆ ಸುಮಾರು ಮೂರು ಚಿತ್ರಗಳು ಲಭಿಸುವಾಗ ಚಿತ್ರಮಂದಿರಕ್ಕೆ ಖರ್ಚು ಮಾಡಿಕೊಂಡು ತೆರಳಿ ಸಿನಿಮಾ ಯಾರು ನೋಡ್ತಾರೆ ಎಂಬ ಪ್ರತ್ಯೇಕ ವೀಕ್ಷಕರ ವರ್ಗ ಆಗಲೇ ಹುಟ್ಟಿಕೊಂಡಿತ್ತು.
ಇನ್ನು ಆಂಡ್ರಾಯ್ಡ್ ಯುಗ ಆರಂಭವಾದ ಮೇಲಂತೂ ಈ ಪೈರಸಿ ಸಹ ಅಪ್‌ಗ್ರೇಡ್ ಆಗಿಬಿಟ್ಟಿತು. ಡಿವಿಡಿಗಳಿಗಿಂತ ಅಗ್ಗವಾಗಿ ಒಂದು ಚಿತ್ರದ ಪೈರಸಿ ಮೊಬೈಲ್‌ಗಳನ್ನು ತಲುಪಲಾಂಭಿಸಿದವು. ಹೀಗೆ ಮೊಬೈಲ್‌ಗಳಲ್ಲಿಯೂ ಪೈರಸಿ ಚಿತ್ರಗಳನ್ನು ವೀಕ್ಷಿಸುವರ ಸಂಖ್ಯೆ ಹೆಚ್ಚಾದ ಕಾರಣ ಪೈರಸಿ ಸಿನಿಮಾ ವೆಬ್ ಸೈಟ್‌ಗಳೂ ಸಹ ದೊಡ್ಡ ಮಟ್ಟದಲ್ಲಿ ಬೆಳದವು. ಚಿತ್ರ ಬಿಡುಗಡೆಯ ದಿನದ ಬೆಳಗ್ಗಿನ ಪ್ರದರ್ಶನವನ್ನು ನೋಡಿ ಪ್ರೇಕ್ಷಕರು ಮನೆ ತಲುಪುವ ಹೊತ್ತಿಗಾಗಲೇ ಪೈರಸಿ ಪ್ರಿಂಟ್ ವೆಬ್ ಸೈಟ್‌ಗಳಲ್ಲಿ ಅಪ್‌ಲೋಡ್ ಆಗಿ ಬಿಟ್ಟಿರುತ್ತಿದ್ದವು.

ಇನ್ನು ಥಿಯೇಟರ್ ಪ್ರಿಂಟ್ ಮಾತ್ರವಲ್ಲದೇ ಕೆಲ ಚಿತ್ರಗಳ ಮಾಸ್ಟರ್ ಪ್ರಿಂಟ್ ಸಹ ಈ ಪೈರಸಿ ವೆಬ್ ಸೈಟ್‌ಗಳಲ್ಲಿ ( ಟಾರೆಂಟ್ಸ್ ) ಅಪ್‌ಲೋಡ್ ಆಗಲು ಶುರುವಾದವು. ಹೌದು, ಚಿತ್ರ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುವ ಮುನ್ನವೇ ಹಲವು ಚಿತ್ರಗಳ ಎಚ್‌ಡಿ ಪ್ರಿಂಟ್ ಈ ಟಾರೆಂಟ್ಸ್ ವೆಬ್ ತಾಣಗಳಲ್ಲಿ ಬಿಡುಗಡೆಗೊಂಡಿದ್ದವು. ಹೀಗೆ ಹಿಂದಿನಿಂದಲೂ ಸಿನಿಮಾ ಮಂದಿಗೆ ಕಾಟ ನೀಡುತ್ತಾ ಬಂದಿರುವ ಪೈರಸಿ ಮಂದಿ ಸದ್ಯದ ಓಟಿಟಿ ಯುಗದಲ್ಲಿಯೂ ಸಹ ತಮ್ಮ ಅಟ್ಟಹಾಸವನ್ನು ಮುಂದುವರಿಸಿದ್ದಾರೆ.
ಚಿತ್ರಗಳು ಚಿತ್ರಮಂದಿರದಲ್ಲಿ ಬಿಡುಗಡೆಯಾಗಿ ಇನ್ನೇನು ಕೆಲವೇ ದಿನಗಳಲ್ಲಿ ಓಟಿಟಿಯಲ್ಲಿ ಬಿಡುಗಡೆಯಾಗಬೇಕು ಎನ್ನುವಷ್ಟರಲ್ಲಿ ಪೈರಸಿ ವೆಬ್ ಸೈಟ್‌ಗಳಲ್ಲಿ ಅವುಗಳ ಎಚ್‌ಡಿ ಪ್ರಿಂಟ್‌ಗಳನ್ನು ಲೀಕ್ ಮಾಡಲಾಗುತ್ತಿದೆ. ಇದರಿಂದ ಸಿನಿಮಾ ತಂಡಗಳಿಗೆ ಹಿನ್ನಡೆ ಆಗದಿದ್ದರೂ ಸಹ ಓಟಿಟಿ ಹಕ್ಕು ಖರೀದಿಸಿದವರಿಗೆ ಹಿನ್ನಡೆಯಾಗುತ್ತಿರುವುದಂತೂ ನಿಜ. ಇನ್ನು ಈ ಸಾಲಿಗೆ ಇದೀಗ ರಿಯಲ್ ಸ್ಟಾರ್ ಉಪೇಂದ್ರ, ಕಿಚ್ಚ ಸುದೀಪ್, ಶಿವ ರಾಜ್‌ಕುಮಾರ್ ನಟನೆಯ, ಆರ್ ಚಂದ್ರು ನಿರ್ದೇಶನದ ಕಬ್ಜ ಚಿತ್ರ ಸಹ ಸೇರ್ಪಡೆಗೊಂಡಿದೆ.

ಹೌದು, ಇಂದು ( ಏಪ್ರಿಲ್ 7 ) ತಮಿಳು ಎಂವಿ ಸೇರಿದಂತೆ ಹಲವಾರು ವೆಬ್ ಸೈಟ್‌ಗಳಲ್ಲಿ ಕಬ್ಜ ಚಿತ್ರದ ಸಂಪೂರ್ಣ ಎಚ್ ಡಿ ಪ್ರಿಂಟ್ ಬಿಡುಗಡೆಗೊಂಡಿದೆ. ಇನ್ನು ಕೇವಲ ತಮಿಳು ಭಾಷೆಯಲ್ಲಿ ಮಾತ್ರ ಕಬ್ಜ ಚಿತ್ರ ಲೀಕ್ ಆಗಿದೆ. ಈ ಮೂಲಕ ಕಬ್ಜ ಓಟಿಟಿಯಲ್ಲಿ ಅಧಿಕೃತವಾಗಿ ಬಿಡುಗಡೆಯಾಗುವ ಮುನ್ನವೇ ಟಾರೆಂಟ್ಸ್ ವೆಬ್ ಸೈಟ್‌ಗಳಲ್ಲಿ ಹರಿದಾಡುತ್ತಿದೆ. ಅಂದ್ಹಾಗೆ ಕಬ್ಜ ಚಿತ್ರ ಕಳೆದ ಮಾರ್ಚ್ 17ರಂದು ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬದ ಪ್ರಯುಕ್ತ ಬಿಡುಗಡೆಗೊಂಡಿತ್ತು.
ಇನ್ನು ಕಬ್ಜ ಚಿತ್ರದ ಓಟಿಟಿ ಹಕ್ಕನ್ನು ಅಮೆಜಾನ್ ಪ್ರೈಮ್ ವಿಡಿಯೊ ಖರೀದಿಸಿದ್ದು, ಇದೇ ತಿಂಗಳ 14ರಂದು ಬಿಡುಗಡೆ ಮಾಡುವ ಯೋಜನೆಯಲ್ಲಿತ್ತು. ಆದರೆ ಅದಕ್ಕೆ ಇನ್ನೂ ಏಳು ದಿನಗಳು ಬಾಕಿ ಇರುವಾಗಲೇ ಟಾರೆಂಟ್ಸ್ ವೆಬ್ ಸೈಟ್‌ಗಳಲ್ಲಿ ಚಿತ್ರ ಬಿಡುಗಡೆಯಾಗಿರುವುದು ಸದ್ಯ ಅಮೆಜಾನ್ ಪ್ರೈಮ್ ವಿಡಿಯೊಗೆ ಹಿನ್ನಡೆ ಉಂಟುಮಾಡಿದೆ.


Click it and Unblock the Notifications











