Kabzaa Collections : ಕಬ್ಜ ಲೂಟಿ ಶುರು; ಮೊದಲ ದಿನದ ಕಲೆಕ್ಷನ್‌ನಲ್ಲಿ ನಂಬರ್ 1 ಆಗಲು ಈ ಚಿತ್ರವನ್ನು ಹಿಂದಿಕ್ಕಬೇಕು!
ರಿಯಲ್ ಸ್ಟಾರ್ ಉಪೇಂದ್ರ ಹಾಗೂ ನಿರ್ದೇಶಕ ಆರ್ ಚಂದ್ರು ಕಾಂಬಿನೇಶನ್‌ನಲ್ಲಿ ಮೂಡಿಬಂದಿರುವ ಮೂರನೇ ಚಿತ್ರ ಕಬ್ಜ ಇಂದು ( ಮಾರ್ಚ್ 17 ) ಕರ್ನಾಟಕ ರತ್ನ ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬದ ಪ್ರಯುಕ್ತ ವಿಶ್ವದಾದ್ಯಂತ ಭರ್ಜರಿಯಾಗಿ ತೆರೆಕಂಡಿದೆ. ಆರ್ ಚಂದ್ರು ಅವರ ಮೂರು ವರ್ಷಗಳ ಪರಿಶ್ರಮವನ್ನು ತೆರೆ ಮೇಲೆ ಕಂಡ ಸಿನಿ ರಸಿಕರು ಚಿತ್ರವನ್ನು ಮೆಚ್ಚಿಕೊಂಡಿದ್ದಾರೆ.
ಹೌದು, ನಿನ್ನೆಯೇ ಬೆಂಗಳೂರು ಹಾಗೂ ಹೈದರಾಬಾದ್ ನಗರಗಳಲ್ಲಿ ಚಿತ್ರದ ಪ್ರೀಮಿಯರ್ ಶೋ ಆಯೋಜಿಸಲಾಗಿದ್ದು, ಈ ಪ್ರದರ್ಶನಗಳಲ್ಲಿ ಚಿತ್ರವನ್ನು ವೀಕ್ಷಿಸಿದ ಪ್ರೇಕ್ಷಕರು ಚಿತ್ರಮಂದಿರಗಳಿಂದ ಹೊರಬಂದ ಬಳಿಕ ಚಿತ್ರದ ಬಗ್ಗೆ ಪಾಸಿಟಿವ್ ಪ್ರತಿಕ್ರಿಯೆ ನೀಡಿದ್ದಾರೆ. ಚಿತ್ರದ ಮೇಕಿಂಗ್, ಕಥೆ, ಛಾಯಾಗ್ರಹಣ, ಬ್ಯಾಕ್‌ಗ್ರೌಂಡ್ ಮ್ಯೂಸಿಕ್ ಹಾಗೂ ತಾರೆಯರ ನಟನೆಗೆ ಫುಲ್ ಮಾರ್ಕ್ಸ್ ನೀಡುತ್ತಿರುವ ಚಿತ್ರ ಪ್ರೇಮಿಗಳು ಕನ್ನಡ ಚಿತ್ರರಂಗದಿಂದ ಮತ್ತೊಂದು ಅದ್ಭುತ ಚಿತ್ರ ಬಂದಿದೆ ಎಂಬ ಮಾತುಗಳನ್ನು ಆಡುತ್ತಿದ್ದಾರೆ.

ಹೀಗೆ ಮೊದಲ ಪ್ರದರ್ಶನಗಳಲ್ಲಿ ಜನಮನ ಗೆದ್ದಿರುವ ಕಬ್ಜ ಚಿತ್ರದ ಬುಕಿಂಗ್ ಕೂಡ ಭರ್ಜರಿಯಾಗಿದ್ದು, ಬೆಂಗಳೂರು ಒಂದರಲ್ಲಿಯೇ 600ಕ್ಕೂ ಹೆಚ್ಚು ಪ್ರದರ್ಶನಗಳು ಮೊದಲ ದಿನ ಆಯೋಜನೆಯಾಗಿವೆ ಹಾಗೂ ಈ ಪೈಕಿ 135ಕ್ಕೂ ಹೆಚ್ಚಿನ ಪ್ರದರ್ಶನಗಳು ರಿಲೀಸ್ ಹಿಂದಿನ ದಿನವೇ ಫಾಸ್ಟ್ ಫಿಲ್ಲಿಂಗ್ ಆಗ್ತಿವೆ. ವಿಶ್ವದಾದ್ಯಂತ ಮೊದಲ ದಿನ ಬರೋಬ್ಬರಿ 4000ಕ್ಕೂ ಹೆಚ್ಚು ಪರದೆಗಳಲ್ಲಿ ಐದು ಭಾಷೆಗಳಲ್ಲಿ ಚಿತ್ರ ಬಿಡುಗಡೆಯಾಗುತ್ತಿದ್ದು, ದಾಖಲೆಯ ಗಳಿಕೆ ಮಾಡುವುದು ಪಕ್ಕಾ ಎಂಬ ಮಾತುಗಳೂ ಸಹ ಕೇಳಿಬರುತ್ತಿವೆ.
ಇನ್ನು ಕಬ್ಜ ಚಿತ್ರ ಕರ್ನಾಟಕದಲ್ಲಿ ಮೊದಲ ದಿನ ಎಷ್ಟು ಗಳಿಸಬಹುದು ಎಂಬ ಚರ್ಚೆ ಈಗಾಗಲೇ ಆರಂಭವಾಗಿದ್ದು, ಬಾಕ್ಸ್ ಆಫೀಸ್ ಟ್ರ್ಯಾಕರ್ಸ್ ಚಿತ್ರ ಎಷ್ಟು ಗಳಿಸಬಹುದು ಎಂಬ ಲೆಕ್ಕಾಚಾರಗಳನ್ನು ಹಾಕುತ್ತಿದ್ದಾರೆ. ಹಾಗಿದ್ದರೆ ಕಬ್ಜ ಚಿತ್ರ ಮೊದಲ ದಿನ ಕರ್ನಾಟಕದಲ್ಲಿ ಎಷ್ಟು ಕೋಟಿ ಗಳಿಸಿದರೆ ಅತಿಹೆಚ್ಚು ಗಳಿಕೆ ಮಾಡಿದ ಚಿತ್ರ ಎನಿಸಿಕೊಳ್ಳಲಿದೆ ಎಂಬ ಮಾಹಿತಿ ಈ ಕೆಳಕಂಡಂತಿದೆ.

ಕಬ್ಜ ಚಿತ್ರ ಕರ್ನಾಟಕದಲ್ಲಿ ಮೊದಲ ದಿನ ಅತಿಹೆಚ್ಚು ಗಳಿಕೆ ಮಾಡಿದ ಸಿನಿಮಾ ಎನಿಸಿಕೊಳ್ಳಬೇಕೆಂದರೆ ಯಶ್ ಹಾಗೂ ಪ್ರಶಾಂತ್ ನೀಲ್ ಕಾಂಬಿನೇಶನ್‌ನ ಕೆಜಿಎಫ್ ಚಾಪ್ಟರ್ 2 ಚಿತ್ರದ ಗಳಿಕೆಯನ್ನು ಹಿಂದಿಕ್ಕಬೇಕಿದೆ. ಹೌದು, ಕೆಜಿಎಫ್ ಚಾಪ್ಟರ್ 2 ಚಿತ್ರ ಕರ್ನಾಟಕದಲ್ಲಿ ಮೊದಲ ದಿನ 31 ಕೋಟಿ ರೂಪಾಯಿಗಳನ್ನು ಗಳಿಸಿತ್ತು. ಈ ದಾಖಲೆಯನ್ನು ಕಬ್ಜ ಮುರಿದರೆ ಮೊದಲ ದಿನದ ಗಳಿಕೆಯಲ್ಲಿ ಅಗ್ರಸ್ಥಾನಕ್ಕೇರಲಿದೆ. ಕರ್ನಾಟಕದಲ್ಲಿ ಮೊದಲ ದಿನ ಅತಿಹೆಚ್ಚು ಗಳಿಕೆ ಮಾಡಿದ ಚಿತ್ರಗಳ ಟಾಪ್ 5 ಪಟ್ಟಿ ಮುಂದಿದೆ.
1. ಕೆಜಿಎಫ್ ಚಾಪ್ಟರ್ 2 - 31 ಕೋಟಿ
2 .ಜೇಮ್ಸ್ - 22 ಕೋಟಿ
3. ವಿಕ್ರಾಂತ್ ರೋಣ - 16 ಕೋಟಿ
4. ಕೆಜಿಎಫ್ ಚಾಪ್ಟರ್ - 13 ಕೋಟಿ
5. ಕ್ರಾಂತಿ - 12 ಕೋಟಿ


Click it and Unblock the Notifications











