For Quick Alerts
  ALLOW NOTIFICATIONS  
  For Daily Alerts

  ಬಹುನಿರೀಕ್ಷಿತ 'ಕಬ್ಜ' ರಿಲೀಸ್ ಡೇಟ್ ಘೋಷಣೆ; ದೊಡ್ಡ ಬಿಡುಗಡೆ, ಪುನೀತ್‌ಗೆ ಅರ್ಪಣೆ!

  |

  ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಆರ್‌ ಚಂದ್ರು ಕಾಂಬಿನೇಶನ್‌ನ ಬಹು ನಿರೀಕ್ಷಿತ ಕಬ್ಜ ಚಿತ್ರದ ಬಿಡುಗಡೆ ಯಾವಾಗ ಎಂಬ ಪ್ರಶ್ನೆ ಉಪೇಂದ್ರ ಅಭಿಮಾನಿಗಳಲ್ಲಿ ಹಾಗೂ ಕನ್ನಡ ಸಿನಿ ರಸಿಕರಲ್ಲಿ ಮೂಡಿತ್ತು. ಈ ಪ್ರಶ್ನೆಗೆ ಇಂದು ( ಜನವರಿ 24 ) ಉತ್ತರ ಸಿಕ್ಕಿದ್ದು, ಪುನೀತ್ ಹುಟ್ಟುಹಬ್ಬದ ಪ್ರಯುಕ್ತ ಕಬ್ಜ ಬಿಡುಗಡೆಯಾಗಲಿದೆ ಎಂಬ ಅಧಿಕೃತ ಸುದ್ದಿ ಹೊರಬಿದ್ದಿದೆ.

  ಆನಂದ್ ಆಡಿಯೋ ಅಧಿಕೃತ ಖಾತೆ ಹಾಗೂ ಉಪೇಂದ್ರ ಸೇರಿದಂತೆ ಚಿತ್ರತಂಡದ ಇತರೆ ಸದಸ್ಯರು ಕಬ್ಜ ಚಿತ್ರ ಮಾರ್ಚ್ 17ರಂದು ಬಿಡುಗಡೆಯಾಗಲಿದೆ ಎಂದು ಪೋಸ್ಟರ್‌ಗಳನ್ನು ಹಂಚಿಕೊಳ್ಳುವುದರ ಮೂಲಕ ತಿಳಿಸಿದ್ದಾರೆ. ಇನ್ನು ಮಾರ್ಚ್ 17 ಕನ್ನಡ ರಾಜರತ್ನ, ಕರ್ನಾಟಕ ರತ್ನ ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬವಿದ್ದು, ಅದೇ ದಿನದಂದು ಚಿತ್ರವನ್ನು ಬಿಡುಗಡೆ ಮಾಡುವ ಮೂಲಕ ಪುನೀತ್ ರಾಜ್‌ಕುಮಾರ್‌ಗೆ ಈ ಚಿತ್ರವನ್ನು ಅರ್ಪಿಸಲಿದೆ ಕಬ್ಜ ಚಿತ್ರತಂಡ.

  ಇನ್ನು ಈ ಚಿತ್ರದಲ್ಲಿ ಉಪೇಂದ್ರ ಜತೆಗೆ ಕಿಚ್ಚ ಸುದೀಪ್ ಸಹ ವಿಶೇಷ ಪಾತ್ರದಲ್ಲಿ ನಿಭಾಯಿಸಿದ್ದು, ಚಿತ್ರದ ಮೇಲಿನ ನಿರೀಕ್ಷೆ ಮತ್ತಷ್ಟು ಹೆಚ್ಚಾಗುವಂತೆ ಮಾಡಿದೆ. ಚಿತ್ರದ ಮೇಕಿಂಗ್ ಸ್ಟಿಲ್ಸ್ ಹಾಗೂ ಟೀಸರ್ ಸಿನಿ ರಸಿಕರಲ್ಲಿ ತೀವ್ರ ನಿರೀಕ್ಷೆಯನ್ನು ಹುಟ್ಟುಹಾಕಿದ್ದು, ಕಬ್ಜ ವೀಕ್ಷಿಸಲು ಕಾತರರಾಗಿ ಕಾಯುತ್ತಿದ್ದಾರೆ. ಇನ್ನು ಸುಮಾರು 6000 ತೆರೆಗಳಲ್ಲಿ ಕಬ್ಜ ಚಿತ್ರ ಬಿಡುಗಡೆಯಾಗಲಿದೆ ಎಂದು ಮಾಹಿತಿ ಹೊರಬಿದ್ದಿದೆ.

  ಪುನೀತ್ ಹುಟ್ಟುಹಬ್ಬದ ಪ್ರಯುಕ್ತ ಚಿತ್ರ ತೆರೆಕಾಣುವುದು ಹೆಮ್ಮೆ

  ಪುನೀತ್ ಹುಟ್ಟುಹಬ್ಬದ ಪ್ರಯುಕ್ತ ಚಿತ್ರ ತೆರೆಕಾಣುವುದು ಹೆಮ್ಮೆ

  ಕಬ್ಜ ಚಿತ್ರದ ಕುರಿತಾಗಿ ದಿನಪತ್ರಿಕೆಯೊಂದರ ಸಂದರ್ಶನದಲ್ಲಿ ಮಾತನಾಡಿರುವ ನಟ ಉಪೇಂದ್ರ ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬದ ದಿನ ಚಿತ್ರ ಬಿಡುಗಡೆಯಾಗುವುದು ಹೆಮ್ಮೆ ಎಂದಿದ್ದಾರೆ. ಹೌದು, ಪುನೀತ್ ರಾಜ್‌ಕುಮಾರ್ ರೋಲ್ ಮಾಡಲ್ ಆಗಿದ್ದರು, ಐಕಾನ್ ಆಗಿದ್ದಂತವರು. ಅಂತಹ ವ್ಯಕ್ತಿಯ ಹುಟ್ಟುಹಬ್ಬದ ದಿನದಂದು ನಮ್ಮ ಪ್ಯಾನ್ ಇಂಡಿಯಾ ಚಿತ್ರ ಬಿಡುಗಡೆಯಾಗಲಿದೆ ಎಂದರೆ ಅದು ಹೆಮ್ಮೆಯ ಸಂಗತಿ ಎಂದು ಉಪೇಂದ್ರ ಹೇಳಿಕೆ ನೀಡಿದ್ದಾರೆ.

  6000 ಸ್ಕ್ರೀನ್ಸ್‌ನಲ್ಲಿ ರಿಲೀಸ್

  6000 ಸ್ಕ್ರೀನ್ಸ್‌ನಲ್ಲಿ ರಿಲೀಸ್

  ಇನ್ನು ಕಬ್ಜ ಚಿತ್ರ ಪ್ಯಾನ್ ಇಂಡಿಯಾ ಚಿತ್ರವಾಗಿದ್ದು, ವಿಶ್ವದಾದ್ಯಂತ ಸುಮಾರು 6000 ಪರದೆಗಳಲ್ಲಿ ಬಿಡುಗಡೆಯಾಗಲಿದೆ ಎಂದು ಮಾಹಿತಿ ಹೊರಬಿದ್ದಿದೆ. ಇನ್ನು ಬಿಡುಗಡೆಯ ಕುರಿತು ಮಾತನಾಡಿರುವ ನಿರ್ದೇಶಕ ಆರ್ ಚಂದ್ರು "ಪುನೀತ್ ರಾಜ್‌ಕುಮಾರ್ ಅವರು ಚಿತ್ರದ ಚಿತ್ರೀಕರಣದ ಹಲವು ಸಂದರ್ಭದಲ್ಲಿ ಸೆಟ್‌ಗೆ ಭೇಟಿ ನೀಡಿದ್ದರು ಹಾಗೂ ಚಿತ್ರದ ಟೀಸರ್ ಹಾಗೂ ಟ್ರೈಲರ್ ಅನ್ನು ಅವರು ಬಿಡುಗಡೆ ಮಾಡಬೇಕಿತ್ತು. ಮಾರ್ಚ್ 17ರಂದು ಪುನೀತ್ ಅವರ ಹುಟ್ಟುಹಬ್ಬದ ಪ್ರಯುಕ್ತ ಅವರ ನೆನಪಿನಲ್ಲಿ ಹಾಗೂ ಯುಗಾದಿಯ ವಿಶೇಷವಾಗಿ ಕಬ್ಜ ಚಿತ್ರವನ್ನು ಬಿಡುಗಡೆ ಮಾಡಿ ಸಿನಿಮಾ ಪ್ರೇಮಿಗಳಿಗೆ ಹೊಸ ವರ್ಷದ ಉಡುಗೊರೆ ನೀಡಲಿದ್ದೇವೆ" ಎಂದಿದ್ದಾರೆ.

  ಅದೇ ದಿನ 'ಬಾನ ದಾರಿಯಲ್ಲಿ' ಕೂಡ ಬಿಡುಗಡೆ

  ಅದೇ ದಿನ 'ಬಾನ ದಾರಿಯಲ್ಲಿ' ಕೂಡ ಬಿಡುಗಡೆ

  ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬದ ದಿನ ಕಬ್ಜ ಮಾತ್ರವಲ್ಲದೇ ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಪ್ರೀತಮ್ ಗುಬ್ಬಿ ಕಾಂಬಿನೇಶನ್‌ನ 'ಬಾನ ದಾರಿಯಲ್ಲಿ' ಸಹ ಬಿಡುಗಡೆಯಾಗಲು ಸಿದ್ಧಗೊಂಡಿದೆ. ಈ ಮೂಲಕ ಒಂದೇ ದಿನ ಎರಡು ಸ್ಟಾರ್ ನಟರ ಚಿತ್ರಗಳು ಬಿಡುಗಡೆಯಾಗುವುದರಿಂದ ಬಾಕ್ಸ್ ಆಫೀಸ್‌ನಲ್ಲಿ ಪೈಪೋಟಿ ಏರ್ಪಡುವುದಂತೂ ಖಚಿತ.

  English summary
  Upendra starrer Kabzaa to release on March 17 on the occasion of Puneeth Rajkumar birthday
  Tuesday, January 24, 2023, 11:23
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X