ರಿಯಲ್ ಸ್ಟಾರ್ 'ಯುಐ' ಅಡ್ವಾನ್ಸ್ ಬುಕ್ಕಿಂಗ್ ಶುರು; ಹೇಗಿದೆ ರೆಸ್ಪಾನ್ಸ್?

ಉಪೇಂದ್ರ ನಿರ್ದೇಶಿಸಿ ನಟಿಸಿರುವ 'ಯುಐ' ಸಿನಿಮಾ ಬಿಡುಗಡೆಗೆ ಇನ್ನು 3 ದಿನ ಬಾಕಿಯಿದೆ. ಈಗಾಗಲೇ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಶುರುವಾಗಿದೆ. ಸಿನಿರಸಿಕರು ಟಿಕೆಟ್ ಕಾಯ್ದಿರಿಸಿಕೊಂಡು ಫಸ್ಟ್ ಡೇ ಫಸ್ಟ್ ಶೋ ನೋಡಲು ಕಾಯುತ್ತಿದ್ದಾರೆ. ರಿಯಲ್ ಸ್ಟಾರ್ ಅಸಲಿ ಕ್ರೇಜ್ ಏನು ಎನ್ನುವುದು ಮತ್ತೆ ಸಾಬೀತಾಗುವ ಸಮಯ ಬಂದಿದೆ.

ತಮ್ಮ ವಿಭಿನ್ನ ಆಲೋಚನೆಗಳಿಂದ ಉಪ್ಪಿ ಸದಾ ಗಮನ ಸೆಳೆಯುತ್ತಾರೆ. ಬಹಳ ವರ್ಷಗಳ ಬಳಿಕ ಮತ್ತೆ ಆಕ್ಷನ್ ಕಟ್ ಹೇಳಿದ್ದಾರೆ ಅಂದಮೇಲೆ ಕೇಳ್ಬೇಕಾ? ಸಹಜವಾಗಿಯೇ ಸಿನಿಮಾ ಹೆಚ್ಚಿರುತ್ತದೆ. ಈಗಾಗಲೇ ಕರ್ನಾಟಕದ ಕೆಲ ಚಿತ್ರಮಂದಿರಗಳು ಹಾಗೂ ಹೈದರಾಬಾದ್‌ನಲ್ಲಿ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಶುರುವಾಗಿದೆ.

Upendra starrer UI advance booking sets a positive trend at the box office

ಜಿ. ಮನೋಹರ್ ಹಾಗೂ ಕೆ. ಪಿ ಶ್ರೀಕಾಂತ್ 'ಯುಐ' ಚಿತ್ರಕ್ಕೆ ಹಣ ಹೂಡಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ, ವೇಣು ಛಾಯಾಗ್ರಹಣ ಚಿತ್ರಕ್ಕಿದೆ. ಈಗಾಗಲೇ ಪೋಸ್ಟರ್, ಸಾಂಗ್ಸ್ ಹಾಗೂ ಟೀಸರ್‌ನಿಂದ ಸಿನಿಮಾ ಕುತೂಹಲ ಮೂಡಿಸಿದೆ. ಈ ಬಾರಿ ಅದ್ಯಾವ ರೀತಿಯ ಕತೆ ಹೇಳೋಕೆ ಬರ್ತಿದ್ದಾರೆ ಎನ್ನುವ ಚರ್ಚೆ ನಡೀತಿದೆ. ಇತ್ತೀಚೆಗೆ ಬಂದ ವಾರ್ನರ್ ಟೀಸರ್ ಹಿಟ್ ಆಗಿದೆ.

'ಯುಐ' ಚಿತ್ರದಲ್ಲಿ ರೀಷ್ಮಾ ನಾಣಯ್ಯ ನಾಯಕಿಯಾಗಿ ನಟಿಸಿದ್ದಾರೆ. ಇನ್ನುಳಿದಂತೆ ಸಾಧು ಕೋಕಿಲ, ಮುರಳಿ ಶರ್ಮಾ, ಸನ್ನಿ ಲಿಯೋನ್, ಇಂದ್ರಜಿತ್ ಲಂಕೇಶ್, ಓಂ ಪ್ರಕಾಶ್ ರಾವ್, ಗುರುಪ್ರಸಾದ್ ತಾರಾಗಣದಲ್ಲಿದ್ದಾರೆ. ಚೀಪ್ ಸಾಂಗ್ ಹಾಗೂ ಟ್ರೋಲ್ ಸಾಂಗ್‌ಗಳು ಸೂಪರ್ ಹಿಟ್ ಆಗಿದೆ. ಚಿತ್ರದಲ್ಲಿ ಇನ್ನು ಏನೆಲ್ಲಾ ಸರ್‌ಪ್ರೈಸ್‌ಗಳಿವೆ ಎಂದು ಪ್ರೇಕ್ಷಕರು ಕಾಯುತ್ತಿದ್ದಾರೆ.

ಐಎಂಡಿಬಿಯ ವರ್ಷದ ಬಹುನಿರೀಕ್ಷಿತ ಸಿನಿಮಾಗಳ ಪಟ್ಟಿಯಲ್ಲಿ ಕನ್ನಡದ 'ಯುಐ' ಸಿನಿಮಾ ಜಾಗಮಾಡಿಕೊಂಡಿದೆ. ತೆಲುಗು ಪ್ರೇಕ್ಷಕರು ಕೂಡ ಸಿನಿಮಾ ನೋಡಲು ಕಾಯುತ್ತಿದ್ದಾರೆ. ಸದ್ಯ ಉಪ್ಪಿ ಆಂಧ್ರ, ತೆಲಂಗಾಣದಲ್ಲಿ ಚಿತ್ರದ ಪ್ರಚಾರ ನಡೆಸುತ್ತಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ 5 ಭಾಷೆಗಳಲ್ಲಿ ಸಿನಿಮಾ ತೆರೆಗಪ್ಪಳಿಸಲಿದೆ.

ಟೈಟಲ್‌ನಿಂದಲೇ ಸಿನಿಮಾ ಚರ್ಚೆ ಹುಟ್ಟು ಹಾಕಿದೆ. ಇನ್ನು ಕಲ್ಕಿ ರೀತಿ ಉಪ್ಪಿ ಕೊಂಬಿನ ಕುದುರೆ ಏರಿ ಬರುವಂತಹ ಪೋಸ್ಟರ್‌ಗಳು ಎಲ್ಲರ ಹುಬ್ಬೇರಿಸಿದೆ. ಇದು ಸೈಕಲಾಜಿಕಲ್ ಕಲ್ಕಿ ಕಥೆ ಎಂದು ರಿಯಲ್ ಸ್ಟಾರ್ ಹೇಳಿದ್ದಾರೆ. ಇನ್ನು ಚಿತ್ರ ಸೆನ್ಸಾರ್ ಮುಗಿಸಿ ಬಿಡುಗಡೆಗೆ ಸಜ್ಜಾಗಿದೆ. ಸಣ್ಣ ಪುಟ್ಟ ಬದಲಾವಣೆ ಹೇಳಿ ಚಿತ್ರಕ್ಕೆ ಯು/ಎ ಸರ್ಟಿಫಿಕೇಟ್ ಕೊಡಲಾಗಿದೆ.

ಅಡ್ವಾನ್ಸ್ ಬುಕ್ಕಿಂಗ್ ವಿಚಾರಕ್ಕೆ ಬಂದರೆ ಬೆಂಗಳೂರು, ಮೈಸೂರಿನ ಕೆಲ ಚಿತ್ರಮಂದಿರಗಳಲ್ಲಿ ಶುಕ್ರವಾರದ ಮಾರ್ನಿಂಗ್ ಶೋ ಬುಕ್ಕಿಂಗ್ ಶುರುವಾಗಿದೆ. ನಗರದ ಊರ್ವಶಿ, ವೀರೇಶ್, ಸಿದ್ದೇಶ್ವರ, ನವರಂಗ್, ಭಾರತಿ ಚಿತ್ರಮಂದಿರಗಳಲ್ಲಿ ಬೆಳಗ್ಗೆ 6.30ಕ್ಕೆ ಶೋ ನಿಗದಿಯಾಗಿದೆ. ಎಲ್ಲಾ ಶೋಗಳ ಬುಕ್ಕಿಂಗ್ ಜೋರಾಗಿದೆ. ಬುಕ್ಕಿಂಗ್ ಆರಂಭವಾದ ಕೆಲವೇ ನಿಮಿಷಗಳಲ್ಲಿ ವೀರೇಶ್ ಶೋ ಸೋಲ್ಡೌಟ್ ಆಗಿದೆ. ಸಿದ್ದೇಶ್ವರ, ಊರ್ವಶಿ ಬಹುತೇಕ ಸೋಲ್ಡೌಟ್ ಆಗಿದ್ದು ಉಪ್ಪಿ ಮ್ಯಾಜಿಕ್ ಏನು ಎನ್ನುವುದು ಮತ್ತೊಮ್ಮೆ ಸಾಬೀತಾಗುತ್ತಿದೆ. ನೋಡನೋಡುತ್ತಲೇ 3300 ಟಿಕೆಟ್ ಬುಕ್ ಆಗಿ 7 ಲಕ್ಷಕ್ಕೂ ಅಧಿಕ ಕಲೆಕ್ಷನ್ ಆಗಿದೆ.

ಮೈಸೂರಿನ ಹ್ಯಾಬಿಟಟ್ ಮಾಲ್‌ನಲ್ಲಿ 'ಯುಐ' ಬುಕ್ಕಿಂಗ್ ಶುರುವಾಗಿ ಒಳ್ಳೆ ರೆಸ್ಪಾನ್ಸ್ ಪಡೆದುಕೊಂಡಿದೆ. ಹೈದರಾಬಾದ್‌ನ ಒಂದು ಚಿತ್ರಮಂದಿರಲ್ಲಿ ಕನ್ನಡ ಹಾಗೂ ತೆಲುಗು ವರ್ಷ ಶೋ ನಿಗದಿಯಾಗಿದೆ. ನಿಧಾನವಾಗಿ ಎಲ್ಲಾ ಕಡೆ ಮತ್ತಷ್ಟು ಶೋಗಳ ಬುಕ್ಕಿಂಗ್ ಶುರುವಾಗಲಿದೆ. ನಾಳೆ(ಡಿಸೆಂಬರ್ 17) ಮತ್ತಷ್ಟು ಚಿತ್ರಮಂದಿರಗಳ ಬುಕ್ಕಿಂಗ್ ಓಪನ್ ಆಗಲಿದೆ. ನಗರದ ಸಂತೋಷ್ ಸೇರಿದಂತೆ ನೂರಾರು ಚಿತ್ರಮಂದಿರಗಳಲ್ಲಿ 'ಯುಐ' ದರ್ಬಾರ್ ನಡೆಯಲಿದೆ.

ಪೇಯ್ಡ್ ಪ್ರೀಮಿಯರ್ ಶೋ ಹಾಗೂ ಮಿಡ್‌ನೈಟ್ ಶೋಗಳಿಗೆ 'ಯುಐ' ಚಿತ್ರತಂಡ ಬ್ರೇಕ್ ಹಾಕಿದೆ. ಬೆಳಗ್ಗೆ 3.30 ಶೋಗಳಿಗೆ ಸರ್ಕಾರದಿಂದ ಅನುಮತಿ ಸಿಗುವುದಿಲ್ಲ. ಹಾಗಾಗಿ ಎಲ್ಲೆಡೆ ಬೆಳಗ್ಗೆ 6.30ರ ಬಳಿಕವೇ ಸಿನಿಮಾ ಪ್ರದರ್ಶನ ಆರಂಭವಾಗಲಿದೆ.

More from Filmibeat

English summary
Upendra's UI film First Day Advance Booking Report;
Read more about: upendra sandalwood kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X