Upendra: ಬಂತು ಬಂದಿಲ್ಲ UI ಟೀಸರ್.. ನೋಡಿದ್ವಿ ನೋಡ್ಲಿಲ್ಲ ಉಪ್ಪಿ ದರ್ಬಾರ್!

ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶಿಸಿ, ನಟಿಸಿರುವ 'UI' ಸಿನಿಮಾ ಟೀಸರ್ ರಿಲೀಸ್ ಆಗಿದೆ. ತಮ್ಮ ಹುಟ್ಟುಹಬ್ಬದ ಸಂಭ್ರಮದಲ್ಲಿ ಸ್ಪೆಷಲ್ ಆಡಿಯೋ ಟೀಸರ್ ಬಿಟ್ಟು ಉಪ್ಪಿ ಪ್ರೇಕ್ಷಕರ ತಲೆಗೆ ಹುಳ ಬಿಟ್ಟಿದ್ದಾರೆ. ಈ ಟೀಸರ್‌ ನೋಡೋಕ್ಕಾಗಲ್ಲ. ಕೇಳಬಹುದು. ಕಲ್ಪಿಸಿಕೊಳ್ಳಬಹುದು ಅಷ್ಟೇ. ಒಟ್ನಲ್ಲಿ ರಿಯಲ್ ಸ್ಟಾರ್ ಗಿಮಿಕ್ ಮತ್ತೆ ಮುಂದುವರೆದಿದೆ.

ಇತ್ತೀಚೆಗೆ 'UI' ಸಿನಿಮಾ ಟೀಸರ್ ರಿಲೀಸ್ ಬಗ್ಗೆ ಎರಡು ವಿಡಿಯೋ ಮಾಡಿ ಕುತೂಹಲ ಮೂಡಿಸಲಾಗಿತ್ತು. ಕೊನೆಗೆ ಉಪೇಂದ್ರ ಹುಟ್ಟುಹಬ್ಬದ ದಿನ ಟೀಸರ್ ರಿಲೀಸ್ ಮಾಡುವುದಾಗಿ ಘೋಷಿಸಿದ್ದರು. ಹೇಳಿದಂತೆ ಟೀಸರ್ ಹೊರಬಿದ್ದಿದೆ. ನಗರದ ಊರ್ವಶಿ ಥಿಯೇಟರ್‌ನಲ್ಲಿ ಟೀಸರ್ ಪ್ರಸಾರ ಮಾಡಲಾಗಿದೆ. ಟೀಸರ್ ನೋಡಿದರು ಅಲ್ಲ ಅಲ್ಲ ಕೇಳಿದವರು ಇದು ಪಕ್ಕಾ ಉಪ್ಪಿ ಸ್ಟೈಲ್ ಸಿನಿಮಾ ಎನ್ನುತ್ತಿದ್ದಾರೆ.

Upendra-UI-Movie-Teaser-released

ಕತ್ತಲೆ ಎಲ್ಲಾ ಕಡೆ ಕತ್ತಲೆ.. ಯಾವ ತರ ಜಾಗ ಇದು.. ನೀರಿನ ಸದ್ದು ಕೇಳಿಸ್ತಾ ಇದೆ. ಈ ಕತ್ತಲೆಯಿಂದ ಹೇಗೆ ತಪ್ಪಿಸಿಕೊಳ್ಳಿ.. ಬೆಳಕು ಕಂಡ್ರೆ, ಶಬ್ಧ ಕೇಳಿಸಿದ್ರೆ ಹೊಡೆದು ಹಾಕ್ತಾರೆ.. ಇಲ್ಲಿಂದೆ ಹೇಗೆ ಎಸ್ಕೇಪ್ ಆಗೋದು. ಕಾಮ್ ಆಗಿ ಯೋಚನೆ ಮಾಡು.. ಕಾಂನ್ಸಟ್ರೇಟ್‌" ಹೀಗೆ ಉಪೇಂದ್ರ ಡೈಲಾಗ್‌ ಮಾತ್ರ 'UI' ಸಿನಿಮಾ ಟೀಸರ್‌ನಲ್ಲಿದೆ.

ಸಾಮಾನ್ಯವಾಗಿ ಸಿನಿಮಾ ಹೇಗೆ ಮೂಡಿ ಬಂದಿದೆ? ಮೇಕಿಂಗ್ ಹೇಗಿದೆ? ನಟ, ನಟಿಯರ ಲುಕ್ ಹೇಗಿದೆ? ಅನ್ನೋದ್ರ ಸಣ್ಣ ಝಲಕ್‌ ಅನ್ನು ಟೀಸರ್‌ನಲ್ಲಿ ತೋರಿಸಲಾಗುತ್ತದೆ. ಆದರೆ ಉಪೇಂದ್ರ ಬರೀ ಬ್ಲಾಂಕ್‌ ಸ್ಕ್ರೀನ್‌ ತೋರಿಸಿ ಹಿನ್ನೆಲೆಯಲ್ಲಿ ಡೈಲಾಗ್ ಕೇಳಿಸಿ ಪ್ರೇಕ್ಷಕರೇ ಅದನ್ನು ಊಹಿಸಿಕೊಳ್ಳುವಂತೆ ಮಾಡಿದ್ದಾರೆ. ಕೊನೆಗೆ 'ಈ ಟೀಸರ್ ನಿಮ್ಮ ಕಲ್ಪನೆಗಾಗಿ' ಎಂದು ಬರೆದು ಬಿಟ್ಟಿದ್ದಾರೆ.

ಅಜನೀಶ್ ಲೋಕನಾಥ್ ಸಂಗೀತ 'UI' ಚಿತ್ರಕ್ಕಿದೆ. ಬರೀ ಬಿಜಿಎಂ ಹಾಗೂ ಡೈಲಾಗ್‌ ಮಾತ್ರ ಟೀಸರ್‌ನಲ್ಲಿದೆ. ಒಂದರ್ಥದಲ್ಲಿ ಇದು ಆಡಿಯೋ ಟೀಸರ್ ಎನ್ನಬಹುದು. ಥೀಮ್‌ ಪೋಸ್ಟರ್‌ನಲ್ಲಿ ಕಲ್ಕಿ ಅವತಾರದ ಕಾಣುವಂತೆ ತೋರಿಸಲಾಗಿತ್ತು. ಟೀಸರ್‌ನಲ್ಲಿ ಕೇಳಿದರೆ ಸಂಕಷ್ಟಕ್ಕೆ ಸಿಲುಕಿದವರ ಆರ್ತನಾದ, ಅವರನ್ನು ಅಲ್ಲಿಂದ ಪಾರು ಮಾಡಲು ಅವರಲ್ಲೇ ಸ್ಫೂರ್ತಿ ತುಂಬುವ ನಾಯಕನನ್ನು ಪರಿಚಯಿಸಿದಂತಿದೆ. ಅಂದರೆ ಕಲ್ಕಿ ಅವತಾರದ ಹಿನ್ನೆಲೆಯಲ್ಲೇ 'UI' ಸಿನಿಮಾ ಬರುತ್ತಾ? ಅನ್ನುವುದನ್ನು ಕಾದು ನೋಡಬೇಕಿದೆ.

ಐಟಂ ಸಾಂಗ್ ಬಿಟ್ಟು ಇನ್ನುಳಿದಂತೆ ಬಹುತೇಕ ಸಿನಿಮಾ ಚಿತ್ರೀಕರಣ ಮುಕ್ತಾಯವಾಗಿದೆ. ರೀಷ್ಮಾ ನಾಣಯ್ಯ, ನಿಧಿ ಸುಬ್ಬಯ್ಯ, ಪ್ರಶಾಂತ್ ಸಂಬರಗಿ ಸಿನಿಮಾ ತಾರಗಣದಲ್ಲಿದ್ದಾರೆ. ಜಿ. ಮನೋಹರನ್ ಹಾಗೂ ಕೆ.ಪಿ ಶ್ರೀಕಾಂತ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. 'ಉಪ್ಪಿ-2' ಬಳಿಕ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿ ಉಪೇಂದ್ರ ನಟಿಸಿದ್ದಾರೆ. ವರ್ಷಾಂತ್ಯಕ್ಕೆ ಸಿನಿಮಾ ರಿಲೀಸ್ ಆಗುವ ಸಾಧ್ಯತೆಯಿದೆ.

More from Filmibeat

English summary
Upendra Starrer UI The Movie Official Teaser own now
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X