Kabzaa Kannada Trailer: 'ದಿ ನೆಕ್ಸ್ಟ್ ಬಿಗ್ ಥಿಂಗ್ ಇನ್ ಇಂಡಿಯನ್ ಸಿನಿಮಾ': ಪಕ್ಕಾ ಪೈಸಾ ವಸೂಲ್

ಬಹುನಿರೀಕ್ಷಿತ 'ಕಬ್ಜ' ಚಿತ್ರದ ಟ್ರೈಲರ್ 5 ಭಾಷೆಗಳಲ್ಲಿ ರಿಲೀಸ್ ಆಗಿ ಸಖತ್ ಸೌಂಡ್ ಮಾಡ್ತಿದೆ. ನಿನ್ನೆ(ಮಾರ್ಚ್ 4) ಸಂಜೆ 5ಗಂಟೆಗೆ ರಿವೀಲ್ ಆಗ್ಬೇಕಿದ್ದ ಟ್ರೈಲರ್ ಕೊಂಚ ತಡವಾಗಿ ರಿಲೀಸ್ ಆಗಿತ್ತು. ಸಂಜೆಯೇ ಹಿಂದಿ ವರ್ಷನ್ ಟ್ರೈಲರ್ ರಿಲೀಸ್ ಆಗಿ ಧೂಳೆಬ್ಬಿಸಿತ್ತು. ಕನ್ನಡ ವರ್ಷನ್ ಝಲಕ್‌ಗಾಗಿ ಸಿನಿರಸಿಕರು ಕಾದು ಕಾದು ಸುಸ್ತಾದರು. ಕೊನೆಗೆ ರಾತ್ರಿ 1 ಗಂಟೆ ವೇಳೆಗೆ ಕನ್ನಡದಲ್ಲಿ 'ಕಬ್ಜ' ಕಾರುಬಾರು ಶುರುವಾಯಿತು.

ಮೊದಲ ನೋಟದಲ್ಲೇ 'ಕಬ್ಜ' ಟ್ರೈಲರ್ ಸಿನಿರಸಿಕರ ಮನಗೆದ್ದಿದೆ. ಸಿನಿಮಾ ಪಕ್ಕಾ ಬ್ಲಾಕ್‌ಬಸ್ಟರ್ ಎನ್ನುವ ಟಾಕ್ ಶುರುವಾಗಿದೆ. ಆರ್‌. ಚಂದ್ರು ವಿಷನ್, ಮೇಕಿಂಗ್, ರಿಚ್ ವಿಷ್ಯುವಲ್ಸ್, ಹ್ಯೂಜ್ ಸೆಟಪ್ಸ್, ಉಪ್ಪಿ, ಕಿಚ್ಚನ ಆರ್ಭಟ, ರವಿ ಬಸ್ರೂರು ಹಂಟಿಂಗ್ ಬಿಜಿಎಂ ಸಖತ್ ಕಿಕ್ ಕೊಡ್ತಿದೆ. ಇಡೀ ಟ್ರೈಲರ್‌ನಲ್ಲಿ ಸುದೀಪ್ ವಾಯ್ಸ್ ಹೈಲೆಟ್ ಆಗಿದೆ. ಕಿಚ್ಚನ ಒಂದೊಂದು ಡೈಲಾಗ್ ಅಭಿಮಾನಿಗಳಿಗೆ ಮಜಾ ಕೊಡ್ತಿದೆ. ಅಲ್ಲಲ್ಲಿ 'KGF' ಸಿನಿಮಾ ಛಾಯೆ ಕಂಡರೂ ಟ್ರೈಲರ್ ಅಂತೂ ಹೊಸ ಫೀಲ್ ಕೊಡ್ತಿದೆ. ಫಸ್ಟ್ ಡೇ ಫಸ್ಟ್ ಶೋ ನೋಡಲೇಬೇಕು ಎನ್ನುವ ಕುತೂಹಲ ಹುಟ್ಟಾಕ್ಕಿದೆ.

Upendra- Sudeeps Kabzaa Kannada Trailer released

ಏರ್‌ಪೋರ್ಸ್ ಅಕಾಡೆಮಿ ಅಧಿಕಾರಿ ಅರ್ಕೇಶ್ವರ ಅಂಡರ್‌ವರ್ಲ್ಡ್ ಡಾನ್ ಆಗುವ ಕಥೆ 'ಕಬ್ಜ' ಚಿತ್ರದಲ್ಲಿದೆ. ಆತನ ಎದುರಾಳಿ ಭಾರ್ಗವ್ ಭಕ್ಷಿ ಪಾತ್ರದಲ್ಲಿ ಕಿಚ್ಚ ಸುದೀಪ್ ಮಿಂಚಿದ್ದಾರೆ. ರಾಣಿ ಮಧುಮತಿಯಾಗಿ ಶ್ರೀಯಾ ಮೋಡಿ ಮಾಡುತ್ತಾರೆ. ಇನ್ನು ನವಾಬ್ ಶಾ, ಕೋಟ ಶ್ರೀನಿವಾಸ್ ರಾವ್, ಕಬೀರ್ ದುಹಾನ್ ಸಿಂಗ್, ದೇವ್ ಗಿಲ್, ನೀನಾಸಂ ಅಶ್ವಥ್ ಸೇರಿದಂತೆ ಹಲವರು ಡಾನ್‌ಗಳಾಗಿ ಅಬ್ಬರಿಸಿದ್ದಾರೆ. 'ದಿ ನೆಕ್ಸ್ಟ್ ಬಿಗ್ ಥಿಂಗ್ ಇನ್ ಇಂಡಿಯನ್ ಸಿನಿಮಾ' ಎಂದು 'ಕಬ್ಜ' ಚಿತ್ರವನ್ನು ತೆರೆಗೆ ತರಲಾಗುತ್ತಿದೆ.

"ಇತಿಹಾಸ ಯಾವಾಗಲೂ ಉರುಳಿರುವ ತಲೆಗಳಿಗಿಂತ ಕತ್ತರಿಸಿರುವ ಕೈಗಳನ್ನೇ ಕೊಂಡಾಡೋದು. ಅಂತಹ ಕೈಯಿಂದ ಕೈಯಿಂದ ಸೃಷ್ಟಿಯಾಗಿರುವ ಚರಿತ್ರೆನೇ ಕಬ್ಜ" ಎನ್ನುವ ಕಿಚ್ಚನ ಖಡಕ್ ಡೈಲಾಗ್ ಜೊತೆಗೆ ಟ್ರೈಲರ್ ಶುರುವಾಗುತ್ತೆ. ನೋಡ ನೋಡುತ್ತಾ ನೋಡುಗರನ್ನು ತನ್ನೊಳಗೆ ಸೆಳೆದುಕೊಳ್ಳುತ್ತೆ. ಡಿಫ್‌ರೆಂಟ್ ಶೇಡ್‌ಗಳಲ್ಲಿ ಉಪೇಂದ್ರ, ಸುದೀಪ್ ಗಮನ ಸೆಳೆಯುತ್ತಾರೆ. ಉಪ್ಪಿ ರಗಡ್ ಲುಕ್‌, ಆಕ್ಷನ್‌ನಿಂದ ಹುಬ್ಬೇರಿಸುತ್ತಾರೆ.

Upendra- Sudeeps Kabzaa Kannada Trailer released

"ಒಂದು ಸಾಮ್ರಾಜ್ಯ ಕಟ್ಟೋದು ಕತ್ತಿಯಿಂದ ಅಲ್ಲ. ಅದನ್ನು ಹಡಿಯುವ ಬಲವಾದ ಕೈಯಿಂದ" ಎನ್ನುವ ಕಿಚ್ಚನ ಮತ್ತೊಂದು ಡೈಲಾಗ್‌ಗೂ ಕೂಡ ಸಖತ್ ಕಿಕ್ ಕೊಡುತ್ತೆ. ಆಕ್ಷನ್, ಆರ್ಭಟದ ಜೊತೆಗೆ ಎಮೋಷನ್‌ನ ಕೂಡ ಸೇರಿಸಿ ಆರ್‌. ಚಂದ್ರು 'ಕಬ್ಜ' ಸಿನಿಮಾ ತೆರೆಗೆ ತರುತ್ತಿರೋದು ಟ್ರೈಲರ್‌ನಲ್ಲಿ ಗೊತ್ತಾಗುತ್ತಿದೆ. ಸುನಿಲ್ ಪುರಾಣಿಕ್ ಚಿತ್ರದಲ್ಲೊಂದು ಮುಖ್ಯ ಪಾತ್ರ ಮಾಡಿರೋದು ಗೊತ್ತಾಗ್ತಿದೆ. ಅರ್ಕೇಶ್ವರನ ಸಹೋದರ ಆತನೇ ಎನಿಸುತ್ತಿದೆ. ಎಲ್ಲಾ ವಿಭಾಗಗಳಲ್ಲೂ ಫಸ್ಟ್ ಕ್ಲಾಸ್ ಎನಿಸುತ್ತಿರುವ ಟ್ರೈಲರ್ ಸೂಪರ್ ಹಿಟ್ ಆಗಿದೆ.

Upendra- Sudeeps Kabzaa Kannada Trailer released

ಕನ್ನಡ ಟ್ರೈಲರ್ ರಿಲೀಸ್‌ಗೂ ಮುನ್ನ ಹಿಂದಿ ಟ್ರೈಲರ್ ಬಂದು ಸದ್ದು ಮಾಡಿತ್ತು. ಬಿಗ್‌ ಬಿ ಅಮಿತಾಬ್ ಬಚ್ಚನ್ ಟ್ರೈಲರ್ ನೋಡಿ ಮೆಚ್ಚಿಕೊಂಡಿದ್ದರು. ಚಿತ್ರತಂಡಕ್ಕೆ ಶುಭ ಕೋರಿದ್ದರು. ಆದರೆ ಟ್ರೈಲರ್‌ನಲ್ಲಿ ಶಿವಣ್ಣನನ್ನು ತೋರಿಸದೇ ಇರುವುದು ಅಭಿಮಾನಿಗಳಿಗೆ ಕೊಂಚ ನಿರಾಸೆ ತಂದಿದೆ. ಮಾರ್ಚ್ 17ಕ್ಕೆ 'ಕಬ್ಜ' ಸಿನಿಮಾ ದೊಡ್ಡಮಟ್ಟದಲ್ಲಿ ರಿಲೀಸ್ ಆಗಲಿದೆ. ಅಂದಾಜು 5000 ಸ್ಕ್ರೀನ್‌ಗಳಲ್ಲಿ ಸಿನಿಮಾ ರಿಲೀಸ್ ಪ್ಲ್ಯಾನ್ ನಡೀತಿದೆ.

More from Filmibeat

English summary
Upendra- Sudeep's Kabzaa Kannada Trailer released. The pan India Film will hit the theatres on March 17th. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X