ಹೊಸ ಕಿಕ್ ಕೊಡಲು ಉಪ್ಪಿ 'ಸೂಪರ್ ರಂಗ' ಬರ್ತಾವ್ನೆ

By Rajendra

ರಿಯಲ್ ಸ್ಟಾರ್ ಉಪೇಂದ್ರ ಅವರು ಈ ಬಾರಿ ತಮ್ಮ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಗೆ ಹೊಸ ಕಿಕ್ ಕೊಡಲಿದ್ದಾರೆ. ಅವರ ಅಭಿನಯದ 'ಸೂಪರ್ ರಂಗ' ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಉಪ್ಪಿ 45ನೇ ಹುಟ್ಟುಹಬ್ಬಕ್ಕೆ ಸೂಪರ್ ರಂಗ ಚಿತ್ರ ತೆರೆಕಾಣುತ್ತಿದೆ.

ಉಪೇಂದ್ರ ಅವರ ಈ ಸಲದ ಸೆ.18ರ ಹುಟ್ಟುಹಬ್ಬಕ್ಕೆ 'ಬಸವಣ್ಣ' ಚಿತ್ರದ ಜೊತೆಗೆ 'ಸೂಪರ್ ರಂಗ' ಚಿತ್ರ ಬಿಡುಗಡೆಯಾಗಲು ಪೈಪೋಟಿ ನಡೆಸಿತ್ತು. ಕೊನೆಗೆ ಕೆ ಮಂಜು ನಿರ್ಮಾಣದ ಸಾಧು ಕೋಕಿಲ ನಿರ್ದೇಶನದ ಸೂಪರ್ ರಂಗ ಚಿತ್ರಕ್ಕೆ ಗ್ರೀನ್ ಸಿಗ್ನಲ್ ಸಿಕ್ಕಿದೆ. [ಸ್ಲೋವೇನಿಯಾದಲ್ಲಿ ಉಪೇಂದ್ರ 'ಸೂಪರ್ ರಂಗ']

ಈ ಬಾರಿ ಕೆ ಮಂಜು ಅವರೇ ಚಿತ್ರವನ್ನು ವಿತರಣೆ ಮಾಡುತ್ತಿದ್ದಾರೆ. ಈ ಚಿತ್ರದನ್ನು ಸುಮಾರು ರು.10 ಕೋಟಿಗೂ ಅಧಿಕ ಬಜೆಟ್ ನಲ್ಲಿ ನಿರ್ಮಿಸಲಾಗಿದೆ ಎನ್ನುತ್ತಾರೆ ಮಂಜು. ಇದು ತೆಲುಗಿನಲ್ಲಿ ರವಿತೇಜ ಅಭಿನಯದ ಕಿಕ್ ಚಿತ್ರದ ರೀಮೇಕ್.

ಸಲ್ಮಾನ್ ಖಾನ್ 'ಕಿಕ್' ಮೀರಿಸಲಿದ್ದಾನೆ ರಂಗ

ಸಲ್ಮಾನ್ ಖಾನ್ 'ಕಿಕ್' ಮೀರಿಸಲಿದ್ದಾನೆ ರಂಗ

ಅದೇ ಹೆಸರಿನಲ್ಲಿ ಇತ್ತೀಚೆಗೆ ಹಿಂದಿಯಲ್ಲೂ ಸಲ್ಮಾನ್ ಖಾನ್ ಅವರ 'ಕಿಕ್' ತೆರೆಕಂಡಿತು. ಚಿತ್ರ ಬಾಕ್ಸ್ ಆಫೀಸಲ್ಲಿ ಸಖತ್ ಸದ್ದು ಮಾಡಿದ್ದು ಗೊತ್ತೇ ಇದೆ. ಆದರೆ ಕಂಟೆಂಟ್ ದೃಷ್ಟಿಯಿಂದ ತಮ್ಮ ಚಿತ್ರ ಆ ಕಿಕ್ ಗಿಂತಲೂ ಸೊಗಸಾಗಿದೆ ಎನ್ನುತ್ತಾರೆ ಮಂಜು.

ಬಾಕ್ಸ್ ಆಫೀಸ್ ಧೂಳಿಪಟ ಮಾಡಿದ ಚಿತ್ರ

ಬಾಕ್ಸ್ ಆಫೀಸ್ ಧೂಳಿಪಟ ಮಾಡಿದ ಚಿತ್ರ

2009ರಲ್ಲಿ ತೆರೆಕಂಡ ತೆಲುಗಿನ ಕಿಕ್ ಚಿತ್ರದ ರೀಮೇಕ್ 'ಸೂಪರ್ ರಂಗ'. ಮೂಲ ಚಿತ್ರದಲ್ಲಿ ರವಿತೇಜ ಅಭಿನಯಿಸಿದ್ದರು. ಸುಮಾರು ರು.20 ಕೋಟಿ ಬಜೆಟ್ ನಲ್ಲಿ ನಿರ್ಮಿಸಿದ ಕಿಕ್ ಚಿತ್ರ ಬಾಕ್ಸ್ ಆಫೀಸಲ್ಲಿ ರು.30 ಕೋಟಿ ಕಲೆಕ್ಷನ್ ಮಾಡಿತ್ತು.

ಕನ್ನಡಕ್ಕೆ ಅಲ್ಪಸ್ವಲ್ಪ ಬದಲಾವಣೆಗಳೊಂದಿಗೆ

ಕನ್ನಡಕ್ಕೆ ಅಲ್ಪಸ್ವಲ್ಪ ಬದಲಾವಣೆಗಳೊಂದಿಗೆ

ಮೂಲ ಚಿತ್ರವನ್ನು ಯಥಾವತ್ತಾಗಿ ತರದೆ ಸ್ವಲ್ಪ ಬದಲಾವಣೆಗಳೊಂದಿಗೆ ಕನ್ನಡಕ್ಕೆ ತರುತ್ತಿದ್ದಾರೆ ಸಾಧು ಕೋಕಿಲ. ಅದೇನು ಬದಲಾವಣೆ ಎಂಬುದನ್ನು ಚಿತ್ರ ಬಿಡುಗಡೆ ಯಾದ ಮೇಲೆ ಗೊತ್ತಾಲಿದೆ. ಅಲ್ಲಿಯ ತನಕ ಕಾಯಲೇಬೇಕು.

ಅರ್ಜುನ್ ಜನ್ಯ ಸಂಗೀತ, ಕಶ್ಯಪ್ ಛಾಯಾಗ್ರಹಣ

ಅರ್ಜುನ್ ಜನ್ಯ ಸಂಗೀತ, ಕಶ್ಯಪ್ ಛಾಯಾಗ್ರಹಣ

ಸಾಧು ಕೋಕಿಲ ಅವರ ನಿರ್ದೇಶನದಲ್ಲಿ, ಕೆ ಮಂಜು ನಿರ್ಮಾಣದ 'ಸೂಪರ್ ರಂಗ' ಚಿತ್ರಕ್ಕೆ ಅರ್ಜುನ್ ಜನ್ಯ ಅವರ ಸಂಗೀತ, ಅಶೋಕ್ ಕಶ್ಯಪ್ ಅವರ ಛಾಯಾಗ್ರಹಣ ಈ ಚಿತ್ರಕ್ಕೆ ಇದೆ.

ಉಪ್ಪಿಗೆ ಜೋಡಿ ಕೃತಿ ಕರಬಂಧ

ಉಪ್ಪಿಗೆ ಜೋಡಿ ಕೃತಿ ಕರಬಂಧ

ಉಪೇಂದ್ರ, ಕೃತಿ ಕರ್ಬಂಧ, ರಘು ಮುಖರ್ಜಿ, ಪ್ರಿಯಾಂಕ, ದೊಡ್ಡಣ್ಣ, ರಂಗಾಯಣ ರಘು, ಬುಲ್ಲೆಟ್ ಪ್ರಕಾಶ್, ದಯಾನಂದ, ಸಿದ್ಲಿಂಗು ಶ್ರೀಧರ್ ಹಾಗೂ ಇನ್ನಿತರರು ತಾರಾಗಣದಲ್ಲಿ ಇದ್ದಾರೆ.

ಪವರ್ ಫುಲ್ ಡೈಲಾಗ್ ಗಳೇ ಚಿತ್ರದ ಜೀವಾಳ

ಪವರ್ ಫುಲ್ ಡೈಲಾಗ್ ಗಳೇ ಚಿತ್ರದ ಜೀವಾಳ

ರಕ್ತಕಣ್ಣೀರು, ಅನಾಥರು ಬಳಿಕ ಸಾಧು ಕೋಕಿಲ ಹಾಗೂ ಉಪೇಂದ್ರ ಕಾಂಬಿನೇಷನಲ್ಲಿ ಬರುತ್ತಿರುವ ಚಿತ್ರ 'ಸೂಪರ್ ರಂಗ'. ಈ ಚಿತ್ರದಲ್ಲಿ ಇಬ್ಬರು ನಾಯಕಿಯರು ಕೃತಿ ಕರಬಂಧ ಹಾಗೂ ಪ್ರಿಯಾಂಕಾ. ಚಿತ್ರದಲ್ಲಿ ಉಪೇಂದ್ರ ಅವರು ಪವರ್ ಫುಲ್ ಡೈಲಾಗ್ ಗಳ ಮೂಲಕ ಮತ್ತೊಮ್ಮೆ ಅಭಿಮಾನಿಗಳನ್ನು ರಂಜಿಸಲಿದ್ದಾರೆ.

More from Filmibeat

English summary
Real Star Upendra, Kriti Karabandha lead Kannada movie 'Super Ranga' all set release on Uppi birthday 18th September, 2014. The movie is directed by Sadhu Kokila and produced by K.Manju. Upendra-Sadhu Kokila duo who has given hits like Raktha Kanniru and Anaataru has teamed up again to deliver a good movie at the box office.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X