twitter
    For Quick Alerts
    ALLOW NOTIFICATIONS  
    For Daily Alerts

    ಓಪನ್ ಚಾಲೆಂಜ್...ಉಪೇಂದ್ರ ಹೆಸರು ಬಳಸದೆ ಪ್ರಜಾಕೀಯ ಸಾಧ್ಯನಾ?

    |

    ಲಾಕ್‌ಡೌನ್ ಸಮಯದಲ್ಲಿ ಜನಸಾಮಾನ್ಯರಿಗೆ ಸಹಾಯ ಮಾಡುತ್ತಿರುವ ನಟ-ಪ್ರಜಾಕೀಯ ಸಂಸ್ಥಾಪಕ ಉಪೇಂದ್ರ ವಿರುದ್ಧ ಹಲವು ರೀತಿಯ ಟೀಕೆಗಳು ಎದುರಾಗಿವೆ. ಸಿನಿಮಾ ಕಾರ್ಮಿಕರು, ಆಟೋ, ಟ್ಯಾಕ್ಸಿ ಚಾಲಕರು, ಬಡ ಕುಟುಂಬಗಳು ಹೀಗೆ ಆರ್ಥಿಕವಾಗಿ ತೊಂದರೆ ಅನುಭವಿಸುತ್ತಿರುವವರಿಗೆ ಉಪೇಂದ್ರ ಫೌಂಡೇಶನ್ ವತಿಯಿಂದ ನೆರವು ನೀಡಲಾಗಿದೆ.

    Recommended Video

    Upendra ಹೆಸರಿಲ್ಲದ Prajakeeya ಪಕ್ಷ ಗೆಲ್ಲುತ್ತಾ?ಇದು ಸಾಧ್ಯಾನಾ? | Uppi's Open Challenge|Filmibeat Kannada

    ಉಪೇಂದ್ರರ ಈ ನಡೆಯ ಹಿಂದೆ ರಾಜಕೀಯ ಇದೆ. ಜನರ ಗಮನ ಸೆಳೆಯಲು ಸಹಾಯ ಮಾಡುತ್ತಿರುವಂತೆ ಪ್ರಚಾರ ಪಡೆಯುತ್ತಿದ್ದಾರೆ ಎಂದೆಲ್ಲ ಟೀಕೆಗಳು ಎದುರಾಗಿದೆ. ತೊಂದರೆಯಲ್ಲಿರುವ ರೈತರಿಂದ ನೇರವಾಗಿ ಬೆಳೆ ಖರೀದಿಸಿ ಸಹಕಾರಿಯಾಗಿದ್ದ ಉಪೇಂದ್ರ, ರೈತರ ಭೂಮಿ ಕಬಳಿಸಿ ರೆಸಾರ್ಟ್ ಮಾಡಿದ್ದಾರೆ ಎಂಬ ಆರೋಪವೂ ಚರ್ಚೆಯಾಯಿತು. ಇದಕ್ಕೆಲ್ಲಾ ಉಪ್ಪಿ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಇದೀಗ, ಜನರಿಗೆ ಉಪೇಂದ್ರ ಓಪನ್ ಚಾಲೆಂಜ್ ಹಾಕಿದ್ದಾರೆ. ಇನ್ಮುಂದೆ ಪ್ರಜಾಕೀಯ ವಿಚಾರಗಳನ್ನು ಮಾತ್ರ ಪ್ರಚಾರ ಮಾಡಿ, ಉಪೇಂದ್ರ ಹೆಸರು ಎಲ್ಲಿಯೂ ಬೇಡ ಎಂದಿದ್ದಾರೆ. ಇದು ಸಾಧ್ಯನಾ? ಮುಂದೆ ಓದಿ...

    ನಿಮ್ಮದೇ ಒಂದು ಪಕ್ಷ ಇದೆ

    ನಿಮ್ಮದೇ ಒಂದು ಪಕ್ಷ ಇದೆ

    "ಪ್ರಜಾಕೀಯ" ವಿಚಾರದಂತೆ ನಿಮ್ಮ ಪಕ್ಷಕ್ಕೆ ನೀವೇ ನಿಮ್ಮ ಕ್ಷೇತ್ರದ ಮತದರರ ಶಿಫಾರಸ್ಸು ಪಡೆದು ಚುನಾವಣೆಯಲ್ಲಿ ಭಾಗವಹಿಸಿ ಅಥವಾ ನಿಮ್ಮ ಕ್ಷೇತ್ರಕ್ಕೆ ಸೂಕ್ತ ಅಭ್ಯರ್ಥಿಗಳನ್ನು ಸೂಚಿಸಿ. ನೀವೇ ಪ್ರತಿನಿಧಿಗಳನ್ನು ಆಯ್ಕೆ ಮಾಡಿ. ಪ್ರತಿನಿಧಿಯು ಪ್ರಜಾಕೀಯ ಸಿದ್ಧಾಂತದಂತೆ ನಡೆಯದಿದ್ದರೆ ಆತ/ಆಕೆ ಯನ್ನು ನೀವೇ ಹೋರಾಟ ಮಾಡಿ ಕೆಳಗಿಳಿಸಿ, ನೀವು ಕರೆದರೆ ಹೋರಾಟದಲ್ಲಿ ನಿಮ್ಮೊಂದಿಗೆ ನಾನು ಸದಾ ಇರುತ್ತೇನೆ (ಅದು ಕಾನೂನಾಗುವಂತೆ ಮಾಡಿ) ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ನೀವೇ ರಾಜರಾಗಬೇಕು. ಉತ್ತಮ ಪ್ರಜಾಕೀಯ ಪಕ್ಷ ನೀವೇ ಮುನ್ನಡೆಸಬೇಕು. ವ್ಯಕ್ತಿಯನ್ನು ಗುರಿಯಾಗಿಸಿ ವಿಚಾರಗಳನ್ನು ಕೊಲ್ಲುವ ರಾಜಕೀಯವನ್ನು ಈ ರೀತಿ ಮುಗಿಸಬೇಕು. ನೀವೇ UPP ಹೈಕಮಾಂಡ್'' ಎಂದು ಉಪೇಂದ್ರ ಟ್ವಿಟ್ಟರ್ ಮೂಲಕ ತಿಳಿಸಿದ್ದಾರೆ.

    ನಿಜವಾದ 'ಬುದ್ಧಿವಂತ'ರಾಗಿ: ಉಪೇಂದ್ರಗೆ ಪರೋಕ್ಷವಾಗಿ ತಿವಿದ ನಟ ಚೇತನ್ನಿಜವಾದ 'ಬುದ್ಧಿವಂತ'ರಾಗಿ: ಉಪೇಂದ್ರಗೆ ಪರೋಕ್ಷವಾಗಿ ತಿವಿದ ನಟ ಚೇತನ್

    ನಾನು ಸಂಸ್ಥಾಪಕ ಅಧ್ಯಕ್ಷ ಮಾತ್ರ

    ನಾನು ಸಂಸ್ಥಾಪಕ ಅಧ್ಯಕ್ಷ ಮಾತ್ರ

    ''ಪ್ರಜಾಕೀಯ ಸಿದ್ದಾಂತದಡಿಯಲ್ಲಿ ನೀವು ಹೇಳಿದಂತೆ ಕೇಳುವ ಪಕ್ಷದ ಸಂಸ್ಥಾಪಕ ಅಧ್ಯಕ್ಷನಾಗಿ ಕೆಲಸ ಮಾಡುತ್ತೇನೆ ಅಷ್ಟೆ. ಇನ್ನು ಮುಂದೆ ಪ್ರಜಾಕೀಯದ ವಿಚಾರಗಳು ಮಾತ್ರ ಪ್ರಚಾರವಾಗಲಿ... ಉಪೇಂದ್ರನ ಹೆಸರು ಎಲ್ಲಿಯೂ ಬೇಡ... ಓಕೆ??'' ಎಂದು ಹೇಳುವ ಮೂಲಕ ವ್ಯಕ್ತಿ ಆರಾಧಿಸುವುದನ್ನು ಬಿಡಿ ಎಂದು ಹೇಳಿದರು.

    ಮುಖ್ಯಮಂತ್ರಿ ಆಕಾಂಕ್ಷಿ ನಾನಲ್ಲ

    ಮುಖ್ಯಮಂತ್ರಿ ಆಕಾಂಕ್ಷಿ ನಾನಲ್ಲ

    ಕೊರೊನಾ ಹರಡುವಿಕೆ ನಿಯಂತ್ರಣದಲ್ಲಿ ಸರ್ಕಾರ ಮತ್ತು ವಿಪಕ್ಷಗಳ ಹಿನ್ನಡೆಯಿಂದ ಜನರು ತೀವ್ರ ಅಸಮಾಧಾನಗೊಂಡಿದ್ದಾರೆ. ಈ ಮಧ್ಯೆ ಜನರಿಗೆ ಸಹಾಯ ಮಾಡ್ತಿರುವ ಉಪೇಂದ್ರ ಮುಂದಿನ ಚುನಾವಣೆಯಲ್ಲಿ ಅಧಿಕಾರಕ್ಕೆ ಬರಬೇಕು ಎಂಬ ಕೂಗು ಕೇಳಿ ಬಂದಿತ್ತು. ಸಾಮಾಜಿಕ ಜಾಲತಾಣದಲ್ಲಿ ಉಪೇಂದ್ರ ಮುಂದಿನ ಮುಖ್ಯಮಂತ್ರಿ ಎಂದು ಅಭಿಯಾನ ಶುರುವಾಗಿತ್ತು. ಅದಕ್ಕೆ ಪ್ರತಿಕ್ರಿಯಿಸಿದ್ದ ಉಪೇಂದ್ರ ನಾನು ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಯಲ್ಲ, ನಾನು ಕಾಮನ್ ಮ್ಯಾನ್‌ ಆಗಿ ಪ್ರಜಾಕೀಯದ ಜೊತೆ ನಿಲ್ಲುತ್ತೇನೆ ಎಂದರು.

    'ನಾನು ಈ ರಾಜ್ಯದ ಮುಖ್ಯಮಂತ್ರಿ (CM) ಆಗ್ಬೇಕು': ಫ್ಯಾನ್ಸ್‌ಗೆ ನಿರಾಸೆ ತಂದ ಉಪ್ಪಿ ನಿರ್ಧಾರ'ನಾನು ಈ ರಾಜ್ಯದ ಮುಖ್ಯಮಂತ್ರಿ (CM) ಆಗ್ಬೇಕು': ಫ್ಯಾನ್ಸ್‌ಗೆ ನಿರಾಸೆ ತಂದ ಉಪ್ಪಿ ನಿರ್ಧಾರ

    ಉಪೇಂದ್ರ ಹೆಸರು ಬಳಸದೇ ಪ್ರಜಾಕೀಯ ಸಾಧ್ಯನಾ?

    ಉಪೇಂದ್ರ ಹೆಸರು ಬಳಸದೇ ಪ್ರಜಾಕೀಯ ಸಾಧ್ಯನಾ?

    ಪ್ರಜಾಕೀಯ ಎಂಬ ಪರಿಕಲ್ಪನೆ ಹುಟ್ಟುಹಾಕಿರುವ ಉಪೇಂದ್ರ ಈಗ ಪ್ರಜಾಕೀಯವನ್ನು ಮಾತ್ರ ಪ್ರಚಾರ ಮಾಡಿ, ನನ್ನ ಹೆಸರು ಬಳಸುವುದು ಬೇಡ ಎಂದು ವಿನಂತಿಸುತ್ತಿದ್ದಾರೆ. ಇದು ನಿಜಕ್ಕೂ ಸಾಧ್ಯನಾ? ಉಪೇಂದ್ರ ಇದ್ದಾರೆ ಎನ್ನುವ ಕಾರಣಕ್ಕೆ ಪ್ರಜಾಕೀಯ ಬೆಂಬಲಿಸುತ್ತಿರುವ ವರ್ಗ ಇದೆ. ಉಪೇಂದ್ರ ಸಿಎಂ ಆಗಲ್ಲ, ನನ್ನ ಹೆಸರು ಬೇಡ ಎನ್ನುತ್ತಿದ್ದಾರೆ ಬೆಂಬಲಿಗರು ಅದನ್ನು ಸ್ವೀಕರಿಸುತ್ತಾರಾ? ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಮೂಲಕ ತಿಳಿಸಿ.

    English summary
    Actor Upendra Throws Open Challenge to People to suggest Contestants for Election or contest yourself, work for the betterment of your constituency. Don't use my name, use prajakeeya name.
    Friday, May 28, 2021, 18:09
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X