ಡೈರೆಕ್ಷನ್ ಚಿತ್ರದ ಬಗ್ಗೆ ಮಾಹಿತಿ ನೀಡಿದ ರಿಯಲ್ ಸ್ಟಾರ್ ಉಪೇಂದ್ರ

ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಕಳೆದ ವರ್ಷವೇ ಉಪೇಂದ್ರ ನಿರ್ದೇಶನದ ಸಿನಿಮಾ ಘೋಷಣೆ ಮಾಡಬೇಕಿತ್ತು. ಆದರೆ ಕೊರೊನಾ ವೈರಸ್ ಎಂಬ ಅನಿರೀಕ್ಷೆ ರೋಗ ಎಲ್ಲರ ಯೋಜನೆಗಳನ್ನು ತಲೆಕೆಳಗಾಗಿಸಿತು. ಈ ಹಿಂದೆ ನಿರ್ಧರಿಸಿದಂತೆ ಡೈರೆಕ್ಷನ್ ಚಿತ್ರ ಶುರು ಮಾಡಲು ಆಗಿಲ್ಲ. ಹಾಗಂತ ಚಿತ್ರ ನಿರ್ದೇಶಿಸಲ್ಲ ಎಂಬ ನಿರಾಸೆ ಬೇಡ. ಉಪ್ಪಿ ನಿರ್ದೇಶನಕ್ಕಾಗಿ ತಯಾರಾಗಿದ್ದಾರೆ. ಪೂರ್ವ ತಯಾರಿ ಎನ್ನುವಂತೆ ಸ್ಕ್ರಿಪ್ಟ್ ಕೆಲಸ ಸಹ ಮಾಡಿದ್ದಾರೆ.

ಬೇರೆ ನಿರ್ದೇಶಕರ ಜೊತೆಗಿನ ಪ್ರಾಜೆಕ್ಟ್‌ಗಳನ್ನು ಮಗಿಸಿಕೊಟ್ಟು ತಮ್ಮ ಡೈರೆಕ್ಷನ್ ಸಿನಿಮಾ ಪ್ರಕಟಿಸಬೇಕಿದೆ. ಈಗ ಉಪ್ಪಿ ನಿರ್ದೇಶನದ ಸಿನಿಮಾ ಯಾವ ಹಂತದಲ್ಲಿ, ಸದ್ಯದ ಪರಿಸ್ಥಿತಿಯಲ್ಲಿ ಯಾವಾಗ ಸೆಟ್ಟೇರಬಹುದು ಎಂಬ ಕುತೂಹಲವೂ ಕಾಡುತ್ತಿದೆ. ಈ ಕುರಿತು ಇಂಡಿಯನ್ ಎಕ್ಸ್‌ಪ್ರೆಸ್ ಜೊತೆ ಮಾತನಾಡಿರುವ ಉಪೇಂದ್ರ, ಡೈರೆಕ್ಷನ್ ಚಿತ್ರದ ಬಗ್ಗೆ ಮಾಹಿತಿ ನೀಡಿದ್ದಾರೆ. ಮುಂದೆ ಓದಿ...

ನವೆಂಬರ್‌ನಲ್ಲಿ ಸ್ಪಷ್ಟನೆ ಸಿಗಲಿದೆ

ನವೆಂಬರ್‌ನಲ್ಲಿ ಸ್ಪಷ್ಟನೆ ಸಿಗಲಿದೆ

''ಕಳೆದ ವರ್ಷವೇ ನನ್ನ ನಿರ್ದೇಶನದ ಚಿತ್ರವನ್ನು ಅಧಿಕೃತವಾಗಿ ಘೋಷಿಸಬೇಕಿತ್ತು. ಈ ವರ್ಷದ ಆರಂಭದಲ್ಲಿಯಾದರೂ ಆಗುತ್ತಾ ಎಂದು ಯೋಚಿಸಿದೆ. ಆದರೆ, ಕೊರೊನಾ ಪರಿಸ್ಥಿತಿ ಅದಕ್ಕೆ ಬಿಡಲಿಲ್ಲ. ಈಗ ಚಿತ್ರರಂಗ ಮೊದಲಿನ ಸ್ಥಿತಿಗೆ ಬರಬೇಕು ಎಂದು ಎಲ್ಲರೂ ಕಾಯುವಂತಾಗಿದೆ. ನಾನು ಸಹ ಚಿತ್ರರಂಗದ ಚೇತರಿಕೆ ಕಡೆ ಗಮನ ಹರಿಸಿದ್ದೇನೆ. ಆ ನಂತರವೇ ನನ್ನ ನಿರ್ದೇಶನದ ಸಿನಿಮಾ ಘೋಷಿಸುತ್ತೇನೆ. ಬಹುಶಃ ನವೆಂಬರ್ ತಿಂಗಳ ವೇಳೆಗೆ ಈ ಬಗ್ಗೆ ಒಂದು ಸ್ಪಷ್ಟನೆ ಸಿಗಬಹುದು'' ಎಂದು ಉಪೇಂದ್ರ ಮಾಹಿತಿ ನೀಡಿದ್ದಾರೆ.

ಹುಟ್ಟುಹಬ್ಬಕ್ಕೆ ಬ್ರೇಕ್

ಹುಟ್ಟುಹಬ್ಬಕ್ಕೆ ಬ್ರೇಕ್

ಸದ್ಯದ ಮಾಹಿತಿ ಪ್ರಕಾರ ಉಪೇಂದ್ರ ಈ ವರ್ಷ ಹುಟ್ಟುಹಬ್ಬವನ್ನು ಅಭಿಮಾನಿಗಳ ಜೊತೆ ಆಚರಿಸದಿರಲು ನಿರ್ಧರಿಸಿದ್ದಾರೆ. ಸೆಪ್ಟೆಂಬರ್ 18ಕ್ಕೆ ಉಪ್ಪಿ ಜನುಮದಿನವಿದ್ದು, ಆ ದಿನ ಕುಟುಂಬದವರು ಜೊತೆ ನಗರದಿಂದ ಹೊರಗೆ ಹೋಗಲು ರಿಯಲ್ ಸ್ಟಾರ್ ತೀರ್ಮಾನಿಸಿದ್ದಾರೆ. ಕೋವಿಡ್ ಭೀತಿಯಲ್ಲಿ ಅಭಿಮಾನಿಗಳು ಮನೆ ಬಳಿ ಜಮಾಯಿಸುವುದನ್ನು ತಡೆಯಲು ಉಪ್ಪಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ.

ಕಬ್ಜ ಚಿತ್ರೀಕರಣಕ್ಕೆ ಮತ್ತೆ ಚಾಲನೆ

ಕಬ್ಜ ಚಿತ್ರೀಕರಣಕ್ಕೆ ಮತ್ತೆ ಚಾಲನೆ

ಕೊರೊನಾದಿಂದ ಬ್ರೇಕ್ ಹಾಕಿದ್ದ ಕಬ್ಜ ಸಿನಿಮಾದ ಚಿತ್ರೀಕರಣ ಮತ್ತೆ ಶುರು ಮಾಡಲಾಗುತ್ತಿದೆ. ಸೆಪ್ಟೆಂಬರ್ 20 ರಿಂದ ಬೆಂಗಳೂರಿನಲ್ಲಿ ಅದ್ಧೂರಿ ಸೆಟ್‌ ಹಾಕಲಾಗಿದ್ದು, ಶೂಟಿಂಗ್ ಆರಂಭವಾಗಲಿದೆ. ಒಂದು ದಿನದ ನಂತರ ಅಂದ್ರೆ ಸೆಪ್ಟೆಂಬರ್ 21ಕ್ಕೆ ಉಪ್ಪಿ ಚಿತ್ರತಂಡ ಸೇರಿಕೊಳ್ಳಲಿದ್ದಾರೆ. ಮುಂದಿನ ಕೆಲವು ದಿನಗಳು ಕಬ್ಜ ಚಿತ್ರಕ್ಕಾಗಿ ಮೀಸಲು. ಆರ್ ಚಂದ್ರು ನಿರ್ದೇಶನದ ಈ ಚಿತ್ರದಲ್ಲಿ ಸುದೀಪ್, ಅನೂಪ್ ರೇವಣ್ಣ, ಸುನೀಲ್ ಪುರಾಣಿಕ್ ಸೇರಿದಂತೆ ಹಲವು ಕಲಾವಿದರು ಕಾಣಿಸಿಕೊಳ್ಳುತ್ತಿದ್ದಾರೆ.

ಲಗಾಮ್ ಚಿತ್ರದಲ್ಲಿ ಉಪ್ಪಿ

ಲಗಾಮ್ ಚಿತ್ರದಲ್ಲಿ ಉಪ್ಪಿ

ಕೆ ಮಾದೇಶ್ ನಿರ್ದೇಶನದಲ್ಲಿ ತಯಾರಾಗುತ್ತಿರುವ ಲಗಾಮ್ ಸಿನಿಮಾ ಚಿತ್ರೀಕರಣ ನಡೆದಿದೆ. ಉಪೇಂದ್ರ ಜೊತೆ ಹರಿಪ್ರಿಯಾ ನಟಿಸುತ್ತಿದ್ದಾರೆ. ಹರಿಪ್ರಿಯಾ ಈ ಚಿತ್ರದಲ್ಲಿ ಜರ್ನಲಿಸ್ಟ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಉಪೇಂದ್ರ ನಟಿಸಿದ್ದ 'ಐ ಲವ್ ಯೂ' ಸಿನಿಮಾ ಕೊನೆಯದಾಗಿ ಬಿಡುಗಡೆಯಾಗಿತ್ತು. ಹೋಮ್ ಮಿನಿಸ್ಟರ್, ಬುದ್ದಿವಂತ 2, ತ್ರಿಶೂಲಂ ಚಿತ್ರಗಳು ಉಪ್ಪಿ ಕೈಯಲ್ಲಿದೆ. ತೆಲುಗಿನ ಘನಿ ಚಿತ್ರದಲ್ಲೂ ಉಪ್ಪಿ ನಟಿಸುತ್ತಿದ್ದಾರೆ.

ಪ್ರಜಾಕೀಯದ ಜೊತೆ ಸಿನಿಮಾ

ಪ್ರಜಾಕೀಯದ ಜೊತೆ ಸಿನಿಮಾ

ಸಿನಿಮಾ ಮಾತ್ರವಲ್ಲದೇ ಪ್ರಜಾಕೀಯದಲ್ಲಿ ಉಪ್ಪಿ ತೊಡಗಿಕೊಂಡಿದ್ದಾರೆ. ಮುಂದಿನ ವರ್ಷ ಬಿಬಿಎಂಪಿ ಚುನಾವಣೆ ನಡೆಯುವ ನಿರೀಕ್ಷೆಯಿದ್ದು, ಈ ಹಿನ್ನೆಲೆ ಉಪ್ಪಿಯ ಯುಪಿಪಿ ಪಕ್ಷವೂ ತಯಾರಾಗುತ್ತಿದೆ. ಬೆಂಗಳೂರಿನ ಎಲ್ಲಾ ವಾರ್ಡ್‌ಗಳಲ್ಲೂ ಉಪ್ಪಿ ಪಕ್ಷದ ಅಭ್ಯರ್ಥಿಗಳು ಸ್ಪರ್ಧಿಸುವ ಸಾಧ್ಯತೆ ಇದೆ. 2015ರಲ್ಲಿ ಉಪ್ಪಿ 2 ಚಿತ್ರಕ್ಕೆ ಕೊನೆಯದಾಗಿ ಆಕ್ಷನ್ ಕಟ್ ಹೇಳಿದ್ದರು. ಈಗ ಆರು ವರ್ಷದ ನಂತರ ಡೈರೆಕ್ಷನ್ ಕ್ಯಾಪ್ ತೊಡಲಿದ್ದಾರೆ.

More from Filmibeat

English summary
Kannada Actor-director Upendra to Announce his next directorial venture based on Covid-19 Situation.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X